ಉದ್ಯೋಗ ಸ್ಥಳದಲ್ಲಿ(Work Place) ಕೆಲಸದಲ್ಲಿ ಅಸರ್ಮತೆ ತೋರಿದ್ದಲ್ಲಿ, ಸರಿಯಾದ ಸಮಯಕ್ಕೆ ಕಚೇರಿಗೆ ಬರದಿದ್ದಲ್ಲಿ ಅಥವಾ ಅಶಿಸ್ತು ತೋರಿದ್ದಲ್ಲಿ ಓರ್ವ ಉದ್ಯೋಗಿಯನ್ನು(Employee) ಕೆಲಸದಿಂದ ವಜಾಗೊಳಿಸುವ ಅರ್ಹತೆಯನ್ನು ಕಂಪನಿಗಳು ಹೊಂದಿರುತ್ತವೆ. ಆದರೆ ಯುಕೆಯ ಕಂಪನಿಯೊಂದು(UK Company) ಉದ್ಯೋಗಿಯ ವಜಾಗೊಳಿಸುವಿಕೆಗೆ ನೀಡಿದ ಕಾರಣ ಮಾತ್ರ ವಿಚಿತ್ರ ಎನಿಸುತ್ತದೆ.
ಬೋಳು ತಲೆ ಹೊಂದಿದ್ದಕ್ಕೆ ಕೆಲಸದಿಂದಲೇ ವಜಾ
ಕೂದಲ ಸಮಸ್ಯೆಯಿಂದ ಹಲವಾರು ಜನ ಈ ಬೊಕ್ಕ ತಲೆಯನ್ನು ಹೊಂದಿದ್ದಾರೆ. ಅಲ್ಲದೇ ಪುರುಷರಿಗೆ ಬಾಲ್ಡ್ ತಲೆ ಫ್ಯಾಶನ್ ಕೂಡ ಹೌದು. ಆದರೆ ತಲೆ ಬೋಳಾಗಿದೆ ಎಂಬ ಒಂದೇ ಕಾರಣಕ್ಕೆ ಯುಕೆಯ ಕಚೇರಿಯು ಹಿರಿಯ ಉದ್ಯೋಗಿಯನ್ನು ಕೆಲಸದಿಂದ ಕಿತ್ತು ಹಾಕಿದೆ. ಉದ್ಯೋಗಿ ಕೆಲಸ ಕಳೆದುಕೊಂಡ ಮೇಲೇನೂ ಸುಮ್ಮನೆ ಕೂತಿಲ್ಲ. ಬೋಳುತಲೆಯ ಕಾರಣ ನೀಡಿ ಕೆಲಸದಿಂದ ತೆಗೆದುಹಾಕಿದ್ದಕ್ಕೆ ನ್ಯಾಯಾಲಯದಲ್ಲಿ ತಕ್ಕ ಪಾಠ ಕಲಿಸಿದ್ದಾನೆ.
ಯುಕೆಯ ಟ್ಯಾಂಗೋ ನೆಟ್‌ವರ್ಕ್ ಕಂಪನಿಯಲ್ಲಿ ಘಟನೆ
ಯುಕೆಯ ಟ್ಯಾಂಗೋ ನೆಟ್‌ವರ್ಕ್‌ನಲ್ಲಿ ಸೇಲ್ಸ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಮಾರ್ಕ್ ಜೋನ್ಸ್ ಎಂಬ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ವಿಷಿತ್ರ ಏನಂದರೆ ಕೆಲಸದಿಂದ ಕಿತ್ತು ಹಾಕಿದ ಮ್ಯಾನೇಜರ್ ಫಿಲಿಪ್ ಹೆಸ್ಕೆತ್ ಕೂಡ ಬೋಳು ತಲೆ ಹೊಂದಿದ್ದಾನೆ. ನಮ್ಮ ತಂಡದಲ್ಲಿ ಯಾರೂ ಸಹ ಬೋಳು ತಲೆಯವರು ಇರಬಾರದು ಎಂಬ ಕಾರಣ ನೀಡಿ ಈ ಕೆಲಸದಿಂದ ತೆಗೆದು ಹಾಕಿದ್ದಾನೆ ಹೆಸ್ಕೆತ್.
ಇದನ್ನೂ ಓದಿ: Post Office Recruitment 2023: ಅಂಚೆ ಇಲಾಖೆಯಲ್ಲಿ ಡ್ರೈವರ್ ಹುದ್ದೆಗಳು ಖಾಲಿ- ತಿಂಗಳಿಗೆ 63 ಸಾವಿರ ಸಂಬಳ
ಟ್ಯಾಂಗೋ ನೆಟ್‌ವರ್ಕ್‌ನಲ್ಲಿ ಸೇಲ್ಸ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಮಾರ್ಕ್ ಜೋನ್ಸ್ ವರ್ಷಕ್ಕೆ 60 ಸಾವಿರ ಯುರೋ ವೇತನ (£60,000) ಪಡೆಯುವ ಕೆಲಸ ಹೊಂದಿದ್ದರು. ಆದರೆ ಮ್ಯಾನೇಜರ್ ಹುಚ್ಚಾಟದಿಂದ ಕೆಲಸ ಕಳೆದುಕೊಂಡು ನೊಂದಿರುವ ಜೋನ್ಸ್ ಇದಕ್ಕೆ ನ್ಯಾಯ ಪಡೆಯಲು ಕೋರ್ಟ್ ಮೇಟ್ಟಿಲೇರಿದ್ದರು. ಅಂತಿಮವಾಗಿ ಕೋರ್ಟ್‌ನಲ್ಲಿ ಜೋನ್ಸ್‌ಗೆ ನ್ಯಾಯ ಸಿಕ್ಕಿದ್ದು 70 ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಿದೆ.
"ನಾನು ಬೋಳು ತಲೆಯ ವಯಸ್ಸಾದ ಉದ್ಯೋಗಿಗಳನ್ನು ತನ್ನ ತಂಡದಲ್ಲಿ ಇಟ್ಟುಕೊಳ್ಳಲು ಬಯಸುವುದಿಲ್ಲ. ನನ್ನ ತಂಡದಲ್ಲಿ ಯಂಗ್ ಎಂಡ್ ಡೈನಾಮಿಕ್ ಅಭ್ಯರ್ಥಿಗಳಿ ಇರಬೇಕೆಂದು" ಕಾರಣ ನೀಡಿ ಮಾರ್ಕ್ ಜೋನ್ಸ್ ಅವರನ್ನು ಹೆಸ್ಕೆತ್ ಕೆಲಸದಿಂದ ವಜಾ ಮಾಡಿದ್ದಾರೆ.
ರಾಜೀನಾಮೆ ಪತ್ರದಲ್ಲಿ ದುಃಖ ತೋಡಿಕೊಂಡ ಜೋನ್ಸ್
ಜೋನ್ಸ್ ಕೆಲಸದಿಂದ ತೆಗೆದುಹಾಕಿದ ನಂತರ ರಾಜೀನಾಮೆ ನೀಡಿ ಕಂಪನಿಯಿಂದ ಹೊರ ಬಂದಿದ್ದಾರೆ. ರಾಜೀನಾಮೆ ಪತ್ರದಲ್ಲಿ, “ನನಗೆ ಕುಂದುಕೊರತೆ ವರದಿಯಲ್ಲಿ ತಿಳಿಸಲಾದ ಅಸ್ಪಷ್ಟ ಕುಶಲತೆ ಮತ್ತು ಸುಳ್ಳಿನ ಬಗ್ಗೆ ನಾನು ದುಃಖಿತನಾಗಿದ್ದೇನೆ. ಸಂಸ್ಥೆಯಲ್ಲಿ ಹೆಚ್ಚು ಯುವ ಮತ್ತು ಚೈತನ್ಯಯುತ ಯುವಕರನ್ನು ನಿಮ್ಮ ಬದಲಿಗೆ ತರುವ ಮೂಲಕ ಸಂಸ್ಥೆಯಲ್ಲಿ ಬದಲಾವಣೆ ತರಬೇಕು ಎಂಬುದು ಅವರ ಉದ್ದೇಶವಾಗಿದ್ದರೆ ನನಗೆ ಕೆಲಸ ಬಿಡಲು ಬೇಸರವಿರಲಿಲ್ಲ, ಆದರೆ ಅವರು ನೀಡಿದ ಬೋಳುತಲೆ ಕಾರಣ ನನ್ನಲ್ಲಿ ನೋವು ತಂದಿದೆ ಎಂದು ಜೋನ್ಸ್ ಬರೆದುಕೊಂಡಿದ್ದರು.
ಕೋರ್ಟ್ ಮೆಟ್ಟಿಲೇರಿ 70 ಲಕ್ಷ ಪರಿಹಾರ ಪಡೆದುಕೊಂಡ ಉದ್ಯೋಗಿ
ಈ ಎಲ್ಲಾ ಘಟನೆಯಿಂದ ಮನನೊಂದ ಉದ್ಯೋಗಿ ಜೋನ್ಸ್ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ನನ್ನ ಬೋಳು ತಲೆಯ ಕಾರಣದಿಂದಾಗಿ ಕಂಪನಿಯು ತನ್ನ ವಿರುದ್ಧ ತಾರತಮ್ಯ ಧೋರಣೆಯನ್ನು ತಾಳಿದೆ. ಈ ತಾರತಮ್ಯ ನಿಜಕ್ಕೂ ಮನಸ್ಸಿಗೆ ನೋವುಂಟು ಮಾಡಿದೆ. ತನಗೆ ನ್ಯಾಯ ಕೊಡಿಸಬೇಕಾಗಿ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಜೋನ್ಸ್ ತಿಳಿಸಿದ್ದಾರೆ.
ಇದನ್ನೂ ಓದಿ: NIC Recruitment 2023: ರಾಷ್ಟ್ರೀಯ ಮಾಹಿತಿ ಕೇಂದ್ರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ- ತಿಂಗಳಿಗೆ 1.77 ಲಕ್ಷ ಸಂಬಳ
ಎಲ್ಲಾ ಅಹವಾಲು, ಪ್ರಕರಣವನ್ನು ಅವಲೋಕಿಸಿದ ನ್ಯಾಯಾಲಯ ಕೊನೆಗೆ ಅನ್ಯಾಯ ಮಾರ್ಗದಲ್ಲಿ ಜೋನ್ಸ್ರನ್ನು ಕೆಲಸದಿಂದ ತೆಗೆದಿರುವುದಕ್ಕೆ 71 ಸಾವಿರ ಯೂರೋ ಅಥವಾ 70 ಲಕ್ಷಕ್ಕೂ ಹೆಚ್ಚು ಪರಿಹಾರ ನೀಡುವಂತೆ ಕಂಪನಿಗೆ ಕೋರ್ಟ್ ಆದೇಶಿಸಿದೆ.
ಈ ಮೂಲಕ ಕಂಪನಿಯ ತಾರತಮ್ಯದ ವಿರುದ್ಧ ಮಾರ್ಕ್ ಜೋನ್ಸ್ ಪ್ರಕರಣ ಗೆದ್ದು 70 ಲಕ್ಷಕ್ಕೂ ಹೆಚ್ಚು ಪರಿಹಾರ ಮೊತ್ತವನ್ನು ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ