Holiday: ತನ್ನ ಸಿಬ್ಬಂದಿಗೆ ವಾರದಲ್ಲಿ ಮೂರು ದಿನ ರಜೆ ನೀಡಿದ ಬ್ಯಾಂಕ್: ಕೆಲಸದ ಅವಧಿಯಲ್ಲೂ ಕಡಿತ

ಬ್ಯಾಂಕಿನ ಉದ್ಯೋಗಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಹಾಗೂ ಕೆಲಸದ ಉತ್ಪಾದಕತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ. ಈಗಾಗಲೇ ನಮ್ಮ ಎಲ್ಲ ಉದ್ಯೋಗಿಗಳು (Bank Employees) ಹೊಸ ನಿಯಮದಡಿಯಲ್ಲಿಯೇ ಕೆಲಸ ಮಾಡುತ್ತಿರುವ ವಿಷಯವನ್ನು ಹೇಳಿಕೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂಗ್ಲೆಂಡ್ ಬ್ಯಾಂಕ್ (UK Bank) ತನ್ನ ಉದ್ಯೋಗಿಗಳಿಗೆ (Employees) ವಾರದಲ್ಲಿ ಮೂರು ದಿನ ರಜೆ (Holiday) ನೀಡುವದಾಗಿ ಘೋಷಿಸಿದೆ. ರಜೆ ದಿನ ಯಾವುದೇ ಸಂಬಳ (Salary) ಕಡಿತಗೊಳಿಸಲ್ಲ ಎಂಬ ಸಿಹಿ ಸುದ್ದಿಯನ್ನು ಬ್ಯಾಂಕ್ ನೀಡಿದೆ. ವಾರದಲ್ಲಿ ಮೂರು ದಿನ ರಜೆ ನೀಡುವ ಯುಕೆ ಕಂಪನಿ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಕೆಲಸದ ಅವಧಿಯನ್ನು (Working hours) ಸಹ ಕಡಿತಗೊಳಿಸಿ ಡೆಬಲ್ ಸಿಹಿಯನ್ನು ನೀಡಿದೆ. ಬ್ಯಾಂಕ್ 430 ಉದ್ಯೋಗಿಗಳು ಈ ಲಾಭವನ್ನು ಪಡೆಯಲಿದ್ದಾರೆ. ಉದ್ಯೋಗಿಗಳು ಸಾಪ್ತಾಹಿಕ ಸಮಯವನ್ನು 37.5 ರಿಂದ 34 ಗಂಟೆಗೆ ಕಡಿತಗೊಳಿಸಿದೆ. ಆಟಮ್ ಬ್ಯಾಂಕ್ ನ ಈ ಆದೇಶವನ್ನು ಉದ್ಯೋಗಿಗಳು ಸ್ವಾಗತಿಸಿದ್ದಾರೆ. ಸೋಮವಾರ ಅಥವಾ ಶುಕ್ರವಾರವೇ ಉದ್ಯೋಗಿಗಳು ರಜೆಯಲ್ಲಿರುತ್ತಾರೆ.

ಬ್ಯಾಂಕಿನ ಉದ್ಯೋಗಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ಹಾಗೂ ಕೆಲಸದ ಉತ್ಪಾದಕತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಆಟಮ್ ಬ್ಯಾಂಕ್ ತನ್ನ ಪ್ರಕಟನೆಯಲ್ಲಿ ಹೇಳಿಕೊಂಡಿದೆ. ಈಗಾಗಲೇ ನಮ್ಮ ಎಲ್ಲ ಉದ್ಯೋಗಿಗಳು (Bank Employees) ಹೊಸ ನಿಯಮದಡಿಯಲ್ಲಿಯೇ ಕೆಲಸ ಮಾಡುತ್ತಿರುವ ವಿಷಯವನ್ನು ಬ್ಯಾಂಕ್ ಹೇಳಿಕೊಂಡಿದೆ.

ವೈಯಕ್ತಿಕ ಮತ್ತು ವೃತ್ತಿಪರ ಜೀವನ

ನಾಲ್ಕು ದಿನಗಳ ಕೆಲಸದ ನೀತಿಯು ನಮ್ಮ ಉದ್ಯೋಗಿಗಳಿಗೆ ಉತ್ಸಾಹದಿಂದ ಬೆಳೆಯಲು ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ. ಈ ಹೊಸ ಆದೇಶದಿಂದಾಗಿ ಉದ್ಯೋಗಿಗಳಿಗೆ ತಮ್ಮ ಕುಟುಂಬಕ್ಕೆ ಸಾಕಷ್ಟು ಸಮಯವನ್ನು ನೀಡಲು ಸಾಧ್ಯವಾಗುತ್ತದೆ. ಇದು ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಉತ್ತಮ ವಾತಾವರಣ ಸೃಷ್ಟಿಸುತ್ತದೆ ಎಂದು ಆಟಮ್‌ನ ಸಿಇಒ ಮಾರ್ಕ್ ಮುಲ್ಲೆನ್ ಹೇಳಿದ್ದಾರೆ.

ಇದನ್ನೂ ಓದಿ:  Work From Home: ಕೆಲಸದ ಟೈಂ ಮುಗಿದ ಮೇಲೆ ಉದ್ಯೋಗಿಗಳಿಗೆ ಕಾಟ​ ಕೊಡುವಂತಿಲ್ಲ- ಪೋರ್ಚುಗಲ್​ನಲ್ಲಿ ಹೊಸಾ ರೂಲ್ಸ್!

ಕೊರೊನಾದಂತಹ ಸಮಯದಲ್ಲಿ ಉದ್ಯೋಗಿಗಳಿಗೆ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವಾಗ ಹೆಚ್ಚಾಗಿರುತ್ತದೆ. ಉದ್ಯೋಗಿಗಳ ಮಾನಸಿಕವಾಗಿ ಸದೃಡರನ್ನಾಗಿಸಲು ಈ ಆದೇಶ ತರಲಾಗಿದೆ ಎಂದು ಮುಲ್ಲೆನ್ ಹೇಳುತ್ತಾರೆ.

2016ರಿಂದಲೇ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ಆರಂಭಿಸಿದೆ. ಗ್ರಾಹಕರು ಮೊಬೈಲ್ ಮೂಲಕವೇ  ಉಳಿತಾಯ ಖಾತೆ, ಸಾಲ ಪಡೆಯುವಂತಹ ಸೇರಿದಂತೆ ಇನ್ನಿತರ ಸೇವೆಗಳನ್ನು ಪಡೆಯಬಹುದಾಗಿದೆ. ಈ ಆದೇಶ ತರುವ ಮುನ್ನ ಬ್ಯಾಂಕ್ ಯಾವುದೇ ಪ್ರಯೋಗ ನಡೆಸಿಲ್ಲ. ಹಾಗಾಗಿ ನೇರವಾಗಿಯೇ ಈ ಆದೇಶವನ್ನು ಪ್ರಯೋಗಿಸಿದೆ.

ಹೊಸ ಆದೇಶದಿಂದ ಸೇವೆಯಲ್ಲಿ ವ್ಯತ್ಯಯ ಇಲ್ಲ

'ಹೊಸ ನೀತಿ ಜಾರಿಗೆ ಬಂದ ನಂತರ ಇದುವರೆಗೆ ಉತ್ಪಾದಕತೆ ಅಥವಾ ಗ್ರಾಹಕ ಸೇವೆಯ ಮಟ್ಟದಲ್ಲಿ ಯಾವುದೇ ಕುಸಿತವಾಗಿಲ್ಲ. ಆದರೆ, ಜನರು ಅದಕ್ಕೆ ಹೊಂದಿಕೊಳ್ಳಲು ಸಮಯ ಹಿಡಿಯುತ್ತದೆ. 20 ವರ್ಷಗಳ ಜೀವನವನ್ನು ಅದೇ ಮಾದರಿಯಲ್ಲಿ ಕಳೆದ ನೀವು ಇದ್ದಕ್ಕಿದ್ದಂತೆ ಹೊಸ ನಿಯಮ ತಂದರೆ ಆರಂಭದಲ್ಲಿ ಕೊಂಚ ಸಮಸ್ಯೆಯಾಗುತ್ತದೆ. ನಮ್ಮ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಗ್ರಾಹಕರು ಸಹ ನಮ್ಮ ನಿಯಮಗಳನ್ನು ಒಪ್ಪಿಕೊಳ್ಳುವ ದಿನಗಳು ಶೀಘ್ರದಲ್ಲಿಯೇ ಬರಲಿವೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

ಇದನ್ನೂ ಓದಿ:  Bank Holidays in December: ಡಿಸೆಂಬರ್ ತಿಂಗಳಲ್ಲಿ ಬರೋಬ್ಬರಿ 12 ದಿನ ಬ್ಯಾಂಕ್ ರಜೆ; ಲಿಸ್ಟ್ ಇಲ್ಲಿದೆ ನೋಡಿ

2015 ಮತ್ತು 2019 ರ ನಡುವೆ ಐಸ್‌ಲ್ಯಾಂಡ್‌ನಲ್ಲಿ ನಡೆಸಿದ ಎರಡು ಅಧ್ಯಯನಗಳ ಪ್ರಕಾರ, ವಾರಕ್ಕೆ ನಾಲ್ಕು ದಿನ ಕೆಲಸ ಮಾಡುವ ಉದ್ಯೋಗಿಗಳಲ್ಲಿ ಯಾವುದೇ ಉತ್ಪಾದಕತೆಯಲ್ಲಿ ಕಡಿಮೆ ಆಗಿಲ್ಲ ಎಂದು ಹೇಳಲಾಗುತ್ತಿದೆ. ವಾರಕ್ಕೆ ಐದು ದಿನ ಕೆಲಸ ಮಾಡುವ ಪದ್ಧತಿ ಹಳೆಯದು ಎಂದು ಹೇಳುತ್ತಾರೆ. ಈಗ ಬಹುತೇಕ ಕಂಪನಿಗಳು ವಾರಕ್ಕೆ ಎರಡು ದಿನ ರಜೆ ನೀಡುತ್ತಿವೆ.

ಪೋರ್ಚಗಲ್ ನಲ್ಲಿ ಹೀಗೊಂದು ಆದೇಶ

ಕೆಲಸದ ಸಮಯದ ನಂತರ ಅವರು ತಮ್ಮ ಉದ್ಯೋಗಿಗಳನ್ನು ಸಂಪರ್ಕಿಸಿದರೆ ಮೇಲಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಮತ್ತು ಮನೆಯಿಂದ ವ್ಯಾಪಕವಾಗಿ ಕೆಲಸ ಮಾಡಿದರೆ ಹೆಚ್ಚಿದ ಅನಿಲ ಮತ್ತು ವಿದ್ಯುತ್ ದರಗಳನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದೆ.
Published by:Mahmadrafik K
First published: