Viral News: ಒಂದೇ ಕಾಂಡದಲ್ಲಿ 1,269 ಟೊಮೆಟೊಗಳನ್ನು ಬೆಳೆದು ಹೊಸ ದಾಖಲೆ ಬರೆದ ಯುಕೆ ವ್ಯಕ್ತಿ..!

ಡೌಗ್ಲಾಸ್ ಒಂದು ಗಿಡದ ಕಾಂಡದಲ್ಲಿ ಸುಮಾರು 1,269 ಚೆರ್ರಿ ಟೊಮೆಟೊಗಳು ಬೆಳೆದಿರುವುದನ್ನು ಕಂಡು ಕೊಂಡರು. ಅವರು ತಮ್ಮದೇ ಹೆಸರಿನಲ್ಲಿರುವ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಟೊಮೆಟೊ ಗಿಡದ ಜೊತೆ ಡೌಗ್ಲಾಸ್

ಟೊಮೆಟೊ ಗಿಡದ ಜೊತೆ ಡೌಗ್ಲಾಸ್

  • Share this:
ಕೆಲವೊಬ್ಬರು ತಮಗಿರುವ ಕೌಶಲ್ಯಗಳನ್ನು ಪೂರ್ತಿಯಾಗಿ ಬಳಸಿಕೊಂಡು ಏನೆಲ್ಲಾ ಮಾಡುತ್ತಾರೆ ಎನ್ನುವುದಕ್ಕೆ ಇಲ್ಲೊಂದು ಜ್ವಲಂತ ಸಾಕ್ಷಿಯಿದೆ ನೋಡಿ. ಇಲ್ಲೊಬ್ಬ ಯುಕೆಯ ಹರ್ಟ್‌ಫೋರ್ಡ್‌ಶೈರ್ ನ ಡೌಗ್ಲಾಸ್ ಸ್ಮಿತ್ ಎಂಬುವವರು ಒಂದೇ ಗಿಡದ ಕಾಂಡದಲ್ಲಿ ಅತೀ ಹೆಚ್ಚು ಟೊಮೆಟೊಗಳನ್ನು ಬೆಳೆದು ವಿಶ್ವ ದಾಖಲೆಯನ್ನು ಮಾಡಿದ್ದಾರೆ ಎಂದು ಹೇಳಬಹುದು. ಇದು ನಿನ್ನೆ ಮೊನ್ನೆಯ ಮಾತಲ್ಲ, ಸೆಪ್ಟೆಂಬರ್ 2021 ರಲ್ಲಿ, ತನ್ನ ಟೊಮೆಟೊ ಗಿಡಗಳನ್ನು ಕೊಯ್ಲು ಮಾಡುವಾಗ, ಡೌಗ್ಲಾಸ್ ಒಂದು ಗಿಡದ ಕಾಂಡದಲ್ಲಿ ಸುಮಾರು 1,269 ಚೆರ್ರಿ ಟೊಮೆಟೊಗಳು ಬೆಳೆದಿರುವುದನ್ನು ಕಂಡು ಕೊಂಡರು. ಅವರು ತಮ್ಮದೇ ಹೆಸರಿನಲ್ಲಿರುವ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೆಲವೇ ವಾರಗಳ ಹಿಂದೆ ಇವರು ಒಂದೇ ಕಾಂಡದಲ್ಲಿ 839 ಟೊಮೆಟೊಗಳನ್ನು ಬೆಳೆಸಿದ್ದರು. ಅದಕ್ಕೂ ಮೊದಲು ಒಂದು ಕಾಂಡದಲ್ಲಿ 488 ಟೊಮೆಟೊ ಗಳನ್ನು ಬೆಳೆಯಲಾಗಿತ್ತು ಮತ್ತು 10 ವರ್ಷಗಳ ಕಾಲ ಈ ದಾಖಲೆಯನ್ನು ಮುರಿಯಲಾಗಿರಲಿಲ್ಲ.

ದಾಖಲೆ ಬರೆದ ಡೌಗ್ಲಾಸ್ :

2020 ರಲ್ಲಿ ಯುಕೆಯಲ್ಲಿ ಅತಿದೊಡ್ಡ ಟೊಮೆಟೊ ದಾಖಲೆಯನ್ನು ಮುರಿದ ನಂತರ, 3.106 ಕೆಜಿ (6.85 ಎಲ್‌ಬಿ) ಟೊಮೆಟೊದೊಂದಿಗೆ, ನಾನು 2021 ಕ್ಕೆ ಹೊಸ ಸವಾಲನ್ನು ಕೋರಿದೆ ಎಂದು ಡೌಗ್ಲಾಸ್ ಈ ದಾಖಲೆಗೆ ಅರ್ಜಿ ಸಲ್ಲಿಸುವಾಗ ಹೇಳಿದ್ದರು. ಆದರೆ ವಿಶ್ವದ ಅತ್ಯಂತ ಭಾರವಾದ ಟೊಮೆಟೊ 2020 ರಲ್ಲಿ ಅಮೆರಿಕದ ಡಾನ್ ಸದರ್ಲ್ಯಾಂಡ್ ಬೆಳೆದ 10 ಎಲ್‌ಬಿ 12.7 ಓಜ್ ಎಂದರೆ ಇದು (4.896 ಕಿಲೋ ಗ್ರಾಂ) ತೂಕವನ್ನು ಹೊಂದಿತ್ತು ಎಂದು ಹೇಳಲಾಗುತ್ತಿದೆ.

ವೈಜ್ಞಾನಿಕವಾಗಿ ಟೊಮೆಟೊ ಕೃಷಿ:

ಈ ದಾಖಲೆಗಳಿಂದ ತೃಪ್ತರಾಗದ ಐಟಿ ಮ್ಯಾನೇಜರ್ ಡೌಗ್ಲಾಸ್, ವಿಶ್ವದಲ್ಲಿ ಅತ್ಯುತ್ತಮವಾಗಲು ತಮ್ಮ ಟೊಮೆಟೊ ಕೃಷಿ ವಿಧಾನಗಳಿಗೆ ವಿಶ್ಲೇಷಣಾತ್ಮಕ ವಿಧಾನವನ್ನು ಬಳಸಿಕೊಂಡರು ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಇವರು ವಿವಿಧ ವೈಜ್ಞಾನಿಕ ಪ್ರಬಂಧಗಳನ್ನು ಅಧ್ಯಯನ ಮಾಡಿದರು ಮತ್ತು ಪ್ರಯೋಗಾಲಯದಲ್ಲಿ ಪರೀಕ್ಷಿಸಲು ಮಣ್ಣಿನ ಮಾದರಿಗಳನ್ನು ಸಹ ತೆಗೆದು ಕೊಂಡು ಹೋದರು. ಅದು ಸರಿ ಹೋಗುವವರೆಗೆ ಸೂತ್ರವನ್ನು ಬದಲಿಸುತ್ತಾ ಪ್ರಯತ್ನಿಸುತ್ತಾ ಇದ್ದದೇ ಈ ದಾಖಲೆ ಮಾಡಲು ಕಾರಣವಾಯಿತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Ugadi Festival: ಯುಗಾದಿ ಸಂದರ್ಭ ಮಾವಿನ ಕಾಯಿ ಶೇಪ್​ನ ಮೊಟ್ಟೆ..! ಇದೇನಪ್ಪಾ ಹೊಸದು?

ಈ ದಾಖಲೆಯ ಟೊಮೆಟೊಗಳನ್ನು ಬೆಳೆಸಲು ಡೌಗ್ಲಾಸ್ ತನ್ನ ಮನೆಯ ಹಿಂಬದಿಯಲ್ಲಿರುವ ಹಸಿರುಮನೆಯನ್ನು ಬಳಸಿಕೊಂಡಿದ್ದರಂತೆ. ಅಲ್ಲಿ ಅವರು ವಾರಕ್ಕೆ ನಾಲ್ಕು ಗಂಟೆಗಳವರೆಗೆ ಈ ಕಾಂಡಗಳನ್ನು ನೋಡಿಕೊಳ್ಳಲು ಕಳೆಯುತ್ತಿದ್ದರು ಎಂದು ಹೇಳಲಾಗುತ್ತಿದೆ.

ಒಂದೇ ಕಾಂಡದಲ್ಲಿ 1,269 ಟೊಮೆಟೊ:

ಈ ದಾಖಲೆಯ ಟೊಮೆಟೊಗಳನ್ನು ಅಧಿಕೃತವಾಗಿ ತೋಟಗಾರಿಕಾ ತಜ್ಞರು ಬಂದು ಟೊಮೆಟೊಗಳನ್ನು ಏಣಿಕೆ ಮಾಡಿದರು ಎಂದು ಹೇಳಲಾಗುತ್ತಿದೆ. "ಟೊಮೆಟೊಗಳನ್ನು 10 ಪೆಟ್ಟಿಗೆಗಳಾಗಿ ಎಣಿಸಲಾಯಿತು ಮತ್ತು 10 ಪೆಟ್ಟಿಗೆಗಳನ್ನು ಒಂದು ಟ್ರೇನಲ್ಲಿ ಇರಿಸಲಾಯಿತು. ಪ್ರತಿ ಟ್ರೇಯಲ್ಲಿ 100 ಟೊಮೆಟೊಗಳಿದ್ದವು" ಎಂದು ಡೌಗ್ಲಾಸ್ ವಿವರಿಸಿದರು.

ಒಂದೇ ಕಾಂಡದಲ್ಲಿ ಬೆಳೆದಂತಹ ಒಟ್ಟು ಟೊಮೆಟೊಗಳ ಸಂಖ್ಯೆಯ 1,269 ಆಗಿದ್ದವು. ಇದು ಡೌಗ್ಲಾಸ್ ನ ಹಿಂದಿನ ದಾಖಲೆಗಿಂತ 430 ಹೆಚ್ಚು ಮತ್ತು 1997 ರಲ್ಲಿ ಬಿ ರೂಮ್ಸ್ ಸ್ಥಾಪಿಸಿದ 121 ರ ಮೂಲ ದಾಖಲೆಗಿಂತ 10 ಪಟ್ಟು ಹೆಚ್ಚಾಗಿದೆ.

ಇದನ್ನೂ ಓದಿ: Viral News: IPS ಆಫೀಸರ್​ ಬ್ಯಾಗ್ ಓಪನ್ ಮಾಡಿಸಿದ ಸೆಕ್ಯುರಿಟಿ, ಒಳಗಿದ್ದ ಐಟಂ ನೋಡಿ ಶಾಕ್

ಡೌಗ್ಲಾಸ್ ಕೇವಲ ಟೊಮೆಟೊಗಳನ್ನು ಬೆಳೆಯುವುದಿಲ್ಲ. ಅವರು ಇತ್ತೀಚೆಗೆ 6 ಮೀಟರ್(20 ಅಡಿ) ಅಳತೆಯ ಸೂಪರ್ ಸೈಜ್ ಸೂರ್ಯಕಾಂತಿಯನ್ನು ಬೆಳೆದಿದ್ದರು. ಆದಾಗ್ಯೂ ಅದು 2014 ರಲ್ಲಿ ಜರ್ಮನಿಯ ಹ್ಯಾನ್ಸ್ ಪೀಟರ್ ಶಿಫರ್ ಬೆಳೆದ 9.17 ಮೀಟರ್ (30 ಅಡಿ 1 ಇಂಚು) ಎತ್ತರವಿರುವ ಅತ್ಯಂತ ಎತ್ತರದ ಸೂರ್ಯಕಾಂತಿಯ ಎತ್ತರವನ್ನು ತಲುಪಲಿಲ್ಲ. ಇನ್ನು, ಡೌಗ್ಲಾಸ್ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂಸದರ್ಶನ ಒಂದರಲ್ಲಿ, ಈ ರೀತಿಯ ದೈತ್ಯ ವೆಜ್ ಮತ್ತು ದೈತ್ಯ ಬೆಳೆಗಳೊಂದಿಗೆ ಸಣ್ಣ ಪ್ರಯೋಗಗಳನ್ನು ನಡೆಸಲು ನಾನು ಇಷ್ಟಪಡುತ್ತೇನೆ ಎಂದು ಹೇಳಿದ್ದರು.

ಮತ್ತೊಂದು ವಿಶ್ವ ದಾಖಲೆಗೆ ಡೌಗ್ಲಾಸ್ ಕೆಲಸ:

ಈ ವರ್ಷ ಅವರು ಬಟಾಣಿ, ಬದನೆಕಾಯಿ ಮತ್ತು ಆಲೂಗಡ್ಡೆಯನ್ನು ಬೆಳೆಯುತ್ತಿದ್ದಾರೆ. ಪಾಡ್ ನಲ್ಲಿ ಹೆಚ್ಚು ಬಟಾಣಿಗಳ ದಾಖಲೆಯನ್ನು ನಾವು ಹೊಂದಿಲ್ಲವಾದರೂ, ವಿಶ್ವದ ಅತ್ಯಂತ ಭಾರವಾದ ಆಲೂಗಡ್ಡೆ ಮತ್ತು ಭಾರವಾದ ಬದನೆಕಾಯಿಯನ್ನು ಬೆಳೆಸಲು ಪ್ರಯತ್ನಿಸುತ್ತೇನೆ ಎಂದು ಡೌಗ್ಲಾಸ್ ತನ್ನ ಕೆಲಸದ ಬಗ್ಗೆ ಹೇಳುತ್ತಾರೆ. ಈ ಎರಡೂ ದಾಖಲೆಗಳು ಯುಕೆಯ ಹಿರಿಯ ತರಕಾರಿ ರೈತ ಪೀಟರ್ ಗ್ಲೇಜ್ ಬ್ರೂಕ್ ಹೊಂದಿದ್ದಾರೆ. ಪೀಟರ್ 2011 ರಲ್ಲಿ 4.98 ಕಿಲೋ ಗ್ರಾಂ ತೂಕದ ಆಲೂಗಡ್ಡೆ ಮತ್ತು 10 ವರ್ಷಗಳ ನಂತರ ಅತ್ಯಂತ ಭಾರವಾದ ಎಂದರೆ 3.12 ಕಿಲೋ ಗ್ರಾಂ ತೂಕದ ಬದನೆಕಾಯಿಯನ್ನು ಬೆಳೆದಿದ್ದರು.
Published by:shrikrishna bhat
First published: