HOME » NEWS » Trend » UK MAN ORDERS APPLES FROM GROCERY STORE RECEIVES AN IPHONE IN SURPRISING TWIST HG

ಏನು ಅದೃಷ್ಟ ಗುರು!; ಸೇಬುಹಣ್ಣು​ ಆರ್ಡರ್ ಮಾಡಿದವನಿಗೆ ಬಂದಿದ್ದು ಐಫೋನ್​!

ಲಂಡನ್​ ಟ್ವಿಂಕನ್​ ಹ್ಯಾಮ್​​ ಮೂಲದ ನಿಕ್​ ಜೇಮ್ಸ್​ ಎಂಬ 50 ವರ್ಷದ ವ್ಯಕ್ತಿ ಟೆಸ್ಕೊ ಎನ್ನುವ ಇ-ಕಾಮರ್ಸ್​ ಮಳಿಗೆಯ ಮೂಲಕ ತರಕಾರಿ ಜೊತೆಗೆ ಸೇಬುಹಣ್ಣು ಆರ್ಡರ್​ ಮಾಡಿದ್ದಾನೆ.

news18-kannada
Updated:April 16, 2021, 5:01 PM IST
ಏನು ಅದೃಷ್ಟ ಗುರು!; ಸೇಬುಹಣ್ಣು​ ಆರ್ಡರ್ ಮಾಡಿದವನಿಗೆ ಬಂದಿದ್ದು ಐಫೋನ್​!
ಐಫೋನ್​ 12 ಪ್ರೊ
  • Share this:
ಅನೇಕರು ಆನ್​ಲೈನ್​ ಶಾಪಿಂಗ್​ ಮಾಡುವ ಮೂಲಕ ಇಷ್ಟವಾದ ವಸ್ತುಗಳನ್ನು ಆರ್ಡರ್​ ಮಾಡುತ್ತಾರೆ. ಹಣ್ಣು, ಆಹಾರ, ಬಟ್ಟೆ, ಎಲೆಕ್ಟ್ರಾನಿಕ್ಸ್​ ವಸ್ತುಗಳನ್ನ ಆರ್ಡರ್​ ಮಾಡುತ್ತಾರೆ. ಅದರಂತೆ ಇಲ್ಲೊಬ್ಬ ವ್ಯಕ್ತಿ ತರಕಾರಿ ಜೊತೆಗೆ ಸೇಬು ಹಣ್ಣನ್ನು ಆರ್ಡರ್​ ಮಾಡಿದ್ದಾನೆ. ಆದರೆ ಬಂದ ವಸ್ತು ನೋಡಿ ಅಚ್ಚರಿಗೊಂಡು ಕುಣಿದು ಕುಪ್ಪಳಿಸಿದ್ದಾನೆ.

ಹೌದು. ಲಂಡನ್​ ಟ್ವಿಂಕನ್​ ಹ್ಯಾಮ್​​ ಮೂಲದ ನಿಕ್​ ಜೇಮ್ಸ್​ ಎಂಬ 50 ವರ್ಷದ ವ್ಯಕ್ತಿ ಟೆಸ್ಕೊ ಎನ್ನುವ ಇ-ಕಾಮರ್ಸ್​ ಮಳಿಗೆಯ ಮೂಲಕ ತರಕಾರಿ ಜೊತೆಗೆ ಸೇಬುಹಣ್ಣು ಆರ್ಡರ್​ ಮಾಡಿದ್ದಾನೆ. ಆತ ಆರ್ಡರ್​ ಮಾಡಿದಂತೆ ನಿಗದಿತ ಸಮಯಕ್ಕೆ ತರಕಾರಿ ಮನೆಯ ಬಂದಿದೆ. ಆದರೆ ಸೇಬು ಇರಬೇಕಾದ ಜಾಗದಲ್ಲಿ ದುಬಾರಿ ಎನಿಸಿರುವ ಐಫೋನ್​ ಇರಿಸಲಾಗಿತ್ತು. ಆರ್ಡರ್​ ಮಾಡಿದ್ದು ಸೇಬುಹಣ್ಣು ಬಂದದ್ದು ಮಾತ್ರ ಐಫೊನ್ ಎಂದ ನಿಕ್​ ಜೇಮ್ಸ್​ ಅಚ್ಚರಿಗೊಳ್ಳುದಲ್ಲದೆ, ಕುಣಿದು ಕುಪ್ಪಳಿಸಿದ್ದಾನೆ.

ನಂತರ ಆತನ ಮನಸ್ಸು ತಡೆಯದೆ ತಾನು ಆರ್ಡರ್​ ಮಾಡಿರುವ ಕಂಪನಿಗೆ ಕರೆ ಮಾಡಿ ವಿಚಾರಿಸಿದ್ದಾನೆ. ಸೇಬು ಹಣ್ಣು ಆರ್ಡರ್​ ಮಾಡಿದ್ದಕ್ಕೆ ಐಫೋನ್​ ಬಂದಿದೆ ಎಂದು ಸ್ವತಃ ಹೇಳಿದ್ದಾನೆ. ನಂತರ ಟೆಸ್ಕೊ ಕಂಪನಿ ನಿಜ ಸಂಗತಿಯನ್ನು ಆತನ ಬಳಿ ಹೇಳಿಕೊಂಡಿದೆ.

ಮಾರುಕಟ್ಟೆಯನ್ನು ವಿಸ್ತರಿಸುವ ಸಲುವಾಗಿ ಟೆಸ್ಕೊ ಗ್ರಾಹಕರಿಗೆ ವಿಶೇಷ ಉಡುಗೊರೆ ನೀಡಲು ಮುಂದಾಗಿದೆ. ಅದರಲ್ಲು ದುಬಾರಿ ಎನಿಸಿಕೊಂಡಿರುವ ಐಫೋನ್ ನೀಡುತ್ತಿದೆ. ಒಟ್ಟಿನಲ್ಲಿ ಸೇಬು ಆರ್ಡರ್​ ಮಾಡಿವನಿಗೆ ಐಫೋನ್​ ದೊರೆತದ್ದು ಅದೃಷ್ಟ ಅಲ್ಲದೆ ಮತ್ತೇನು!.
Published by: Harshith AS
First published: April 16, 2021, 5:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories