ಎಮ್ಮೆ ಮೇಯಿಸಿದರೆ ಸಿಗುತ್ತೆ 25 ಸಾವಿರ ರೂ. ಸಂಬಳ !

news18
Updated:May 5, 2018, 7:22 PM IST
ಎಮ್ಮೆ ಮೇಯಿಸಿದರೆ ಸಿಗುತ್ತೆ 25 ಸಾವಿರ ರೂ. ಸಂಬಳ !
news18
Updated: May 5, 2018, 7:22 PM IST
ನ್ಯೂಸ್ 18 ಕನ್ನಡ

'ಹೋಗಿ ಎಮ್ಮೆ ಮೇಯಿಸು' ಈ ಡೈಲಾಗ್ ಅದೆಷ್ಟು ಬಾರಿ ನಿಮ್ಮ ಜೀವನದಲ್ಲಿ ಬಂದು ಹೋಗಿರತ್ತದೆ ಅನ್ನೋದು ಲೆಕ್ಕ ಮಾಡೋಕು ಆಗೋದಿಲ್ಲ. ಶಾಲೆಯಲ್ಲಿ ಫೇಲಾದರೆ ಅಥವಾ ಹೇಳಿದ್ದು ಕೇಳದಿದ್ದರಂತೂ ಮನೆಗಳಲ್ಲಿ ಈ ಮಾತು  ಸರ್ವೆ ಸಾಮಾನ್ಯ. ಆದರೆ ಉತ್ತರ ಪ್ರದೇಶದ ನೋಯಿಡಾದ ಗ್ರಾಮಗಳಲ್ಲಿ ಈ ಡೈಲಾಗ್ ಹೇಳುವಂತಿಲ್ಲ. ಏಕೆಂದರೆ ಈ ಗ್ರಾಮದಲ್ಲಿ ಎಮ್ಮೆ ಮೇಯಿಸುವುದು ಅಂದರೆ ಕೈ ತುಂಬ ಸಂಬಳ ಸಿಗುವ ಉದ್ಯೋಗ.

ನೋಯಿಡಾ ಮತ್ತು ಗ್ರೇಟರ್ ನೋಯಿಡಾ ಭಾಗದ ಗ್ರಾಮಗಳಲ್ಲಿ ಎಮ್ಮೆಗಳನ್ನು ಮೇಯಿಸಲು ಯುವಕರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಈ ಕೆಲಸಕ್ಕಾಗಿ ಅವರಿಗೆ ಕೈ ತುಂಬ ಸಂಬಳವನ್ನು ನೀಡಲಾಗುತ್ತದೆ.

ಈ ಗ್ರಾಮದಲ್ಲಿ ಎಮ್ಮೆ ಮೇಯಿಸುವ ಕುಮಾರ್ ಬಳಿ ಈಗ 50 ಎಮ್ಮೆಗಳಿವೆ. ಅವುಗಳನ್ನು ಮೇಯಿಸಲು ಪ್ರತಿ ತಿಂಗಳು ಕುಮಾರ್ ಪಡೆಯುತ್ತಿರುವ ಸಂಬಳ 25 ಸಾವಿರ ರೂ ಎಂದರೆ ನಂಬಲೇ ಬೇಕು. ಇವರಲ್ಲದೆ ಈ ಭಾಗದಲ್ಲಿ ಬಿಹಾರಿಗಳು ಮತ್ತು ಉತ್ತರ ಪ್ರದೇಶ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಎಮ್ಮೆ ಮೇಯಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಬಡೂಲಿ, ಕಾಮ್ನಗರ್, ಗುಲ್ವಾಲಿ ಗ್ರಾಮದ ರೈತರು ಎಮ್ಮೆ ಮೇಯಿಸಲು ಯುವಕರ ಮೊರೆ ಹೋಗಿದ್ದಾರೆ. ಒಂದು ಎಮ್ಮೆಯು ಪ್ರತಿದಿನ 8 ರಿಂದ 10 ಲೀಟರ್ ಸರಾಸರಿ ಹಾಲನ್ನು ನೀಡುತ್ತದೆ. ಇದರಿಂದ ತಿಂಗಳಿಗೆ 15 ಸಾವಿರವನ್ನು ಸಂಪಾದಿಸುತ್ತೇವೆ. ಎಮ್ಮೆಗಳನ್ನು ಮೇಯಿಸುವವರಿಗೆ ತಿಂಗಳಿಗೆ 500ರೂ. ನೀಡುತ್ತೇವೆ. ಹೀಗೆ ಕೆಲಸಗಾರರನ್ನು ನೇಮಿಸುವುದರಿಂದ ನಮ್ಮ ಸಮಯ ಕೂಡ ಉಳಿಯುತ್ತದೆ ಎಂದು ಹೇಳುತ್ತಾರೆ ಅಲ್ಲಿನ ಗ್ರಾಮಸ್ಥರು.

ಇಲ್ಲಿನ ಜನರಲ್ಲಿ ಹೆಚ್ಚಿನವರು ಕೃಷಿಕರಾಗಿದ್ದು, ದಿನವೂ ಎಮ್ಮೆಗಳನ್ನು ಮೇಯಿಸಲು ಸಮಯ ಇರುವುದಿಲ್ಲ. ಹೀಗಾಗಿ ಇಲ್ಲಿನ ರೈತರು ಪ್ರತಿ ಎಮ್ಮೆಗೆ 500 ರಿಂದ 700ರೂ. ನೀಡಿ ಯುವಕರನ್ನು ನೇಮಿಸಿಕೊಳ್ಳುತ್ತಾರೆ. ಇದರಿಂದ ಸುತ್ತಲಿನ ಗ್ರಾಮದ ಒಂದಷ್ಟು ಯುವಕರಿಗೆ ಉದ್ಯೋಗ ಸಿಕ್ಕಂತಾಗಿದೆ ಎಂದೇಳುತ್ತಾರೆ ಗ್ರಾಮಸ್ಥರೊಬ್ಬರು.

'ಬೆಳಿಗ್ಗೆ ಎಂಟು ಗಂಟೆಗೆ ಗ್ರಾಮದ ಹೊರ ಭಾಗಕ್ಕೆ ಎಮ್ಮೆಗಳನ್ನು ಮೇಯಲು ಕರೆದೊಯ್ಯುತ್ತೇವೆ. ಸಂಜೆಯಾಗುತ್ತಿದ್ದಂತೆ ಎಮ್ಮೆಗಳನ್ನು ಹಿಂಡಾಲ್ ಅಥವಾ ಯುಮುನಾ ನದಿಯಲ್ಲಿ ಸ್ನಾನ ಮಾಡಿಸುತ್ತೇವೆ. ಪ್ರತಿದಿನ 5 ಗಂಟೆಯ ಬಳಿಕ ಎಮ್ಮೆಗಳನ್ನು ದೊಡ್ಡಿಗೆ ಕರೆತರಲಾಗುತ್ತದೆ. ಈ ಕೆಲಸದಿಂದ ಕೈ ತುಂಬ ಸಂಬಳವನ್ನು ಪಡೆಯುತ್ತಿದ್ದೇವೆ. ಹೀಗಾಗಿ ನಮ್ಮ ಹಳ್ಳಿಯ ಹೆಚ್ಚಿನ ಯುವಕರು ಇದೇ ಕೆಲಸ ಮಾಡುತ್ತಿದ್ದಾರೆ' ಎಂದು ಎಮ್ಮೆ ಮೇಯಿಸುವ ಮನೋಜ್ ಹೇಳುತ್ತಾರೆ.
Loading...

ನೋಯಿಡಾ ಮತ್ತು ಗ್ರೇಟರ್ ನೋಯಿಡಾ ಹೊರತುಪಡಿಸಿ ಹರಿಯಾಣದ ಫರೀದಾಬಾದ್​​ನ  ಹಳ್ಳಿಗಳಲ್ಲೂ ಎಮ್ಮೆ ಮೇಯಿಸುವ ಕೆಲಸ ಸಿಗುತ್ತಿದೆಯಂತೆ. ಬಿಹಾರ ಮತ್ತು ಪೂರ್ವ ಉತ್ತರ ಪ್ರದೇಶದ ಹೆಚ್ಚಿನ ಯುವಕರು ಎಮ್ಮೆ ಮೇಯಿಸುವುದನ್ನು ಹೊಸ ಉದ್ಯೋಗವನ್ನಾಗಿ ಸ್ವೀಕರಿಸಿದ್ದಾರೆ.
First published:May 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ