Viral Video: ಹುಲಿ ವೇಷದಲ್ಲಿ ಎವರೆಸ್ಟ್‌ ಮ್ಯಾರಥಾನ್! ಏನಪ್ಪಾ ರೀಸನ್?

ಹುಲಿ ವೇಷದೊಂದಿಗೆ ಎವರೆಸ್ಟ್‌ ಮ್ಯಾರಥಾನ್‌ ಓಡಿದ ವ್ಯಕ್ತಿ

ಹುಲಿ ವೇಷದೊಂದಿಗೆ ಎವರೆಸ್ಟ್‌ ಮ್ಯಾರಥಾನ್‌ ಓಡಿದ ವ್ಯಕ್ತಿ

ಅಳಿವಿನಂಚಿನಲ್ಲಿರುವ ಬಂಗಾಳ ಹುಲಿಗಳ ರಕ್ಷಣೆಗಾಗಿ ನಿಧಿ ಸಂಗ್ರಹಿಸಲು ಇಂಗ್ಲೆಂಡ್‌ನ ವನ್ಯಜೀವಿ ಛಾಯಾಗ್ರಾಹಕರೊಬ್ಬರು ಹುಲಿ ವೇಷದೊಂದಿಗೆ ಭಾನುವಾರ ಎವರೆಸ್ಟ್‌ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. 59 ವರ್ಷ ಪಾಲ್‌ ಗೋಲ್ಡ್‌ಸ್ಟೈನ್‌ ಎಂಬುವವರೇ ಹುಲಿ ವೇಷದೊಂದಿಗೆ ಮೌಂಟ್‌ ಎವರೆಸ್ಟ್‌ ಏರುವ ಕಠಿಣ ಕಾರ್ಯಕ್ಕೆ ಮುಂದಾಗಿರುವ ವ್ಯಕ್ತಿ.

ಮುಂದೆ ಓದಿ ...
  • Share this:

ಕಠ್ಮಂಡು: ಅಳಿವಿನಂಚಿನಲ್ಲಿರುವ ಬಂಗಾಳ ಹುಲಿಗಳ (Bengal tiger) ರಕ್ಷಣೆಗಾಗಿ ನಿಧಿ ಸಂಗ್ರಹಿಸಲು ಇಂಗ್ಲೆಂಡ್‌ನ ವನ್ಯಜೀವಿ ಛಾಯಾಗ್ರಾಹಕರೊಬ್ಬರು (Photographer) ಹುಲಿ ವೇಷದೊಂದಿಗೆ ಭಾನುವಾರ ಎವರೆಸ್ಟ್‌ ಮ್ಯಾರಥಾನ್‌ನಲ್ಲಿ (Everest Marathon) ಭಾಗವಹಿಸಿದ್ದು ವಿಶೇಷವಾಗಿತ್ತು. 59 ವರ್ಷ ಪಾಲ್‌ ಗೋಲ್ಡ್‌ಸ್ಟೈನ್‌ ಎಂಬುವವರೇ ಹುಲಿ ವೇಷದೊಂದಿಗೆ ಮೌಂಟ್‌ ಎವರೆಸ್ಟ್‌ ಏರುವ ಕಠಿಣ ಕಾರ್ಯಕ್ಕೆ ಮುಂದಾಗಿರುವ ವ್ಯಕ್ತಿ. ಗೋಲ್ಡ್‌ಸ್ಟೈನ್ (Goldstein) ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ (Video) ಒಂದನ್ನು ಹಂಚಿಕೊಂಡಿದ್ದು, ಹುಲಿ ವೇಷದಲ್ಲಿ ಗೋಲ್ಡ್‌ಸ್ಟೈನ್‌ ಟ್ರೆಕ್ಕಿಂಗ್‌ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಅದೇ ದಾರಿಯಲ್ಲಿ ಎದುರಿಗೆ ಬರುತ್ತಿದ್ದವರಿಗೆ ಧನ್ಯವಾದ ತಿಳಿಸಿ, ತಮ್ಮ ದಾರಿಯಲ್ಲಿ ಮುಂದೆ ಸಾಗುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಬಗ್ಗೆ "ಎವರೆಸ್ಟ್‌ ಮ್ಯಾರಥಾನ್‌ ಒಂದು ಮ್ಯಾರಥಾನ್‌, ಇದು ಸ್ಪ್ರಿಂಟ್ ಅಲ್ಲ. ಆದರೆ, ಅರ್ಧದಷ್ಟು ದಾರಿ ಎಂದು ವಿಡಿಯೋ ಮೇಲೆ ಗೋಲ್ಡ್‌ಸ್ಟೈನ್ ಬರೆದುಕೊಂಡಿದ್ದಾರೆ.


ಹುಲಿಯ ವೇಷ ಧರಿಸಿ ಮ್ಯಾರಥಾನ್ ಓಟ
ಇನ್ನು, ಮತ್ತೊಂದು ಟ್ವೀಟ್‌ನಲ್ಲಿ ಮ್ಯಾರಥಾನ್‌ ಆರಂಭವಾಗುವುದಕ್ಕೂ ಮುನ್ನ ಮಾತನಾಡಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಎವರೆಸ್ಟ್‌ನಲ್ಲಿ ಈ ಮೂರ್ಖತನದಿಂದ ಪಾರಾಗಬಹುದೇ ಎಂದು ಮಾತು ಪ್ರಾರಂಭಿಸುವ ಅವರು, ಬಹುಶಃ ಈ ಪ್ರಯಾಣ ಅತ್ಯಂತ ಕಠಿಣವಾಗಿರಲಿದೆ. ನಾನು ಎಲ್ಲಾ ರೀತಿಯ ಹಾದಿಯಲ್ಲಿ ನಡೆದಿದ್ದೇವೆ. ನಾನು ಈ ನಡೆದಿರುವ ದಾರಿಗೆ ಈ ಹಾದಿ ಸ್ವಲ್ಪವೂ ಸಾಮ್ಯತೆ ಹೊಂದಿಲ್ಲ. ಇಂತಹ ದಾರಿಯಲ್ಲಿ ಮ್ಯಾರಥಾನ್‌ ಮಾಡಬೇಕಿದೆ. ಇದು ಕಷ್ಟಕರ ಹಾಗೂ ಸವಾಲಿನ ಕಾರ್ಯ ಎಂದು ಹೇಳಿದ್ದಾರೆ. ಅಲ್ಲದೆ ಈ ಕಾರ್ಯಕ್ಕೆ ಸಹಾಯ ಮಾಡಿರುವ ಜನರಿಗೆ ಗೋಲ್ಡ್‌ಸ್ಟೈನ್‌ ಧನ್ಯವಾದ ಅರ್ಪಿಸಿದರು.


ಇದನ್ನೂ ಓದಿ: Viral Post: ಪ್ರವಾಹ ಪೀಡಿತ ಸ್ಥಳಗಳಲ್ಲಿ ಮಹಿಳಾ IAS ಅಧಿಕಾರಿ ಕೆಲಸ! ಭೇಷ್ ಎಂದ ನೆಟ್ಟಿಗರು


ಆ ಬಳಿಕ ಮತ್ತೊಂದು ವಿಡಿಯೋದಲ್ಲಿ, ಇದು ನಾನು ಮಾಡಿದ ಅತ್ಯಂತ ಸವಾಲಿನ ಕೆಲಸವೇ? ಎಂದು ಪ್ರಶ್ನಿಸುವ ಅವರು, ಹೌದು, ಜನರು ನನ್ನನ್ನು ಅದೇ ರೀತಿ ನೋಡುತ್ತಿದ್ದಾರೆ. ಅದಲ್ಲದೇ ಅವರಿಗೆ ನಾನು ನೀವು ಭೂಮಿಯ ಮೇಲೆ ಏನು ಮಾಡುತ್ತಿದ್ದೀರಿ? ಎಂದು ಕೇಳುತ್ತೇನೆ. ಈ ಗಡಿಗಿಂತ ಸ್ವಲ್ಪ ದೂರದಲ್ಲಿ ಹುಲಿಗಳನ್ನು ಕೊಲ್ಲಲಾಗುತ್ತಿದೆ. ಅವುಗಳನ್ನು ಉಳಿಸುವ ಕೆಲಸವನ್ನು ನಾವು ಮಾಡಬೇಕಿದೆ ಎಂದು ಗೋಲ್ಡ್‌ಸ್ಟೈನ್‌ ಹೇಳಿದ್ದಾರೆ.


ಬಂಗಾಳ ಹುಲಿಗಳ ಸಂರಕ್ಷಣೆಗಾಗಿ ಅಭಿಯಾನ
ಗೋಲ್ಡ್‌ಸ್ಟೈನ್‌ ಅವರ ವೆಬ್‌ಸೈಟ್‌ನ ಪ್ರಕಾರ, ಗೋಲ್ಡ್‌ಸ್ಟೈನ್ 2022ರ ಮೇ ಅಂತ್ಯದ ವೇಳೆಗೆ ಬಂಗಾಳ ಹುಲಿಗಳ ಸಂರಕ್ಷಣೆಗಾಗಿ ವರ್ತ್ ಮೋರ್ ಅಲೈವ್ ಅಭಿಯಾನ ನಡೆಸಿದ್ದು, 2,00,000 ಯುರೋಗೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದಾರೆ. ಗೋಲ್ಡ್‌ಸ್ಟೈನ್ 12 ವರ್ಷಗಳ ಹಿಂದೆ ಮೊದಲ ಬಾರಿಗೆ ಲಂಡನ್ ಮ್ಯಾರಥಾನ್‌ನಲ್ಲಿ ಹುಲಿ ವೇಷದಲ್ಲಿ ಓಡಿದ್ದರು. ನಂತರ, ಕಿಲಿಮಾಂಜಾರೋ ಸೇರಿ ಇದುವರೆಗೂ 19 ಮ್ಯಾರಥಾನ್‌ಗಳನ್ನು ಹುಲಿ ವೇಷದೊಂದಿಗೆ ಗೋಲ್ಡ್‌ಸ್ಟೈನ್‌ ಓಡಿದ್ದಾರೆ.


ಅಲ್ಲಿ ಬರುವ ದೇಣಿಗೆಯನ್ನು ಹೊಸ ಶಾಲೆ ನಿರ್ಮಿಸಲು, ಆಂಬುಲೆನ್ಸ್‌ಗಳನ್ನು ಖರೀದಿಸಲು ಮತ್ತು ಗಸ್ತು ವಾಹನಗಳನ್ನು ಖರೀದಿಸಲು, ಬೋರ್‌ವೆಲ್‌ಗಳನ್ನು ಕೊರೆಯಲು ಮತ್ತು ಅನೇಕ ಹಳ್ಳಿಗಳಿಗೆ ವಿವಿಧ ಸೌಲಭ್ಯಗಳಿಗಾಗಿ ಬಳಸಲಾಗಿದೆ ಎಂದು ಅವರ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.


ಏನಿದು ಎವರೆಸ್ಟ್‌ ಮ್ಯಾರಥಾನ್‌?
ಎವರೆಸ್ಟ್ ಮ್ಯಾರಥಾನ್ ನೇಪಾಳ ಸರ್ಕಾರವು ಪ್ರತಿ ವರ್ಷ ಮೇ 29 ರಂದು ಆಯೋಜಿಸುವ ಅಂತಾರಾಷ್ಟ್ರೀಯ ಅತಿ ಎತ್ತರದ ಸಾಹಸ ಕ್ರೀಡೆಯಾಗಿದೆ. 2015ರಲ್ಲಿ ಸಂಭವಿಸಿದ ಭೂಕಂಪನದ ಬಳಿಕ ಮೌಂಟ್‌ ಎವರೆಸ್ಟ್‌ ಎತ್ತರ ಹೆಚ್ಚಳವಾಗಿದ್ದನ್ನು ಸಂಭ್ರಮಿಸಲು “ನ್ಯೂ ಹೈಯರ್‌ ಮೌಂಟ್‌ ಎವರೆಸ್ಟ್‌ ಮ್ಯಾರಥಾನ್‌” ಎಂಬ ಹೆಸರಲ್ಲಿ ಈ ವರ್ಷದ ಮ್ಯಾರಥಾನ್ ಅನ್ನು ಆಯೋಜಿಸಲಾಗಿದೆ.


ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ನಿಂದ ಖುಂಬು ಕಣಿವೆಯ ಎತ್ತರದ ಶೆರ್ಪಾ ಹಾದಿಗಳವರೆಗೂ ಮ್ಯಾರಥಾನ್‌ ನಡೆಯುತ್ತದೆ. ಟೆಂಜಿಂಗ್‌ ನಾರ್ಗಿ ಶೆರ್ಪಾ ಮತ್ತು ಸರ್‌ ಎಡ್ಮಂಡ್‌ ಹಿಲರಿ ಅವರು ಮೇ 29 1953ರಂದು ಮೌಂಟ್‌ ಎವರೆಸ್ಟ್‌ ಅನ್ನು ಯಶಸ್ವಿಯಾಗಿ ಏರಿ ಐತಿಹಾಸಿಕ ಸಾಧನೆ ಮಾಡಿದ ನೆನಪಿಗಾಗಿ ಈ ಮ್ಯಾರಥಾನ್‌ ಅನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ.


ಇದನ್ನೂ ಓದಿ:  Maze ಆಕೃತಿಯಂತಹ ಸ್ಥಳಗಳು ವಿದೇಶದಲ್ಲಿ ಮಾತ್ರವಲ್ಲ ಭಾರತದಲ್ಲೂ ಇದೆ!


ಈ ಸಲದ ಮ್ಯಾರಥಾನ್‌, 19ನೇ ಆವೃತ್ತಿಯಾಗಿದ್ದು, ಎಲ್ಲೆಡೆಯಿಂದ ಓಟಗಾರರು ಭಾಗವಹಿಸಿದ್ದಾರೆ. 60 ಕಿಮೀ ಎಕ್ಸ್‌ಟ್ರೀಮ್ ಅಲ್ಟ್ರಾ, 42 ಕಿಮೀ ಫುಲ್ ಮ್ಯಾರಥಾನ್ ಮತ್ತು 21 ಕಿಮೀ ಹಾಫ್ ಮ್ಯಾರಥಾನ್‌ ಎಂಬ ಮೂರು ರೀತಿಯ ಸ್ಪರ್ಧೆಗಳಿದ್ದು, ಜೀವನದ ಎಲ್ಲಾ ಹಂತಗಳ ಓಟಗಾರರು ಈ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು. ಟೆಂಜಿಂಗ್‌ ಹಿಲರಿ ಎವರೆಸ್ಟ್ ಮ್ಯಾರಥಾನ್ ಕೇವಲ ಓಟದ ಸ್ಪರ್ಧೆ ಅಲ್ಲ, ಇದು ನಿಜವಾಗಿಯೂ ಜೀವಮಾನದಲ್ಲಿ ಒಮ್ಮೆ ಅನುಭವಿಸಲೇಬೇಕಾದ ಅನುಭವವಾಗಿದೆ ಎಂಬುದು ಸ್ಪರ್ಧೆಯಲ್ಲಿ ಭಾಗಿಯಾದವರ ಅಭಿಪ್ರಾಯ.

top videos
    First published: