ತಾಯಿಯ ಗರ್ಭದಲ್ಲೇ ಹೊಡೆದಾಟ: ಅವಳಿ ಮಕ್ಕಳ ವಿಡಿಯೋ ಭಾರೀ ವೈರಲ್

ಕಳೆದ ವರ್ಷ ನಡೆದಿದ್ದ ಈ ಘಟನೆಯ ವಿಡಿಯೋವನ್ನು ಇದೀಗ ಚೀನಾ ವೆಬ್​ಸೈಟ್​ಗಳು ಪ್ರಕಟಿಸಿದೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಟಾವೊ, ಗರ್ಭದಲ್ಲಿ ಮಕ್ಕಳು ಹೊಡೆದಾಡುತ್ತಿರುವು ಮೊದಲಿಗೆ ಅಚ್ಚರಿ ಮೂಡಿಸಿತು.

zahir | news18
Updated:April 19, 2019, 12:48 AM IST
ತಾಯಿಯ ಗರ್ಭದಲ್ಲೇ ಹೊಡೆದಾಟ: ಅವಳಿ ಮಕ್ಕಳ ವಿಡಿಯೋ ಭಾರೀ ವೈರಲ್
ಅಲ್ಟ್ರಾಸೌಂಡ್ ಚಿತ್ರ
  • News18
  • Last Updated: April 19, 2019, 12:48 AM IST
  • Share this:
ತಾಯಿ ಸುಭದ್ರೆಯ ಗರ್ಭದಲ್ಲಿರುವಾಗಲೇ ಅಭಿಮನ್ಯು ಚಕ್ರವ್ಯೂಹದ ಬಗ್ಗೆ ತಿಳಿದುಕೊಂಡಿದ್ದರು. ಶ್ರೀಕೃಷ್ಣ ಹೇಳುತ್ತಿದ್ದ ಕ್ಲಿಷ್ಟಕರ ಚಕ್ರವ್ಯೂಹ ಹೋರಾಟವನ್ನು ಅಭಿಮನ್ಯು ತಾಯಿಯ ಹೊಟ್ಟೆಯಿಂದಲೇ ಕರಗತ ಮಾಡಿಕೊಂಡಿದ್ದರು. ಇದು ಪುರಾಣ ಕಥೆ. ಆದರೀಗ ತಾಯಿಯ ಗರ್ಭದಲ್ಲೇ ಪರಾಕ್ರಮ ತೋರಿಸುವಂತಹ ವಿಡಿಯೋವೊಂದು ವೈರಲ್ ಆಗುತ್ತಿದೆ.

ಹುಟ್ಟುತ್ತ ಅಣ್ಣ ತಮ್ಮಂದಿರು, ಬೆಳೆಯುತ್ತ ದಾಯಾದಿಗಳು ಎನ್ನುವ ಗಾದೆ ಚಾಲ್ತಿಯಲ್ಲಿದೆ. ಆದರೆ ಈ ಗಾದೆಯನ್ನು ಮೀರಿಸುವಂತಿದೆ ಈ ವಿಡಿಯೋ. ತಾಯಿಯ ಹೊಟ್ಟೆಯಲ್ಲಿರುವ ಅವಳಿ ಮಕ್ಕಳಿಬ್ಬರು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಚೀನಾದಲ್ಲಿ ನಡೆದಿರುವ ಈ ಘಟನೆಯು ಇದೀಗ ವಿಶ್ವದಾದ್ಯಂತ ಗಮನ ಸೆಳೆಯುತ್ತಿದೆ.

ಗರ್ಭಧಾರಣೆಯ ಪರೀಕ್ಷೆಗೆ ತೆರಳಿದ್ದ ದಂಪತಿಗಳಿಗೆ ಶಾಕ್ ಕಾದಿತ್ತು. ಅಲ್ಟ್ರಾಸೌಂಡ್​ ಪರೀಕ್ಷೆಗೆ ಒಳಪಟ್ಟ ಮಹಿಳೆಯ ಗರ್ಭದಲ್ಲಿರುವ ಭ್ರೂಣಗಳು ಪರಸ್ಪರ ಒದೆಯುವುದು ಮತ್ತು ಹೊಡೆದಾಡುವುದು ಕಂಡು ಬಂದಿದೆ. ಕೂಡಲೇ ಪತಿ ಟಾವೊ ವಿಡಿಯೋವನ್ನು ಚಿತ್ರಿಸಿಕೊಂಡಿದ್ದರು.

ಕಳೆದ ವರ್ಷ ನಡೆದಿದ್ದ ಈ ಘಟನೆಯ ವಿಡಿಯೋವನ್ನು ಇದೀಗ ಚೀನಾ ವೆಬ್​ಸೈಟ್​ಗಳು ಪ್ರಕಟಿಸಿದೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಟಾವೊ, ಗರ್ಭದಲ್ಲಿ ಮಕ್ಕಳು ಹೊಡೆದಾಡುತ್ತಿರುವುದು ಮೊದಲಿಗೆ ಅಚ್ಚರಿ ಮೂಡಿಸಿತು. ನಂತರ ವೈದ್ಯರು ದೈರ್ಯ ತುಂಬಿದ್ದಾರೆ. ಈ ಸಂದರ್ಭದಲ್ಲಿ ನಾನು ವಿಡಿಯೋ ಚಿತ್ರೀಕರಿಸಿದೆ. ಅಲ್ಲದೆ ಇಬ್ಬರು ಮಕ್ಕಳು ಆರೋಗ್ಯವಾಗಿ ಜನಿಸಿದ್ದು, ಇವರಿಗೆ ಚೆರಿ ಹಾಗೂ ಸ್ಟ್ರಾಬೆರಿ ಎಂದು ನಾಮಕರಣ ಮಾಡಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: IPL 2019: ಚೆನ್ನೈ ವಿರುದ್ಧ ಹೈದರಾಬಾದ್ ಭರ್ಜರಿ ಜಯ ಸಾಧಿಸಲು ಸಾನಿಯಾ ಮಿರ್ಜಾ ಕಾರಣವಂತೆ..!

ಈಗಾಗಲೇ ಈ ವಿಡಿಯೋ 2.5 ಮಿಲಿಯನ್​ಗಿಂತಲೂ ಅಧಿಕ ಮಂದಿ ವೀಕ್ಷಿಸಿದ್ದು, ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಗರ್ಭಾಶಯದಲ್ಲಿ ಹೊಡೆದಾಡಿಕೊಂಡಿದ್ದ ಮಕ್ಕಳು ಇದೀಗ ಅನೋನ್ಯವಾಗಿರುವುದೇ ಹಲವರ ಅಚ್ಚರಿಗೆ ಕಾರಣವಾಗಿದೆ. ಅದೇನೇ ಇದ್ದರೂ, ಹುಟ್ಟುತ್ತ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎನ್ನುವ ಗಾದೆಯನ್ನು ಗರ್ಭದಲ್ಲೇ ಹೊಡೆದಾಡಿಕೊಂಡು ಈ ಮಕ್ಕಳು ಸುಳ್ಳಾಗಿಸಿರುವುದಂತು ನಿಜ.
First published:April 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ