ಇತ್ತೀಚೆಗೆ ನಾರ್ವೇಜಿಯನ್ ಡ್ಯಾನ್ಸ್ ಟ್ರೂಪ್ 'ದಿ ಕ್ವಿಕ್ ಸ್ಟೈಲ್' ಬಾಲಿವುಡ್ ನಟ ಶಾರುಖ್ ಖಾನ್ ಅವರ 1997 ರಲ್ಲಿ ತೆರೆಕಂಡಂತಹ ‘ದಿಲ್ ತೋ ಪಾಗಲ್ ಹೈ’ ಚಿತ್ರದ ‘ಲೇ ಗಯೀ ಲೇ ಗಯೀ’ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ.ವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದ್ದನ್ನು ನಾವು ನೋಡಿದ್ದೆವು. ಈ ಹಿಂದೆ ‘ಕಾಲಾ ಚಶ್ಮಾ’ ಎಂಬ ಹಿಂದಿ ಹಾಡಿಗೆ ಇವರೇ ಮಾಡಿದ ಡ್ಯಾನ್ಸ್ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ವೈರಲ್ ಆಗಿತ್ತು. ಆ ವಿಡಿಯೋ.ದ ನಂತರ ಈ ನೃತ್ಯ ತಂಡವು ರಾತ್ರೋರಾತ್ರಿ ಎಲ್ಲರ ಗಮನವನ್ನು ತನ್ನೆಡೆಗೆ ಸೆಳೆದುಕೊಂಡಿದ್ದು ನಮಗೆಲ್ಲಾ ಗೊತ್ತೇ ಇದೆ. ಇದೇ ರೀತಿಯ ವಿಡಿಯೋ ಇದೀಗ ಮತ್ತೊಂದು ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಇದಕ್ಕೆ ಉತ್ತಮ ರೆಸ್ಪಾನ್ಸ್ ಕೂಡ ಬರ್ತಾ ಇದೆ.
ಹಿಂದಿ ಚಿತ್ರದ ಹಾಡುಗಳು ವಿದೇಶಿಗರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗುತ್ತಿವೆ ಅಂತ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾಗಿಲ್ಲ ಅಂತ ಅನ್ನಿಸುತ್ತದೆ. ಇಲ್ಲಿ ಮತ್ತೊಂದು ಇಂತಹದೇ ವಿಡಿಯೋ. ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ.
‘ಸೋನಿ ದೇ ನಖ್ರೆ’ ಹಾಡಿಗೆ ಹೆಜ್ಜೆ ಹಾಕಿದ ಉಗಾಂಡಾ ಬಾಯ್ಸ್
ಹೌದು.. ಬಾಲಿವುಡ್ ನಟರಾದ ಸಲ್ಮಾನ್ ಖಾನ್ ಮತ್ತು ಗೋವಿಂದಾ ಅಭಿನಯದ 2007 ರಲ್ಲಿ ಬಿಡುಗಡೆಯಾದ ‘ಪಾರ್ಟ್ನರ್’ ಚಿತ್ರದ ‘ಸೋನಿ ದೇ ನಖ್ರೆ’ ಹಾಡಿಗೆ ಉಗಾಂಡಾ ಶಾಲಾ ಮಕ್ಕಳು ಡ್ಯಾನ್ಸ್ ಮಾಡಿದ್ದಾರೆ. ಈ ಹಾಡು ದಶಕಗಳ ಹಿಂದೆ ಬಿಡುಗಡೆಯಾದರೂ, ಇದು ಇನ್ನೂ ಜನರನ್ನು ಕುಣಿಸುತ್ತದೆ ಅಂತ ಹೇಳಬಹುದು.
View this post on Instagram
ಇದನ್ನೂ ಓದಿ: OMG, ಹುಡುಗಿಯರು ರಾತ್ರಿ ಇಂಟರ್ನೆಟ್ನಲ್ಲಿ ಇವನ್ನೆಲ್ಲಾ ಸರ್ಚ್ ಮಾಡ್ತಾರಾ? ಗೂಗಲ್ ತೆರೆದಿಟ್ಟಿದೆ ಶಾಕಿಂಗ್ ಹಿಸ್ಟ್ರಿ!
ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಟ್ರಿಪ್ಲೆಟ್ಸ್ ಘೆಟ್ಟೋ ಕಿಡ್ಸ್ ಎಂಬ ಒಂದು ಎನ್ಜಿಒ ತನ್ನ ಇನ್ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅವರ ಇನ್ಸ್ಟಾ ಬಯೋ ಅವರು "ಮೂಲಭೂತ ಅಗತ್ಯತೆಗಳನ್ನು ಅನನುಕೂಲಕರ ಮಕ್ಕಳು, ಬೀದಿ ಮಕ್ಕಳು ಮತ್ತು ಅನಾಥರಿಗೆ ಒದಗಿಸಿಕೊಡುವ ಸಲುವಾಗಿ ಅವರಿಗೆ ಸಹಾಯ ಮಾಡಲು ಸಂಗೀತ, ನೃತ್ಯ ಮತ್ತು ನಾಟಕವನ್ನು ಮಾಡುವ ಸಂಸ್ಥೆಯಾಗಿದೆ" ಎಂದು ವಿವರಿಸುತ್ತದೆ.
ಈ ಡ್ಯಾನ್ಸ್ ವಿಡಿಯೋ. ಹೇಗಿದೆ ಗೊತ್ತೇ?
"ಹಾಯ್ ಕಿಂಗ್ ಈಸ್ ಬ್ಯಾಕ್, ಅವನನ್ನು ಯಾರು ಮಿಸ್ ಮಾಡಿಕೊಂಡಿದ್ದೀರಿ" ಎಂದು ಶೀರ್ಷಿಕೆಯನ್ನು ಬರೆದು ಆ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಶಾಲಾ ಸಮವಸ್ತ್ರದಲ್ಲಿರುವ ಮಕ್ಕಳ ಗುಂಪೊಂದನ್ನು ನಾವು ಕ್ಲಿಪ್ ನ ಆರಂಭದಲ್ಲಿ ನೋಡಬಹುದು. ಒಬ್ಬೊಬ್ಬರಾಗಿ ಮುಂದೆ ಬಂದು ತಮ್ಮ ನೃತ್ಯ ಕೌಶಲ್ಯಗಳನ್ನು ತೋರಿಸಲು ಪ್ರಾರಂಭಿಸುತ್ತಾರೆ. ಅವರೆಲ್ಲರೂ ಹಾಡಿಗೆ ಒಟ್ಟಿಗೆ ನೃತ್ಯ ಮಾಡುವುದರೊಂದಿಗೆ ವಿಡಿಯೋ. ಕೊನೆಗೊಳ್ಳುತ್ತದೆ.ಷ
ಚಿತ್ರದ ನೃತ್ಯದಲ್ಲಿ ಯಾರೆಲ್ಲಾ ಇದ್ದಾರೆ?
‘ಸೋನಿ ದೇ ನಖ್ರೆ’ ಹಾಡನ್ನು ಪಾರ್ಟ್ನರ್ ಚಿತ್ರದಲ್ಲಿ ನಟರಾದ ಸಲ್ಮಾನ್, ಗೋವಿಂದಾ ಮತ್ತು ನಟಿ ಕತ್ರಿನಾ ಕೈಫ್ ಅವರ ಮೇಲೆ ಚಿತ್ರೀಕರಿಸಲಾಗಿದೆ.
4 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದ ಡ್ಯಾನ್ಸ್ ಕ್ಲಿಪ್
ಕೆಲವು ದಿನಗಳ ಹಿಂದೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಪೋಸ್ಟ್ ಮಾಡಿದಾಗಿನಿಂದ, ಕ್ಲಿಪ್ 4.4 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು ಅನೇಕ ಕಾಮೆಂಟ್ ಗಳನ್ನು ಸಹ ಗಳಿಸಿದೆ.
"ಈ ಮಕ್ಕಳು ತುಂಬಾನೇ ಮನರಂಜನೆ ನೀಡುತ್ತಾರೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಹೇಳಿದ್ದಾರೆ. "ಕ್ವಿಕ್ ಸ್ಟೈಲ್ ಕಿಡ್ ವರ್ಷನ್" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ