Artificial Skull| ಇಂಗ್ಲೆಂಡ್‌ನ ವ್ಯಕ್ತಿಯೊಬ್ಬನಿಗೆ ಕೃತಕ ತಲೆಬುರುಡೆಯ ಜೋಡಣೆ!

ಒಬ್ಬ ವ್ಯಕ್ತಿಗೆ ತಲೆಬುರುಡೆಯ ಒಂದು ಭಾಗವನ್ನು ತೆಗೆದು ಹಾಕಿದ್ದು, ಇನ್ನೂ ಅರ್ಧ ಭಾಗಕ್ಕೆ ಕೃತಕ ತಲೆ ಬುರುಡೆಯನ್ನು ಜೋಡಿಸಲಿದ್ದಾರೆ ಎಂದರೆ ನೀವು ನಂಬಲಿಕ್ಕಿಲ್ಲ.

ಕೃತಕ ತಲೆಬುರುಡೆ ಜೋಡಣೆಗೆ ಒಳಪಟ್ಟ ವ್ಯಕ್ತಿ.

ಕೃತಕ ತಲೆಬುರುಡೆ ಜೋಡಣೆಗೆ ಒಳಪಟ್ಟ ವ್ಯಕ್ತಿ.

  • Share this:
    ವ್ಯಕ್ತಿಗೆ ಅಪಘಾತದಲ್ಲಿ (Accident) ಕೈ ಕಾಲು ಮುರಿದು ಹೋದರೆ, ಕೃತಕ ಕೈ ಕಾಲುಗಳನ್ನು ಜೋಡಿಸುವುದನ್ನು ನಾವೆಲ್ಲಾ ಸಾಮಾನ್ಯವಾಗಿ ಕೇಳಿರುತ್ತೇವೆ. ಇತ್ತೀಚೆಗೆ ಆಧುನಿಕತೆ ಬೆಳೆದಂತೆ ಬೇರೆಯವರ ಹೃದಯವನ್ನು ಇನ್ನೊಬ್ಬರಿಗೆ ಅಳವಡಿಸಿದ್ದೂ ನಾವು ಕೇಳಿದ್ದೇವೆ.ತಲೆ ಬುರುಡೆಗೆ ಪೆಟ್ಟು ಬಿದ್ದರೆ ಅದನ್ನು ಸರಿ ಪಡಿಸುವುದನ್ನು ಸಹ ನಾವು ಕೇಳಿದ್ದೇವೆ. ಆದರೆ ಅರ್ಧ ತಲೆ ಬುರುಡೆಯನ್ನೇ (Artificial Skull) ತೆಗೆದುಹಾಕಿರುವುದು ಎಲ್ಲಿಯೂ ಕೇಳಿರಲಿಕ್ಕಿಲ್ಲ. ಇದನ್ನು ಯಾರೆ ಕೇಳಿದರೂ ಇದು ಅಸಾಧ್ಯವೆಂದು ಹೇಳುತ್ತಾರೆ. ಆದರೆ ಇಲ್ಲಿ ಒಬ್ಬ ವ್ಯಕ್ತಿಗೆ ತಲೆಬುರುಡೆಯ ಒಂದು ಭಾಗವನ್ನು ತೆಗೆದು ಹಾಕಿದ್ದು, ಇನ್ನೂ ಅರ್ಧ ಭಾಗಕ್ಕೆ ಕೃತಕ ತಲೆ ಬುರುಡೆಯನ್ನು ಜೋಡಿಸಲಿದ್ದಾರೆ ಎಂದರೆ ನೀವು ನಂಬಲಿಕ್ಕಿಲ್ಲ.

    ಇಂಗ್ಲೆಂಡ್‌ನ ಡರ್ಬಿಯ 26 ವರ್ಷದ ಜೋಶ್ ಸ್ಟೋರ್ ಎಂಬ ವ್ಯಕ್ತಿಯ ಮೇಲೆ ಜುಲೈ 9 ರಂದು ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದ್ದು, ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡ ನಂತರ ಅವರನ್ನು ನ್ಯೂಜಿಲ್ಯಾಂಡ್ ನಲ್ಲಿರುವ ಆಕ್ಲೆಂಡ್ ನ ಆಸ್ಪತ್ರೆಗೆ ಸೇರಿಸಲಾಯಿತು. ಮೂರು ವಾರಗಳ ಕಾಲ ಅವರನ್ನು ಕೋಮಾದಲ್ಲಿ ಇರಿಸಿದ ನಂತರ ವೈದ್ಯರು ವ್ಯಾಪಕ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿದರು. ಅವರ ಚಿಕಿತ್ಸೆಯ ಸಮಯದಲ್ಲಿ, ಮೆದುಳಿನ ಮೇಲೆ ಬೀಳುವ ಒತ್ತಡವನ್ನು ನಿವಾರಿಸಲು ವೈದ್ಯರು ಅವರ ತಲೆಬುರುಡೆಯ ಬಲಭಾಗವನ್ನು ತೆಗೆದು ಹಾಕಿದರು.

    ಈಗ, ಆಸ್ಪತ್ರೆಯ ಅಧಿಕಾರಿಗಳು ಮತ್ತು ವೈದ್ಯರು ಜೋಶ್ ಅವರಿಗೆ ತೆಗೆದುಹಾಕಲಾದ ಅವರ ತಲೆಬುರುಡೆ ಇನ್ನು ಮುಂದೆ ಅವನಿಗೆ ಸೂಕ್ತವಲ್ಲ. ಅವನಿಗೆ ಬದಲಿ ತಲೆಬುರುಡೆಯನ್ನು ಹಾಕಬೇಕು ಎಂದು ಅವರು ಅವನಿಗೆ ಮಾಹಿತಿ ನೀಡಿದ್ದಾರೆ. ಆಕ್ಲೆಂಡ್ ಕೋವಿಡ್-19 ಹಾವಳಿಯು ಕಡಿಮೆ ಆದ ನಂತರವಷ್ಟೆ ಹೊಸ ಕೃತಕ ತಲೆಬುರುಡೆಯನ್ನು ಅವನಿಗಾಗಿ ತಯಾರಿಸಲಾಗುತ್ತದೆ ಎಂದು ಅವರು ಸ್ವಲ್ಪ ಸಮಯ ಕಾಯಬೇಕಾಗಿದೆ ಎಂದು ತಿಳಿಸಿದ್ದಾರೆ.

    ನ್ಯೂಜಿಲ್ಯಾಂಡ್ ನಲ್ಲಿ, 4ನೇ ಹಂತದ ಕೋವಿಡ್-19 ಅಲರ್ಟ್ ವ್ಯವಸ್ಥೆ ಜಾರಿಯಲ್ಲಿದ್ದು, ಪ್ರತಿಯೊಂದು ಎಚ್ಚರಿಕೆಯ ಮಟ್ಟವು ನಾಗರಿಕರಿಗೆ ಅವರು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಹೇಳುತ್ತದೆ. ಅಲರ್ಟ್ 2ನೆಯ ಹಂತದಲ್ಲಿರುವುದರಿಂದ ಎಂದರೆ ಸಮುದಾಯ ಪ್ರಸರಣದ ಕಡಿಮೆ ಅಪಾಯವಿದೆ. ಪ್ರಸ್ತುತ, ಆಕ್ಲೆಂಡ್ ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಿರುವುದರಿಂದ ಎಚ್ಚರಿಕೆ ಹಂತ 3 ರಲ್ಲಿದೆ ಎಂದು ಹೇಳಲಾಗುತ್ತಿದೆ.

    ಕಳೆದ ಮೂರು ವರ್ಷಗಳಿಂದ, ಜೋಶ್ ನ್ಯೂಜಿಲ್ಯಾಂಡ್ ನಲ್ಲಿ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದರು. ಪ್ರಯಾಣದ ನಿರ್ಬಂಧಗಳಿಂದಾಗಿ, ಅವನ ಕುಟುಂಬವು ಅವನನ್ನು ನೋಡಲು ಸಾಧ್ಯವಾಗಲಿಲ್ಲ. ಘಟನೆಯ ನಂತರ, ನ್ಯೂಜಿಲ್ಯಾಂಡ್ ಅಧಿಕಾರಿಗಳು ಗಡಿ ವಿನಾಯಿತಿಯನ್ನು ನೀಡಿದರು ಮತ್ತು ಅವನನ್ನು ನೋಡಲು ಅವನ ಕುಟುಂಬ ಸದಸ್ಯರಿಗೆ ದೇಶಕ್ಕೆ ಪ್ರವೇಶಿಸಲು ಅನುಮತಿ ನೀಡಿದರು. ಅವನ ಹೆತ್ತವರಾದ ಇಯಾನ್ ಮತ್ತು ಡಾನ್ ಸ್ಟೋರ್ ಮತ್ತು ಸಹೋದರಿ ಸಿಯಾನ್ ಅವರನ್ನು ಭೇಟಿಯಾಗಲು ಅನುಮತಿಸುವ ಮೊದಲು ಎರಡು ವಾರಗಳ ಕಾಲ ಕ್ವಾರಂಟೈನ್ ಗೆ ಅವರನ್ನು ಒಳಪಡಿಸಲಾಯಿತು.

    ಇದನ್ನೂ ಓದಿ: Boji: Istanbulನ ಸಾರ್ವಜನಿಕ ಸಾರಿಗೆಯ ನಿತ್ಯದ ಪ್ರಯಾಣಿಕ ಈ ಶ್ವಾನ!

    ಆಗಸ್ಟ್ ನಲ್ಲಿ ತೀವ್ರ ನಿಗಾ ಘಟಕದಲ್ಲಿ ಕೋಮಾದಿಂದ ಎಚ್ಚರಗೊಂಡ ನಂತರ ಜೋಶ್ ಅವರ ಪೋಷಕರು ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾದರು. ಸೆಪ್ಟೆಂಬರ್ 22 ರಂದು ಅವನ ಸಹೋದರಿ ಸಿಯಾನ್ ಗೆ ಮೊದಲ ಬಾರಿಗೆ ಅವನನ್ನು ನೋಡಲು ಅನುಮತಿ ನೀಡಲಾಯಿತು. ಘಟನೆಯ ನಂತರ ಜೋಶ್ ಅವರ ಆರೋಗ್ಯದಲ್ಲಿ ನಿಜವಾಗಿಯೂ ಉತ್ತಮವಾಗಿ ಪ್ರಗತಿ ಕಂಡರೂ ಅವರ ಭವಿಷ್ಯವು ಇನ್ನೂ ಅನಿಶ್ಚಿತವಾಗಿದೆ ಎಂದು ಸಿಯಾನ್ ಹೇಳಿದರು.
    Published by:MAshok Kumar
    First published: