HOME » NEWS » Trend » UNCLE JUGAAD TECHNIQUE OF SHAVING WITHOUT RAZOR VIDEO VIRAL STG HG

ಬ್ಲೇಡ್‌ ಸಹಾಯವಿಲ್ಲದೆ ಶೇವಿಂಗ್ ಮಾಡಿಕೊಳ್ಳುವ ಅಂಕಲ್: ಅವರ ಕ್ಷೌರದ ತಂತ್ರಕ್ಕೆ ಮಾರುಹೋಗುವಿರಿ..!

ಈ ವೈರಲ್ ಆದ ಕ್ಷೌರ ಮಾಡಿಕೊಳ್ಳುವ ವ್ಯಕ್ತಿಯ ಬಗ್ಗೆಯಾಗಲೀ, ಸ್ಥಳವಾಗಲಿ ಯಾವುದು ಎಂಬುದು ಇಲ್ಲಿಯವರೆಗೂ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಆದರೆ, ಈ ವ್ಯಕ್ತಿಯ ಕ್ಷೌರ ಮಾಡಿಕೊಳ್ಳುವ ತಂತ್ರದ ಪರಿಕಲ್ಪನೆಯು ಭಾರತೀಯರಿಗೆ ಇದು ದೇಶಿ ತಂತ್ರವೆಂಬುದು ಹೆಮ್ಮೆಯ ಸಂಗತಿಯಾಗಿದೆ.

news18-kannada
Updated:April 6, 2021, 11:56 AM IST
ಬ್ಲೇಡ್‌ ಸಹಾಯವಿಲ್ಲದೆ ಶೇವಿಂಗ್ ಮಾಡಿಕೊಳ್ಳುವ ಅಂಕಲ್: ಅವರ ಕ್ಷೌರದ ತಂತ್ರಕ್ಕೆ ಮಾರುಹೋಗುವಿರಿ..!
(Credit: YouTube)
  • Share this:
ನಮ್ಮ ದೇಶದ ಹಲವು ಜನರಲ್ಲಿ ತಾವು ಕೈ ಹಾಕಿದ ಕೆಲಸವನ್ನು ತ್ವರಿತವಾಗಿ ಮುಗಿಸಬೇಕೆಂಬ ಹಂಬಲವಿರುತ್ತದೆ. ಅದಕ್ಕಾಗಿಯೇ ಪರಿಹಾರ ಕಂಡುಕೊಳ್ಳುವ ಮಾರ್ಗವೆಂದರೆ "ಜುಗಾಡ್". ಅಂದರೆ, ತಾತ್ಕಾಲಿಕ ಎಂಬ ಅರ್ಥ ನೀಡುತ್ತದೆ. ದಿನನಿತ್ಯದ ಕೆಲಸದಲ್ಲಿ ತ್ವರಿತವಾಗಿ ಹಾಗೂ ತಂತ್ರವನ್ನು ಬಳಸಿ ಪೂರ್ಣಗೊಳಿಸುವ ಕೆಲಸವಾಗಿದೆ. ಈಗ ಇಲ್ಲೊಬ್ಬ ವ್ಯಕ್ತಿಯು ತನ್ನ ಕ್ಷೌರ ಮಾಡುವ "ಜುಗಾಡ್" ತಂತ್ರವು ಎಲ್ಲೆಡೆ ಸುದ್ದಿ ಮಾಡುತ್ತಿದೆ.

ಜೀ ನ್ಯೂಸ್ ನಲ್ಲಿ ಪ್ರಕಟಗೊಂಡ ವಿಡಿಯೋದ ಪ್ರಕಾರ, ಹಿರಿಯರೊಬ್ಬರು ತನ್ನ ಗಡ್ಡವನ್ನು DIY ಸಾಧನದಿಂದ ಕ್ಷೌರ ಮಾಡಿಕೊಳ್ಳುವುದನ್ನು ಗಮನಿಸಬಹುದು. ಅವರು ಆ ಸಾಧನವನ್ನು ಕಟ್ಟಿಗೆಯ ತುಂಡು ಮತ್ತು ದಾರದ ಸಹಾಯದಿಂದ ತಯಾರಿಸಿದ್ದಾರೆ. ಕೂದಲನ್ನು ಕತ್ತರಿಸಲು ಸುಲಭವಾಗಲು ಎರಡು ಸಣ್ಣ ತುಂಡುಗಳನ್ನು ವಿ ಆಕಾರದಲ್ಲಿ ಒಂದಕ್ಕೊಂದು ಜೋಡಿಸಲಾಗಿದೆ. ಕ್ಷೌರದ ಕತ್ತಿಯ ಬ್ಲೇಡ್ ನ ಭಾಗವನ್ನು ಅನೇಕ ಪದರಗಳಿಂದ ಕೂಡಿದ ದಾರದ ಥ್ರೆಡ್‌ ಗಳನ್ನು ಮಾಡಲಾಗಿದ್ದು, ಆ ದಾರದ ಥ್ರೆಡ್ ಗಳ ಮೂಲಕ ಕ್ಷೌರವನ್ನು ಮಾಡಲಾಗುತ್ತದೆ.

ಈ ವೈರಲ್ ಆದ ಕ್ಷೌರ ಮಾಡಿಕೊಳ್ಳುವ ವ್ಯಕ್ತಿಯ ಬಗ್ಗೆಯಾಗಲೀ, ಸ್ಥಳವಾಗಲಿ ಯಾವುದು ಎಂಬುದು ಇಲ್ಲಿಯವರೆಗೂ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಆದರೆ, ಈ ವ್ಯಕ್ತಿಯ ಕ್ಷೌರ ಮಾಡಿಕೊಳ್ಳುವ ತಂತ್ರದ ಪರಿಕಲ್ಪನೆಯು ಭಾರತೀಯರಿಗೆ ಇದು ದೇಶಿ ತಂತ್ರವೆಂಬುದು ಹೆಮ್ಮೆಯ ಸಂಗತಿಯಾಗಿದೆ.

ಕೆಲವು ದಿನಗಳ ಹಿಂದೆ, ವ್ಯಕ್ತಿಯೊಬ್ಬರು ತಲೆಗೆ ಕ್ಷೌರ ಮಾಡಿಕೊಳ್ಳುವ ಹೊಸ ತಂತ್ರದ ಮೂಲಕ ದೊಡ್ಡ ಸುದ್ದಿಯಾಗಿದ್ದರು. ಯಾವುದೇ ಟ್ರಿಮ್ಮರ್ ಅಥವಾ ಒಂದು ಜೋಡಿ ಕತ್ತರಿಯ ಸಹಾಯವಿಲ್ಲದೇ ಕ್ಷೌರ ಮಾಡಿಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ. ನ್ಯೂಸ್ ಪೇಪರ್ ಅನ್ನು ತನ್ನ ಬಟ್ಟೆಯಂತೆ ಧರಿಸಿಕೊಂಡು ಬಾಚಣಿಕೆಗೆ ಬ್ಲೆಡ್ ಅನ್ನು ಕ್ಲಿಪ್‌ನಿಂದ ಜೋಡಿಸಿಕೊಂಡು ಕ್ಷೌರ ಮಾಡಿಕೊಳ್ಳುವ ಸಾಧನವನ್ನು ಸಿದ್ಧಪಡಿಸುತ್ತಾನೆ. ತದ ನಂತರ ಅವರು ತಮ್ಮ ಕೂದಲನ್ನು ತಾವಾಗಿಯೇ ಟ್ರಿಮ್ ಮಾಡುವ ರೀತಿಯಲ್ಲಿ ಅವರ ತಲೆಯ ಕೂದಲನ್ನು ಬಾಚಿಕೊಳ್ಳುತ್ತಲೇ ಕೂದಲು ಕತ್ತರಿಸಿಕೊಳ್ಳುವುದನ್ನು ಕಾಣಬಹುದು.



ಕಳೆದ ವರ್ಷ ದೇಶದಲ್ಲಿ ಕೊರೋನಾ ವೈರಸ್‌ನಿಂದಾಗಿ ಹಲವು ದಿನಗಳ ಕಾಲ ಲಾಕ್‌ಡೌನ್ ಮಾಡಲಾಗಿತ್ತು. ಆಷ್ಟೇ ಅಲ್ಲದೇ ಕೊರೋನಾ ಸಾಂಕ್ರಾಮಿಕ ರೋಗವಾದ್ದರಿಂದ ಜನರು ಕ್ಷೌರ ಮಾಡಿಸಿಕೊಳ್ಳಲು ಕ್ಷೌರದ ಅಂಗಡಿಗೆ ಹೋಗಲು ಹಿಂಜರಿಯುತ್ತಿದ್ದರು. ಆದ್ದರಿಂದ ಲಾಕ್‌ಡೌನ್ ಸಮಯದಲ್ಲಿ ಈ ಹಿರಿಯರು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಮತ್ತು ಯಾವುದೇ ರೀತಿಯ ತೊಂದರೆಯಿಲ್ಲದೇ ತಲೆಗೂದಲನ್ನು ಕತ್ತರಿಸಬಹುದಾದ ತಂತ್ರವನ್ನು ಕಂಡುಹಿಡಿದು ತಮ್ಮ ವಿಡಿಯೋ ಮೂಲಕ ದೇಶದ ಜನರಿಗೆ ತೋರಿಸಿಕೊಟ್ಟಿದ್ದರು. ಈ ಮೂಲಕ ಅನೇಕ ಜನರು ಮನೆಯಲ್ಲೇ ಕ್ಷೌರ ಮಾಡಲು ನಿರ್ಧರಿಸಿ, ಕುಟುಂಬ ಸದ್ಯಸರು ಪರಸ್ಪರ ಕೂದಲನ್ನು ಕತ್ತರಿಸುವಂತಹ ಪ್ರವೃತ್ತಿ ಜನಪ್ರಿಯವಾಯಿತು.





ನಮ್ಮ ಭಾರತೀಯರಿಗೆ ಶ್ರಮಿಕ ವರ್ಗದವರಿಗೆ ತಮ್ಮ ಕೆಲಸಕ್ಕೆ ಬೇಕಾದ ಸಾಧನಗಳು ಅಥವಾ ಯಾವುದೇ ರೀತಿಯ ಅಡಚಣೆ ಉಂಟಾದರೆ ಕೆಲಸ ಬಿಟ್ಟು ಕೂರುವುದಿಲ್ಲ. ಬದಲಾಗಿ ಅದಕ್ಕೆ ಬೇರೆ ಯಾವುದಾದರೂ ತಂತ್ರಗಳ ಮೂಲಕ ತಮ್ಮ ಕಾರ್ಯ ಸಾಧನೆ ಮಾಡುವ ಛಲವನ್ನು ಹೊಂದಿರುತ್ತಾರೆ. ಅದಕ್ಕೆ ಬ್ಲೇಡ್ ಸಹಾಯವಿಲ್ಲದೇ ಕ್ಷೌರ ಮಾಡಿಕೊಂಡ ಈ ವ್ಯಕ್ತಿಯೇ ಸಾಕ್ಷಿ. ಈ ದೇಸಿ ತಂತ್ರವು ನಮ್ಮ ದೇಶದ ಶ್ರಮಿಕ ವರ್ಗದವರ ಕೊಡುಗೆ ಎಂದರೆ ತಪ್ಪಾಗಲಾರದು.
Published by: Harshith AS
First published: April 6, 2021, 11:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories