UK: ಬ್ರಿಟನ್ ಕಾಲೇಜ್​ನಲ್ಲಿ ಇಂಡಿಯನ್ ಸಾಂಗ್, ಸಖತ್ ಸ್ಟೆಪ್ ಹಾಕಿದ ವಿದ್ಯಾರ್ಥಿಗಳು

ಜಗತ್ತಿನ ನಾನಾ ದೇಶಗಳ ಜನರನ್ನು ಒಂದೆಡೆ ಸೇರಿಸಬಲ್ಲದು ಎಂಬುದಕ್ಕೆ ಉದಾಹರಣೆ ಎಂಬಂತಿರುವ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ಯುಕೆಯ ಕಾಲೇಜೊಂದರ ಕಲ್ಚರಲ್ ಫೆಸ್ಟಿವಲ್‍ನ ದ್ರಶ್ಯವುಳ್ಳ ವಿಡಿಯೋ ಅದು. ಅದರಲ್ಲಿ ವಿದ್ಯಾರ್ಥಿಗಳು ಮಜಾ ಮತ್ತು ಉಲ್ಲಾಸದಿಂದ ಕುಣಿಯುತ್ತಿರುವ ದೃಶ್ಯವನ್ನು ಕಾಣಬಹುದು.

ಕಾಲೇಜು ಕಾರ್ಯಕ್ರಮದಲ್ಲಿ ಮಿಂಚಿದ ಪಂಜಾಬಿ ಡೋಲ್ ಸಂಗೀತ

ಕಾಲೇಜು ಕಾರ್ಯಕ್ರಮದಲ್ಲಿ ಮಿಂಚಿದ ಪಂಜಾಬಿ ಡೋಲ್ ಸಂಗೀತ

  • Share this:
ಹಳ್ಳಿ ಇರಲಿ ದಿಲ್ಲಿ ಇರಲಿ, ದೇಶವಿರಲಿ ವಿದೇಶವಿರಲಿ, ಸಂಗೀತವನ್ನು (Singing) ಇಷ್ಟಪಡದವರು ಯಾರೂ ಇಲ್ಲ. ಒತ್ತಡವನ್ನು ನಿವಾರಿಸುವ, ಮನಸ್ಸಿಗೆ ಉಲ್ಲಾಸ ನೀಡುವ, ನೋವನ್ನು ಮರೆಸುವ, ಮನರಂಜನೆ (Entertainment) ನೀಡುವ ಹೀಗೆ ಸಂಗೀತಕ್ಕಿರುವ ಶಕ್ತಿಯ ಸೀಮೆಯನ್ನು ಅಳೆಯಲು ಸಾಧ್ಯವಿಲ್ಲ ಅಲ್ಲವೇ? ಅದೇ ರೀತಿ ಸಂಗೀತಕ್ಕೆ ಇನ್ನೂ ಒಂದು ಶಕ್ತಿ ಇದೆ, ಅದೇನು ಗೊತ್ತೆ? ಇಡೀ ಜಗತ್ತಿನ ಜನರೆಲ್ಲರನ್ನು ಒಂದುಗೂಡಿಸುವ ಶಕ್ತಿ. ಈ ಹಿಂದೆ ನಮ್ಮ ದೇಶದ ಕಡಲೇಕಾಯಿ ಮಾರುವ ವ್ಯಕ್ತಿಯ ಕಚ್ಚಾ ಬಾದಾಮ್ ಹಾಡಿಗೆ ಇಡೀ ಜಗತ್ತಿನ ಮಂದಿ ಮನಸೋತಿದ್ದು ನೆನಪಿರಬಹುದು, ಅದೇ ರೀತಿ ಇದೀಗ ನಮ್ಮ ನೆರೆಯ ಪಾಕಿಸ್ತಾನದ (Pakistan) ಪಸೂರಿ ಹಾಡು ವಿಶ್ವದ ಜನರೆಲ್ಲರ ಪ್ರಶಂಸೆ ಗಳಿಸುತ್ತಿದೆ. ಇದು ಜಗತ್ತಿನೆಲ್ಲೆಡೆಯ ಜನರೆಲ್ಲರು ತಾವಿದ್ದಲೇ ಸಂಗೀತವನ್ನು ಆನಂದಿಸುವ ವಿಷಯವಾಯಿತು.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಡ್ಯಾನ್ಸ್ ವಿಡಿಯೋ
ಆದರೆ ನಾನಾ ದೇಶದ ಜನರು ಒಂದೆಡೆ ಸೇರಿ ಹಾಡೊಂದಕ್ಕೆ ಹೆಜ್ಜೆ ಹಾಕುವ ಸಂಗತಿ ಇನ್ನಷ್ಟು ವಿಶೇಷ ಅಲ್ಲವೇ? ಹೌದು, ಹಾಡೊಂದು ಜಗತ್ತಿನ ನಾನಾ ದೇಶಗಳ ಜನರನ್ನು ಒಂದೆಡೆ ಸೇರಿಸಬಲ್ಲದು ಎಂಬುದಕ್ಕೆ ಉದಾಹರಣೆ ಎಂಬಂತಿರುವ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ಯುಕೆಯ ಕಾಲೇಜೊಂದರ ಕಲ್ಚರಲ್ ಫೆಸ್ಟಿವಲ್‍ನ ದ್ರಶ್ಯವುಳ್ಳ ವಿಡಿಯೋ ಅದು. ಅದರಲ್ಲಿ ವಿದ್ಯಾರ್ಥಿಗಳು ಮಜಾ ಮತ್ತು ಉಲ್ಲಾಸದಿಂದ ಕುಣಿಯುತ್ತಿರುವ ದೃಶ್ಯವನ್ನು ಕಾಣಬಹುದು.

ವಿಡಿಯೋದಲ್ಲಿ ಏನಿದೆ?
ಟ್ವಿಟ್ಟರ್‍ನಲ್ಲಿ ಸನ್ನಿ ಹುಂಡಾಲ್ ಎಂಬವರು, ಈ ಸಣ್ಣ ಅವಧಿಯ ಟಿಕ್‍ಟಾಕ್ ವಿಡಿಯೋ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ, ವಿದ್ಯಾರ್ಥಿಯೊಬ್ಬ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಡಾನ್ಸ್ ಮಾಡುವುದರಿಂದ ಆರಂಭವಾಗುತ್ತದೆ. ಅವನ ಸುತ್ತಲೂ ಅರೇಬಿಯನ್, ಆಫ್ರಿಕನ್ ಇತ್ಯಾದಿ, ತಮ್ಮ ತಮ್ಮ ದೇಶದ ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟಿರುವ ವಿದ್ಯಾರ್ಥಿಗಳು ನೆರೆದಿರುವುದನ್ನು ಕಾಣಬಹುದು. ಪಂಜಾಬಿ ಉಡುಪು ತೊಟ್ಟ ವ್ಯಕ್ತಿಯೊಬ್ಬ ಡೋಲು ಹೊಡೆಯಲು ಆರಂಭಿಸುತ್ತಿದ್ದಂತೆ, ಆ ಹುಡುಗನ ಜೊತೆ ಎಲ್ಲಾ ವಿದ್ಯಾರ್ಥಿಗಳು ಸೇರಿ ಕುಣಿಯುತ್ತಾರೆ. ಕುಣಿಯುತ್ತಾ ತಮ್ಮ ದೇಶಗಳ ರಾಷ್ಟ್ರ ಧ್ವಜಗಳನ್ನು ಎತ್ತಿ ಹಿಡಿಯುತ್ತಾರೆ.

ಇದನ್ನೂ ಓದಿ: Celesti Bairagey: ಆಲಿಯಾ ಹೆಸರೇಳಿದ್ದಕ್ಕೆ ಮುನಿಸಿಕೊಂಡ್ರಾ ಸೆಲೆಸ್ಟಿ ಬೈರಾಗೆ? ಇದಕ್ಕೆ ಈಕೆ ಹೇಳಿದ್ದೇನು ನೋಡಿ

ನೆಟ್ಟಿಗರ ಮನಸ್ಸು ಗೆದ್ದ ವಿಡಿಯೋ 
ಈ ವಿಡಿಯೋವನ್ನು ಹಂಚಿಕೊಂಡಿರುವ ಸನ್ನಿ ಹುಂಡಾಲ್ ಅವರು, ಅದಕ್ಕೆ “ಆಧುನಿಕ ಬ್ರಿಟನ್” ಎಂಬ ಅಡಿ ಬರಹವನ್ನು ಕೂಡ ನೀಡಿದ್ದಾರೆ. ಜೊತೆಗೆ ಪಂಜಾಬಿ ಸಂಗೀತ ಯಾವಾಗಲೂ ಎಲ್ಲರನ್ನು ಜೊತೆ ಸೇರಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ವಿದೇಶಿ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನೇಕ ದೇಶಗಳ ವಿದ್ಯಾರ್ಥಿಗಳು ಜೊತೆಯಾಗಿ ಹೆಜ್ಜೆ ಹಾಕುತ್ತಿರುವ ದೃಶ್ಯವುಳ್ಳ ಈ ವಿಡಿಯೋ ನೆಟ್ಟಿಗರ ಮನಸ್ಸನ್ನು ಗೆದ್ದಿದ್ದು, ಈಗಾಗಲೇ 2.1 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ ಮತ್ತು ಹಲವಾರು ಪ್ರತಿಕ್ರಿಯೆಗಳನ್ನು ಪಡೆದಿದೆ.ಡೋಲ್‍ನ ಶಬ್ಧಕ್ಕೆ ಹೆಜ್ಜೆ ಹಾಕದೆ, ನಿಯಂತ್ರಿಸಿಕೊಳ್ಳುವುದು ತುಂಬಾ ಕಷ್ಟ ಎಂದು ಬಹಳಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ನೋಡಲು ತುಂಬಾ ಖುಷಿಯಾಗುತ್ತದೆ ಎಂದು ಇನ್ನು ಕೆಲವರು ಬರೆದುಕೊಂಡಿದ್ದಾರೆ.

ವಿಡಿಯೋ ನೋಡಿ ಜನ ಹೇಳಿದ್ದು ಹೀಗೆ 
“ಈ ವಿಡಿಯೋದಲ್ಲಿ ಇರುವ ಹುಡುಗ ನನ್ನ ಮಗ. ನನಗೆ ಅವನ ಬಗ್ಗೆ ಹೆಮ್ಮೆ ಇದೆ. ಯುವ ಜನರು ಆನಂದಿಸುತ್ತಿರುವುದು ಮತ್ತು ಪರಸ್ಪರರಿಗೆ ಗೌರವ ಕೊಡುತ್ತಿರುವುದು. ಅದ್ಭುತವಾಗಿದೆ” ಎಂದು ಒಬ್ಬ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದರೆ, “ಈ ಮಕ್ಕಳ ಡಾನ್ಸಿನ ಚಿಕ್ಕ ವಿಡಿಯೋ ಖಂಡಿತಾ, ವಲಸೆಯ ಕುರಿತಾದ ಚರ್ಚೆಯ ಪ್ರತಿಯೊಂದು ವಿವರ ಮತ್ತು ಸೂಕ್ಷ್ಮ ವ್ಯತ್ಯಾಸಗಳನ್ನು ಒಳಗೊಂಡಿದೆ” ಎಂದು ಇನ್ನೊಬ್ಬರು ಬರೆದಿದ್ದಾರೆ.

ಇದನ್ನೂ ಓದಿ: Viral Video: ಈ ಒಂದು ಕೊಡೆಯಲ್ಲಿ ಎಷ್ಟೊಂದು ಮಕ್ಕಳು ಹೋಗ್ತಿದಾರೆ ನೋಡಿ! ನಿಮ್ಗೂ ಬಾಲ್ಯ ನೆನಪಾಯ್ತ?

ಮತ್ತೊಬ್ಬ ಟ್ವಿಟ್ಟರ್ ಬಳಕೆದಾರ “ಅದ್ಭುತವಾಗಿದೆ. ವಲಸೆಯು ಈ ದೇಶಕ್ಕೆ ಇಂತಹ ಶ್ರೀಮಂತಿಕೆಯನ್ನು ತಂದಿದೆ. ನೋಡಲು ಚೆನ್ನಾಗಿದೆ” ಎಂದು ಪ್ರತಿಕ್ರಿಯಿಸಿದ್ದರೆ, “ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿನ ಈ ಎನರ್ಜಿಯನ್ನು ನೋಡಿ ಖುಷಿಯಾಗುತ್ತಿದೆ, ನೋಡಲು ಚೆನ್ನಾಗಿದೆ” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. “ಸಂಗೀತ ಚೆನ್ನಾಗಿದೆ ಮತ್ತು ತುಂಬಾ ಅಂತಾರಾಷ್ಟ್ರೀಯವಾಗಿದೆ” ಎಂದು ಇನ್ನೊಬ್ಬರು ವಿಡಿಯೋವನ್ನು ನೋಡಿ ಪ್ರಶಂಸಿಸಿದ್ದಾರೆ.
Published by:Ashwini Prabhu
First published: