• Home
  • »
  • News
  • »
  • trend
  • »
  • Udupi Island: ಕರ್ನಾಟಕದ ಸೇಂಟ್ ಮೇರಿಸ್ ದ್ವೀಪದಲ್ಲಿವೆ ವಿಶಿಷ್ಟ ಶಿಲಾ ರಚನೆಗಳು, ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ ಇದು

Udupi Island: ಕರ್ನಾಟಕದ ಸೇಂಟ್ ಮೇರಿಸ್ ದ್ವೀಪದಲ್ಲಿವೆ ವಿಶಿಷ್ಟ ಶಿಲಾ ರಚನೆಗಳು, ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ ಇದು

ಉಡುಪಿಯ ಮಲ್ಪೆ

ಉಡುಪಿಯ ಮಲ್ಪೆ

Udupi Island: ಲಕ್ಷಾಂತರ ವರ್ಷಗಳ ಹಿಂದೆ, ಭೂಮಿಯ ಮೇಲ್ಮೈಯಿಂದ ಬಿಸಿಯಾದ ಕರಗಿದ ಲಾವಾ ಹೊರಹೊಮ್ಮಿದಾಗ ಮತ್ತು ಅರೇಬಿಯನ್ ಸಮುದ್ರದ ನೀರಿನಿಂದ ತಂಪಾಗಿದಾಗ ಈ ವಿಶಿಷ್ಟವಾದ ಕಲ್ಲಿನ ರಚನೆಗಳು ರೂಪುಗೊಂಡಿವೆ.

  • Share this:

ನೀವು ಕರ್ನಾಟಕದ ಉಡುಪಿ ಹತ್ತಿರವಿರುವ ಮಲ್ಪೆ ಸಮುದ್ರತೀರಕ್ಕೆ ಪ್ರವಾಸಕ್ಕೆ (Tour) ಯಾವತ್ತಾದರೂ ಹೋಗಿದ್ದರೆ, ಅಲ್ಲಿ ಸಮುದ್ರ ಮಧ್ಯದಲ್ಲಿರುವ ಸೇಂಟ್ ಮೇರಿಸ್ ದ್ವೀಪದ (Saint Mary's Island) ಬಗ್ಗೆ ಖಂಡಿತವಾಗಿಯೂ ನೀವು ಕೇಳಿರುತ್ತೀರಿ. ಆ ದ್ವೀಪಕ್ಕೆ ಹೋದರೆ, ನಿಮಗೆ ಬೇರೆಯ ಲೋಕಕ್ಕೆ ಕರೆದುಕೊಂಡು ಹೋದ ರೀತಿಯ ವಿಶಿಷ್ಟವಾದ ಅನುಭವ (Experience) ನೀಡುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಅಂತದ್ದೇನಿದೆ ಈ ಕರ್ನಾಟಕದ ಉಡುಪಿಯ ಮಲ್ಪೆಯ ಕರಾವಳಿಯಲ್ಲಿ ಅಂತೀರಾ? ಇಲ್ಲಿ ನಾಲ್ಕು ಸಣ್ಣ ಸಣ್ಣ ದ್ವೀಪಗಳಿವೆ, ಅಲ್ಲಿ ನೀವು ಇಂಟರ್ ಲಾಕಿಂಗ್ ಬಸಾಲ್ಟ್ ಸ್ತಂಭಗಳ ಸರಣಿಯನ್ನು ಕಾಣಬಹುದು ಎಂದರೆ ಕಲ್ಲಿನ ಶಿಲಾ ರಚನೆಯನ್ನು ನೀವು ನೋಡಬಹುದು. ಬಹುಶಃ ಅಂತಹ ವಿಶಿಷ್ಟವಾದ ಶಿಲಾ ರಚನೆಗಳನ್ನು ಅಥವಾ ಕಲ್ಲುಗಳನ್ನು ಉತ್ತರ ಐರ್ಲೆಂಡ್ ನ ಜೈಂಟ್ಸ್ ಕಾಸ್ ವೇ ಯಲ್ಲಿ ನೋಡಿರಬಹುದು ಅಂತ ನೋಡಿದವರು ಹೇಳುತ್ತಾರೆ.


ಲಕ್ಷಾಂತರ ವರ್ಷಗಳ ಹಿಂದೆ, ಭೂಮಿಯ ಮೇಲ್ಮೈಯಿಂದ ಬಿಸಿಯಾದ ಕರಗಿದ ಲಾವಾ ಹೊರಹೊಮ್ಮಿದಾಗ ಮತ್ತು ಅರೇಬಿಯನ್ ಸಮುದ್ರದ ನೀರಿನಿಂದ ತಂಪಾಗಿದಾಗ ಈ ವಿಶಿಷ್ಟವಾದ ಕಲ್ಲಿನ ರಚನೆಗಳು ರೂಪುಗೊಂಡವು ಎಂದು ಹೇಳಲಾಗುತ್ತಿದೆ. ಈ ಲಾವಾಗಳನ್ನು ಹೇಗೆ ತಂಪಾಗಿಸಲಾಗುತ್ತದೆ ಎಂಬ ವಿಶಿಷ್ಟ ವಿಧಾನದಿಂದಾಗಿ, ಈ ಅಗ್ನಿಶಿಲೆಗಳು ಷಡ್ಭುಜಾಕೃತಿಯ ಆಕಾರವನ್ನು ತೆಗೆದುಕೊಂಡಿವೆ ಅಂತ ಹೇಳಲಾಗುತ್ತಿದೆ. ಇವುಗಳನ್ನು ಕಾಲಮರ್ ಬಸಾಲ್ಟಿಕ್ ಲಾವಾ ಎಂದೂ ಕರೆಯಲಾಗುತ್ತದೆ.


ಉತ್ತರ ಐರ್ಲೆಂಡ್ ನ ಜೈಂಟ್ಸ್ ಕಾಸ್ ವೇ ಯಲ್ಲಿವೆ ಈ ಅದ್ಭುತ ರಚನೆಗಳು


ಉತ್ತರ ಐರ್ಲೆಂಡ್ ನ ಜೈಂಟ್ಸ್ ಕಾಸ್ ವೇ ಯಲ್ಲಿ ಇರುವಂತಹ ಅದ್ಭುತವಾದ ಭೌಗೋಳಿಕ ರಚನೆಯನ್ನು ಉಡುಪಿಯ ಮಲ್ಪೆಯ ಕರಾವಳಿಯಲ್ಲಿರುವ ಸೇಂಟ್ ಮೇರಿಸ್ ದ್ವೀಪಗಳಲ್ಲಿ ನೋಡಬಹುದು.


ಸೇಂಟ್ ಮೇರಿಸ್ ದ್ವೀಪಗಳ ಎಲ್ಲಾ ನಾಲ್ಕು ದ್ವೀಪಗಳು ಈ ಬಸಾಲ್ಟ್ ರಚನೆಗಳನ್ನು ಹೊಂದಿಲ್ಲ. ನಾಲ್ಕು ದ್ವೀಪಗಳಲ್ಲಿ ಕೋಕೋನಟ್ ದ್ವೀಪ, ಉತ್ತರ ದ್ವೀಪ, ದರಿಯಾಬಹದ್ದೂರ್‌ಘರ್ ದ್ವೀಪ ಮತ್ತು ದಕ್ಷಿಣ ದ್ವೀಪಗಳಿವೆ. ಕೋಕೋನಟ್ ದ್ವೀಪ ಮಾತ್ರ ಈ ರಚನೆಗಳನ್ನು ಹೊಂದಿದೆ ಅಂತ ಹೇಳಲಾಗುತ್ತಿದೆ. ಈ ಷಡ್ಭುಜಾಕೃತಿಯ ಸ್ತಂಭಗಳ ರಚನೆಗಳು ಭಾರತದಲ್ಲಿ ಯಾವುದೇ ಸಮುದ್ರದ ದ್ವೀಪಗಳಲಿಲ್ಲ ಅಂತ ಹೇಳಲಾಗುತ್ತಿದೆ.



ಕೋಕೋನಟ್ ದ್ವೀಪ ಅಂತ ಹೆಸರು ಬಂದಿದ್ದು ಹೇಗೆ?


ಕೋಕೋನಟ್ ದ್ವೀಪವು ಇಲ್ಲಿ ಬೆಳೆಯುವ ತೆಂಗಿನ ಮರಗಳಿಂದ ತನ್ನ ಹೆಸರನ್ನು ಪಡೆದಿದೆ. ಸುಮಾರು 500 ಮೀಟರ್ ಉದ್ದ ಮತ್ತು 100 ಮೀಟರ್ ಅಗಲದ, ಪ್ರಮುಖ ತೆಂಗಿನ ಮರಗಳು, ಕುತೂಹಲಕಾರಿ ಬಂಡೆಗಳ ರಚನೆಗಳು ಮತ್ತು ವಾಸದ ಯಾವುದೇ ಕುರುಹುಗಳಿಲ್ಲದ ಒಂದು ಸಣ್ಣ ದ್ವೀಪ ಇದಾಗಿದ್ದು, ಕೋಕೋನಟ್ ದ್ವೀಪವು ಖಂಡಿತವಾಗಿಯೂ ಒಮ್ಮೆಯಾದರೂ ನೋಡಲೇಬೇಕಾದ ಅದ್ಭುತ ಸ್ಥಳ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಕೋಕೋನಟ್ ದ್ವೀಪವು ಮಲ್ಪೆ ಕಡಲ ತೀರದಿಂದ ಆರು ಕಿಲೋ ಮೀಟರ್ ದೂರವಿದ್ದು, ಈ ದ್ವೀಪ ಸಮೂಹಕ್ಕೆ ದೋಣಿಯಿಂದ ಮಾತ್ರವೆ ಹೋಗಲು ಸಾಧ್ಯ.


ಇದನ್ನೂ ಓದಿ: ಔಷಧಿ ಕೊಳ್ಳುವಾಗ ಅಸಲಿಯಾ, ನಕಲಿಯಾ ಎಂಬ ಆತಂಕವೇ? ಕಂಡು ಹಿಡಿಯೋಕೆ ಇಲ್ಲಿದೆ ಸುಲಭ ದಾರಿ


ಸೇಂಟ್ ಮೇರಿಸ್ ದ್ವೀಪಗಳಲ್ಲಿನ ಕಡಲತೀರಗಳು ಈಜಲು ಸೂಕ್ತವಲ್ಲ


ಸೇಂಟ್ ಮೇರಿಸ್ ದ್ವೀಪಗಳಲ್ಲಿನ ಕಡಲತೀರಗಳು ಈಜಲು ಸೂಕ್ತವಲ್ಲ, ಏಕೆಂದರೆ ಅವೆಲ್ಲವೂ ಬಸಾಲ್ಟಿಕ್ ಬಂಡೆಗಳನ್ನು ಹೊಂದಿವೆ. ಆದಾಗ್ಯೂ, ದ್ವೀಪದ ಪಶ್ಚಿಮ ಭಾಗದಲ್ಲಿ, ನೀವು ಎಲ್ಲೆಡೆ ಚದುರಿದ ಸಾಕಷ್ಟು ವರ್ಣರಂಜಿತ ಸಮುದ್ರ ಚಿಪ್ಪುಗಳನ್ನು ಕಾಣಬಹುದು.


ಈ ದ್ವೀಪಗಳು ಜನವಸತಿರಹಿತವಾಗಿದ್ದರೂ, ಈ ದ್ವೀಪಗಳಲ್ಲಿ ಪ್ರವಾಸಿಗರಿಗೆ ಅನುಮತಿ ಇರುವುದರಿಂದ, ಈ ಸ್ಥಳ ಮತ್ತು ಭೇಟಿ ನೀಡುತ್ತಿರುವ ಜನರನ್ನು ರಕ್ಷಿಸಲು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಲವಾರು ಅಪಾಯದ ವಲಯಗಳು ಇರುವುದರಿಂದ ಮೇಲ್ವಿಚಾರಣೆಯಿಲ್ಲದೇ ಇಲ್ಲಿ ಸುತ್ತಾಡುವುದು ಅಷ್ಟೊಂದು ಸೂಕ್ತವಲ್ಲ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ: ಬಣ್ಣಕ್ಕಿಂತ ಪರಿಶುದ್ಧ ಮನಸ್ಸು ಸುಂದರ ಎಂಬ ಸಂದೇಶ ಸಾರಿದ ಕಾಳಿಯ ಗ್ರಾಫಿಕ್ಸ್


ಈ ಬಸಾಲ್ಟ್ ಶಿಲಾ ರಚನೆಗಳು ಭಾರತದ 34 ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಒಂದಾಗಿವೆ ಎಂದು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಘೋಷಿಸಿದೆ. ಇವು ಖಂಡಿತವಾಗಿಯೂ ಭಾರತದ ಅತ್ಯುತ್ತಮ ಭೂ ಪ್ರವಾಸೋದ್ಯಮ ತಾಣಗಳಲ್ಲಿ ಒಂದಾಗಿದೆ ಅಂತ ಹೇಳಬಹುದು.

First published: