Viral News: ಕೇವಲ 100 ರೂ.ಗೆ ಮನೆ ಖರೀದಿಸಿದ ದಂಪತಿ: ಅಷ್ಟಕ್ಕೂ ಕಡಿಮೆ ಬೆಲೆಗೆ ಮಾರಾಟವಾಗಿದ್ದೇಕೆ ಈ ಮನೆ?

ಮನೆಯಿಂದ ಹೊರ ಬಂದಾಗ ಬೀದಿಯಲ್ಲಿ ಕಸದ ರಾಶಿ ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಮನೆಯ ಮುಂದಿನ ಮತ್ತು ಹಿಂದಿನ ರಸ್ತೆಯಲ್ಲಿಯ ಕೊಳಕಿನಿಂದಲೇ ತಮಗೆ ಕೇವಲ 100 ರೂ.ಗೆ ಈ ಮನೆ ಸಿಕ್ಕಿದೆ ಎಂಬ ವಿಷಯ ತಿಳಿದಿದೆ.

ಮನೆ ಏರಿಯಾ

ಮನೆ ಏರಿಯಾ

  • Share this:
ಜಗತ್ತಿನಲ್ಲ ಎಲ್ಲರಿಗೂ ಸ್ವಂತ ಮನೆ (Own House) ಹೊಂದಬೇಕೆಂಬ ಆಸೆ ಇರುತ್ತದೆ. ಅದಕ್ಕಾಗಿ ತಮ್ಮ ಜೀವಮಾನದ ಸಂಪದಾನೆ(Income)ಯನ್ನು ಹೂಡಿಕೆ ಮಾಡುತ್ತಾರೆ. ಕಾರಣ ನಿವೃತ್ತಿ (Retirement) ಸಮಯದಲ್ಲಿ ಯಾರ ಮೇಲೆ ಅವಲಂಬಿತರಾಗದೇ ಸುಖಮಯ ಜೀವನ ಸಾಗಿಸೋದು ಎಲ್ಲರ ಕನಸು ಆಗಿರುತ್ತದೆ. ಇನ್ನೂ ಮನೆ ಕಟ್ಟುವ ಆಥವಾ ಖರೀದಿಸುವ ಮುನ್ನ ನೂರು ಬಾರಿ ಯೋಚನೆ ಮಾಡಲಾಗುತ್ತದೆ. ಆದರೆ ಇಲ್ಲೋರ್ವ ದಂಪತಿ (Couple) ಕೇವಲ 100 ರೂ.ಯಲ್ಲಿ ಮನೆಯನ್ನು ಖರೀದಿಸಿದ ಸಂಭ್ರಮದಲ್ಲಿದ್ದರು. ಆದರೆ ಮನೆಗೆ ಶಿಫ್ಟ್ ಆದ್ಮೇಲೆ ಅವರಿಗೆ ತಮಗಾದ ಮೋಸದ ಬಗ್ಗೆ ಗೊತ್ತಾಗಿದೆ. ಕಡಿಮೆ ಬೆಲೆಯಲ್ಲಿ ಮನೆಗಳು ಮಾರಾಟಕ್ಕೆ ಲಭ್ಯ ಅನ್ನೋ ಜಾಹೀರಾತು (Advertisement) ನೀಡಿ ಸ್ವಲ್ಪವೂ ಯೋಚನೆ ಮಾಡದೇ  ಖರೀದಿಸುತ್ತಾರೆ. ಖರೀದಿ ಬಳಿಕ ಅಲ್ಲಿಯ ಸಮಸ್ಯೆಗಳ ದರ್ಶನ ಅವರಿಗೆ ಕಾಣುತ್ತದೆ.

ಇಂಗ್ಲೆಂಡ್ ಮೂಲದ ದಂಪತಿ ಕಡಿಮೆ ಬೆಲೆ ಅಂತ ಹೇಳಿ ಮನೆ ಖರೀದಿಸಿದ್ದರು. ಆದರೆ ಮನೆಗೆ ಶಿಫ್ಟ್ ಆದ ನಂತರ ವಾಸ್ತವ ಅವರ ಮುಂದೆ ತೆರೆದುಕೊಂಡಿದೆ. ಇದೀಗ ಖರೀದಿಸಿದ ಮನೆ ತೊರೆಯಲೂ ಆಗದೇ, ಇರಲೂ ಆಗದ ಸ್ಥಿತಿಯಲ್ಲಿ ಸಿಲುಕಿದ್ದಾರೆ.

100 ರೂ.ಗೆ ಸಿಕ್ಕಿತ್ತು ಕೊಳಕು ರಸ್ತೆಯ ಮನೆ

ಮನೆಯಿಂದ ಹೊರ ಬಂದಾಗ ಬೀದಿಯಲ್ಲಿ ಕಸದ ರಾಶಿ ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಮನೆಯ ಮುಂದಿನ ಮತ್ತು ಹಿಂದಿನ ರಸ್ತೆಯಲ್ಲಿಯ ಕೊಳಕಿನಿಂದಲೇ ತಮಗೆ ಕೇವಲ 100 ರೂ.ಗೆ ಈ ಮನೆ ಸಿಕ್ಕಿದೆ ಎಂಬ ವಿಷಯ ತಿಳಿದಿದೆ.

ಇದನ್ನೂ ಓದಿ:  Viral Story: ವಿಶ್ವದ ನಂ.1 ಶ್ರೀಮಂತ ಈತ, ಆದ್ರೆ ಸ್ವಂತ ಮನೆ ಇಲ್ಲ! ಪ್ರತಿ ರಾತ್ರಿ ಇಲ್ಲಿ ಹೋಗಿ ಮಲಗ್ತಾರಂತೆ

ಸೆಂಚುರಿ ಸ್ಟ್ರೀಟ್ ಮತ್ತು ಡೆಬಿಂಗ್ ಸ್ಟ್ರೀಟ್‌ ಗಳಲ್ಲಿ ಸಾಲು ಸಾಲು ಮನೆಗಳನ್ನು ನಿರ್ಮಿಸಲಾಗಿದೆ. ಸ್ವಲ್ಪವೂ ಸ್ಥಳ ಬಿಡದೇ ಈ ಮನೆಗಳನ್ನು ನಗರಸಭೆ ನಿರ್ಮಿಸಿದೆ. ಮನೆ ಖರೀದಿಗೂ ಮುನ್ನ ದಂಪತಿಗೆ ಇಲ್ಲಿ ಕಸ ಹಾಕುವ ವಿಷಯವನ್ನು ಯಾರೂ ಹೇಳಿರಲಿಲ್ಲ. ಆದ್ರೆ ನಗರ ಸಭೆ ಕೂಡ ಇಲ್ಲಿಯ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಲ್ಲ. ಸಾರ್ವಜನಿಕರ ದೂರು ನೀಡಿದ್ರೂ ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ.

ಬೀದಿ ಬೀದಿ ಅಲೆಯುತ್ತಿರುವ ಮಾದಕ ವ್ಯಸನಿಗಳು

ಇನ್ನೂ ಇಲ್ಲಿ ಬೀದಿ ಬೀದಿಗಳಲ್ಲಿ ಮಾದಕ ವ್ಯಸನಿಗಳು ತಿರುಗಾಡುತ್ತಾರೆ ಎಂದು ದಂಪತಿ ಹೇಳುತ್ತಾರೆ. ಇದರ ಜೊತೆಗೆ ಇಲ್ಲಿನ ಕಳ್ಳತನದ ಪ್ರಕರಣಗಳು ವರದಿ ಆಗುತ್ತಿರುತ್ತವೆ ಎಂದು ದಂಪತಿ ಆತಂಕಹೊರ ಹಾಕಿದ್ದಾರೆ. ಎಲ್ಲೆಂದರಲ್ಲಿ ಮದ್ದು, ಎಸೆದ ಸೂಜಿಗಳು ಮನೆಯ ಬೀದಿಗಳಲ್ಲಿಯೂ ಕಾಣಸಿಗುತ್ತವೆ.

UK couple regrets after buying home at just 100 rupee
ಮನೆ ಏರಿಯಾ


ಮಾದಕ ವ್ಯಸನಗಳಿಂದ ತುಂಬಿರುವ ಏರಿಯಾ

33 ವರ್ಷಗಳ ಹಿಂದೆ ಈ ಮನೆಯನ್ನು ಖರೀದಿಸಿದ್ದೆ ಎಂದು ದಂಪತಿಯ ಮನೆಯ ಪಕ್ಕದಲ್ಲಿ ವಾಸಿಸುವ ಮಹಿಳೆ ಹೇಳಿದರು. 33 ವರ್ಷಗಳ ಹಿಂದೆ ಇಲ್ಲಿ ಯಾವ ರೀತಿಯೂ ಘಟನೆಗಳು ನಡೆಯುತ್ತಿರಲಿಲ್ಲ. ಸದ್ಯ ಮಾದಕ ವ್ಯಸನಿಗಳಿಂದಲೇ ಈ ಏರಿಯಾ ತುಂಬಿ ತುಳುಕುತ್ತಿದೆ. ಈ ಕಾರಣಕ್ಕಾಗಿಯೇ ನಗರಸಭೆ ಇಲ್ಲಿಯ ಮನೆಗಳನ್ನು ಸಿಕ್ಕ ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿದೆ ಎಂದು ನೆರೆ ಮನೆಯ ಮಹಿಳೆ ಹೇಳಿದ್ದಾರೆ.

ಗುಜರಿ ಸೇರಿದ್ದ ಬಸ್ ನ್ನು ಕನಸಿನ ಸ್ಥಳವಾಗಿ ಬದಲಿಸಿದ; ಗೆಳತಿ ಜೊತೆ ರಜಾದಿನ ಕಳೆಯಲು ಬರ್ತಾನೆ ಯುವಕ!

ಕೌಶಲ್ಯವುಳ್ಳ ವ್ಯಕ್ತಿ ಇದ್ದಿಲು ಮುಟ್ಟಿದ್ರೆ ಅದು ಚಿನ್ನವಾಗಿ ಬದಲಾಗುತ್ತದೆ. ಈ ಕೌಶಲ್ಯ ಬ್ರಿಟನ್ ನಿವಾಸಿ 37 ವರ್ಷದ ಲ್ಯೂಕ್ ವಿಟೇಕರ್ ಅವರ ಕೈಯಲ್ಲಿತ್ತು. ವಿಟೇಕರ್ ಗುಜುರಿ ಸೇರಿದ್ದ ಬಸ್ ಖರೀದಿಸಿ, ಅದನ್ನ ಕನಸಿನ ಮನೆಯನ್ನಾಗಿ ಪರಿವರ್ತಿಸಿದ್ದಾರೆ. ಸದ್ಯ ಇಲ್ಲಿ ಗೆಳತಿ ಜೊತೆ ರಜಾದಿನಗಳನ್ನು ಕಳೆಯಲು ವಿಟೇಕರ್ ಇಲ್ಲಿಗೆ ಬರುತ್ತಾರೆ. ದಿ ಸನ್ ವರದಿಯ ಪ್ರಕಾರ, ಲ್ಯೂಕ್ ವಿಟೇಕರ್ ಗುಜರಿಯಿಂದ ಬಸ್ ತಂದಾಗ ಇಷ್ಟು ಸುಂದರವಾದ ಬಸ್ ಆಗುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಬಸ್ ಎಷ್ಟು ಸುಂದರವಾಗಿದೆ ಅಂದ್ರೆ ಈಗ ವಿಟೇಕರ್ ವಾರಂತ್ಯ ಕಳೆಯಲು ಇಲ್ಲಿಗೆಯೇ ಬರುತ್ತಾರೆ.
Published by:Mahmadrafik K
First published: