ಭುವನೇಶ್ವರ: ಎತ್ತಿನಗಾಡಿ ಮೇಲೆ ಕುಳಿತಿರೋ ಯುವತಿ, ಇದೇನು ಸಾಮಾನ್ಯ ಎತ್ತಿನಗಾಡಿಯಲ್ಲ, ಸಕಲ ಅಲಂಕಾರ ಮಾಡಿದ ಹೂಗಳಿಂದ ಕಂಗೊಳಿಸುತ್ತಿರೋ ಮದುವೆ ಎತ್ತಿನಗಾಡಿ! ಎತ್ತಿನಗಾಡಿಯಲ್ಲಿ (Bullock Cart) ಕುಳಿತ ಈ ಯುವತಿಯೂ (New Bride In Bullock Cart) ಸಾಮಾನ್ಯದವಳಲ್ಲ, ಈಗಷ್ಟೇ ಮದುವೆಯಾಗಿ ಅತ್ತೆ ಮನೆಗೆ ತೆರಳುತ್ತಿರೋ ಮದುಮಗಳು!
ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಈ ವಿಶೇಷ ಈ ಘಟನೆ ನಡೆದಿದೆ. ವಧು ಸರಿತಾ ಬೆಹೆರಾ ಮತ್ತು ವರ ಮಹೇಂದ್ರ ನಾಯಕ್ ಇಬ್ಬರೂ ಚೆನ್ನಾಗಿ ಓದಿಕೊಂಡವರು. ಇಬ್ಬರೂ ಭುವನೇಶ್ವರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರು. ಆದ್ರೂ ಸಹ, ತಮ್ಮ ಮದುವೆಯಲ್ಲಿ ಹಳೆಯ ಕಾಲದಲ್ಲಿ ಅನುಸರಿಸುತ್ತಿದ್ದ ಸಂಪ್ರದಾಯಗಳಿಗೆ ಮತ್ತೆ ಜೀವ ನೀಡಲು ಇಬ್ಬರೂ ನಿರ್ಧರಿಸಿದರು.
ಇದನ್ನೂ ಓದಿ: Bird Love: ಬಾಲಕಿಯೊಂದಿಗೆ ಮೈನಾ ಹಕ್ಕಿಯ ವಿಶೇಷ ಪ್ರೀತಿ; ಶಾಲೆಗೂ ಹೋಗತ್ತೆ, ಆಟದ ಮೈದಾನದಲ್ಲೂ ಪಕ್ಷಿ ಹಾಜರ್!
ಅಲ್ಲದೇ, ಯಾವುದೇ ವಾಹನಗಳನ್ನು ಸಹ ತಮ್ಮ ಮದುವೆಗೆ ಬಳಸುವುದಿಲ್ಲವೆಂದು ಇಬ್ಬರ ಮನೆಯಲ್ಲೂ ಒಪ್ಪಿಸಿದ್ದಾರೆ. ಅದೇ ಕಾರಣಕ್ಕೆ ಮದುಮಗಳು ಎತ್ತಿನಗಾಡಿಯಲ್ಲಿ ಮದುವೆ ಮಂಟಪಕ್ಕೆ ಆಗಮಿಸಿದ್ದಾಳೆ.
ಇದನ್ನೂ ಓದಿ: Viral News: 1300 ರೂಪಾಯಿಗೆ ಮಾರಾಟಕ್ಕಿದೆ ಬುರ್ಜ್ ಖಲೀಫಾ!
ಮದುಮಗ ಮಹೇಂದ್ರ ಅವರು ಮೆರವಣಿಗೆಯಲ್ಲಿ ಕುದುರೆಯ ಮೇಲೆ ಕುಳಿತು ಮದುವೆ ಮಂಟಪಕ್ಕೆ ಆಗಮಿಸಿದ್ದಾರೆ. ಮದುವೆ ಆದ್ಮೇಲೆ ಮದುಮಗಳು ಸರಿತಾ ಅತ್ತೆಯ ಮನೆಗೆ ಅಲಂಕರಿಸಿದ ಎತ್ತಿನ ಗಾಡಿಯಲ್ಲಿ ತೆರಳಿದ್ದಾರೆ. ಒಟ್ಟಾರೆ ಕುದುರೆ ಸವಾರಿ ಮಾಡಿದ ಮದುಮಗ, ಮತ್ತು ಎತ್ತಿನಗಾಡಿಯಲ್ಲಿ ಅತ್ತೆ ಮನೆಗೆ ತೆರಳಿದ ಮದುಮಗಳು ಭಾರೀ ವೈರಲ್ ಆಗ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ