HOME » NEWS » Trend » UNIQUE SERVICE LETS YOU RENT FAT PEOPLE BY THE HOUR LG

Unique Service: ದಪ್ಪಗಿರುವವರು ಬಾಡಿಗೆಗೆ ಬೇಕಾಗಿದ್ದಾರೆ, ಮಿನಿಮಮ್ 100 ಕೆ.ಜಿ. ಇರಲೇಬೇಕು..!

ಬ್ಲಿಸ್​ ತನ್ನ ಬಟ್ಟೆ ಬ್ರ್ಯಾಂಡ್​​ಗಾಗಿ ಪ್ಲಸ್​​-ಸೈಜ್​​ ಮಾಡೆಲ್​ಗಳನ್ನು ಹುಡುಕಲು ಹೆಣಗಾಡುತ್ತಿದ್ದಾಗ ಅವರಿಗೆ ಈ ಹೊಸ ಐಡಿಯಾ ಬಂದಿದೆ.

Latha CG | news18-kannada
Updated:June 8, 2021, 4:28 PM IST
Unique Service: ದಪ್ಪಗಿರುವವರು ಬಾಡಿಗೆಗೆ ಬೇಕಾಗಿದ್ದಾರೆ, ಮಿನಿಮಮ್ 100 ಕೆ.ಜಿ. ಇರಲೇಬೇಕು..!
ಡೆಬುಕರಿ ಕಂಪನಿಯ ಮಾಡೆಲ್​ಗಳು
  • Share this:
ದಪ್ಪಗಿರುವ ಜನರಿಗೆ ಕೀಳರಿಮೆ ಜಾಸ್ತಿ. ಹಾಗಾಗಿ ಜನರೊಂದಿಗೆ, ಸ್ನೇಹಿತರೊಂದಿಗೆ ಬೆರೆಯಲು ಹಿಂಜರಿಯುತ್ತಾರೆ. ದಪ್ಪಗಿರುವ ಹುಡುಗ-ಹುಡುಗಿಯರನ್ನು ಮದುವೆ ಪ್ರಪೋಸಲ್​​ನಲ್ಲಿ ರಿಜೆಕ್ಟ್​ ಮಾಡಿರುವ ಅನೇಕ ಸಂಗತಿಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಈಗ ಈ ದಪ್ಪಗಿರುವವರಿಗೆ ಒಂದು ಒಳ್ಳೆ ಆಫರ್​ ಬಂದಿದೆ ನೋಡಿ. ದಪ್ಪಗಿರುವ ಜನರು ಬಾಡಿಗೆಗೆ ಬೇಕಾಗಿದ್ದಾರೆ. ಹೌದು, ಅವರಿಗೆ ಗಂಟೆಗೆ ಇಂತಿಷ್ಟು ಹಣ ಎಂದು ನಿಗದಿ ಮಾಡಿ ದುಡ್ಡನ್ನು ಕೊಡುತ್ತಾರೆ. ಎಲ್ಲಿ ಅಂತೀರಾ? ಮುಂದೆ ಓದಿ.

ಜಪಾನ್​ನಲ್ಲಿ ಈ ಹೊಸ ಸೇವೆ ಆರಂಭವಾಗಿದೆ.​ ಕಂಪನಿಯೊಂದು ದಪ್ಪಗಿರುವವರನ್ನು ಬಾಡಿಗೆಗೆ ತೆಗೆದುಕೊಳ್ಳಲು ಮುಂದಾಗಿದೆ. ಇವರಿಗೆ ಗಂಟೆಗೆ 1,311 ರೂಪಾಯಿ ಕೂಡ ನೀಡಲಾಗುತ್ತೆ. ಜಪಾನಿನಲ್ಲಿ ವಿವಿಧ ಉದ್ದೇಶಗಳಿಗಾಗಿ ಜನರನ್ನು ಬಾಡಿಗೆಗೆ ತೆಗೆದುಕೊಳ್ಳುವುದು ಹೊಸದೇನಲ್ಲ. ಈ ಹಿಂದೆಯೂ ಸಹ ಅನೇಕ ಕಾರಣಗಳಿಗಾಗಿ ಜನರನ್ನು ಬಾಡಿಗೆ ಪಡೆದುಕೊಳ್ಳಲಾಗಿತ್ತು. ಉದಾಹರಣೆಗೆ ನಿಮ್ಮ ಹೆಂಡತಿಯು ನಿಮಗೆ ಮೋಸ ಮಾಡಿ ತನ್ನ ಪ್ರಿಯತಮನ ಜೊತೆ ಸಂಬಂಧ ಇಟ್ಟುಕೊಂಡಿದ್ದರೆ, ಬಾಡಿಗೆಗೆ ಒಬ್ಬ ವ್ಯಕ್ತಿಯನ್ನು ಪಡೆದು ಆತನಿಗೆ ಸಂಗಾತಿಯ ಪ್ರಿಯಕರನ ಜೊತೆ ಗೆಳೆತನ ಬೆಳೆಸುವಂತೆ ಹೇಳಿ, ಬಳಿಕ ಆತ ತನ್ನ ಸ್ನೇಹಿತ(ಸಂಗಾತಿಯ ಪ್ರಿಯಕರ)ನಿಗೆ ತಿಳಿ ಹೇಳಿ, ಆ ಹೆಣ್ಣಿನ ಸಹವಾಸ ಬಿಡುವಂತೆ ಮಾಡುತ್ತಾನೆ. ಆಕೆ ವಾಪಸ್ ತನ್ನ ಗಂಡನ ಪ್ರೀತಿಯ ಬಲೆಯಲ್ಲಿ ಬೀಳುತ್ತಾಳೆ. ಇಂತಹ ಅನೇಕ ಉದ್ದೇಶಗಳಿಗಾಗಿ ಜಪಾನ್​ನಲ್ಲಿ ಜನರನ್ನು ಬಾಡಿಗೆಗೆ ಪಡೆಯಲಾಗುತ್ತದೆ. ಜೊತೆಗೆ ಸಾಕಷ್ಟು ಆಫರ್​ಗಳನ್ನು ನೀಡಿ ಕಂಪನಿಗೆ ಮಧ್ಯ ವಯಸ್ಕ ಜನರನ್ನು ಬಾಡಿಗೆಗೆ ಪಡೆಯುತ್ತಾರೆ.

ಇದನ್ನೂ ಓದಿ:Pune Fire Accident: ಪುಣೆಯ ಕೆಮಿಕಲ್​ ಫ್ಯಾಕ್ಟರಿಯಲ್ಲಿ ಬೆಂಕಿ ದುರಂತ; ಸಾವಿನ ಸಂಖ್ಯೆ 18ಕ್ಕೆ ಏರಿಕೆ

ಈ ತಿಂಗಳು ದಪ್ಪಗಿರುವ ಜನರಿಗೆ ಬಾಡಿಗೆಯ ಆಫರ್​ ನೀಡಿದೆ. ಡೆಬುಕರಿ ಎಂಬ ಹೆಸರಿನ ಕಂಪನಿ ಈ ಹೊಸ ಸೇವೆಯನ್ನು  ಪ್ರಾರಂಭಿಸಿದೆ. ಗಂಟೆಯ ಲೆಕ್ಕದಲ್ಲಿ ದಪ್ಪಗಿರುವ ಜನರನ್ನು ಬಾಡಿಗೆಗೆ ಪಡೆಯಲಾಗುತ್ತದೆ. ಅವರು ಕನಿಷ್ಠ 100 ಕೆ.ಜಿ.ಗಿಂತ ಹೆಚ್ಚು ಇರಲೇಬೇಕು. ಮಿಸ್ಟರ್ ಬ್ಲಿಸ್​ ಎಂಬುವರು ಡೆಬುಕರಿ ಕಂಪನಿಯ ರೂವಾರಿಯಾಗಿದ್ದಾರೆ. ಇವರು ಪ್ಲಸ್​ ಸೈಜ್​​ ಫ್ಯಾಷನ್​ ಬ್ರ್ಯಾಂಡ್​​​ ಕ್ಜಿಲ್ಲಾದ ಸ್ಥಾಪಕರೂ ಹೌದು. ಬ್ಲಿಸ್​ ತನ್ನ ಬಟ್ಟೆ ಬ್ರ್ಯಾಂಡ್​​ಗಾಗಿ ಪ್ಲಸ್​​-ಸೈಜ್​​ ಮಾಡೆಲ್​ಗಳನ್ನು ಹುಡುಕಲು ಹೆಣಗಾಡುತ್ತಿದ್ದಾಗ ಅವರಿಗೆ ಈ ಹೊಸ ಐಡಿಯಾ ಬಂದಿದೆ. ಬ್ಲಿಸ್​ 2017ರಲ್ಲಿ ಅತೀ ಹೆಚ್ಚು ತೂಕ ಹೊಂದಿರುವ ಜನರಿಗಾಗಿ ಟಾಲೆಂಟ್​ ಏಜೆನ್ಸಿಯೊಂದನ್ನು ಪ್ರಾರಂಭಿಸಿದರು. ಸುಮಾರು 45 ಮಂದಿ ಹೆಚ್ಚಾಗಿ ಕ್ಜಿಲ್ಲಾದ ಗ್ರಾಹಕರೇ ನೇಮಕಾತಿ ಘೋಷಣೆಯಾದ ಕೂಡಲೇ ತಮ್ಮ ಹೆಸರನ್ನು ನೋಂದಾಯಿಸಿಕೊಂಡರು.

ಈ ವರ್ಷ ಏಪ್ರಿಲ್​ ತಿಂಗಳಿನಲ್ಲಿ ಡೆಬುಕರಿಯು ಹೊಸ ಆಫರ್​ನ್ನು ನೀಡಿತು. ದಪ್ಪಗಿರುವ ಜನರನ್ನು ಬಾಡಿಗೆಗೆ ಪಡೆಯಲಾಗುತ್ತದೆ. ಅವರು ಕನಿಷ್ಠ 100 ಕೆ.ಜಿ.ಗಿಂತ ಹೆಚ್ಚಾಗಿರಬೇಕು. ಗಂಟೆಗೆ 1,311 ರೂಪಾಯಿ ನೀಡಲಾಗುತ್ತೆ ಎಂದು ಘೋಷಿಸಿತು. ಹಲವು ಒಳ್ಳೆಯ ಕಾರಣಗಳನ್ನಿಟ್ಟುಕೊಂಡೇ ಬ್ಲಿಸ್​ ಈ ಸೇವೆಯನ್ನು ಪ್ರಾರಂಭಿಸಿದ್ದರು. ಉದಾಹರಣೆಗೆ ಅತೀ ದಪ್ಪ ಇರುವ ನಿಮ್ಮ ಗೆಳೆಯನಿಗೆ ಬಟ್ಟೆಗಳನ್ನು ಟ್ರಯಲ್ ನೋಡಲು ಒಬ್ಬ ಮಾಡೆಲ್​ನ ಅಗತ್ಯ ಇರುತ್ತದೆ. ಹೀಗಾಗಿ ನಿಮಗಿಂತ ದಪ್ಪಗಿರುವವರು ಯಾರಾದರೂ ಒಬ್ಬರು ಬೇಕಿರುತ್ತದೆ. ಹೀಗಾಗಿ ಈ ಆಫರ್ ನೀಡಲಾಗಿದೆ. ಕಂಪನಿಗಳಿಗೆ ಕಮರ್ಷಿಯಲ್ ಉದ್ದೇಶ, ಜಾಹೀರಾತು ವಿಭಾಗ ಅಥವಾ ಡಯೆಟ್​​​ನ್ನು ಉತ್ತೇಜಿಸಲು ದಪ್ಪಗಿರುವ ವ್ಯಕ್ತಿಯ ಅಗತ್ಯತೆ ಇರಬಹುದು.

ಇದನ್ನೂ ಓದಿ:ಮೆಡಿಕಲ್​, ಎಂಜಿನಿಯರಿಂಗ್​ ಕೋರ್ಸ್​​​​ಗೆ CET ಅಂಕ ಮಾತ್ರ ಪರಿಗಣನೆ; ಪರೀಕ್ಷೆ ದಿನಾಂಕ ಘೋಷಣೆ

ಸೇವೆಗೆ ಸಂಬಂಧಿಸಿದಂತೆ ಕೊಬ್ಬು ಎಂಬ ಪದವನ್ನು ಅವಹೇಳನಾರಿ ರೀತಿಯಲ್ಲಿ ಬಳಸುವುದಿಲ್ಲ ಎಂದು ಡೆಬುಕರಿ ಕಂಪನಿ ಸ್ಪಷ್ಟಪಡಿಸಿದೆ. ಇದನ್ನು ಸಕಾರಾತ್ಮಕ ರೀತಿಯಲ್ಲಿ ಪರಿಗಣಿಸಬೇಕು. ಡೆಬುಕರಿಗೆ ಅರ್ಜಿ ಸಲ್ಲಿಸುವ ಪ್ಲಸ್​-ಸೈಜ್​ ಜನರು ಕೊಬ್ಬು ಅಂತ ಕರೆಯುವುದರಲ್ಲಿ ಯಾವುದೇ ತೊಂದರೆ ಇರಬಾರದು ಎಂದು ಕಂಪನಿಯು ಇತ್ತೀಚಿನ ಪತ್ರಿಕಾ ಪ್ರಕಟಣೆ ತಿಳಿಸಿದೆ. ಡೆಬುಕರಿ ಮತ್ತೊಂದು ಕಡ್ಡಾಯ ಷರತ್ತನ್ನು ಹಾಕಿದೆ. ಬಾಡಿಗೆಗೆ ಬರಲು ಇಚ್ಚಿಸುವವರು ಕನಿಷ್ಠ 100 ಕೆ.ಜಿ.ಗಿಂತ ಹೆಚ್ಚಾಗಿರಬೇಕು. 18 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಿಗೆ ಅವಕಾಶ ಎಂದು ಹೇಳಿದೆ. ಡೆಬುಕರಿ ನೀಡುವ 1,311 ರೂ. ಬಾಡಿಗೆ ಹಣ ಸಂಪೂರ್ಣವಾಗಿ ವ್ಯಕ್ತಿಗೆ ಹೋಗುತ್ತದೆ ಎಂದು ಬ್ಲಿಸ್ ಹೇಳಿದ್ದಾರೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Latha CG
First published: June 8, 2021, 4:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories