ಭಾರತದಿಂದ ಲೂಟಿ ಮಾಡಿದ 14 ಕೋಟಿ ಮೌಲ್ಯದ ಟಿಪ್ಪು ಸುಲ್ತಾನ್‌ ಸಿಂಹಾಸನದ ಶಿಖರಾಲಂಕಾರ ಹರಾಜು ಹಾಕುತ್ತಿರುವ ಇಂಗ್ಲೆಂಡ್

England to auction Tipu Sultan Throne: ಚಿನ್ನದ ಹುಲಿಯ ಶಿರವು 18ನೇ ಶತಮಾನದ ಭಾರತದ ದೊರೆ ಮೈಸೂರಿನ ಟಿಪ್ಪು ಸುಲ್ತಾನ್ (Tipu Sultan) ಸಿಂಹಾಸನಕ್ಕೆ ಸೇರಿದ ಶಿಖರಾಲಂಕಾರವಾಗಿದ್ದು ಸೂಕ್ತ ಖರೀದಿದಾರ ದೊರೆಯುವವರೆಗೆ ಇಂಗ್ಲೆಂಡ್ ಸರಕಾರ (England Government) ಇದನ್ನು ತಾತ್ಕಾಲಿಕ ರಫ್ತು ನಿಷೇಧದಲ್ಲಿರಿಸಿದೆ

Tipu Sultan Throne Finial

Tipu Sultan Throne Finial

 • Share this:
  ಅಮೂಲ್ಯವಾದ ವಸ್ತುವಿಗೆ ಬೆಲೆಕಟ್ಟಲಾಗುವುದಿಲ್ಲ ಎಂಬ ಹಳೆಯ ನಾಣ್ಣುಡಿ ಇದೆ. ಆದರೆ ಈ ನಾಣ್ಣುಡಿ ಇಂಗ್ಲೆಂಡ್ ಸರಕಾರದ ಪ್ರಕಾರ ತಪ್ಪಾಗುತ್ತದೆ. ಏಕೆಂದರೆ ಅಮೂಲ್ಯವಾದ ವಸ್ತು ಲೂಟಿ ಮಾಡಿ ಪಡೆದುಕೊಂಡದ್ದಾದರೆ ಅದಕ್ಕೆ ಬೆಲೆ ಕಟ್ಟಬಹುದು ಎಂಬುದು ಹೊಸ ನಾಣ್ಣುಡಿಯಾಗಿದೆ. ಹೌದು ಇಂಗ್ಲೆಂಡ್‌ನ ಡಿಜಿಟಲ್, ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡಾ ಇಲಾಖೆಯು ಭಾರತದಿಂದ ಕದಿಯಲಾದ ಸಿಂಹಾಸನದ ಶಿಖರಾಲಂಕಾರವನ್ನು £1.5 ಮಿಲಿಯನ್ (14,98,64,994 ರೂ) ಗೆ ಹರಾಜು ಹಾಕುತ್ತಿದೆ. ಸಿಂಹಾಸನದ ಶಿಖರಾಲಂಕಾರ ಎಂಬುದಾಗಿ ಪಟ್ಟಿಮಾಡಲಾದ ಈ ಉತ್ಪನ್ನವು ರಫ್ತು ನಿಷೇಧ ಹೊಂದಿದೆ. ಚಿನ್ನದ ಹುಲಿಯ ಶಿರವು 18ನೇ ಶತಮಾನದ ಭಾರತದ ದೊರೆ ಮೈಸೂರಿನ ಟಿಪ್ಪು ಸುಲ್ತಾನ್ (Tipu Sultan) ಸಿಂಹಾಸನಕ್ಕೆ ಸೇರಿದ ಶಿಖರಾಲಂಕಾರವಾಗಿದ್ದು ಸೂಕ್ತ ಖರೀದಿದಾರ ದೊರೆಯುವವರೆಗೆ ಇಂಗ್ಲೆಂಡ್ ಸರಕಾರ (England Government) ಇದನ್ನು ತಾತ್ಕಾಲಿಕ ರಫ್ತು ನಿಷೇಧದಲ್ಲಿರಿಸಿದೆ.

  ಸಮಯ ಅನುಮತಿಸಿದ ಬ್ರಿಟಿಷ್ ಸರಕಾರ:

  ಬ್ರಿಟಿಷ್ ಸರಕಾರದ ವತಿಯಿಂದ ತಾತ್ಕಾಲಿಕ ರಫ್ತು ನಿಷೇಧದ ಅಡಿಯಲ್ಲಿ ಇರಿಸಲಾದ ಶಿಖರಾಲಂಕಾರ ಅಥವಾ ಕಿರೀಟದ ಐತಿಹಾಸಿಕ ಮೌಲ್ಯದ ಆಭರಣವನ್ನು ವಶಕ್ಕೆ ಪಡೆಯಲು ಇಂಗ್ಲೆಂಡ್ ಗ್ಯಾಲರಿ ಅಥವಾ ಸಂಸ್ಥೆಗೆ ಸಮಯ ಅನುಮತಿಸಿದೆ. “ಮೈಸೂರಿನ ಹುಲಿ” (Tiger of Mysore Tipu Sultan) ಎಂದೇ ಖ್ಯಾತರಾದ ಆಡಳಿತಗಾರನ ಸಿಂಹಾಸನವನ್ನು ಅಲಂಕರಿಸಿದ 8 ಚಿನ್ನದ ಹುಲಿಗಳ ಶಿಖರಗಳಲ್ಲಿ ಇದು ಒಂದಾಗಿದೆ.

  ಟಿಪ್ಪು ಸುಲ್ತಾನನ ಅಳ್ವಿಕೆಯ ವೈಭವ:

  ಈ ಆಕರ್ಷಕ ಶಿಖರಾಲಂಕಾರ ಟಿಪ್ಪು ಸುಲ್ತಾನನ ಆಳ್ವಿಕೆಯ ವೈಭವವನ್ನು ಪ್ರತಿನಿಧಿಸುತ್ತದೆ ಹಾಗೂ ಸಾಮ್ರಾಜ್ಯಶಾಹಿ ಇತಿಹಾಸ ಪರಿಶೀಲಿಸಲು ನಮಗೆ ಅವಕಾಶವನ್ನೊದಗಿಸುತ್ತದೆ ಎಂದು ಇಂಗ್ಲೆಂಡ್‌ನ ಕಲಾ ಸಚಿವ ಲಾರ್ಡ್ ಸ್ಟೀಫನ್ ಪಾರ್ಕಿನ್ಸನ್ ಪಿಟಿಐಗೆ ತಿಳಿಸಿದ್ದಾರೆ. ಇಂಗ್ಲೆಂಡ್‌ ನಿವಾಸಿಗಳು ಈ ಅತ್ಯಮೂಲ್ಯ ಐತಿಹಾಸಿಕ (Historical Monument) ವಸ್ತು ಖರೀದಿಸಲು ಮುಂದೆ ಬರುತ್ತಾರೆ ಎಂಬುದು ನನ್ನ ಅನಿಸಿಕೆಯಾಗಿದ್ದು ಭಾರತದೊಂದಿಗೆ ನಾವು ಹಂಚಿಕೊಂಡಿರುವ ಐತಿಹಾಸಿಕ ಅಂಶಗಳೊಂದಿಗೆ ಈ ಪ್ರಮುಖ ಕಾಲಘಟ್ಟದ ಕುರಿತು ನಾವು ಇನ್ನಷ್ಟು ಮಾಹಿತಿ ಅರಿತುಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ.

  ಟ್ವೀಟ್ ಮಾಡಿದ ಇಂಗ್ಲೆಂಡ್ ಸರಕಾರಿ ಇಲಾಖೆ:

  ಈ ಹರಾಜಿನ ಕುರಿತು ಡಿಜಿಟಲ್, ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡೆಗಾಗಿ ಇಂಗ್ಲೆಂಡ್‌ನ ಸರಕಾರಿ ಇಲಾಖೆ ಟ್ವೀಟ್ ಮಾಡಿದ್ದು, £1.5 ಮಿಲಿಯನ್ ಮೌಲ್ಯದ ಸಿಂಹಾಸನದ ಶಿಖರಾಲಂಕಾರ ಇಂಗ್ಲೆಂಡ್ ತೊರೆಯುವ ಅಪಾಯದಲ್ಲಿದೆ. ರಫ್ತು ನಿಷೇಧವನ್ನು ಟಿಪ್ಪು ಸುಲ್ತಾನನ ಸಿಂಹಾಸನದ ಶಿಖರಾಲಂಕಾರಕ್ಕೆ ಇರಿಸಲಾಗಿದ್ದು ಸಂಸ್ಥೆ ಅಥವಾ ವ್ಯಕ್ತಿಗೆ ಇದನ್ನು ಖರೀದಿಸಲು ಸಮಯವಕಾಶ ನೀಡಲಾಗಿದೆ. ಆಸಕ್ತರಾಗಿದ್ದರೆ ಸಮಿತಿಯ ಕಾರ್ಯದರ್ಶಿಯನ್ನು 0845 300 6200 ಫೋನ್ ಸಂಖ್ಯೆಯ ಮೂಲಕ ಭೇಟಿಯಾಗಿ ಎಂದಿದೆ.

  ಇಂಗ್ಲೆಂಡ್ ಸರಕಾರದ ಈ ಟ್ವೀಟ್ ಸಾಮಾಜಿಕ ತಾಣದಲ್ಲಿ ತೀವ್ರ ಹಿನ್ನಡೆ ಕಂಡಿದ್ದು, ಲೂಟಿ ಮಾಡಿದ ವಸ್ತುವನ್ನು ಹರಾಜಿಗೆ ಹಾಕುವುದರ ಕುರಿತು ವ್ಯಂಗ್ಯದ ಮಾತುಗಳನ್ನು ಹಲವಾರು ಬಳಕೆದಾರರು ಆಡಿದ್ದಾರೆ. ಅದೇ ರೀತಿ ರಫ್ತು ನಿಷೇಧ ಹೇರುವ ಮೂಲಕ ಸಂಭಾವ್ಯ ಖರೀದಿಗೆ ಅಡ್ಡಿಯನ್ನುಂಟು ಮಾಡಿರುವುದನ್ನು ಹಲವಾರು ಬಳಕೆದಾರರು ಪ್ರಶ್ನಿಸಿದ್ದಾರೆ.

  ಶಿಖರಾಲಂಕಾರ ಹೇಗಿದೆ?

  ಚಿನ್ನದಿಂದ ತಯಾರಿಸಲಾದ ಶಿಖರಾಲಂಕಾರ ಮಾಣಿಕ್ಯಗಳು, ವಜ್ರಗಳು ಹಾಗೂ ಪಚ್ಚೆಯನ್ನೊಳಗೊಂಡಿದೆ. 18ನೇ ಶತಮಾನದ ಅಕ್ಕಸಾಲಿಗರ ಕೈಚಳಕದಿಂದ ಈ ಶಿಖರಾಲಂಕಾರವನ್ನು ನಿರ್ಮಿಸಲಾಗಿದೆ 2009ರವರೆಗೆ ಈ ಶಿಖರಾಲಂಕಾರದ ಅಸ್ತಿತ್ವ ತಿಳಿದುಬಂದಿರಲಿಲ್ಲ. ಉಳಿದ ಐದು ಶಿಖರಾಲಂಕಾರಗಳಲ್ಲಿ ಈ ಶಿಖರಾಲಂಕಾರದ ಅಮೃತಶಿಲೆಯ ಪೀಠವು ಅತಿ ವಿಶಿಷ್ಟವಾಗಿದ್ದು ಚಿನ್ನದ ಶಾಸನದಲ್ಲಿನ ಅರ್ಥವು ಇನ್ನೂ ನಿಗೂಢವಾಗಿದೆ.

  ರಫ್ತು ಪರಿಶೀಲನಾ ಸಮಿತಿಯ ಸಲಹೆ ಅಂತಿಮ:

  ಅಂತಿಮ ರಫ್ತು ಪರವಾನಗಿ ಅರ್ಜಿಯ ನಿರ್ಧಾರವನ್ನು ಫೆಬ್ರವರಿ 11, 2022ರವರೆಗೆ ಮುಂದೂಡಲಾಗಿದ್ದು, GBP 1.5 ಮಿಲಿಯನ್ ಬೆಲೆಯಲ್ಲಿ ಹಣವನ್ನು ಸಂಗ್ರಹಿಸುವ ಗಂಭೀರ ಉದ್ದೇಶ ಹೊಂದಿದ್ದರೆ ಅದನ್ನು 11 ಜೂನ್ 2022ರವರೆಗೆ ವಿಸ್ತರಿಸಬಹುದು. 18ನೇ ಶತಮಾನದ ಕೊನೆಯ ವರ್ಷಗಳಲ್ಲಿ ಇದು ಆಂಗ್ಲೋ-ಇಂಡಿಯನ್ ಇತಿಹಾಸದಲ್ಲಿ (Anglo Indian History) ಪ್ರಮುಖ ಸಾಂಕೇತಿಕ ವಸ್ತುವಾಗಿದೆ ಎಂದು ಒಪ್ಪಿಕೊಂಡಿರುವ ಕಲಾಕೃತಿಗಳು ಮತ್ತು ಸಾಂಸ್ಕೃತಿಕ ಆಸಕ್ತಿಯ ವಸ್ತುಗಳ (RCEWA) ರಫ್ತು ಪರಿಶೀಲನಾ ಸಮಿತಿಯ ಸಲಹೆಯನ್ನು ಸಚಿವರ ತೀರ್ಮಾನವು ಅನುಸರಿಸುತ್ತದೆ.

  ಇದನ್ನೂ ಓದಿ: ಬಿಎಸ್ಎನ್ಎಲ್ ಫ್ಯಾನ್ಸಿ ನಂಬರ್​​ಗಾಗಿ 2.4 ಲಕ್ಷ ರೂ. ಪಾವತಿಸಿದ ಆಲೂಗಡ್ಡೆ ವ್ಯಾಪಾರಿ!

  ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಟಿಪ್ಪು:

  ಟಿಪ್ಪುವಿನ ಚಿನ್ನದ ಹಾಗೂ ರತ್ನಖಚಿತ ಸಿಂಹಾಸನವನ್ನು ಟಿಪ್ಪುವಿನ ಸೋಲು ಹಾಗೂ ಮರಣದ ನಂತರ 1799ರಲ್ಲಿ ಆತನ ರಾಜಧಾನಿ ಶ್ರೀರಂಗಪಟ್ಟಣದಲ್ಲಿ ಬ್ರಿಟಿಷ್ ಸೈನ್ಯದ ಪಾರಿತೋಷಕ ಏಜೆಂಟರ್ ಮುರಿದುಹಾಕಿದರು ಎನ್ನಲಾಗಿದೆ. ಚಿನ್ನದ ಹುಲಿಯ ಶಿರವು ಮೂಲ ಎಂಟು ಶಿರಗಳಲ್ಲಿ ಒಂದಾಗಿದ್ದು ಅಷ್ಟಭುಜಾಕೃತಿಯ ಸಿಂಹಾಸನದ ಬಲೆಯಲ್ಲಿ ಇರಿಸಲಾಯಿತು. RCEWA ಸದಸ್ಯ ಕ್ರಿಸ್ಟೋಫರ್ ರೋವೆಲ್ ಹೇಳುವಂತೆ ಈ ಹುಲಿಯ ಶಿರವು ಉಳಿದಿರುವ ನಾಲ್ಕು ಶಿಖರಾಲಂಕಾರಗಳಲ್ಲಿ ಒಂದಾಗಿದ್ದು, ಪೊವಿಸ್ ಕ್ಯಾಸಲ್ (NT) ನಲ್ಲಿರುವ ಕ್ಲೈವ್ ಮ್ಯೂಸಿಯಂನಲ್ಲಿರುವ ಶಿರ ಒಳಗೊಂಡಂತೆ ಸಿಂಹಾಸನದ ಇತರ ಪಳೆಯುಳಿಕೆಗಳೊಂದಿಗೆ ಇದನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

  ಇದನ್ನೂ ಓದಿ: ಈ ಮೀನಿಗೆ 555 ಹಲ್ಲು, ಪ್ರತಿ ದಿನ ಬೀಳುತ್ತೆ 20 ಹಲ್ಲು

  1799ರಲ್ಲಿ ಟಿಪ್ಪುವಿನ ಸೋಲು ಹಾಗೂ ಮರಣದವರೆಗೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಅತಿದೊಡ್ಡ ತಲೆನೋವಾಗಿ ಪರಿಣಮಿಸಿದ್ದರು. ಮೈಸೂರಿನ ಆಡಳಿತಗಾರನಾಗಿ ಟಿಪ್ಪು ಹುಲಿಯ ಚಿತ್ರಗಳೊಂದಿಗೆ ಒಬ್ಬ ಶೂರ ಪರಾಕ್ರಮಿ ಎಂದು ಗುರುತಿಸಲ್ಪಟ್ಟಿದ್ದರು. ಸಿಂಹಾಸನದ ಮೂರು ಸಮಕಾಲೀನ ಚಿತ್ರಗಳು ಇದೀಗ ಇಂಗ್ಲೆಂಡ್‌ನಲ್ಲಿವೆ. ಟಿಪ್ಪುವಿನ ಸೋಲು ಬ್ರಿಟನ್‌ನ ಸಾಮ್ರಾಜ್ಯಶಾಹಿ ಆಡಳಿತಕ್ಕೆ ಮಹತ್ತರವಾದ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ಟಿಪ್ಪುವಿನ ಸೋಲಿನ ನಂತರ ಆತನ ಖಜಾನೆಯಲ್ಲಿದ್ದ ಅದೆಷ್ಟೋ ಅಮೂಲ್ಯ ಸ್ವತ್ತುಗಳು ಬ್ರಿಟನ್‌ಗೆ ಬಂದವು. ಈ ಸ್ವತ್ತುಗಳು ಅಲ್ಲಿನ ಕವಿತೆ, ಕಾದಂಬರಿ, ಹಾಗೂ ಕಲಾವಿದರ ಮೇಲೆ ಪ್ರಭಾವ ಬೀರಿದವು ಹಾಗೂ ಹೆಚ್ಚಿನ ಸಾರ್ವಜನಿಕ ಆಸಕ್ತಿ ಗಳಿಸಿದವು.
  Published by:Sharath Sharma Kalagaru
  First published: