• Home
 • »
 • News
 • »
 • trend
 • »
 • Photography: ಇರುವೆಯ ಮುಖದ ಫೋಟೋಗೆ ಸಿಕ್ತು ಮೊದಲ ಬಹುಮಾನ: ಇದು ಸಾಮಾನ್ಯ ಚಿತ್ರವಲ್ಲ!

Photography: ಇರುವೆಯ ಮುಖದ ಫೋಟೋಗೆ ಸಿಕ್ತು ಮೊದಲ ಬಹುಮಾನ: ಇದು ಸಾಮಾನ್ಯ ಚಿತ್ರವಲ್ಲ!

ಮೊದಲ ಬಹುಮಾನ ಪಡೆದ ಇರುವೆ ಫೋಟೋ

ಮೊದಲ ಬಹುಮಾನ ಪಡೆದ ಇರುವೆ ಫೋಟೋ

ವನ್ಯಜೀವಿ ಛಾಯಾಗ್ರಾಹಕ ಯುಜೆನಿಜಸ್ ಕವಾಲಿಯಾಸ್ಕಾಸ್ 2022 ರ ನಿಕಾನ್ ಸ್ಮಾಲ್ ವರ್ಲ್ಡ್ ಫೋಟೋಮೈಕ್ರೊಗ್ರಫಿ ಸ್ಪರ್ಧೆಯಲ್ಲಿ ಗೆದ್ದಿದ್ದು, ಇವರು ಇರುವೆಯ ಜೂಮ್​ ಮಾಡಿದ ಒಂದು ಬೃಹತ್ ಫೋಟೋವನ್ನು ಕ್ಲಿಕ್ಕಿಸಿದ್ದಾರೆ.

 • Trending Desk
 • Last Updated :
 • Bangalore [Bangalore], India
 • Share this:

  ಎಷ್ಟೋ ಬಾರಿ ನಾವು ಈ ಫೋಟೋಗ್ರಫಿ ಪ್ರದರ್ಶನಕ್ಕೆ (Photography) ಹೋದಾಗ ಅಲ್ಲಿರುವ ಕೆಲವು ಫೋಟೋಗಳನ್ನು ನೋಡಿದ ಮೇಲೆ ‘ಅಬ್ಬಾ.. ಏನ್ ಕಲೆ (Art), ಎಷ್ಟು ಚೆನ್ನಾಗಿ ಫೋಟೋ ಕ್ಲಿಕ್ಕಿಸಿದ್ದಾರೆ’ ಅಂತ ಅನ್ನಿಸಿರುತ್ತದೆ. ಹೌದು, ಒಂದು ಪ್ರಾಣಿಯ, ವಸ್ತುವಿನ ಮತ್ತು ಹೊರಗೆ ಪ್ರಕೃತಿಯ ಸೌಂದರ್ಯವನ್ನು ಕ್ಯಾಮೆರಾದಲ್ಲಿ (Camera) ಹೇಗೆ ಸೆರೆ ಹಿಡಿಯಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಸಹ ಒಂದು ದೊಡ್ಡ ಪ್ರತಿಭೆ ಮತ್ತು ಅದೊಂದು ಕಲೆ ಎಂದರೆ ಹೇಳಿದರೆ ತಪ್ಪಾಗುವುದಿಲ್ಲ.


  ಅದರಲ್ಲೂ ಈ ವನ್ಯಜೀವಿ ಛಾಯಾಗ್ರಾಹಕರು ತೆಗೆಯುವ ಪ್ರಾಣಿಗಳ ಫೋಟೋಗಳನ್ನು ಒಮ್ಮೆ ನೋಡಿದರೆ ಸಾಕು ‘ಫೋಟೋಗಳನ್ನು ಇಷ್ಟು ಸುಂದರವಾಗಿ ಕ್ಲಿಕ್ಕಿಸಿದ್ದಾರೆ’ ಎಂದು ಅಚ್ಚರಿಯಾಗುತ್ತದೆ. ಕೆಲವೊಬ್ಬ ಸೃಜನಶೀಲ ಛಾಯಾಗ್ರಾಹಕರು ಎಲ್ಲರಿಗಿಂತಲೂ ಸ್ವಲ್ಪ ಡಿಫರೆಂಟ್ ಆಗಿ ಫೋಟೋಗಳನ್ನು ತೆಗೆದಿರುತ್ತಾರೆ. ಹಾಗಾದ್ರೆ ಇದೆಲ್ಲಾ ವಿಚಾರ ಯಾಕೆ? ಎನ್ನುವವರು ಇರುವೆಯ ಫೋಟೋ ಬಗೆಗಿನ ಈ ಸುದ್ದಿಯನ್ನು ಓದಲೇಬೇಕು.


  ಇದನ್ನೂ ಓದಿ: Career in Photography: ನಿಮ್ಮ ಫೋಟೋಗ್ರಫಿ ಹುಚ್ಚನ್ನೇ ವೃತ್ತಿಯಾಗಿಸಿಕೊಂಡು ಹಣ ಗಳಿಸುವುದು ಹೇಗೆಂದು ತಿಳಿಯಿರಿ


  ನಿಕಾನ್ ಸ್ಪರ್ಧೆ ಗೆದ್ದ ಲಿಥುವೇನಿಯನ್ ಛಾಯಾಗ್ರಾಹಕ


  ಲಿಥುವೇನಿಯನ್ ಛಾಯಾಗ್ರಾಹಕರೊಬ್ಬರು ನಿಕಾನ್ ಛಾಯಾಗ್ರಹಣ ಸ್ಪರ್ಧೆಯಲ್ಲಿ ಒಂದು ಇರುವೆಯ ಮುಖದ ಫೋಟೋವನ್ನು ಕ್ಲಿಕ್ಕಿಸಿ ಬಹುಮಾನವನ್ನು ತಮ್ಮ ಪಾಲಾಗಿಸಿಕೊಂಡಿದ್ದಾರೆ. ಅದು ಹೇಗೆ ಒಂದು ಸಾಮಾನ್ಯವಾದ ಇರುವೆಯ ಮುಖದ ಫೋಟೋ ಕ್ಲಿಕ್ಕಿಸಿ ಬಹುಮಾನ ಹೇಗೆ ಗೆದ್ದಿದ್ದಾರೆ ಎಂಬ ಪ್ರಶ್ನೆ ಕಾಡುವುದು ಸಹಜ


  ವನ್ಯಜೀವಿ ಛಾಯಾಗ್ರಾಹಕ ಯುಜೆನಿಜಸ್ ಕವಾಲಿಯಾಸ್ಕಾಸ್ 2022 ರ ನಿಕಾನ್ ಸ್ಮಾಲ್ ವರ್ಲ್ಡ್ ಫೋಟೋಮೈಕ್ರೊಗ್ರಫಿ ಸ್ಪರ್ಧೆಯಲ್ಲಿ ಗೆದ್ದಿದ್ದು, ಇವರು ಇರುವೆಯ ಜೂಮ್​ ಮಾಡಿದ ಒಂದು ಬೃಹತ್ ಫೋಟೋವನ್ನು ಕ್ಲಿಕ್ಕಿಸಿದ್ದಾರೆ.


  ಈ ಸ್ಪರ್ಧೆಯಲ್ಲಿ ಸೂಕ್ಷ್ಮದರ್ಶಕ ಛಾಯಾಗ್ರಹಣದ ಕಲೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿತ್ತು, ಯಾವ ಸೂಕ್ಷ್ಮಗಳನ್ನು ನಮ್ಮ ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲವೊ ಅಂತಹ ವಿವರಗಳನ್ನು ಸೆರೆಹಿಡಿಯಲು ಛಾಯಾಗ್ರಾಹಕರಿಗೆ ಅನುವು ಮಾಡಿಕೊಟ್ಟಿತ್ತು. ಛಾಯಾಗ್ರಹಣ ಸ್ಪರ್ಧೆಯಲ್ಲಿ ವಿಜೇತರಾದ ಆಯ್ದ 57 "ಇಮೇಜಸ್ ಆಫ್ ಡಿಸ್ಟಿಂಕ್ಷನ್" ಎಂಬ ವಿಭಾಗದಲ್ಲಿ ಕವಾಲಿಯಾಸ್ಕಾಸ್ ಅವರು ಕ್ಲಿಕ್ಕಿಸಿದ ಫೋಟೋ ಇದಾಗಿತ್ತು.


  ಸೂಕ್ಷ್ಮದರ್ಶಕದಲ್ಲಿ ಇರುವೆಯ ಮುಖ ಹೇಗೆ ಕಾಣುತ್ತಿದೆ ನೋಡಿ


  ಇರುವೆಯ ಮುಖವನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿ ಐದು ಬಾರಿ ಹಿಗ್ಗಿಸಲಾಗುತ್ತದೆ. ಫೋಟೋವು ಕೆಂಪು ಕಣ್ಣುಗಳೊಂದಿಗೆ ಇರುವೆ ಮುಖವನ್ನು ತೋರಿಸುತ್ತದೆ ಮತ್ತು ಚಿನ್ನದ ಕೋರೆಹಲ್ಲುಗಳಂತೆ ಕಾಣುತ್ತದೆ.


  ವೀಡಿಯೋಗೆ ಕಾಮೆಂಟ್ ಗಳು ಹೇಗೆ ಬಂದಿವೆ?


  ಇರುವೆಯ ಮುಖದ ಈ ಕ್ಲೋಸ್-ಅಪ್ ಫೋಟೋ ನೋಡಿ ನೆಟ್ಟಿಗರು ಭಯಭೀತರಾಗಿದ್ದರು. ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ಈಗ ಅದು ದೊಡ್ಡ ಪ್ರಾಣಿಯಂತೆ ಕಾಣುತ್ತಿದೆ" ಅಂತ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು "ಈಗ ಈ ಇರುವೆ ದೈತ್ಯ ಇರುವೆ" ಅಂತ ಬರೆದಿದ್ದಾರೆ. ಮೂರನೆಯ ಬಳಕೆದಾರರು “ಮತ್ತೆ ಇರುವೆಯ ಮೇಲೆ ಕಾಲಿಡುವ ಮೊದಲು ಸಾವಿರ ಬಾರಿ ಯೋಚಿಸುತ್ತೇನೆ" ಎಂದು ಕಾಮೆಂಟ್ ಮಾಡಿದ್ದಾರೆ.


  ಇರುವೆಯ ಫೋಟೋವನ್ನು ಕ್ಲಿಕ್ಕಿಸುವುದರ ಬಗ್ಗೆ ಕವಾಲಿಯಾಸ್ಕಾಸ್ ಹೇಳಿದ್ದೇನು?


  ಕವಾಲಿಯಾಸ್ಕಾಸ್ ತಾನು ಕಾಡಿನ ಬಳಿ ವಾಸಿಸುತ್ತಿದ್ದೇನೆ ಎಂದು ಇನ್ಸೈಡರ್ ಗೆ ಹೇಳಿದರು. ಇದರಿಂದ ಅವರಿಗೆ ಇರುವೆಯ ಫೋಟೋವನ್ನು ಸೆರೆ ಹಿಡಿಯುವುದಕ್ಕೆ ಸುಲಭವಾಯಿತು. ನೆಲದ ಮೇಲೆ ಓಡುತ್ತಿರುವ ಇರುವೆಯ ಫೋಟೋವನ್ನು ಕ್ಲಿಕ್ಕಿಸುವುದು "ನೀರಸ" ಎಂದು ಅವರು ಹೇಳಿದರು. ಆದ್ದರಿಂದ, ಅವರು ಒಂದು ಇರುವೆಯನ್ನು ಹಿಡಿದು ಸೂಕ್ಷ್ಮದರ್ಶಕದ ಕೆಳಗೆ ಹಾಕಿದರು.


  "ನಾನು ಮೊದಲ ಬಾರಿಗೆ ಮೈಕ್ರೋಫೋಟೋಗ್ರಫಿಯನ್ನು ಪ್ರಾರಂಭಿಸಿದಾಗ, ಎಲ್ಲಾ ಜೀರುಂಡೆಗಳು ದೊಡ್ಡ ರಾಕ್ಷಸರಂತೆ ಕಾಣುತ್ತವೆ ಎಂದು ಭಾವಿಸಿದೆ. ಆದರೆ ಈಗ, ನಾನು ಅದಕ್ಕೆ ಒಗ್ಗಿಕೊಂಡಿದ್ದೇನೆ, ಮತ್ತು ನಮ್ಮ ಪಾದಗಳ ಕೆಳಗೆ ಅನೇಕ ಆಸಕ್ತಿದಾಯಕ, ಸುಂದರ ಮತ್ತು ಅಜ್ಞಾತ ಪವಾಡಗಳಿವೆ ಎಂದು ನನಗೆ ಆಶ್ಚರ್ಯವಾಗಿದೆ" ಎಂದು ಕವಲಿಯಾಸ್ಕಾಸ್ ಅವರು ಹೇಳಿದರು.


  ಇದನ್ನೂ ಓದಿ:  Snake Village: ಹಾವಿನಿಂದಲೇ ಹೊಟ್ಟೆ ತುಂಬಿಸಿಕೊಳ್ಳೋ ಹಳ್ಳಿ! ಇವರಿಗೆ ಹಾವಿನ ಭಯವೇ ಇಲ್ಲ


  ಜಿನೀವಾ ವಿಶ್ವವಿದ್ಯಾಲಯದ ಗ್ರಿಗೋರಿ ಟಿಮಿನ್ ಮತ್ತು ಮೈಕೆಲ್ ಮಿಲಿಂಕೋವಿಚ್ ಕ್ಲಿಕ್ಕಿಸಿದ ಮಡಗಾಸ್ಕರ್ ಗೆಕ್ಕೊದ ಕೈಯ ಫೋಟೋಗೆ ಈ ವರ್ಷದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆಯಿತು.

  Published by:Precilla Olivia Dias
  First published: