HOME » NEWS » Trend » UK MAN STEALS CAR AFTER TEST DRIVE DEMANDS RS 50000 TO REVEAL ITS LOCATION STG MAK

ಟೆಸ್ಟ್ ಡ್ರೈವ್ ನಂತರ ಯುಕೆಯಲ್ಲಿ ಕಾರು ಕಳ್ಳತನ: ಕಾರಿನ ಸ್ಥಳ ಬಹಿರಂಗಪಡಿಸಲು 50,000 ರೂ. ಕೇಳಿದ ಡಿಫರೆಂಟ್‌ ಕಳ್ಳ..!

ಕಳ್ಳನು ತನ್ನ ಸ್ಥಳವನ್ನು ಬಹಿರಂಗಪಡಿಸಲು 500 ಪೌಂಡ್‌ ಕೋರಿ ಮಾಲೀಕರಿಗೆ ಟೆಕ್ಸ್ಟ್‌ ಸಂದೇಶಗಳನ್ನು ಕಳುಹಿಸಿದ್ದಾನೆ. ಆದರೆ, ಕಾರನ್ನು ಹಿಂತಿರುಗಿಸಿ ಅಥವಾ ಪೊಲೀಸರಿಗೆ ಕಂಪ್ಲೇಂಟ್‌ ನೀಡುವುದಾಗಿ ಬೇಟ್ಸನ್ ಎಚ್ಚರಿಸಿದರು.

news18-kannada
Updated:April 19, 2021, 5:04 PM IST
ಟೆಸ್ಟ್ ಡ್ರೈವ್ ನಂತರ ಯುಕೆಯಲ್ಲಿ ಕಾರು ಕಳ್ಳತನ: ಕಾರಿನ ಸ್ಥಳ ಬಹಿರಂಗಪಡಿಸಲು 50,000 ರೂ. ಕೇಳಿದ ಡಿಫರೆಂಟ್‌ ಕಳ್ಳ..!
ಪ್ರಾತಿನಿಧಿಕ ಚಿತ್ರ.
  • Share this:
ಇಂಗ್ಲೆಂಡ್‌ನಲ್ಲಿ ವಂಚಕನೊಬ್ಬ ಟೆಸ್ಟ್ ಡ್ರೈವ್‌ಗಾಗಿ ವ್ಯಕ್ತಿಯೊಬ್ಬನ ಕಾರನ್ನು ತೆಗೆದುಕೊಂಡು ಹೋಗಿ ನಂತರ ಅದರ ಸ್ಥಳವನ್ನು ಬಹಿರಂಗಪಡಿಸಲು 500 ಪೌಂಡ್ (50,000 ರೂ.) ಬೇಡಿಕೆಯ ಸಂದೇಶವನ್ನು ಕಳುಹಿಸಿದ ವಿಲಕ್ಷಣ ಘಟನೆ ನಡೆದಿದೆ.  ವಾಹನವನ್ನು ಮಾರಾಟಕ್ಕೆ ಇಟ್ಟಿದ್ದ ಕಾರ್ ಮಾಲೀಕರು,   ತನ್ನ ಕಾರಿನ ಟೆಸ್ಟ್‌ ಡ್ರೈವ್‌ ನೀಡುವ ಮೊದಲು ಡ್ರೈವಿಂಗ್ ಲೈಸೆನ್ಸ್ ಕೇಳುವ ಬಗ್ಗೆ ತಾನು ತಲೆ ಕೆಡಿಸಿಕೊಳ್ಳಲಿಲ್ಲ ಎಂದು ಕಾರು ಕಳೆದುಕೊಂಡ ವ್ಯಕ್ತಿ ಹೇಳಿಕೊಂಡಿದ್ದಾರೆ. ವಂಚಕ ಅದರ ಲಾಭ ಪಡೆದುಕೊಂಡು  ವೆಸ್ಟ್ ಮಿಡ್‌ಲ್ಯಾಂಡ್‌ನಲ್ಲಿರುವ ತನ್ನ ಮನೆಯ ಹೊರಗಿನಿಂದ ವಾಹನವನ್ನು ಕದ್ದನು ಎಂದೂ ಅವಲತ್ತುಕೊಂಡಿದ್ದಾರೆ.

"ನಾನು ಸಾಕಷ್ಟು ಆಘಾತಕ್ಕೊಳಗಾಗಿದ್ದೇನೆ ಮತ್ತು ನಡುಗುತ್ತಿದ್ದೇನೆ, ನಮ್ಮಿಂದ ಆ ಲಾಭವನ್ನು ಪಡೆದುಕೊಳ್ಳಲಾಗಿದೆ" ಎಂದು 27 ವರ್ಷದ ಜೇಕ್ ಬೇಟ್ಸನ್ ಬರ್ಮಿಂಗ್‌ಹ್ಯಾಮ್‌ ಲೈವ್‌ಗೆ ತಿಳಿಸಿದರು. ತಾವು ಮೊದಲು ಆತನ ಚಾಲಕರ ಪರವಾನಗಿಯನ್ನು ಕೇಳಬೇಕಾಗಿತ್ತು ಎಂದು ಹೇಳಿದರು.

ಬೇಟ್ಸನ್ ಅವರು ತಮ್ಮ ವಾಹನವನ್ನು ಮಾರಾಟ ಮಾಡಲು ಬಯಸಿದ್ದರು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಅದರ ಬಗ್ಗೆ ಜಾಹೀರಾತು ನೀಡಿರುವುದಾಗಿ ಹೇಳಿದರು. ಏಪ್ರಿಲ್ 12 ರಂದು, ಖರೀದಿದಾರನಂತೆ ಬಂದ ಕಳ್ಳ ತನ್ನನ್ನು ಸಂಪರ್ಕಿಸಿ, ಹಿಂದಿನ ಪ್ರಯಾಣಿಕರ ಸೀಟಿನಲ್ಲಿ ಬೇಟ್ಸನ್ ಅವರೊಂದಿಗೆ ಟೆಸ್ಟ್ ಡ್ರೈವ್‌ಗಾಗಿ ವಾಹನವನ್ನು ತೆಗೆದುಕೊಂಡರು. ಟೆಸ್ಟ್ ಡ್ರೈವ್ ನಂತರ, ಶಂಕಿತನು ವಾಹನದಿಂದ ನಿರ್ಗಮಿಸುತ್ತಾನೆಂದು ಭಾವಿಸಿದನು ಆದರೆ ನಾನು ಕಾರಿನ ಬಾಗಿಲು ತೆಗೆದು ಇಳಿಯುತ್ತಿದ್ದಂತೆ ಆತ ಕಾರಿನ ಬಾಗಿಲು ಹಾಗೇ ತೆರೆದಿದ್ದರೂ ಕಾರನ್ನು ಓಡಿಸಿಕೊಂಡು ಎತ್ತಿಕೊಂಡು ಹೋಗಿದ್ದಾನೆ" ಎಂದು ಬೇಟ್ಸನ್ ಹೇಳಿದರು.

ಬೇಟ್ಸನ್ ಅವರು ತಮ್ಮ ವಾಹನವನ್ನು ಮಾರಾಟ ಮಾಡಲು ಬಯಸಿದ್ದರು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಅದರ ಬಗ್ಗೆ ಜಾಹೀರಾತು ನೀಡಿದ್ದಾರೆ ಎಂದು ಹೇಳಿದರು. ಏಪ್ರಿಲ್ 12 ರಂದು, ನಕಲಿ ಖರೀದಿದಾರನಂತೆ ನಟಿಸುತ್ತಿರುವ ವ್ಯಕ್ತಿಯೊಬ್ಬರು ಅವರನ್ನು ಸಂಪರ್ಕಿಸಿ, ಹಿಂದಿನ ಪ್ರಯಾಣಿಕರ ಸೀಟಿನಲ್ಲಿ ಬೇಟ್ಸನ್ ಅವರೊಂದಿಗೆ ಟೆಸ್ಟ್ ಡ್ರೈವ್​ಗಾಗಿ ವಾಹನವನ್ನು ತೆಗೆದುಕೊಂಡರು.

ನಂತರ, ಕಳ್ಳನು ತನ್ನ ಸ್ಥಳವನ್ನು ಬಹಿರಂಗಪಡಿಸಲು 500 ಪೌಂಡ್‌ ಕೋರಿ ಮಾಲೀಕರಿಗೆ ಟೆಕ್ಸ್ಟ್‌ ಸಂದೇಶಗಳನ್ನು ಕಳುಹಿಸಿದ್ದಾನೆ. ಆದರೆ, ಕಾರನ್ನು ಹಿಂತಿರುಗಿಸಿ ಅಥವಾ ಪೊಲೀಸರಿಗೆ ಕಂಪ್ಲೇಂಟ್‌ ನೀಡುವುದಾಗಿ ಬೇಟ್ಸನ್ ಎಚ್ಚರಿಸಿದರು. ಪ್ರಾಸಿಕ್ಯೂಟ್ ಏಜೆನ್ಸಿಗಳಿಗೆ ಶಂಕಿತನ ವಿವರಣೆಯ ಪ್ರಕಾರ, ಅವರು 25 ರಿಂದ 35 ವರ್ಷದೊಳಗಿನ ಅಧಿಕ ತೂಕದ ಏಷ್ಯಾ ಮೂಲದ ವ್ಯಕ್ತಿ ಆಗಿದ್ದನು ಮತ್ತು ಕುಂಟುತ್ತಾ ನಡೆಯುತ್ತಿದ್ದನು ಎಂದು ಹೇಳಿದನು.

ವಾರಗಳ ಹಿಂದೆ, ಬೇಟ್ಸನ್‌ನ ಸ್ನೇಹಿತನ ಕಾರನ್ನು ಅದೇ ರೀತಿಯಲ್ಲಿ ಕಳವು ಮಾಡಲಾಗಿತ್ತು. ಇಬ್ಬರೂ ಕಳ್ಳತನವನ್ನು ಪೊಲೀಸರಿಗೆ ದೂರು ನೀಡಿದ್ದಾರೆ ಮತ್ತು ಅಧಿಕಾರಿಗಳು ಎರಡು ಪ್ರಕರಣಗಳು ಒಂದೇ ಅಪರಾಧಿಗೆ ಸಂಬಂಧಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Share Market: ಉಲ್ಬಣಿಸುತ್ತಿದೆ ಕೊರೋನಾ, ಲಾಕ್​ಡೌನ್ ಸಾಧ್ಯತೆ?; ಕುಸಿಯುತ್ತಿದೆ ಸೆನ್ಸೆಕ್ಸ್​ ಹಾಗೂ ರೂಪಾಯಿ ಮೌಲ್ಯ!ಕಳ್ಳತನದ ಬಗ್ಗೆ ಆಘಾತಕ್ಕೊಳಗಾಗಿರುವುದಾಗಿ ಬೇಟ್ಸನ್‌ ಅವರ ಸ್ನೇಹಿತ ಸುದ್ದಿವಾಹಿನಿಗೆ ತಿಳಿಸಿದರು. "ಸಾಂಕ್ರಾಮಿಕದ ಮಧ್ಯದಲ್ಲಿ ಕಾರನ್ನು ಕದಿಯುವುದು - ಇದರಿಂದ ನೀವು ಜನರ ಮೇಲೆ ಸ್ವಲ್ಪ ನಂಬಿಕೆಯನ್ನು ಕಳೆದುಕೊಳ್ಳುತ್ತೀರಿ" ಎಂದು 32 ವರ್ಷದ ವ್ಯಕ್ತಿ ಹೇಳಿದರು.

ಮೂರು ಬಾರಿ ಕಾರು ಕಳೆದುಕೊಂಡಿರುವ ಬೇಟ್ಸನ್‌..!ಇನ್ನೊಂದೆಡೆ,  "ಸಂಪೂರ್ಣವಾಗಿ ಜರ್ಜರಿತ, ನಿರುಪಯುಕ್ತ ಮತ್ತು ಸುಳ್ಳು ನಂಬರ್‌ ಪ್ಲೇಟ್‌ಗಳೊಂದಿಗೆ'' ತನ್ನ ಕಾರು ಕೆಲವು ದಿನಗಳ ನಂತರ ಕಂಡುಬಂದಿದೆ ಎಂದು ಬೇಟ್ಸನ್ ಹೇಳಿದ್ದಾರೆ. 2016 ರ ಡಿಸೆಂಬರ್ ಮತ್ತು 2017 ರ ಜನವರಿಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ತನ್ನ ಇತರ ಎರಡು ಕಾರುಗಳನ್ನು ಸಹ ಕಳವು ಮಾಡಲಾಗಿತ್ತು ಎಂದು ಬೇಟ್ಸನ್‌ ಬಹಿರಂಗಪಡಿಸಿದ್ದಾರೆ.
Published by: MAshok Kumar
First published: April 19, 2021, 5:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories