ಯುವತಿ ಎತ್ತರಕ್ಕೆ ಸಮನಾಗಿದೆ ಆಕೆಯ ಕೂದಲು; ಬರೋಬ್ಬರಿ 6.5 ಅಡಿ ಉದ್ದದ ಕೂದಲು ನೋಡಿ..!

ಆರು ತಿಂಗಳಿಗೊಮ್ಮೆ ತನ್ನ ಕೂದಲಿನ ತುದಿಗಳನ್ನು ಟ್ರಿಮ್ ಮಾಡುತ್ತಾಳೆ. ಅವಳ ಕೂದಲು ತುಂಬಾ ಉದ್ದವಾಗಿರುವ ಕಾರಣ ವಾರಕ್ಕೊಮ್ಮೆ ತಲೆಸ್ನಾನ ಮಾಡುತ್ತಾಳೆ. ಅದಕ್ಕೆ ಸುಮಾರು 40-60 ನಿಮಿಷಗಳನ್ನು ವಿನಿಯೋಗಿಸುತ್ತಾಳೆ.

ಉಕ್ರೇನ್‍ನ ಯುವತಿ

ಉಕ್ರೇನ್‍ನ ಯುವತಿ

  • Share this:

ಮಹಿಳೆಯರು ಉದ್ದ ಕೂದಲಿನ ಪ್ರಿಯರು. ಕೆಲವರು ಉದ್ದ ಕೂದಲು ಬೆಳೆಸಿ ನೀಳ ಜಡೆ ಹಾಕಿ ಖುಷಿಪಟ್ಟರೆ, ಇನ್ನು ಕೆಲವರು ಇದರಲ್ಲಿ ದಾಖಲೆಯೇ ನಿರ್ಮಿಸಿದ್ದಾರೆ.ಉದ್ದನೆಯ ಕೇಶರಾಶಿಯ ಮೂಲಕ ಮೂರು ಬಾರಿ ಗಿನ್ನೆಸ್ ದಾಖಲೆ ಮಾಡಿದ ಭಾರತದ ರಪುಂಜೆಲ್ ಎಂದೇ ಖ್ಯಾತಿ ಪಡೆದಿದ್ದ ಗುಜರಾತಿನ ಮೊದಾಸದ ನೀಲಾಂಶಿ ಪಟೇಲ್ ಕಳೆದ ಜುಲೈ ತಿಂಗಳಲ್ಲಿ 18 ವರ್ಷಕ್ಕೆ ಕಾಲಿಟ್ಟ ನೀಲಾಂಶಿಯ ಕೂದಲ ಉದ್ದ 200 ಸೆಂ.ಮೀಗೆ (6 ಅಡಿ 7 ಇಂಚು) ತಲುಪಿತ್ತು. ಸುಮಾರು 6ನೇ ವರ್ಷದಿಂದ 18 ವರ್ಷದವರೆಗೆ ಅಂದರೆ ಸತತ 12 ವರ್ಷದವರೆಗೆ ಬೆಳೆಸಿದ್ದ ಕೂದಲನ್ನು ಕತ್ತರಿಸಿ ಸಂಸ್ಥೆಗೆ ದಾನ ಮಾಡಿದ್ದಳು. ಈ ಸುದ್ದಿ ಸಾಕಷ್ಟು ವೈರಲ್ ಆಗಿತ್ತು.ಇನ್ನು ಮತ್ತೊಬ್ಬ ಯುವತಿಯು ತನ್ನ ನೀಳವಾದ ಕೂದಲನ್ನೇ ಡ್ರೆಸ್ ರೂಪದಲ್ಲಿ ತೊಟ್ಟು ಈ ಸಂಬಂಧದ ವಿಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಳು. ಇದು ಕೂಡ ಸಾಕಷ್ಟು ವೈರಲ್ ಆಗಿತ್ತು.


ಇದೀಗ ಉಕ್ರೇನ್‍ನ ಯುವತಿಯೊಬ್ಬಳು 6.5 ಅಡಿ ಉದ್ದದ ಕೂದಲು ಬೆಳೆಸಿ ಸುದ್ದಿಯಾಗಿದ್ದಾಳೆ. ಸರಿ ಸುಮಾರು ಅವಳಷ್ಟೇ ಎತ್ತರ ಅವಳ ಕೂದಲು ಸಹ ಇದೆ.ಆರು ಅಡಿ ಉದ್ದ ಕೂದಲು ಬೆಳೆಸಿದ ಯುವತಿಯ ಹೆಸರು ಅಲೇನಾ ಕ್ರವ್ಚೆಂಕೋ. ಮೂಲತಃ ಉಕ್ರೇನ್‍ನವಳು. ವಯಸ್ಸು 35.


ಇದನ್ನೂ ಓದಿ:Karnataka Weather Today: ಕರ್ನಾಟಕದಲ್ಲಿ ಇಂದು, ನಾಳೆ ಮಳೆಯ ಆರ್ಭಟ; ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಹಲವೆಡೆ ಆರೆಂಜ್ ಅಲರ್ಟ್​ ಘೋಷಣೆ

ಇವಳು ಹೇಳುವ ಪ್ರಕಾರ, ಸುಮಾರು ಐದು ವರ್ಷದ ಬಾಲ್ಯದಿಂದಲೂ 35 ವರ್ಷ ತುಂಬುವವರೆಗೂ ಒಂದು ಬಾರಿಯೂ ನಾನು ಕೂದಲು ಕತ್ತರಿಸಿಲ್ಲ. ಇಷ್ಟು ವರ್ಷಗಳ ಕಾಲದಿಂದಲೂ ಕೂದಲ ಆರೈಕೆ ಮಾಡುತ್ತಿರುವುದು ಸುಲಭದ ಮಾತಲ್ಲ. ನಿಜಕ್ಕೂ ಕಷ್ಟಕರ. ಕೆಲವೊಮ್ಮೆ ತುದಿ ಬಿಟ್ಟರೆ ಮತ್ತೆ ಎಂದಿಗೂ ನಾನು ಕೂದಲು ಕತ್ತರಿಸಿಲ್ಲ. ಇದರ ನಿರ್ವಹಣೆ ಅಸಾಧ್ಯವೆಂದೆನಿಸುತ್ತಿತ್ತು. ಇದರ ಫಲ ನನ್ನ ಕೂದಲು 6.5 ಅಡಿ ಉದ್ದವಿದೆ. ಆಕೆ ಕೂದಲು ಬಿಟ್ಟು ಅವಳ ಕೂದಲ ಪಾದಕ್ಕೆ ತಾಗುತ್ತದೆ.


ಅಲೇನಾ ಉದ್ದನೆಯ ಕಂದು ಬಣ್ಣದ ಕೂದಲಿನಿಂದ ಗೊಂಬೆ ರೀತಿಯಲ್ಲಿ ಕಾಣುತ್ತಾಳೆ. ಇದರಿಂದ ಈಕೆ ಡಿಸ್ನಿ ರಾಜಕುಮಾರಿ ರಾಪುಂಜೆಲ್ ಮಾನಿಕರ್ ರೀತಿಯಲ್ಲಿ ಗೋಚರಿಸುತ್ತಾಳೆ. ಈಕೆಯ ಇನ್‍ಸ್ಟಾಗ್ರಾಮ್ ಖಾತೆಯನ್ನು ಸುಮಾರು 70 ಸಾವಿರ ಮಂದಿ ಫಾಲೋ ಮಾಡುತ್ತಿದ್ದಾರೆ. ಅವರೆಲ್ಲರೂ ಈ ಕೂದಲಿಗೆ ಮಾರುಹೋಗಿ ಅಭಿಮಾನಿಗಳಾಗಿ ಬಿಟ್ಟಿದ್ದಾರೆ.


ಇದನ್ನೂ ಓದಿ:Morning Digest: ರಾಜ್ಯದಲ್ಲಿ ಇಂದು, ನಾಳೆ ಭಾರೀ ಮಳೆ, ಚಿನ್ನದ ಬೆಲೆಯಲ್ಲಿ ಇಳಿಕೆ; ಇಂದಿನ ಪ್ರಮುಖ ಸುದ್ದಿಗಳಿವು

ಅವರ ತುಂಬು ಹೃದಯದ ಅಭಿಮಾನಕ್ಕೆ ಸೋತ ನಾನು ತನ್ನ ನೀಳ ಕೂದಲಿನ ಫೋಟೋಗಳನ್ನು ಆಗಾಗ ಅಪ್‍ಲೋಡ್ ಮಾಡುತ್ತಲೇ ಇರುತ್ತೇನೆ. ಇದನ್ನು ಕಂಡು ಅಭಿಮಾನಿಗಳು ಖುಷಿ ಪಡುತ್ತಾರೆ ಎನ್ನುತ್ತಾಳೆ ಅಲೇನಾ.


ಡೈಲಿ ಮೇಲ್‍ ವರದಿಯ ಪ್ರಕಾರ, ಮಹಿಳೆಯ ನಿಜವಾದ ಸೌಂದರ್ಯವು ಅವಳ ಕೂದಲಿನಲ್ಲಿದೆ ಎಂದು ತಾಯಿಗೆ ತಿಳಿಸಿದ ನಂತರ ಅಲೆನಾ, ತನ್ನ ಕೂದಲನ್ನು ಎಂದಿಗೂ ಕತ್ತರಿಸಬಾರದು ಎಂದು ನಿರ್ಧರಿಸಿದಳು. ಆರು ತಿಂಗಳಿಗೊಮ್ಮೆ ತನ್ನ ಕೂದಲಿನ ತುದಿಗಳನ್ನು ಟ್ರಿಮ್ ಮಾಡುತ್ತಾಳೆ. ಅವಳ ಕೂದಲು ತುಂಬಾ ಉದ್ದವಾಗಿರುವ ಕಾರಣ ವಾರಕ್ಕೊಮ್ಮೆ ತಲೆಸ್ನಾನ ಮಾಡುತ್ತಾಳೆ. ಅದಕ್ಕೆ ಸುಮಾರು 40-60 ನಿಮಿಷಗಳನ್ನು ವಿನಿಯೋಗಿಸುತ್ತಾಳೆ.
ತನ್ನ ಕೂದಲನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡಲು ಮುಖ್ಯವಾಗಿ ನೈಸರ್ಗಿಕ ಉತ್ಪನ್ನಗಳನ್ನು ಅವಲಂಬಿಸುತ್ತಾಳೆ ಮತ್ತು ಕೂದಲು ಗಂಟಾಗದಂತೆ ತಡೆಯಲು ದಿನಕ್ಕೆ ಎರಡು ಬಾರಿ ಬಾಚುತ್ತಾಳೆ ಎಂದು ಹೇಳಿದೆ.

Published by:Latha CG
First published: