ಹರಿಯಾಣ(ಏ.02): ಹರಿಯಾಣದ ಫತೇಹಾಬಾದ್ ಜಿಲ್ಲೆಯಲ್ಲಿ ವ್ಯಕ್ತಿಯೋರ್ವ ದಂಡ ತಪ್ಪಿಸುವ ಪ್ರಯತ್ನದಲ್ಲಿ ಪೊಲೀಸರ ಮೇಲೆ ಬೈಕ್ ಚಲಾಯಿಸಿದ್ದಾನೆ. ಇದರ ಪರಿಣಾಮದಿಂದಾಗಿ ಪೊಲೀಸರಿಗೆ ಗಂಭೀರ ಗಾಯಗಳಾಗಿವೆ. ಘಟನೆಯ ನಂತರ ಆರೋಪಿ ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಆ ನಂತರ ಆರೋಪಿ ಮತ್ತು ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಫತೇಹಾಬಾದ್ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಅಜಾಗರೂಕತೆಯಿಂದ ವಾಹನ ಚಲಾಯಿಸುವವರನ್ನು ಹಿಡಿಯುವ ಕೆಲಸದಲ್ಲಿದ್ದರು. ಆದರೆ ಅದೇ ಸಮಯದಲ್ಲಿ ಇಂತಹ ಪರಿಸ್ಥಿತಿ ಎದುರಿಸಬೇಕಾಯಿತು. ಪೊಲೀಸ್ ಅಧಿಕಾರಿ ರಸ್ತೆ ಬದಿಯಲ್ಲಿ ಚಲನ್ ನೀಡುತ್ತಾ ನಿಂತಿರುವಾಗ ಬೈಕ್ ಸವಾರ ಅವರ ಮೇಲೆ ಬೈಕ್ ಚಲಾಯಿಸಿದ್ದಾನೆ. ಸದ್ಯ ಸಂಚಾರಿ ಪೊಲೀಸ್ ಅಧಿಕಾರಿಗೆ ಗಂಭೀರ ಗಾಯಗಳಾಗಿದ್ದು, ಸಂಚಾರಿ ಪೊಲೀಸ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ನಡೆಯುವಾಗ ಪೊಲೀಸರು ಹರಿಯಾಣದ ಸಿರ್ಸಾ ರಸ್ತೆಯಲ್ಲಿ ಸಂಚಾರ ನಿಯಮಗಳನ್ನು ಪಾಲಿಸದವರಿಗೆ ಚಲನ್ ನೀಡುತ್ತಿದ್ದರು. ಈ ಆರೋಪಿ ತನ್ನ ಇಬ್ಬರೂ ಸ್ನೇಹಿತರೊಂದಿಗೆ ಬೈಕ್ನಲ್ಲಿದ್ದು, ಪೊಲೀಸರನ್ನು ನೋಡಿದೊಡನೆ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಹೀಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಭರದಲ್ಲಿ ವಾಹನದ ಮೇಲೆ ತನ್ನ ಹಿಡಿತವನ್ನು ಕಳೆದುಕೊಂಡು ಪೊಲೀಸರಿಗೆ ಗುದ್ದಿದ್ದಾನೆ.
Puneeth Rajkumar: ಥಿಯೇಟರ್ಗಳಲ್ಲಿ ಶೇ.50ರಷ್ಟು ಮಾತ್ರ ಸೀಟಿಂಗ್; ಆಕ್ಷೇಪ ವ್ಯಕ್ತಪಡಿಸಿದ ಪುನೀತ್ ರಾಜ್ಕುಮಾರ್
ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ಪ್ರಕಾರ, 2014 ರಿಂದ ಭಾರತದಲ್ಲಿ 83 ಪ್ರತಿಶತದಷ್ಟು ರಸ್ತೆ ಅಪಘಾತಗಳಿಗೆ ಅತಿ ವೇಗ ಮತ್ತು ರ್ಯಾಶ್ ಡ್ರೈವಿಂಗ್ ಪ್ರಮುಖ ಕಾರಣವಾಗಿದೆ. ಪ್ರತಿದಿನ ದೇಶದಲ್ಲಿ ಹೆಚ್ಚಾಗುತ್ತಿರುವ ಅಜಾಗರೂಕತೆಯಿಂದ ವಾಹನ ಚಲಾಯಿಸುವ ಪ್ರಕರಣದ ಹಿನ್ನೆಲೆಗೆ ನಮ್ಮ ವ್ಯವಸ್ಥೆಯೇ ಕಾರಣವಾಗಿದೆ. ಲೈಸೆನ್ಸ್ ನೀಡುವ ಮೊದಲು ಅತಿ ಕಠಿಣ ಪರೀಕ್ಷೆಗಳನ್ನು ಕೊಟ್ಟು ಅದರಲ್ಲಿ ಪಾಸಾದವರಿಗೆ ಮಾತ್ರ ಚಾಲನಾ ಪರವಾನಗಿ ನೀಡಬೇಕು. ಆದರೆ ಭ್ರಷ್ಟಚಾರ, ಶಿಫಾರಸ್ಸು ಹೀಗೆ ನಾನಾ ಕಾರಣಗಳಿಂದ ಅರ್ಹತೆಯಿಲ್ಲದವರು ಸಹ ವಾಹನ ಚಲಾಯಿಸಲು ಲೈಸನ್ಸ್ ಪಡೆಯುತ್ತಿದ್ದಾರೆ ಎನ್ನುವ ಅಂಶವನ್ನು ಇಲ್ಲಿ ಸ್ಪಷ್ಟಪಡಿಸಿದೆ.
ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ಇರುವುದು, ಅಗತ್ಯಕ್ಕೆ ಮೀರಿ ಜನರನ್ನು ಕೂರಿಸಿಕೊಳ್ಳುವುದು, ಸಿಗ್ನಲ್ ಜಂಪ್ ಮಾಡುವುದು, ಲೇನ್ ಶಿಸ್ತಿನ ಸಂಪೂರ್ಣ ಕೊರತೆ, ಅವೈಜ್ಣಾನಿಕ ಪಾರ್ಕಿಂಗ್ ಸೇರಿದಂತೆ ಅನೇಕ ರೀತಿಯ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿದ್ದಾರೆ. ಹೀಗೆ ನಿಯಮವನ್ನು ಗಾಳಿಗೆ ತೂರಿ ವಾಹನ ಚಲಾಯಿಸುವವರ ಸಂಖ್ಯೆಯೇ ಹೆಚ್ಚಾಗಿದೆ. ಅಲ್ಲದೇ ಇಂದಿನ ಯುವಕರು ಕೂಡ ಮೈಮರೆತು ಉತ್ಸಾಹದಿಂದ ವಾಹನ ಚಲಾಯಿಸುವುದು ಕೂಡ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ