ಪರವಾನಗಿ ಇಲ್ಲದ ಗನ್ ಯಜಮಾನನ ಮರ್ಮಾಂಗವನ್ನೇ ಸುಟ್ಟಿತು..!

ಜೋನ್ಸ್ ಇತ್ತೀಚೆಗೆ  ಲೈಸನ್ಸ್​ ಇಲ್ಲದ ಹೈ ಪಾಯಿಂಟ್​ 9mm ಗನ್​ ಅನ್ನು ಸೋಂಟದಲ್ಲಿರಿಸಿ  ಹೋಗುತ್ತಿದ್ದರು.

zahir | news18
Updated:March 6, 2019, 4:14 PM IST
ಪರವಾನಗಿ ಇಲ್ಲದ ಗನ್ ಯಜಮಾನನ ಮರ್ಮಾಂಗವನ್ನೇ ಸುಟ್ಟಿತು..!
ಸಾಂದರ್ಭಿಕ ಚಿತ್ರ
  • News18
  • Last Updated: March 6, 2019, 4:14 PM IST
  • Share this:
ಪ್ರಪಂಚದಲ್ಲಿ ಕೆಲವರು ಚಿತ್ರ ವಿಚಿತ್ರವಾಗಿ ಸುದ್ದಿಯಾಗುತ್ತಾರೆ. ಹಾಗೆಯೇ ಇಂಡಿಯಾನದ ಮಾರ್ಕ್​ ಆಂಥೋನಿ ಜೋನ್ಸ್​ ಎಂಬ ವ್ಯಕ್ತಿ ಸುದ್ದಿಯಾಗಿರುವುದು ಗನ್​ನಲ್ಲಿ ಗುಂಡು ಹೊಡೆಸಿಕೊಂಡು. ಇದರಲ್ಲಿ ಅಂಥದ್ದೇನಿದೆ ವಿಶೇಷತೆ ಅಂದುಕೊಳ್ಳುತ್ತಿದ್ದೀರಾ, ಇಲ್ಲಿಯೇ ಇರುವುದು ಅಸಲಿ ಕಹಾನಿ.

ಜೋನ್ಸ್ ಇತ್ತೀಚೆಗೆ  ಲೈಸನ್ಸ್​ ಇಲ್ಲದ ಹೈ ಪಾಯಿಂಟ್​ 9mm ಗನ್​ ಅನ್ನು ಸೋಂಟದಲ್ಲಿರಿಸಿ  ಹೋಗುತ್ತಿದ್ದರು. ಅದೇನು ಪ್ಲಾನ್ ಮಾಡಿದ್ದರೇನೊ, ದುರಾದೃಷ್ಟ ಗನ್​ ಸ್ಲಿಪ್​ ಆಗಿ ಕೆಳಗೆ ಜಾರಿಕೊಂಡಿದೆ. ಈ ವೇಳೆ ಜಾರುತ್ತಿದ್ದ ಗನ್​ ಅನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಅಚಾನಕ್ ಆಗಿ ಟ್ರಿಗರ್​ನ್ನು ಒತ್ತಿದ್ದು, ಗನ್​ನಿಂದ ಬುಲೆಟ್​ ಹಾರಿದೆ. ಇದು ಸೀದಾ ಮರ್ಮಾಂಗವನ್ನು ಪ್ರವೇಶಿಸಿದೆ.

ಇದನ್ನೂ ಓದಿ: ಈ ದೇಶದಲ್ಲಿ 1GB ಡೇಟಾಗೆ 5 ಸಾವಿರ ರೂ: ಅತೀ ಕಡಿಮೆಗೆ ಇಂಟರ್​ನೆಟ್​ ಸಿಗುವುದೆಲ್ಲಿ ಗೊತ್ತೆ?

ಶಿಶ್ನವನ್ನು ಸೀಳಿದ ಈ ಬುಲೆಟ್​ ಕರುಳಿನ ಭಾಗವನ್ನು ತಲುಪಿದ್ದು, ಇದೀಗ ಜೋನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಮೇರಿಯನ್ ಪೋಲಿಸರು ಅಪರೂಪದ ಘಟನೆಯ ಸುದ್ದಿಯನ್ನು ಫೇಸ್​ಬುಕ್​ನಲ್ಲಿ ಪ್ರಕಟಿಸಿದೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಕಾನೂನನ್ನು ಮೀರಿದ ಜೋನ್ಸ್​ ಅವರನ್ನು ಕರ್ಮ ಹಿಂಬಾಲಿಸಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

First published:March 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading