• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Kempegowda International Airport: ಹಣ ಕೊಡಲಾಗದೇ ವಿಮಾನ ನಿಲ್ದಾಣದಲ್ಲಿಯೇ ಬಟ್ಟೆ, ಆಹಾರ ಬಿಟ್ಟು ಮಲೇಷ್ಯಾಗೆ ತೆರಳಿದ ವಿದ್ಯಾರ್ಥಿ!

Kempegowda International Airport: ಹಣ ಕೊಡಲಾಗದೇ ವಿಮಾನ ನಿಲ್ದಾಣದಲ್ಲಿಯೇ ಬಟ್ಟೆ, ಆಹಾರ ಬಿಟ್ಟು ಮಲೇಷ್ಯಾಗೆ ತೆರಳಿದ ವಿದ್ಯಾರ್ಥಿ!

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು

ಹಣವನ್ನು ಕಟ್ಟಲಾಗದೇ ವಿದ್ಯಾರ್ಥಿ ಬಟ್ಟೆ, ಆಹಾರವನ್ನು ಏರ್​ ಪೋರ್ಟ್​ನಲ್ಲೇ ಬಿಟ್ಟು ಹೋದ ಘಟನೆಯು ಬೆಂಗಳೂರಿನಲ್ಲಿ ನಡೆದಿದೆ.

  • Local18
  • 4-MIN READ
  • Last Updated :
  • Bangalore, India
  • Share this:

ವಿಮಾನದಲ್ಲಿ (Flight) ಪ್ರಯಾಣಿಸಬೇಕೆಂದರೆ ನೂರಾರು ರೀತಿಯ ನೀತಿ ನಿಯಮಗಳು ಇರೋದು ಕಾಮನ್​. ಅದರಲ್ಲೂ ಚೆಕ್ಕಿಂಗ್ (Checking)​ ವಿಷಯ ಬಂದ್ರಂತೂ ಹಲವಾರು ಬಾರಿ ಚೆಕ್ಕಿಂಗ್​ ಮಾಡಿಯೇ ಮಾಡ್ತಾರೆ. ಹಾಗೆಯೇ ಹಣದ ವಿಷಯದಲ್ಲಿಯೂ ಯಾವುದೇ ಮುಲಾಜಿಲ್ಲದೆ ಕಟ್ಟಿಸಿಕೊಳ್ಳುತ್ತಾರೆ. ಹಣವನ್ನು ಕೊಡಲಿಲ್ಲವೆಂದ್ರೆ ಅರ್ಧಕ್ಕೆ ವಾಪಾಸ್​ ಕಳಿಸುವಂತ ಸಾಧ್ಯತೆಯೂ ಹೆಚ್ಚಿದೆ. ಇಲ್ಲೊಂದು ಘಟನೆ ನಡೆದಿದೆ. ಇದನ್ನು ಕೇಳ್ತಾ ಇದ್ರೆ ನಿಜಕ್ಕೂ ಶಾಕ್ (Shock)​ ಆಗುತ್ತೆ. ಯಾಕೆ ಅಂತ ಕೇಳ್ತೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.


ಹೆಚ್ಚಿನ ಲಗೇಜ್​ನ್ನು ತೆಗೆದುಕೊಂಡು ಹೋಗುತ್ತಾ ಇದ್ರು ಕೂಡ ವಿಮಾನ ನಿಲ್ದಾಣದಲ್ಲಿ ಹೆಚ್ಚು ಹಣವನ್ನು ಹೇರುತ್ತಾರೆ. ನಾವು ಇಲ್ಲಿನ ಸಿಬ್ಬಂದಿಗಳ ಕಣ್ಣು ತಪ್ಪಿಸಿ ಹೋಗಲು ಅಸಾಧ್ಯ. ಅಷ್ಟರ ಮಟ್ಟಿಗೆ ಸೆಕ್ಯುರಿಟಿ ಇರುತ್ತದೆ. ಹೆಚ್ಚಿನ ಲಗೇಜ್​ನ ಶುಲ್ಕವನ್ನು ಪಾವತಿಸಲಾಗದೆ ಮಲೇಷ್ಯಾಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಯೊಬ್ಬರು ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ತಮ್ಮ ಬಟ್ಟೆ ಮತ್ತು ಆಹಾರದ ಪ್ಯಾಕಿಂಗ್ ವಸ್ತುಗಳನ್ನು ಬಿಟ್ಟು ಹೋಗುವಂತಾಗಿತ್ತು.


ನೀವು ತಪ್ಪು ವೆಬ್‌ಸೈಟ್‌ಗೆ ಹೋಗಿ ಮಾಹಿತಿ ಪಡೆದಿದ್ದೀರಿ ಎಂದು ಏರ್‌ಏಷ್ಯಾ ಗ್ರೌಂಡ್ ಸಿಬ್ಬಂದಿ ತಿಳಿಸಿದ್ದಾರೆ. ಪ್ರತಿ ಕೆಜಿಗೆ 2,000 ರೂಪಾಯಿ ಕಟ್ಟಲೇಬೇಕು ಎಂದು ತಿಳಿಸಿದ್ದಾರೆ. ಹಣ ಕಟ್ಟಲಾಗದೆ ವಿದ್ಯಾರ್ಥಿ ತನ್ನ ಕೆಲ ಬಟ್ಟೆಗಳನ್ನು, ಆಹಾರದ ಪ್ಯಾಕೇಟ್​ಗಳನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದಾನೆ.  ಇದರ ಬಗ್ಗೆ  ಏರ್ ಏಷ್ಯಾದ ವಿರುದ್ಧ ಆನ್​ಲೈನ್ ಮೂಲಕ ವಿದ್ಯಾರ್ಥಿ ದೂರು ನೀಡಿದ್ದಾರೆ.


ಘಟನೆ ಏನು?
ಕಾರ್ತಿಕ್ ಸೂರಜ್ ಪಾಟೀಲ್ ಮೂಲತಃ ಬೆಳಗಾವಿ ನಿವಾಸಿ. ಇವರ ವಯಸ್ಸು 23. ಸೂರಜ್ ಪಾಟೀಲ್ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಮುಗಿಸಿ ಮಲೇಷ್ಯಾದ ಪೆರಾಕ್‌ನಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಫೆಲೋಶಿಪ್ ಕಾರ್ಯಕ್ರಮ ಪಡೆದಿದ್ದಾರೆ. ಸೂರಜ್ ಪಾಟೀಲ್ ಬೆಂಗಳೂರಿನಿಂದ ಕೌಲಾಲಂಪುರಕ್ಕೆ ಏರ್‌ಏಷ್ಯಾ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದು, ಚೆಕ್-ಇನ್‌ಗಾಗಿ 20 ಕೆಜಿ ಲಗೇಜ್ ಅನ್ನು ಪ್ಯಾಕ್ ಮಾಡಿಕೊಂಡು ಮಾರ್ಚ್ 5ರ ಭಾನುವಾರ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ.


ಇದನ್ನೂ ಓದಿ: ಹುಡುಗನಿಗೆ ಸರ್ಕಾರಿ ಉದ್ಯೋಗವೆಂದು ಮದುವೆ ಮಾಡಿಕೊಟ್ಟ ಹುಡುಗಿ ಮನೆಯವರು, ಮಾರನೇ ದಿನ ಕಾದಿತ್ತು ಬಿಗ್​ ಶಾಕ್​!


ಆದರೆ, ಏರ್ ಏಷ್ಯಾದ ಅಫಿಷಿಯಲ್​ ವೆಬ್‌ಸೈಟ್​ನಲ್ಲಿ ಪ್ರತಿ ಪ್ರಯಾಣಿಕರಿಗೆ 15 ಕೆಜಿಯಷ್ಟು ಲಗೇಜನ್ನು ತೆಗೆದುಕೊಂಡು ಹೋಗಲು ಅವಕಾಶವಿದ್ದು ಹೆಚ್ಚಿನ ಪ್ರತಿ ಕೆಜಿಗೆ 500 ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಾವತಿಸುವಂತೆ ತಿಳಿಸಲಾಗಿದೆ. ಹೀಗಾಗಿ ನಾನು 5 ಕೆಜಿ ಹೆಚ್ಚುವರಿಯಾಗಿ ಲಗೇಜನ್ನು ಪ್ಯಾಕ್ ಮಾಡಿ 20 ಕೆಜಿ ಲಗೇಜ್ ತಂದಿದ್ದೆ.


ಆದರೆ ನಾನು ನನ್ನ ಸೂಟ್‌ಕೇಸ್ ಅನ್ನು ಚೆಕ್ ಇನ್ ಮಾಡುವಾಗ, ನನಗೆ ಆಘಾತವಾಯಿತು. ಹೆಚ್ಚುವರಿ ಐಟಮ್ಸ್​ಗಳನ್ನು ತೆಗೆದುಕೊಂಡು ಹೋಗಲು ನಾನು ಪ್ರತಿ ಕೆಜಿಗೆ 2,000 ರೂಪಾಯಿಗಳನ್ನು ಪಾವತಿಸಬೇಕು ಎಂದು ಬೆಂಗಳೂರು ವಿಮಾನ ನಿಲ್ದಾಣದ ಏರ್‌ಏಷ್ಯಾ ಕಾರ್ಯನಿರ್ವಾಹಕರೊಬ್ಬರು ತಿಳಿಸಿದರು.


ಪ್ರತಿ ಕೆಜಿ ಬ್ಯಾಗೇಜ್‌ಗೆ 500 ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ನಿಮ್ಮ ಪೋರ್ಟಲ್​ನಲ್ಲಿ ತಿಳಿಸಲಾಗಿದೆ ಎಂದು ನಾನು ಏರ್‌ಏಷ್ಯಾ ಗ್ರೌಂಡ್ ಸಿಬ್ಬಂದಿಗೆ ತೋರಿಸಿದೆ. ಆಗ ಅವರು ನೀವು ತಪ್ಪು ಸೈಟ್​ಗೆ ಭೇಟಿ ನೀಡಿದ್ದೀರಿ. ಅಥವಾ ವಿವರಗಳನ್ನು ನವೀಕರಿಸಬೇಕಾಗಿದೆ ಎಂದರು. “ಮಲೇಷಿಯಾದಲ್ಲಿ ವಾಸಿಸುವ ಬೆಂಗಳೂರಿನ ನನ್ನ ಕಾಲೇಜು ಸ್ನೇಹಿತರಿಗಾಗಿ ನಾನು ಕೆಲವು ಬಟ್ಟೆಗಳನ್ನು ಮತ್ತು ಸಸ್ಯಾಹಾರಿ ಆಹಾರವನ್ನು ತೆಗೆದುಕೊಂಡು ಹೋಗುತ್ತಿದ್ದೆ. ಏಕೆಂದರೆ ನಾವು ವಿದೇಶದಲ್ಲಿರುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ನಮಗೆ ಬಜೆಟ್‌ ಸಮಸ್ಯೆಯಾಗುತ್ತದೆ.


ಇದನ್ನೂ ಓದಿ: ವೀಕೆಂಡ್​ನಲ್ಲಿ ಮಾತ್ರ ಇವ್ರು ಗಂಡ-ಹೆಂಡತಿ, ಉಳಿದ ದಿನಗಳಲ್ಲಿ ಸಿಂಗಲ್​ ಲೈಫ್​!


ಹೆಚ್ಚುವರಿ ಸಾಮಾನುಗಳಿಗಾಗಿ 10,000 ರೂ.ಗಳನ್ನು ಪಾವತಿಸಲು ಒತ್ತಾಯಿಸಿದ್ದರಿಂದ ನಾನು ನನ್ನ ಲಗೇಜ್ ಅನ್ನು 20 ಕೆಜಿಯಿಂದ 15 ಕೆಜಿಗೆ ಇಳಿಸಿ ಬಟ್ಟೆ ಮತ್ತು ಆಹಾರವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಬಿಟ್ಟು ಬಂದೆ. ನಾನು ವಿದ್ಯಾರ್ಥಿ ಎಂಬ ಕನಿಕರವೂ ಇಲ್ಲದಂತೆ ವರ್ತಿಸಲಾಗಿದೆ” ಎಂದು ಪಾಟೀಲ್ ವಿಷಾದ ವ್ಯಕ್ತಪಡಿಸಿದರು.


ಈ ವಿದ್ಯಾರ್ಥಿಯಂತೆಯೇ ಏರ್ ಏಷ್ಯಾದ ಇತರ ಕೆಲವು ಪ್ರಯಾಣಿಕರು ಹೆಚ್ಚುವರಿ ಲಗೇಜ್ ಶುಲ್ಕದ ವಿಷಯದಲ್ಲಿ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದಾರೆ ಎಂದು KIA ಮೂಲಗಳು ದೃಢಪಡಿಸಿವೆ ಏಕೆಂದರೆ ದರಗಳ ಬಗ್ಗೆ ಗೊಂದಲವಿದೆ. ವಿದ್ಯಾರ್ಥಿಗಳು airasia.co.in ಸೈಟ್​ಗೆ ಭೇಟಿ ನೀಡಿದ್ದಾರೆ. ಇದು ದೇಶೀಯ ವಿಮಾನಗಳ ಪೋರ್ಟಲ್ ಆಗಿದೆ ಮತ್ತು ಇದರಲ್ಲಿ ಹೆಚ್ಚುವರಿ ಬ್ಯಾಗೇಜ್ ಶುಲ್ಕ ಕೆಜಿಗೆ 500 ರೂ ಇದೆ.




ಇದರಲ್ಲಿ ಹೆಚ್ಚುವರಿ ಲಗೇಜ್ ಶುಲ್ಕವನ್ನು ಪ್ರತಿ ಕಿಲೋಗೆ ರೂ 2,200 ಎಂದು ಸ್ಪಷ್ಟವಾಗಿ ನೀಡಲಾಗಿದೆ. ವಿಮಾನಯಾನ ಸಂಸ್ಥೆಯು ತಪ್ಪು ಮಾಡಿಲ್ಲ ಮತ್ತು ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿ ಸರಿಯಾಗಿ ತಮ್ಮ ಕಾರ್ಯನಿರ್ವಹಿಸಿದ್ದಾರೆ. ದೇಶೀಯ ವಿಮಾನ ಮತ್ತು ಅಂತರರಾಷ್ಟ್ರೀಯ ವಿಮಾನದ ಹೆಚ್ಚುವರಿ ಲಗೇಜ್ ಶುಲ್ಕ ಬೇರೆ ಬೇರೆ ಇದೆ.


ಒಂದು ಲಗೇಜ್​ ವೆಬ್​ಸೈಟ್​ನಿಂದ ಇಷ್ಟೆಲ್ಲಾ ಗಲಿಬಿಲಿ ಆಗುತ್ತೆ ಅಂದ್ರೆ ನಿಜಕ್ಕೂ ಯೋಚನೆ ಮಾಡಬೇಕಾದ ಸಂಗತಿಯೇ ಸರಿ. ಈ ಘಟನೆಯ ಬಗ್ಗೆ ಹಲವಾರು ಜನರು ಗೊಂದಲಕ್ಕೆ ಒಳಗಾಗಿದ್ದಾರೆ.

First published: