ಸಾಮಾಜಿಕ ಮಾಧ್ಯಮಗಳಲ್ಲಿ (Social Media) ನಮಗೆ ತುಂಬಾನೇ ವಿಚಿತ್ರ ಎಂದು ಅನ್ನಿಸುವಂತಹ ಅನೇಕ ವಿಷಯಗಳ ಕುರಿತ ವೀಡಿಯೋಗಳು (Video) ಹರಿದಾಡುತ್ತಿರುತ್ತವೆ. ಕೆಲವೊಂದು ನಾವು ಊಹಿಸುವುದಕ್ಕೂ ಸಾಧ್ಯವಾಗದ ರೀತಿಯಲ್ಲಿ ಇರುತ್ತವೆ, ಇನ್ನೂ ಕೆಲವು ಹಾಸ್ಯಾಸ್ಪದ (Ridiculous) ವಾಗಿರುತ್ತವೆ. ಹೆಚ್ಚಾಗಿ ಜನರು ಇಷ್ಟ ಪಡುವುದು ಮತ್ತು ವೈರಲ್ (Viral) ಆಗುವುದು ಎಂದರೆ ಈ ತಮಾಷೆ (Funny) ಘಟನೆಗಳ ವೀಡಿಯೋಗಳು ಮತ್ತು ಊಹಿಸುವುದಕ್ಕೂ ಸಾಧ್ಯವಾಗದಿರುವ ವಿಷಯಗಳವೀಡಿಯೋಗಳಿಂದಾಗಿಎಂದು ಹೇಳಿದರೆ ತಪ್ಪಾಗುವುದಿಲ್ಲ. ಪ್ರಪಂಚದಾದ್ಯಂತ ಅನೇಕ ಆಸಕ್ತಿದಾಯಕ ಮತ್ತು ವಿಚಿತ್ರ ಸಂಗತಿಗಳು (Strange stuff) ಸದಾ ಕಾಲ ನಡೆಯುತ್ತಿರುತ್ತವೆ. ಇಂತಹ ವಿಚಿತ್ರವಾದ ಸುದ್ದಿಗಳನ್ನು ಜೀರ್ಣಿಸಿಕೊಳ್ಳುವುದು ತುಂಬಾನೇ ಕಷ್ಟದ ವಿಷಯ ಎಂದು ಹೇಳಬಹುದು.
ನಮ್ಮ ಗಮನವನ್ನು ಸೆಳೆದ ಅಂತಹ ಇತ್ತೀಚಿನ ಒಂದು ಘಟನೆಯ ಎಂದರೆ ಬಹುತೇಕರಿಗೆ ಇಷ್ಟವಾಗುವ ಆಲೂಗಡ್ಡೆ ಚಿಪ್ಸ್ ನಲ್ಲಿರುವ ಬರೀ ಒಂದು ಚಿಪ್ಸ್ ಅನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದ್ದು ಎಂದು ಹೇಳಬಹುದು.
ಈ ಚಿಪ್ಸಿನ ವಿಶೇಷತೆ ಏನು?
ಸಾಮಾನ್ಯವಾಗಿ ಆಲೂಗಡ್ಡೆ ಚಿಪ್ಸ್ ಪ್ಯಾಕ್ 5 ರೂಪಾಯಿಂದ ಶುರುವಾಗಿ 10, 20ರೂಗೆ ಸಿಗಬಹುದು. ಆದರೆ ಈ ಪ್ಯಾಕೆಟ್ ನಲ್ಲಿರುವ ಬರೀ ಒಂದು ಚಿಪ್ಸ್ ಗೆ ನೂರಲ್ಲ, ಸಾವಿರ ಅಲ್ಲ ಬರೋಬ್ಬರಿ 1.63 ಲಕ್ಷ ರೂಪಾಯಿಗಳಿಗೆ ಖರೀದಿಸಲಾಗಿದೆ.
ಯುಕೆ ಮೂಲದ ವ್ಯಕ್ತಿಯೊಬ್ಬರು ಪ್ರಿಂಗಲ್ಸ್ ಚಿಪ್ಸ್ ನ ಪ್ಯಾಕೆಟ್ ನಲ್ಲಿರುವ ಒಂದು ಚಿಪ್ಸ್ ಅನ್ನು 2,000 ಯೂರೋಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇಷ್ಟೆಲ್ಲಾ ದುಡ್ಡಿಗೆ ಮಾರಟ ಮಾಡುವಂತದ್ದು ಏನಿದೆ ಎಂದು ತಲೆಯಲ್ಲಿ ಪ್ರಶ್ನೆ ಬಂದಿರಬಹುದು. ಇದರ ಹಿಂದಿನ ಕಾರಣವನ್ನು ನೀವು ಕೇಳಿದರೆ ತುಂಬಾನೇ ಆಶ್ಚರ್ಯಪಡುತ್ತೀರಿ.
ಭಾರತೀಯ ಮೌಲ್ಯದಲ್ಲಿ 73 ಲಕ್ಷ ರೂಪಾಯಿಗಳಿಗೆ ಮಾರಾಟವಾದ ಚಿಪ್ಸ್!
ಸುದ್ದಿ ಮಾಧ್ಯಮದ ಪ್ರಕಾರ, ಬಕಿಂಗ್ಹ್ಯಾಮ್ಶೈರ್ ಮಾರಾಟಗಾರನು ಈ ಆಹಾರ ಪದಾರ್ಥವನ್ನು ಮೇ 3 ರಂದು ಇಬೇಯಲ್ಲಿ ಮಾರಾಟಕ್ಕೆ ಇಟ್ಟಿದ್ದಾನೆ. ಸೇಲ್ ಗಾಗಿ ನೀಡಲಾಗುತ್ತಿರುವ ಪ್ರಿಂಗಲ್ ಆಲೂಗಡ್ಡೆ ಚಿಪ್ಸ್ ಹುಳಿ, ಕ್ರೀಮ್ ಮತ್ತು ಈರುಳ್ಳಿ ಪರಿಮಳದ ಚಿಪ್ಸ್ ಆಗಿದೆ. ಚಿಪ್ಸ್ ಒಂದು "ಹೊಚ್ಚ ಹೊಸ, ಬಳಸದ, ತೆರೆಯದ ಮತ್ತು ಹಾನಿಗೊಳಗಾಗದ" ಪದಾರ್ಥ ಎಂದು ಮಾರಾಟಗಾರ ಹೇಳುತ್ತಾನೆ.
ಇದನ್ನೂ ಓದಿ: Electric Auto Tour: ಎಲೆಕ್ಟ್ರಿಕ್ ಆಟೋದಲ್ಲೇ ಯುವಕನ ಪ್ರವಾಸ! ಭೇಷ್, ಭೇಷ್ ಎಂದ ಆನಂದ್ ಮಹೀಂದ್ರಾ
ವಿಲಕ್ಷಣ ಚಿಪ್ಸ್ ಸಾಕಷ್ಟು ಆಸಕ್ತಿದಾಯಕವಲ್ಲವೇ? ನಮ್ಮ ಸಾಮಾನ್ಯ ಪ್ಯಾಕೆಟ್ ನಿಂದ ತೆಗೆದುಕೊಂಡು ಜನರು ಪದಾರ್ಥಗಳನ್ನು ಆನ್ಲೈನ್ ನಲ್ಲಿ ಇಬೇಯಲ್ಲಿ ಮಾರಾಟಕ್ಕೆ ಇಡುತ್ತಿರುವುದು ಇದೇ ಮೊದಲ ಬಾರಿಗೆ ಅಲ್ಲ. ಇತ್ತೀಚೆಗೆ, ಮೆಕ್ಡೊನಾಲ್ಡ್ ಚಿಕನ್ನಜೆಟ್ಅನ್ನು ಸಹ 73 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಯಿತು. ಇದರ ಹಿಂದಿನ ಕಾರಣ ನಿಮ್ಮನ್ನು ಇನ್ನಷ್ಟು ಆಶ್ಚರ್ಯ ಗೊಳಿಸಬಹುದು.
ಅಮೆರಿಕದ ಉತಾಹ್ ನಲ್ಲಿ ವಾಸಿಸುವ 'ಪೊಲಿಜ್ನಾ' ಎಂಬ ಬಳಕೆದಾರರು ಈ ಪದಾರ್ಥವನ್ನು ಮಾರಾಟ ಮಾಡಿದ್ದಾರೆ. ಇಬೇಯಲ್ಲಿ ಚಿಕನ್ನಜೆಟ್ನ ಬಿಡ್ಡಿಂಗ್ ಎರಡು ದಿನಗಳವರೆಗೆ ಮುಂದುವರಿಯಿತು, ಅಲ್ಲಿ ಅಂತಿಮವಾಗಿ ಅದನ್ನು 99,997 ಅಮೆರಿಕನ್ ಡಾಲರ್ ಎಂದರೆ ಭಾರತೀಯ ಮೌಲ್ಯದಲ್ಲಿ 73 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಯಿತು.
ಮೆಕ್ಡೊನಾಲ್ಡ್ ನಲ್ಲಿ ಚಿಕನ್ ನಗೆಟ್ ಗೆ ಬಾರಿ ಬೇಡಿಕೆ
ಚಿಕನ್ ನಗೆಟ್ ಗೆ ಇಷ್ಟೊಂದು ಬೇಡಿಕೆ ಬರಲು ಎರಡು ಕಾರಣಗಳಿದ್ದವು. ಮೊದಲನೆಯದಾಗಿ, ಇದು ಮೆಕ್ಡೊನಾಲ್ಡ್ ಬಿಟಿಎಸ್ ಊಟದ ಒಂದು ಭಾಗವಾಗಿತ್ತು. ಎರಡನೆಯದಾಗಿ, ಚಿಕನ್ ನಗೆಟ್ ನ ಆಕಾರವು ಸಾಕಷ್ಟು ವಿಶಿಷ್ಟವಾಗಿತ್ತು ಮತ್ತು ಜನಪ್ರಿಯ ಆಟ 'ಅಬಂಗ್ ಅಸ್' ನ ಪಾತ್ರವನ್ನು ನಿಕಟವಾಗಿ ಹೋಲುವಂತಿತ್ತು. ಈ ಎರಡು ಅಂಶಗಳು ಬೆಲೆಯನ್ನು ಸುಮಾರು 100,000 ಯುಎಸ್ ಡಾಲರ್ ಗಳಿಗೆ ಏರಿಸಿದವು ಎಂದು ಹೇಳಬಹುದು.
ಇದನ್ನೂ ಓದಿ: Viral News: ಚಿಕ್ಕೋಳಿದ್ದಾಗ ಮಕ್ಕಳು ನೋಡಿ ನಗ್ತಿದ್ರು, ಈಗ ಈಕೆಯ ಕಣ್ಣಿಗೆ ದುನಿಯಾ ಫಿದಾ
ಚಿಕನ್ ನಗೆಟ್ ಅಭಿಮಾನಿಗಳು ಈ ಕುರುಕಲು ತಿಂಡಿಯನ್ನು ಬಾಹ್ಯಾಕಾಶಕ್ಕೆ ಸಹ ಕಳುಹಿಸಲಾಗಿದೆ ಎಂದು ನೆನಪಿಸಿಕೊಳ್ಳುತ್ತಾರೆ. ಅಕ್ಟೋಬರ್ 2020ರಲ್ಲಿ, ಬ್ರಿಟಿಷ್ ಸೂಪರ್ ಮಾರ್ಕೆಟ್ ನ ಐಸ್ಲ್ಯಾಂಡ್ ಫುಡ್ಸ್ ತಮ್ಮ 50ನೇ ಹುಟ್ಟುಹಬ್ಬದ ಆಚರಣೆಯ ಭಾಗವಾಗಿ ಚಿಕನ್ ನಗೆಟ್ ಅನ್ನು ಕಳುಹಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ