London: ತಾನು ಹುಟ್ಟಿದ್ದಕ್ಕೆ ಕಾರಣವಾದ ವೈದ್ಯನ ವಿರುದ್ಧ ಕೇಸ್ ಹಾಕಿ ಮಿಲಿಯನ್​ಗಟ್ಟಲೆ ಪರಿಹಾರ ಗೆದ್ದ ಯುವತಿ

London: ಡಾಕ್ಟರ್ ಫಿಲಿಪ್ ಮಿಚೆಲ್ ತನ್ನ ಮಗುವಿನ ಮೇಲೆ ಪರಿಣಾಮ ಬೀರುವ ಸ್ಪೈನಾ ಬೈಫಿಡಾದ ಅಪಾಯ ಕಡಿಮೆ ಮಾಡಲು ಫೋಲಿಕ್ ಆ್ಯಸಿಡ್ ಪೂರಕಗಳನ್ನು ತೆಗೆದುಕೊಳ್ಳಬೇಕೆಂದು ತನ್ನ ತಾಯಿಗೆ ಹೇಳಿದ್ದರೆ, ಆಕೆ ತಾನು ಗರ್ಭಿಣಿಯಾಗುವುದನ್ನು ಮುಂದೂಡುತ್ತಿದ್ದಳು ಎಂದು ಎವಿ ಟೂಂಬ್ಸ್ ಹೇಳಿಕೊಂಡಿದ್ದಾರೆ.

ಇವಿ ಟೂಂಬಿಸ್

ಇವಿ ಟೂಂಬಿಸ್

  • Share this:
ಮೆದುಳು ಬಳ್ಳಿ (brain stem)ಮತ್ತು ಬೆನ್ನು ಮೂಳೆ (spinal cord)ಸರಿಯಾಗಿ ಜೋಡಣೆಯಾದಿರುವಂತಹ ಸ್ಟೈನಾ ಬಿಫಿಡಾ(Stina Bifida) ಖಾಯಿಲೆಯಿಂದ ಬಳಲುತ್ತಿರುವ ಇವಿ ಟೂಂಬಿಸ್ (Evie Toombis)ಎಂಬ ಯುವತಿ ಇದೀಗ ತನ್ನ ಜನನಕ್ಕೆ ಕಾರಣರಾದ ವೈದ್ಯರ (doctor)ವಿರುದ್ಧ ಕೋರ್ಟ್‌ (court in a case)ಮೆಟ್ಟೆಲೇರಿದಲ್ಲದೇ, ಪ್ರಕರಣದಲ್ಲಿ ಗೆದ್ದು ಬೀಗಿದ ಘಟನೆ ಲಂಡನ್‍ನಲ್ಲಿ ನಡೆದಿದೆ. 20 ವರ್ಷದ ಇವಿ ಟೂಂಬಿಸ್ ಎಂಬ ಯುವತಿ ಡಾಕ್ಟರ್ ಫಿಲಿಪ್ ಮಿಚೆಲ್ ತನ್ನ ತಾಯಿ( Dr Philip Mitchell) ಗರ್ಭಿಣಿಯಾಗಿದ್ದಾಗ(pregnant.) ಆಕೆಗೆ ಸರಿಯಾಗಿ ಸಲಹೆ ನೀಡದಿದ್ದ ಕಾರಣಕ್ಕೆ ನಾನು ಹುಟ್ಟಬೇಕಾಯಿತು ಎಂದು ಡಾಕ್ಟರ್ ಅನ್ನು ಕೋರ್ಟ್ ಮೆಟ್ಟಿಲು ಏರಿಸಿದ್ದಾಳೆ.ತನ್ನ ತಾಯಿಯ ವೈದ್ಯರ ವಿರುದ್ಧ ಮೊಕದ್ದಮೆ ಹೂಡಿದ ಯುವತಿ ತನ್ನ ಹುಟ್ಟಿಗೆ ಕಾರಣವಾಗಿದ್ದಕ್ಕೆ ವೈದ್ಯರನ್ನೇ ದೂಷಿದ್ದಾಳೆ. ಅಲ್ಲದೆ, ಇದಕ್ಕೆ ಲಕ್ಷಾಂತರ ರೂಪಾಯಿಗಳ (millions of rupees) ಪರಿಹಾರ (compensation)ಗೆದ್ದಿದ್ದಾಳೆ ಅನ್ನೋದೇ ವಿಶೇಷ.

24 ಗಂಟೆಗಳ ಕಾಲ ಟ್ಯೂಬ್‌ನೊಂದಿಗೆ ಜೀವನ
UKಯ ಸ್ಟಾರ್ ಶೋಜಂಪರ್ ಎವಿ ಟೂಂಬಿಸ್ ಸ್ಪೈನಾ ಬೈಫಿಡಾ ಸಮಸ್ಯೆಯೊಂದಿಗೆ ಜನಿಸಲು ಇವರೇ ಕಾರಣ ಎಂದು ತನ್ನ ತಾಯಿಯ ವೈದ್ಯರ ವಿರುದ್ಧ ತಪ್ಪಾದ ಪರಿಕಲ್ಪನೆ (wrongful conception) ಪ್ರಕರಣವನ್ನು ದಾಖಲಿಸಿದ್ದಾರೆ. ಈ ಬೆನ್ನುಮೂಳೆಯ ದೋಷದಿಂದ ಈಕೆ ಕೆಲವೊಮ್ಮೆ ದಿನಕ್ಕೆ 24 ಗಂಟೆಗಳ ಕಾಲ ಟ್ಯೂಬ್‌ಗಳೊಂದಿಗೆ ಜೀವನ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ದಿ ಸನ್ ವರದಿ ಮಾಡಿದೆ.

ಇದನ್ನೂ ಓದಿ:  ತನ್ನದೇ ಆದ ಸ್ಟೈಲ್​ನಲ್ಲಿ London Summerಗೆ ಗುಡ್​ಬೈ ಹೇಳಿದ ಗ್ಲೋಬಲ್​ ಐಕಾನ್​ Priyanka Chopra

ಡಾಕ್ಟರ್ ಫಿಲಿಪ್ ಮಿಚೆಲ್ ತನ್ನ ಮಗುವಿನ ಮೇಲೆ ಪರಿಣಾಮ ಬೀರುವ ಸ್ಪೈನಾ ಬೈಫಿಡಾದ ಅಪಾಯ ಕಡಿಮೆ ಮಾಡಲು ಫೋಲಿಕ್ ಆ್ಯಸಿಡ್ ಪೂರಕಗಳನ್ನು ತೆಗೆದುಕೊಳ್ಳಬೇಕೆಂದು ತನ್ನ ತಾಯಿಗೆ ಹೇಳಿದ್ದರೆ, ಆಕೆ ತಾನು ಗರ್ಭಿಣಿಯಾಗುವುದನ್ನು ಮುಂದೂಡುತ್ತಿದ್ದಳು ಎಂದು ಎವಿ ಟೂಂಬ್ಸ್ ಹೇಳಿಕೊಂಡಿದ್ದಾರೆ. ಅಂದರೆ ಇದರ ಪರಿಣಾಮವಾಗಿ, ಎವಿ ಹುಟ್ಟುತ್ತಲೇ ಇರಲಿಲ್ಲ ಎಂದು ಅರ್ಥ.

ಲಂಡನ್ ಹೈಕೋರ್ಟ್ ತೀರ್ಪು
ನ್ಯಾಯಾಧೀಶ ರೊಸಾಲಿಂಡ್ ಕೋ ಕ್ಯೂಸಿ ಮಹತ್ವದ ಲಂಡನ್ ಹೈಕೋರ್ಟ್ ತೀರ್ಪಿನಲ್ಲಿ ಎವಿ ಪ್ರಕರಣವನ್ನು ಬೆಂಬಲಿಸಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಎವಿಯ ತಾಯಿಗೆ ಸರಿಯಾದ ಸಲಹೆ ಒದಗಿಸಿದ್ದರೆ, ಆಕೆ ತಾನು ಗರ್ಭಧರಿಸುವ ಪ್ರಯತ್ನವನ್ನು ತಡ ಮಾಡುತ್ತಿದ್ದಳು ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಆ ಸಂದರ್ಭದಲ್ಲಿ ಎವಿಯ ತಾಯಿ ಗರ್ಭಿಣಿ ಆಗುವುದನ್ನು ಮುಂದೂಡಿದ್ದರೆ, ಸಾಮಾನ್ಯ ಆರೋಗ್ಯವಂತ ಮಗುವಿನ ಜನನ ಆಗುತ್ತಿತ್ತು" ಎಂದು ಅವರು ಹೇಳಿ, ಎವಿ ಟೂಂಬಸ್‌ ಅವರಿಗೆ ಭಾರಿ ಮೊತ್ತದ ಹಣ ಪಡೆಯುವ ಹಕ್ಕನ್ನು ನೀಡಿದ್ದಾರೆ.

ಗರ್ಭಿಣಿಯಾಗುವ ಯೋಜನೆ ಮುಂದೂಡುತ್ತಿದ್ದೆ
ಎವಿ ಪರ ವಕೀಲರು ಪರಿಹಾರವಾಗಿ ಬರುವ ಹಣದ ನಿಖರವಾದ ಮೊತ್ತವನ್ನು ಇನ್ನೂ ಲೆಕ್ಕಹಾಕಲಾಗಿಲ್ಲ ಎಂದು ಹೇಳಿದ್ದಾರೆ. ಆದರೆ ಆಕೆಯ ಜೀವನ ಪೂರ್ತಿ ಅವಶ್ಯಕವಿರುವ ಚಿಕಿತ್ಸೆ, ಆರೈಕೆಯ ಅಗತ್ಯಗಳ ವೆಚ್ಚವನ್ನು ಇದು ಭರಿಸಬೇಕಾಗಿರುವುದರಿಂದ ದೊಡ್ಡ ಮೊತ್ತವಾಗಿರುತ್ತದೆ ಎನ್ನಲಾಗಿದೆ. ಡಾ ಫಿಲಿಪ್ ಮಿಚೆಲ್ ತಮಗೆ ಅಂದು ಸರಿಯಾದ ಸಲಹೆ ನೀಡಿದ್ದರೆ,

ನಾನು ಗರ್ಭಿಣಿಯಾಗುವ ಯೋಜನೆ ಮುಂದೂಡುತ್ತಿದ್ದೆ ಎಂದು ಎವಿ ಟೂಂಬ್ಸ್ ಅವರ ತಾಯಿ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು. ನಾನು ಮೊದಲಿನಿಂದ ಉತ್ತಮ ಆಹಾರ ಪದ್ಧತಿ ಹೊಂದಿರುವ ಕಾರಣಕ್ಕೆ, ನಾನು ಫೋಲಿಕ್ ಆಮ್ಲವನ್ನು ತೆಗೆದುಕೊಳ್ಳಬೇಕಾಗಿಲ್ಲ ಎಂದು ನನಗೆ ಸಲಹೆ ನೀಡಲಾಯಿತು ಎಂದು ಅವರು ನ್ಯಾಯಾಧೀಶರಿಗೆ ತಿಳಿಸಿದರು.

ಇದನ್ನೂ ಓದಿ:Viral News : 1 ಕವನಕ್ಕೆ 3 ಕೋಟಿ, ಅಬ್ಬಬ್ಬಾ.. ಇದೇ ನೋಡಿ ಜಗತ್ತಿನ ಅತ್ಯಂತ ದುಬಾರಿ ಕವಿತೆ!

ಪರಿಹಾರ ಕ್ಕೆ ಆದೇಶ
ಈಗ ಎಲ್ಲೆಡೆ ಸುದ್ದಿಯಾಗಿರುವ ಈ ತೀರ್ಪನ್ನು ಅತ್ಯಂತ ಮಹತ್ವದ ತೀರ್ಪು ಎಂದು ಪರಿಗಣಿಸಲಾಗುತ್ತಿದೆ. ಏಕೆಂದರೆ ವೈದ್ಯರ ಒಂದು ತಪ್ಪಾದ ಸಲಹೆ ಈಗ ಒಂದು ಮಗು, ಜೀವನವಿಡೀ ಕಾಡುವ ಗಂಭೀರವಾದ ಆರೋಗ್ಯ ಸಮಸ್ಯೆಯೊಂದಿಗೆ ಹುಟ್ಟಲು ಕಾರಣವಾಗಿದೆ. ಹಾಗಾಗಿ, ಇಂಥಹ ಸಮಸ್ಯೆಗಳಲ್ಲಿ ವೈದ್ಯರನ್ನು ತಪ್ಪಿತಸ್ಥರು ಎಂದು ಪರಿಗಣಿಸಬಹುದು ಎಂಬ ಎಚ್ಚರಿಕೆಯ ಸಂದೇಶವನ್ನು ಇದು ರವಾನಿಸುತ್ತದೆ.

20 ವರ್ಷದ ಇವಿ ದಾಖಲಿಸಿರುವ ಮೊಕದ್ದಮೆಯನ್ನು ಆಲಿಸಿರುವ ಲಂಡನ್ ಹೈಕೋರ್ಟ್, ಇವರ ಈ ಪರಿಸ್ಥಿತಿಗೆ ಅವರ ತಾಯಿಯ ವೈದ್ಯರೇ ಕಾರಣ ಎಂದು ತೀರ್ಪುನೀಡಿದ್ದು, ಅವರಿಗೆ ಪರಿಹಾರ ನೀಡುವಂತೆ ಆದೇಶ ನೀಡಿದ್ದಾರೆ.
Published by:vanithasanjevani vanithasanjevani
First published: