Eyebrow: ತಲೆಯ ಕೂದಲು ಬಳಸಿ ಹುಬ್ಬು ಕಸಿ! ನಂತರದ ಫಜೀತಿ ಏನು ಗೊತ್ತೇ?

ಇಲ್ಲೊಬ್ಬ ಮಹಿಳೆಯು ಮೊದಲಿಗೆ ತನ್ನ ಕಣ್ಣಿನ ಮೇಲಿನ ಹುಬ್ಬುಗಳನ್ನು ಅತಿಯಾಗಿ ಕಿತ್ತು ಕೊಂಡಿದ್ದಾಳೆ ಮತ್ತು ನಂತರದಲ್ಲಿ ಅವಳ ತಲೆಯಿಂದ ಕೂದಲನ್ನು ಬಳಸಿಕೊಂಡು ಹುಬ್ಬು ಕಸಿಯನ್ನು ಮಾಡಿಸಿ ಕೊಂಡಿದ್ದಾಳೆ. ಆದರೆ ತಲೆಯ ಕೂದಲನ್ನು ಅಲ್ಲಿ ಬಳಸಿಕೊಂಡಿದ್ದರಿಂದ ಒಂದು ಫಜೀತಿ ಆಗಿದೆ ನೋಡಿ.

ತಲೆಯ ಕೂದಲನ್ನು ಬಳಸಿಕೊಂಡು ಹುಬ್ಬು ಕಸಿ

ತಲೆಯ ಕೂದಲನ್ನು ಬಳಸಿಕೊಂಡು ಹುಬ್ಬು ಕಸಿ

  • Share this:
ಸಾಮಾನ್ಯವಾಗಿ ಬಹುತೇಕರು ತಮ್ಮ ಹದಿಹರೆಯದ ವಯಸ್ಸಿನಲ್ಲಿ ತಮ್ಮ ಕೂದಲಿಗೆ (Hair) ಬೇರೆ ಬೇರೆ ರೀತಿಯ ಬಣ್ಣ ಹಚ್ಚಿಕೊಳ್ಳುವುದು, ಹುಬ್ಬುಗಳನ್ನು (Eyebrow) ಕಸಿ ಮಾಡಿಸಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಬಹುತೇಕರಿಗೆ ಈ ವಿಭಿನ್ನ ಪ್ರಯತ್ನಗಳು ನಂತರದಲ್ಲಿ ತುಂಬಾನೇ ಚೆನ್ನಾಗಿ ಒಪ್ಪುತ್ತವೆ, ಆದರೆ ಕೆಲವೊಮ್ಮೆ ಈ ರೀತಿಯ ಪ್ರಯತ್ನಗಳು ಬೇರೆ ರೀತಿಯ ಫಜೀತಿಯನ್ನು ಸಹ ತಂದೊಡ್ಡುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇಲ್ಲೊಬ್ಬ ಮಹಿಳೆಯು (Women) ಮೊದಲಿಗೆ ತನ್ನ ಕಣ್ಣಿನ ಮೇಲಿನ ಹುಬ್ಬುಗಳನ್ನು ಅತಿಯಾಗಿ ಕಿತ್ತು ಕೊಂಡಿದ್ದಾಳೆ ಮತ್ತು ನಂತರದಲ್ಲಿ ಅವಳ ತಲೆಯಿಂದ ಕೂದಲನ್ನು ಬಳಸಿಕೊಂಡು ಹುಬ್ಬು ಕಸಿಯನ್ನು (transplant) ಮಾಡಿಸಿ ಕೊಂಡಿದ್ದಾಳೆ. ಆದರೆ ತಲೆಯ ಕೂದಲನ್ನು ಅಲ್ಲಿ ಬಳಸಿಕೊಂಡಿದ್ದರಿಂದ ಒಂದು ಫಜೀತಿ ಆಗಿದೆ ನೋಡಿ.

ತಲೆಯ ಕೂದಲು ಬಳಸಿ ಹುಬ್ಬು ಕಸಿ 
ಯುಕೆ ನಿವಾಸಿಯಾದ ಇಸಾಬೆಲ್ಲಾ ಕುಟ್ಕ್ಸಿ ಪ್ರತಿದಿನ 30 ನಿಮಿಷಗಳ ಕಾಲ ತನ್ನ ಕಣ್ಣುಗಳ ಮೇಲಿರುವಂತಹ ಹುಬ್ಬುಗಳನ್ನು ಎಳೆಯುತ್ತಿದ್ದಳು. ನಂತರ ಅವಳು "ದಪ್ಪ ಮತ್ತು ಮೃದುವಾದ" ಹುಬ್ಬುಗಳನ್ನು ಹೊಂದಲು ಹುಬ್ಬು ಕಸಿಯನ್ನು ಮಾಡಿಸಿಕೊಂಡಿದ್ದಾಳೆ.

ಇದನ್ನೂ ಓದಿ: Marriage Agreement: ನವವಧು ಹೇಳಿದ್ದಕ್ಕೆ ಒಪ್ಪಂದಕ್ಕೆ ಸಹಿ ಹಾಕಿದ! ಆಮೇಲೆ ಓದಿ ನೋಡಿದ್ರೆ ಶಾಕ್

"ನಾನು ಅಮೆರಿಕದಲ್ಲಿ ಪ್ಲಾಸ್ಟಿಕ್ ಸರ್ಜರಿಯ ಬಗ್ಗೆ ಟಿವಿ ಕಾರ್ಯಕ್ರಮವೊಂದನ್ನು ನೋಡುತ್ತಿದ್ದೆ, ಅದರ ಬಗ್ಗೆ ಅದಕ್ಕೂ ಮೊದಲು ನಾನು ಎಂದಿಗೂ ಕೇಳಿರಲಿಲ್ಲ. ಅದರ ಬೆಲೆ ಎಷ್ಟು, ಇದು ತುಂಬಾ ದುಬಾರಿಯಾಗಿದೆಯೇ ಎಂಬುದರ ಬಗ್ಗೆ ತಿಳಿದುಕೊಳ್ಳಲು ನಾನು ಇಂಟರ್ನೆಟ್ ನಲ್ಲಿ ಸಾಕಷ್ಟು ಸಂಶೋಧನೆ ಮಾಡಲು ಪ್ರಾರಂಭಿಸಿದೆ" ಎಂದು ಇಸಾಬೆಲ್ಲಾ ಹೇಳಿದರು.

ತಲೆಯ ಕೂದಲಿನಷ್ಟೆ ವೇಗವಾಗಿ ಬೆಳೆಯಲು ಶುರುವಾದ ಹುಬ್ಬುಗಳು
ವೈದ್ಯರು ಇಸಾಬೆಲ್ಲಾ ತಲೆಯ ಹಿಂಭಾಗದಿಂದ ಪ್ರತ್ಯೇಕ ಕೂದಲಿನ ಕಿರುಚೀಲಗಳನ್ನು ತೆಗೆದುಕೊಂಡು ಮೂರು ಗಂಟೆಗಳ ಕಾರ್ಯವಿಧಾನದಲ್ಲಿ ಕೈಯಿಂದ ಅವಳ ಹುಬ್ಬುಗಳ ವಿರಳ ಪ್ರದೇಶಗಳಲ್ಲಿ ಸೇರಿಸಿದರು. 36 ವರ್ಷದ ಇಸಾಬೆಲ್ಲಾಗೆ ಹೊಸದಾಗಿರುವ ಆಕೆಯ ಹುಬ್ಬುಗಳನ್ನು ನೋಡಿದಾಗ ತುಂಬಾನೇ ಸಂತೋಷವಾಯಿತಂತೆ. ಆದರೆ ಹುಬ್ಬುಗಳ ಕಸಿಯನ್ನು ಮಾಡುವಾಗ ತಲೆಯ ಕೂದಲನ್ನು ಬಳಸಿದ್ದರಿಂದ ಅವಳ ಹೊಸ ಹುಬ್ಬುಗಳ ಕೂದಲು ತಲೆಯ ಕೂದಲಿನಷ್ಟೆ ವೇಗವಾಗಿ ಬೆಳೆಯಲು ಶುರುವಾದವು.

ಇದಕ್ಕೆ ಇಸಾಬೆಲ್ಲಾ ಎಷ್ಟು ಹಣ ಖರ್ಚು ಮಾಡಿದ್ದಾರೆ ನೋಡಿ
"ಮೋಜಿನ ಸಂಗತಿಯೆಂದರೆ, ಹುಬ್ಬಿನಲ್ಲಿರುವ ಕೂದಲು ನಿಜವಾದ ತಲೆ ಕೂದಲಿನಂತೆ ಬೆಳೆಯುತ್ತಿದೆ. ಅವರು ಅದನ್ನು ಹಾಗೆಯೇ ಬಿಟ್ಟರೆ ಅದು ಹಾಗೆಯೇ ಉದ್ದವಾಗಿ ಬೆಳೆದುಕೊಂಡು ಹೋಗುತ್ತಿದೆ. ಪ್ರತಿ ತಿಂಗಳು ನಾನು ನನ್ನ ಹುಬ್ಬುಗಳನ್ನು ಕತ್ತರಿಸಿಕೊಳ್ಳಲು ನನ್ನ ಸ್ನೇಹಿತನ ಬಳಿ ಹೋಗುತ್ತೇನೆ. ಏಕೆಂದರೆ ನನಗೆ ಅದನ್ನು ಸರಿಯಾಗಿ ಕತ್ತರಿಸಿಕೊಳ್ಳಲು ಬರುವುದಿಲ್ಲ" ಎಂದು ಇಸಾಬೆಲ್ಲಾ ಹೇಳಿದರು.

ಪೋಲೆಂಡ್ ನಲ್ಲಿ ಈ ಕಸಿಯನ್ನು ಮಾಡಿಸಿಕೊಂಡಿದ್ದು, ಅಲ್ಲಿ ಇಸಾಬೆಲ್ಲಾ ಅವರು ಯುಕೆಯಲ್ಲಿ ಉಲ್ಲೇಖಿಸಲಾದ 5,000 ಪೌಂಡ್ ಎಂದರೆ ಭಾರತೀಯ ಮೌಲ್ಯದಲ್ಲಿ 4.7 ಲಕ್ಷ ರೂಪಾಯಿಯ ಬದಲಿಗೆ 1,500 ಪೌಂಡ್ ಎಂದರೆ 1.4 ಲಕ್ಷ ರೂಪಾಯಿಯನ್ನು ಪಾವತಿಸಿದರು. "ಈ ಕಾರ್ಯವಿಧಾನದಿಂದ ನನಗೆ ಯಾವುದೇ ನೋವು ಆಗಲಿಲ್ಲ, ಅವರು ನನಗೆ ಎರಡು ಅರಿವಳಿಕೆ ಚುಚ್ಚುಮದ್ದುಗಳನ್ನು ನೀಡಿದಾಗ ಮಾತ್ರ ನೋವುಂಟು ಮಾಡಿತು" ಎಂದು ಅವರು ಹೇಳಿದರು.

ಹುಬ್ಬು ಕಸಿ ಮಾಡಿದ ಅನುಭವ ಹೇಗಿತ್ತು  
ಈ ಕಾರ್ಯ ವಿಧಾನದ ನಂತರ ಎರಡು ವಾರಗಳವರೆಗೆ ತನ್ನ ಹುಬ್ಬುಗಳನ್ನು ತೊಳೆಯದಂತೆ ಅಥವಾ ಸ್ಪರ್ಶಿಸದಂತೆ ಇಸಾಬೆಲ್ಲಾ ಅವರಿಗೆ ವೈದ್ಯರು ತಿಳಿಸಿದ್ದರು. "ಕಸಿ ಮಾಡಿದ ನಂತರ ಕನಿಷ್ಠ ಎರಡು ವಾರಗಳವರೆಗೆ ನಾನು ಅವುಗಳನ್ನು ತೊಳೆಯಲು ಅಥವಾ ಅವುಗಳನ್ನು ಸ್ಪರ್ಶಿಸಲು ಸಾಧ್ಯವಾಗಲಿಲ್ಲ, ಅದು ತುಂಬಾ ಕಠಿಣವಾಗಿತ್ತು. ಸುಮಾರು ಎರಡು ತಿಂಗಳ ನಂತರ ಅಲ್ಲಿ ಸಣ್ಣ ಕೂದಲುಗಳು ಹುಟ್ಟಿಕೊಂಡಿದ್ದನ್ನು ನಾನು ನೋಡಿದೆ" ಎಂದು ಹೇಳಿದರು.

ಇದನ್ನೂ ಓದಿ:  Celesti Bairagey: ಆಲಿಯಾ ಹೆಸರೇಳಿದ್ದಕ್ಕೆ ಮುನಿಸಿಕೊಂಡ್ರಾ ಸೆಲೆಸ್ಟಿ ಬೈರಾಗೆ? ಇದಕ್ಕೆ ಈಕೆ ಹೇಳಿದ್ದೇನು ನೋಡಿ

ಈ ಕಾರ್ಯ ವಿಧಾನವು "ತನ್ನ ಜೀವನವನ್ನು ಬದಲಾಯಿಸಿದೆ" ಎಂದು ಇಸಾಬೆಲ್ಲಾ ಹೇಳಿದರು, ಏಕೆಂದರೆ ಫೋಟೋ ತೆಗೆಸಿಕೊಳ್ಳುವಾಗ ಆಕೆ ತನ್ನ ಮುಖವನ್ನು ಮುಚ್ಚಿಕೊಳ್ಳಬೇಕಿಲ್ಲ ಎಂದು ಹೇಳಿದರು. "ಇದು ಖಂಡಿತವಾಗಿಯೂ ನನಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡಿದೆ, ಏಕೆಂದರೆ ನಾನು ಎಂದಿಗೂ ನನ್ನ ಮುಖಕ್ಕೆ ತುಂಬಾ ಹತ್ತಿರವಾಗಿ ಫೋಟೋಗಳನ್ನು ತೆಗೆಸಿಕೊಂಡಿರಲಿಲ್ಲ, ಏಕೆಂದರೆ ಮೊದಲು ನನ್ನ ಹುಬ್ಬುಗಳು ತುಂಬಾನೇ ಕೆಟ್ಟದಾಗಿದ್ದವು. ಯಾರಾದರೂ ಫೋಟೋ ತೆಗೆಯಲು ಬಂದರೆ ನಾನು ನನ್ನ ಕೈಗಳನ್ನು ನನ್ನ ಎರಡು ಹುಬ್ಬುಗಳ ಮೇಲೆ ಇಡುತ್ತಿದ್ದೆ" ಎಂದು ಹೇಳಿದರು.
Published by:Ashwini Prabhu
First published: