Accident: 'ಸಿಡಿಲೇ ಬರಲಿ ಏನೇ ಬರಲಿ ನಾನು ಜಗ್ಗೋಲ್ಲ' ಅಂತಾನೇ ಈ ಭೂಪ!

Lucky Man Who Survived a Lightning Strike: ಮಳೆ ಬರುವ ಸಮಯದಲ್ಲಿ ಮನೆಯಲ್ಲಿ ಮೊಬೈಲ್ ಯೂಸ್ ಮಾಡ್ಬೇಡ, ತೆಗ್ದಿಡು ಅಂತ ಜೋರು ಮಾಡ್ತಾರೆ. ಯಾಕೆಂದರೆ ಆ ಸಮಯದಲ್ಲಿ ಗುಡುಗು ಅಥವಾ ಸಿಡಿಲಿನಿಂದ ಏನಾದರೂ ಅನಾಹುತವಾದರೆ ಅಂತ. ಇದಕ್ಕೆ ಎದುರು ನಿಂತರೆ ಮನುಷ್ಯನಿಗೆ ಸಾವು ಕಟ್ಟಿಟ್ಟಬುತ್ತಿ. ಆದರೆ, ಇಲ್ಲೊಬ್ಬ ವ್ಯಕ್ತಿ ಸಿಡಿಲಿನಿಂದ ಪಾರಾಗಿದ್ದಾನೆ. ಅರೆ! ಏನಿದು ಇಟ್ರೆಂಸ್ಟಿಂಗ್ ಸ್ಟೋರಿ.

ಐಡನ್ ರೋವನ್ (ಅದೃಷ್ಟದ  ವ್ಯಕ್ತಿ)

ಐಡನ್ ರೋವನ್ (ಅದೃಷ್ಟದ ವ್ಯಕ್ತಿ)

  • Share this:
ನಾವು ಈ ಮೊಬೈಲ್ ಫೋನ್ ಗಳಲ್ಲಿ (Mobile Phone)  ಆಟ ಆಡುತ್ತಿದ್ದಾಗ ಕೈಯಲ್ಲಿಯೇ ಅದು ಸ್ಫೋಟಗೊಂಡಿರುವ ಬಗ್ಗೆ ಕೇಳಿದ್ದೇವೆ ಮತ್ತು ಕೆಲವೊಂದು ಸಮಯದಲ್ಲಿ ಮೊಬೈಲ್ ಫೋನ್ ಅನ್ನು ಸುಮ್ಮನೆ ಚಾರ್ಜ್ ಗೆ ಅಂತ ಹಾಕಿಟ್ಟಾಗ ಸಹ ಸ್ಪೋಟಗೊಂಡಿರುವ ಪ್ರಕರಣಗಳ ಬಗ್ಗೆ ಕೇಳಿರುತ್ತೇವೆ. ಹೀಗೆ ಈ ಎಲೆಕ್ಟ್ರಾನಿಕ್   ( Electronic Items)  ಸಾಧನಗಳು ಯಾವಾಗ ಸ್ಪೋಟಗೊಳ್ಳುತ್ತವೆ ಅಂತಾ ಊಹಿಸುವುದಕ್ಕೂ ಸಾಧ್ಯವಿರುವುದಿಲ್ಲ. ಹೀಗೆ ಇದ್ದಕ್ಕಿದ್ದಂತೆ ಮೊಬೈಲ್ ಫೋನ್ ಗಳು ಸ್ಫೋಟಗೊಳ್ಳುವುದಕ್ಕೆ ಅನೇಕ ಕಾರಣಗಳಿರುತ್ತವೆ. ಎಷ್ಟೋ ಜನರು ಇಂತಹ ಮೊಬೈಲ್ ಫೋನ್ ಸ್ಪೋಟಗೊಂಡ   ಪ್ರಕರಣಗಳಲ್ಲಿ ತಮ್ಮ ಕೈಯನ್ನು ಸುಟ್ಟಿಕೊಂಡಿದ್ದಾರೆ ಮತ್ತು ಕೆಲವರು ತಮ್ಮ ಕಣ್ಣಿಗೆ ಗಾಯ ಸಹ ಮಾಡಿಕೊಂಡಿದ್ದಾರೆ. ಕೆಲವೊಮ್ಮೆ ಇಂತಹ ಸ್ಪೋಟಗಳು ತುಂಬಾನೇ ಗಾಯಗಳನ್ನು ಸಹ ಮಾಡಬಹುದು.

ಇಲ್ಲೊಂದು ಘಟನೆ ನಡೆದಿದ್ದು, ಅದರಲ್ಲಿ ಒಬ್ಬ ವ್ಯಕ್ತಿ ಅದೃಷ್ಟಶಾಲಿ ಅಂತಾನೆ ಹೇಳಬಹುದು ನೋಡಿ. ಏಕೆಂದರೆ ಮನೆಯ ಹೊರಗೆ ಭಾರಿ ಗುಡುಗು ಮಿಂಚು ಆಗುತ್ತಿದ್ದಾಗ, ಮನೆಯಲ್ಲಿ ವೀಡಿಯೋ ಗೇಮ್ ಆಡುತ್ತಿದ್ದ ವ್ಯಕ್ತಿಗೆ ಸಿಡಿಲು ಬಡೆದಿದೆ. ಆದರೆ ಅದೃಷ್ಟವಶಾತ್ ಅವನಿಗೆ ಕೈ ಮೇಲೆ ಸಣ್ಣ ಪುಟ್ಟ ಗಾಯಗಳು ಬಿಟ್ಟರೆ ಅಂತಹ ಯಾವುದೇ ದೊಡ್ಡ ಹಾನಿ ಸಂಭವಿಸಿಲ್ಲ ಅಂತ ಹೇಳಲಾಗುತ್ತಿದೆ.

ಮಿಂಚಿನ ಹೊಡೆತದಿಂದ ಬದುಕುಳಿದ ಅದೃಷ್ಟಶಾಲಿ ವ್ಯಕ್ತಿ! 

ಮಿಂಚಿನ ಹೊಡೆತದಿಂದ ಬದುಕುಳಿದ ನಂಬಲಾಗದ ಅದೃಷ್ಟಶಾಲಿ ವ್ಯಕ್ತಿಯ ಕಥೆ ಇದು. ಅಪಘಾತದ ನಂತರ  ವ್ಯಕ್ತಿಯು ತನ್ನ ಬಲ ತೋಳಿನ ಮೇಲೆ ಸಣ್ಣ ಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ. ಆಕ್ಸ್ಫರ್ಡ್ ಮೇಲ್ ನ ವರದಿಯ ಪ್ರಕಾರ, ಅವರು ತಮ್ಮ ಮನೆಯಲ್ಲಿನ ಲಿವಿಂಗ್ ರೂಮ್ ನಲ್ಲಿ ವೀಡಿಯೋ ಗೇಮ್ ಆಡುತ್ತಿದ್ದಾಗ ಸಿಡಿಲು ಬಡೆದಿದೆ.

ಐಡನ್ ರೋವನ್ ಅವರು ಸೆಪ್ಟೆಂಬರ್ 5 ರ ಸೋಮವಾರ ತಮ್ಮ ಪ್ಲೇ ಸ್ಟೇಷನ್ ನಲ್ಲಿ ಗೇಮ್ ಆಡುತ್ತಿದ್ದಾಗ, ರಾತ್ರಿ 10:30 ರ ಸುಮಾರಿಗೆ ಮನೆಯ ಹೊರಗೆ ಭಯಾನಕವಾದ ಶಬ್ದ ಕೇಳಿಸಿತು ಮತ್ತು ಅವನ ದೇಹದಲ್ಲಿ ಒಂದು ರೀತಿಯ ವಿದ್ಯುತ್ ಷಾಕ್ ಹೊಡೆದಂತೆ ಅನುಭವವಾಗಿದೆ.

ಇಂಗ್ಲೆಂಡ್ ನ ಅಬಿಂಗ್ಡನ್ ನಲ್ಲಿ ವಾಸಿಸುತ್ತಿರುವ 33 ವರ್ಷದ ವ್ಯಕ್ತಿಯನ್ನು ಜಾನ್ ರಾಡ್ಕ್ಲಿಫ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಸಿಬ್ಬಂದಿ ಅವರು ಈ ವ್ಯಕ್ತಿಗೆ ಸಿಡಿಲು ಬಡಿದಿರುವಂತೆ ಕಾಣುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಮದ್ವೆಯಾಗಿ 8 ವರ್ಷದ ಮೇಲೆ ಗೊತ್ತಾಯ್ತು, ಆಕೆ ಮದ್ವೆಯಾಗಿದ್ದು ಗಂಡಸನ್ನಲ್ಲ ಹೆಂಗಸನ್ನ ಅಂತ!

ಎಂಟು ಗಂಟೆಗಳ ಕಾಲ ಮೇಲ್ವಿಚಾರಣೆಯಲ್ಲಿ ಇರಿಸಿದ ನಂತರ ರೋವನ್​ಗೆ ಕೆಲವು ಔಷಧಿಗಳನ್ನು ನೀಡಿ ಮನೆಗೆ ಮರಳಲು ಅನುಮತಿಸಲಾಯಿತು. "ನಾನು ಸೋಫಾದಲ್ಲಿ ಕೂತು ವೀಡಿಯೋ ಗೇಮ್ ಆಡುತ್ತಿದ್ದೆ, ಅಲ್ಲಿ ಹೊರಗೆ ಜೋರಾಗಿ ಗುಡುಗು ಸಿಡಿಲು ಆಗುತ್ತಿತ್ತು" ಎಂದು ಅವರು ಆಕ್ಸ್ಫರ್ಡ್ ಮೇಲ್ ಮಾಡಿದ್ದಾರೆ.

ಆ ದಿನ ಏನು ನಡೀತು ಅಂತ ವಿವರಿಸಿದ ರೋವನ್..

"ಗುಡುಗಿನ ದೊಡ್ಡ ಶಬ್ದ ಕೇಳಿಸಿತು ಮತ್ತು ನನಗೆ ದೇಹದಲ್ಲಿ ಏನೋ ಒಂದು ರೀತಿಯ ಶಾಕ್ ಹೊಡೆದಂತೆ ಅನ್ನಿಸಿತು ಮತ್ತು ನಂತರ ನನ್ನ ಬಲ ತೋಳಿನಲ್ಲಿ ಸ್ವಲ್ಪ ಸುಡುವ ಶಾಖವನ್ನು ಅನುಭವಿಸಿದೆ, ಅಲ್ಲಿ ಈಗ ಸುಟ್ಟಗಾಯಗಳಿವೆ" ಎಂದು ಆ ವ್ಯಕ್ತಿ ಹೇಳಿದರು.

ಇದನ್ನೂ ಓದಿ: 380 ಮಿಲಿಯನ್‌ ವರ್ಷ ಹಳೆಯ ಮೀನಿನ ಹೃದಯದ ಪಳೆಯುಳಿಕೆ ಪತ್ತೆ

"ನನ್ನ ಪುನಃ ಪ್ರಜ್ಞೆಗೆ ಮರಳಲು ಸುಮಾರು ಒಂದು ನಿಮಿಷ ಬೇಕಾಯಿತು, ನಾನು ತುಂಬಾ ಗೊಂದಲಕ್ಕೊಳಗಾಗಿದ್ದೆ. ಏನಾಯಿತು ಎಂದು ನನಗೆ ಗೊತ್ತಿಲ್ಲದ ಕಾರಣ ನಾನು ಮಹಡಿಗೆ ಹೋಗಿ ಒದ್ದೆಯಾದ ಟವೆಲ್ ಗಾಗಿ ನನ್ನ ಮನೆಯವರನ್ನು ಕೇಳಿದೆ. ಆದರೆ ನನ್ನ ತೋಳು ಮಾತ್ರ ತುಂಬಾನೇ ಉರಿಯುತ್ತಿತ್ತು" ಎಂದು ರೋವನ್ ಹೇಳಿದರು. ಅವರಿಗೂ ಒಮ್ಮೆಗೆ ಭಯವಾಯಿತು ತದನಂತರ ಅರಾಮಾದರು.

ಅವರು ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ತಮ್ಮ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಜೊತೆಗೆ ಆಸ್ಪತ್ರೆಯಲ್ಲಿರುವ ತಮ್ಮ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಅವರು ಮತ್ತೆ ಗುಡುಗು, ಸಿಡಿಲಿನ ಸಮಯದಲ್ಲಿ ಇಂತಹ ಆಟಗಳನ್ನು ಆಡುವುದಿಲ್ಲ ಅಂತ ಪೋಸ್ಟ್ ನಲ್ಲಿ ಹೇಳಿದ್ದಾರೆ.
First published: