• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Story: ಇವನಿಗೆ ಕಾರೇ ವೈಫ್, ಕಾರೇ ಲೈಫ್! ಕಾರುಗಳ ಮೇಲೆ ವಿಪರೀತ ಮೋಹ ಹೊಂದಿದ್ದ ವ್ಯಕ್ತಿಗೆ 5 ವರ್ಷ ಶಿಕ್ಷೆ!

Viral Story: ಇವನಿಗೆ ಕಾರೇ ವೈಫ್, ಕಾರೇ ಲೈಫ್! ಕಾರುಗಳ ಮೇಲೆ ವಿಪರೀತ ಮೋಹ ಹೊಂದಿದ್ದ ವ್ಯಕ್ತಿಗೆ 5 ವರ್ಷ ಶಿಕ್ಷೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇಲ್ಲೊಬ್ಬನಿಗೆ ಕಾರ್​​ ಅಂದ್ರೆ ಅಚ್ಚುಮೆಚ್ಚು. ಆದರೆ ದಿನ ಕಳೆದಂತೆ ಅದು ವ್ಯಸನವಾಗಿ ಬದಲಾಗಿದೆ. ಸದಾ ಕಾರಿನೊಟ್ಟಿಗೆ ಇರುವುದೇ ಒಂದು ಕಾಯಿಲೆಯಾಗಿದೆ. ಆದರೆ ಸದ್ಯ ಇದು ಸ್ವಲ್ಪ ಅತಿರೇಕವಾಗಿ ಜೈಲು ಶಿಕ್ಷೆಗೆ ಗುರಿಯಾಗಿರೋ ಘಟನೆ ಯುಕೆಯಲ್ಲಿ ನಡೆದಿದೆ.

  • Share this:

ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೊಂದು ವಸ್ತುಗಳ ಮೇಲೆಯೋ, ಪ್ರಾಣಿಗಳ ಮೇಲೆ ಒಲವು ಇದ್ದೇ ಇರುತ್ತದೆ. ಆದರೆ ಕೆಲವೊಬ್ಬರಿಗೆ ಇದು ಅತಿಯಾಹಗಿಯೇ ಇರುತ್ತದೆ. ಅದೇ ರೀತಿ ಇಲ್ಲೊಬ್ಬನಿಗೆ ಕಾರು (Car)​​ ಅಂದ್ರೆ ಅಚ್ಚುಮೆಚ್ಚು. ಆದರೆ ದಿನ ಕಳೆದಂತೆ ಅದು ವ್ಯಸನವಾಗಿ ಬದಲಾಗಿದೆ. ಸದಾ ಕಾರಿನೊಟ್ಟಿಗೆ ಇರುವುದು, ಅದನ್ನು ಸ್ವಚ್ಚವಾಗಿಡುವುದು, ಬಾಗಿಲು ತೆರೆದು ಮುಚ್ಚುವುದು ಹೀಗೆ ಮಾಡಿದ್ದಾನೆ. ಇದು ಸ್ವಲ್ಪ ಅತಿರೇಕವಾಗಿ ಜೈಲು ಶಿಕ್ಷೆಗೆ ( Imprisonment) ಗುರಿಯಾಗಿರೋ ಘಟನೆ ಯುಕೆಯಲ್ಲಿ ನಡೆದಿದೆ.


ಸಿಸಿಟಿವಿಯಲ್ಲಿ ಸೆರೆಯಾಯ್ತು ಪ್ರೀಸ್ಟ್ಲಿ ಗೀಳು


44 ವರ್ಷದ ಪ್ರಿಸ್ಟ್ಲೀ ಎಂಬಾತ ಗಾಂಜಾ ಸೇವನೆ ಮಾಡಿದ್ದಲ್ಲದೇ, ಸಾರ್ವಜನಿಕ ಸ್ಥಳಗಳಲ್ಲಿ ಚಾಕು ಹಿಡಿದುಕೊಂಡಿದ್ದ ಎಂಬ ಕಾರಣದಿಂದ ಈತನಿಗೆ 9 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.


ಪೆನ್ನಿಂಗ್​ಟನ್​​ನ ಪ್ರೀಸ್ಟ್ಲಿ ಮಾರ್ಚ್​ 27 ರಂದು ಪೀಟರ್​ ಬರೋದಲ್ಲಿ ಕಾರಿನ ಬಾಗಿಲು ತೆರೆಯಲು ಯತ್ನಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಗೆಂದು ಈತ ಜೈಲಿಗೆ ಇದೇ ಮೊದಲ ಬಾರಿಗೆ ಹೋಗಿರುವುದಲ್ಲ.


ಇದನ್ನೂ ಓದಿ: ಬಲ್ಗೇರಿಯಾದಲ್ಲಿ 'ಬೆಸ್ಟ್‌ ನ್ಯಾಷನಲ್‌ ಕಾಸ್ಟ್ಯೂಮ್‌' ಪ್ರಶಸ್ತಿ ಗೆದ್ದ ಭಾರತದ ಬೆಡಗಿ!


ಆಗಾಗ ಕಾರ್​ ಬಾಗಿಲ ಹ್ಯಾಂಡಲ್​​ಗಳನ್ನು ಹಿಡಿಯಲು ಪ್ರಯತ್ನಿಸಿದ್ದಾನೆ. ಈ ಕಾರಣದಿಂದ ಆತನನ್ನು ವ್ಯಸನಿ ಎಂದು ನ್ಯಾಯಾಲಯ ಹೇಳಿದೆ. ಜೊತೆಗೆ ಇನ್ನೊಮ್ಮೆ ಜೈಲಿಗೆ ಕಳಿಸಿದ ಘಟನೆ ಯುಕೆಯಲ್ಲಿ ನಡೆದಿದೆ.


ಕಾರ್​​ಡೋರ್​​​​​ ಹ್ಯಾಂಡಲ್​ ಗೀಳು


ಸುಮಾರು 5 ವರ್ಷಗಳ ಹಿಂದೆ ಅಂದರೆ 2018 ರಲ್ಲಿ ಈ ವ್ಯಕ್ತಿ ಅನುಮತಿಯಿಲ್ಲದೆ ಕಾರುಗಳನ್ನು ಮುಟ್ಟುತ್ತಿದ್ದರು. ಇದಕ್ಕೆ ನ್ಯಾಯಾಲಯ ಇನ್ನು ಮುಂದೆ ಕಾರುಗಳನ್ನು ಮುಟ್ಟುವಂತಿಲ್ಲ ಎಂದು ಆತನ ಮೇಲೆ ನಿಷೇಧ ಹೇರಿತ್ತು.


ಒಮ್ಮೆ ಹೇರಿದ ನಿಷೇಧ ಮುಗಿದ ಬಳಿಕ ಮತ್ತೆ ಈತನ ಕಾರಿನ ಗೀಳು ಮುಂದುವರೆದಿದೆ. ಈ ಕಾರಣದಿಂದ ಈ ಬಾರಿ ಅವನಿಗೆ 2027 ರವರೆಗೆ ನಿಷೇಧ ಹೇರಲಾಗಿದೆ.


ಪ್ರೀಸ್ಟ್ಲಿಗೆ ಬೇಕು ಚಿಕಿತ್ಸೆ


ಕಾರಿನ ಮೇಲೆ ಈತನಿಗಿರುವ ಗೀಳು ಕಾಯಿಲೆಗೆ ಚಿಕಿತ್ಸೆ ಅಗತ್ಯವಿದೆ. ಜೊತೆಗೆ ಆತನ ಇನ್ನಷ್ಟು ತಪ್ಪುಗಳನ್ನು ತಡೆಯಲು ಜೈಲು ಶಿಕ್ಷೆಗೆ ಗುರಿ ಪಡಿಸಲಾಗಿದೆ. ಈ ಬಾರಿ ಕೂಡ ಹಿಂದಿನಂತೆ ವಾಹನಗಳನ್ನು ಮುಟ್ಟುವಂತಿಲ್ಲ ಎಂದು ಹೇಳಿದ್ದಾರೆ.


29 ವರ್ಷಗಳ ಕ್ರಿಮಿನಲ್ ದಾಖಲೆ


ಪ್ರೀಸ್ಟ್ಲಿ 29 ವರ್ಷಗಳ ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದಾರೆ. ಅದರಲ್ಲಿ ಕಳ್ಳತನದ ಅಪರಾಧಗಳು ಸೇರಿವೆ. ಇದಕ್ಕೆ ಆತನಿಗಿರುವ ಕಾರುಗಳ ಗೀಳು ಮುಖ್ಯ ಕಾರಣವಾಗಿದೆ.


ಈತನಿಗೆ ಓಸಿಡಿ ಅಂದರೆ ಅಬ್ಸೆಸೀವ್​ ಕಂಪಲ್​ಷನ್​ ಡಿಸಾರ್ಡರ್​ ಸಮಸ್ಯೆ ಇದೆ. ಅಂದರೆ ಸದಾ ಶುದ್ಧವಾಗಿಟ್ಟುಕೊಳ್ಳುವ ಮಾನಸಿಕ ಸ್ಥಿತಿ. ಈತ ಈಗ ಇದೇ ಸ್ಥಿತಿಯಲ್ಲಿದ್ದಾನೆ.


ಕಾರುಗಳನ್ನು ಕಲ್ಪಿಸಿಕೊಳ್ಳುವುದು, ಅದನ್ನು ಸ್ವಚ್ಚ ಮಾಡುವುದು, ಶುದ್ಧವಾಗಿ ಇಡುವುದು, ಕಾರಿನ ಜೊತೆ ಸಮಯ ಕಳೆಯುವುದು, ಅದರ ಬಾಗಿಲನ್ನು ಆಗಾಗ ಪರಿಶೀಲಿಸುವುದು ಹೀಗೆ ಪುನಾರವರ್ತಿತ ನಡವಳಿಕೆ ಅವನಲ್ಲಿದೆ.


ಏನಿದು ಓಸಿಡಿ?


ಈ ಕಾಯಿಲೆಯ ವಿಪರೀತವು ಮನುಷ್ಯನ ದೈಹಿಕ ಮತ್ತು ಮಾನಸಿಕ ಸಮಸ್ಯೆಗೆ ಮೂಲವಾಗುತ್ತದೆ. ಸದಾ ಕೈ ತೊಳೆಯುವುದು. ಇಲ್ಲವೇ ತಮ್ಮಿಷ್ಟದ ವಸ್ತುಗಳನ್ನು ಯಾವಾಗಲೂ ಸ್ವಚ್ಛವಾಗಿಡುವುದಕ್ಕೆ ಪ್ರಯತ್ನಿಸುವುದು. ನೀರಿನಲ್ಲೇ ಹೆಚ್ಚು ಹೊತ್ತು ಕಳೆಯುವುದು ಇದರ ಲಕ್ಷಣವಾಗಿದೆ. ಇದೊಂದು ಮಾನಸಿಕ ಸ್ಥಿತಿಯಾಗಿದ್ದು ನಿಧಾನಕ್ಕೆ ಚಿಕಿತ್ಸೆ ಮತ್ತು ಸರಿಯಾದ ಮಾರ್ಗದರ್ಶನದಿಂದ ಹೊರಗೆ ಬರಬೇಕು.


ಕಾರಿನ ಮೋಹ


ಕೆಲವು ವ್ಯಕ್ತಿಗಳಿಗೆ ಕಾರುಗಳೆಂದರೆ ಕೇವಲ ವಾಹನವಲ್ಲ. ಅದರೊಟ್ಟಿಗೆ ಭಾವನಾತ್ಮಕ ಅನುಬಂಧಗಳಿರುತ್ತವೆ. ಈ ನಿಟ್ಟಿನಲ್ಲಿ ಅವರಿಗೆ ಮಧುರ ನೆನಪುಗಳಿರಬಹುದು. ಸಂತೋಷದ ವಿಷಯಗಳಿರಬಹುದು. ಇದೆಲ್ಲವೂ ಕಾರುಗಳನ್ನು ಬಹಳ ಪೊಸೆಸೀವ್​ ಆಗಿ ನೋಡುವಂತೆ ಮಾಡುತ್ತದೆ.




ಸಾರ್ವಜನಿಕ ಸ್ಥಳದಲ್ಲಿ ಹರಿತ ವಸ್ತು ಇಟ್ಟುಕೊಳ್ಳುವುದು ಯುಕೆಯಲ್ಲಿ ಗಂಭೀರ ಅಪರಾಧ. ಇದಕ್ಕೆ 4 ವರ್ಷಗಳ ಶಿಕ್ಷೆಯೂ ಇದೆ. ಅಲ್ಲದೇ ಪ್ರೀಸ್ಟ್ಲಿ ಗಾಂಜಾವನ್ನು ಸಹ ಹೊಂದಿದ್ದರು. ಇದು ಕೂಡ ಕ್ರಿಮಿನಲ್ ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ವಾಹನವನ್ನು ಸರಿಯಾಗಿ ಲಾಕ್​ ಮಾಡಬೇಕು ಮತ್ತು ಬೆಲೆ ಬಾಳುವ ವಸ್ತುವನ್ನು ಕಾರಿನಲ್ಲಿ ಇಡಬಾರದು ಎನ್ನುತ್ತಾರೆ.

First published: