Lowest Height: ಇದು ಪ್ರಚಂಡ ಕುಳ್ಳರ ದೇಶ.. ಇಲ್ಲಿನ ಜನರು ಎತ್ತರವಾಗಿ ಬೆಳೆಯೋದೆ ಇಲ್ಲ!

Viral Story: ಬಹುತೇಕ ದೇಶಗಳಲ್ಲಿನ ಜನರು ಎತ್ತರವಾಗಿಯೇ ಬೆಳೆಯುತ್ತಾರೆ ಎಂಬುದನ್ನು ಗಮನಿಸಬಹುದು. ಆದರೆ ಇಲ್ಲೊಂದು ದೇಶದಲ್ಲಿನ ಜನರು ಮಾತ್ರ ಕುಬ್ಜವಾಗಿ ಬೆಳೆಯುತ್ತಾರಂತೆ! ಅದು ಯಾವ ದೇಶ ಗೊತ್ತಾ? ಈ ಸ್ಟೋರಿ ಓದಿ..

ಪೂರ್ವ ಟಿಮೋರ್ ವಾಸಿಗರು

ಪೂರ್ವ ಟಿಮೋರ್ ವಾಸಿಗರು

  • Share this:
    ಬಹುತೇಕರಿಗೆ ಎತ್ತರವಾಗಿ (Height) ಬೆಳೆಯಬೇಕು ಎಂಬ ಆಸೆಯಿರುತ್ತದೆ. ದೈಹಿಕವಾಗಿಯೂ ಮತ್ತು ಆರ್ಥಿಕವಾಗಿಯೂ ಎತ್ತರಕ್ಕೆ ಬೆಳೆಯಬೇಕೆಂಬ ಕನಸನ್ನು ಬಹುತೇಕರು ಇಟ್ಟುಕೊಂಡಿರುತ್ತಾರೆ. ಆದರೆ ಇದರಲ್ಲಿ ಕೆಲವರು ಮಾತ್ರ ಎತ್ತರವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಕೆಲವೊಮ್ಮೆ ನಾವು ವಾಸಿಸುವ ಪ್ರದೇಶ (Place), ಅಲ್ಲಿನ ಆಹಾರ (Food), ನೀರು (Water) ಎಲ್ಲವೂ ದೇಹದ ಮೇಲೆ ಪರಿಣಾಮ ಬೀಳುವ ಮೂಲಕ ಎತ್ತರವಾಗಿ ಬೆಳೆಯಲು ಅನುಕೂಲವಾಗುತ್ತದೆ. ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಪೂರ್ವಜರ ಹೇಗಿದ್ದರೋ ಅದರ ಮೇಲೆ ಆ ಕುಟುಂಬ ಸದಸ್ಯರ ದೇಹ ರಚನೆಗಳನ್ನು ಕಾಣಬಹುದಾಗಿದೆ. ಅದಿರಲಿ ಬಹುತೇಕ ದೇಶಗಳಲ್ಲಿನ ಜನರು ಎತ್ತರವಾಗಿಯೇ ಬೆಳೆಯುತ್ತಾರೆ ಎಂಬುದನ್ನು ಗಮನಿಸಬಹುದು. ಆದರೆ ಇಲ್ಲೊಂದು ದೇಶದಲ್ಲಿನ ಜನರು ಮಾತ್ರ ಕುಬ್ಜವಾಗಿ ಬೆಳೆಯುತ್ತಾರಂತೆ! ಅದು ಯಾವ ದೇಶ ಗೊತ್ತಾ? ಈ ಸ್ಟೋರಿ ಓದಿ..

    ಇಂದು ವಿಶ್ವದ ಅತ್ಯಂತ ಕುಳ್ಳಗಾಗಿ ಬೆಳೆಯುವ ದೇಶವೊಂದರ ಜನರ ಬಗ್ಗೆ ಹೇಳಲಿದ್ದೇವೆ. ಅಲ್ಲಿನ ಜನರ ಸರಾಸರಿ ಎತ್ತರ ಕೇವಲ 5 ಅಡಿ.  ಆಗ್ನೇಯ ಏಷ್ಯಾದ ದೇಶ ಪೂರ್ವ ಟಿಮೋರ್ ಅಥವಾ ಟಿಮೋರ್-ಲೆಸ್ಟೆ  ಕಡಿಮೆ ಸರಾಸರಿ ಜನಸಂಖ್ಯೆಯನ್ನು ಹೊಂದಿದೆ. ಮಾತ್ರವಲ್ಲದೆ ಗಿಡ್ಡವಾಘಿ ಬೆಳೆಯುವವರ ಸಂಖ್ಯೆಯು ಇಲ್ಲಿ ಹೆಚ್ಚಿದೆ. ಆದರೆ ವಿಶ್ವದ ಅತ್ಯಂತ ಗಿಡ್ಡವಾಗಿ ಬೆಳೆಯುವ ಪುರುಷರು ನೇಪಾಳದವರಾದರು ಮತ್ತು ಕುಬ್ಜವಾಗಿ ಬೆಳೆಯುವ ಮಹಿಳೆಯರು ಭಾರತದವರು ಎಂಬುದು ಸಾಬೀತಾಗಿದೆ.

    ಆದರೆ ಪೂರ್ವ ಟಿಮೋರ್​ ಅತ್ಯಂತ ಕಡಿಮೆ ಜನರನ್ನು ಹೊಂದಿರುವ ದೇಶವಾಗಿದೆ. ದೇಶದ ಜನರ ಸರಾಸರಿ ಎತ್ತರವು ತುಂಬಾ ಚಿಕ್ಕದಾಗಿದೆ (ಈಸ್ಟ್ ಟಿಮೋರ್ ಜನರ ಎತ್ತರ). ಹಾಗಾಗಿ ಇದು ಈ ದೇಶವನ್ನು ಕಡಿಮೆ ಜನರ ದೇಶವನ್ನಾಗಿ ಮಾಡಿದೆ.

    ಇದನ್ನು ಓದಿ: Viral Video: 4 ಲಕ್ಷ ಸಂಗ್ರಹಿಸಿ ಬೀದಿ ನಾಯಿಗೆ ಕೃತಕ ಕಾಲು ಜೋಡಿಸಿದ ಶ್ವಾನ ಪ್ರೇಮಿಗಳು!

    ಇಲ್ಲಿನ ಜನರ ಸರಾಸರಿ ಎತ್ತರ ತುಂಬಾ ಕಡಿಮೆ

    ಮಾಹಿತಿಯ ಪ್ರಕಾರ, ಇಲ್ಲಿ ಪುರುಷರ ಸರಾಸರಿ ಎತ್ತರ 159.79 ಸೆಂ.ಮೀ ಆಗಿದ್ದರೆ ಹೆಣ್ಣು ಮಕ್ಕಳ ಎತ್ತರ 151.15 ಸೆಂ.ಮೀ.

    ಲಾವೋಸ್​ನಲ್ಲೂ ಇದೇ ರೀತಿಯ ಪರಿಸ್ಥಿರಿ ಕಾಣಬಹುದು. ಅಲ್ಲಿನ ಜನರ ಸರಾಸರಿ ಉದ್ದವು ಪೂರ್ವ ಟಿಮೋರ್‌ಗಿಂತ ಸ್ವಲ್ಪ ಎತ್ತರಾಗಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಪ್ರಕಾರ, ಭಾರತದಲ್ಲಿ ಪುರುಷನ ಸರಾಸರಿ ಎತ್ತರ 5.8 ಅಡಿ ಮತ್ತು ಮಹಿಳೆಯ ಎತ್ತರ 5.3 ಅಡಿ ಇದೆ. ಆದರೆ 2020 ರ ವರದಿಯ ಪ್ರಕಾರ, ಸರಾಸರಿ ಉದ್ದವು ಹೆಚ್ಚಾಗಿದೆ.



    ಜೀನ್‌ಗಳು ಎತ್ತರದ ಮೇಲೆ ಪರಿಣಾಮ ಬೀರುತ್ತವೆ

    ನೆದರ್‌ಲ್ಯಾಂಡ್‌ನಲ್ಲಿ  ಸರಾಸರಿ 6 ಅಡಿ ಉದ್ದ ಇರುವ ಜನರು ವಾಸಿಸುತ್ತಿದ್ದಾರೆ. ಇದು ಪೂರ್ವ ಟಿಮೋರ್‌ಗಿಂತ 3 ಇಂಚು ಎತ್ತರವಾಗಿದೆ. ಗಮನಾರ್ಹವಾಗಿ, ಪೂರ್ವ ಟಿಮೋರ್‌ನ ಜನಸಂಖ್ಯೆಯು 1896 ರಿಂದ ಕೊಂಚ ಹೆಚ್ಚಾಗಿದ್ದ, ಉದ್ದವಾಗಿ ಬೆಳಯುವರಲ್ಲಿ ವ್ಯತ್ಯಾಸ ಕಾಣಬಹುದಾಗಿದೆ.

    ಇದನ್ನು ಓದಿ: Viral Video : ಅಯ್ಯಯ್ಯೋ.. ಸಿಂಹದ ಗುಹೆಗೇ ನುಗಿಬಿಟ್ಟ ಆಸಾಮಿ.. ಆಮೇಲೆನಾಯ್ತು..? ಬೆಚ್ಚಿ ಬೀಳಿಸುವ ವಿಡಿಯೋ ಇಲ್ಲಿದೆ!

    ಮೊದಲು ಇಲ್ಲಿನ ಜನರ ಸರಾಸರಿ ಎತ್ತರವು ಕೇವಲ 5 ಅಡಿಗಳಷ್ಟಿತ್ತು. 1960 ರ ಹೊತ್ತಿಗೆ, ಸರಾಸರಿ ಎತ್ತರವು 5.3 ಅಡಿಗಳಿಗೆ ಏರಿತು, ಆದರೆ ಮತ್ತೆ 1970 ರಲ್ಲಿ ಎತ್ತರವು ಕುಸಿಯಲು ಪ್ರಾರಂಭಿಸಿತು. ಉದ್ದದ ಹಿಂದೆ ಇರುವವರ ವಂಶವಾಹಿಗಳ ಮೇಲೂ ಪರಿಣಾಮ ಬೀರುವುದರಿಂದ ಇಲ್ಲಿನ ಜನರ ಎತ್ತರ ಕಡಿಮೆ ಇರುವುದಕ್ಕೆ ಕಾರಣ.
    Published by:Harshith AS
    First published: