HOME » NEWS » Trend » UBER DRIVER RETURNS WOMAN PASSENGERS IPHONE EIGHT MONTHS AFTER SHE LOST IT IN HIS UBER CAB STG SCT

iPhone ಕಳೆದುಕೊಂಡಿದ್ದ ಮಹಿಳೆಗೆ 8 ತಿಂಗಳ ಬಳಿಕ ಸರ್​ಪ್ರೈಸ್ ಕೊಟ್ಟ ಉಬರ್‌ ಚಾಲಕ!

ಶೇ ಸಾಡ್ ಎಂಬ ಮಹಿಳೆ ಆಗಸ್ಟ್ 2020ರ ಅಂತ್ಯದಲ್ಲಿ ಲಂಡನ್‌ನಲ್ಲಿ ರಾತ್ರಿ ನೈಟ್‌ ಔಟ್‌ನಿಂದ ಮನೆಗೆ ತೆರಳುತ್ತಿದ್ದಾಗ ತನ್ನ ಐಫೋನ್-6 ಅನ್ನು ಬಿಟ್ಟು ಹೋಗಿದ್ದಳು. ಬಳಿಕ ಏಪ್ರಿಲ್‌ 30, 2021 ರಂದು ಆ ಫೋನ್‌ ಆಕೆಗೆ ದೊರೆತಿದೆ. ಹೇಗೆ ಅಂತೀರಾ?

news18-kannada
Updated:May 22, 2021, 9:27 AM IST
iPhone ಕಳೆದುಕೊಂಡಿದ್ದ ಮಹಿಳೆಗೆ 8 ತಿಂಗಳ ಬಳಿಕ ಸರ್​ಪ್ರೈಸ್ ಕೊಟ್ಟ ಉಬರ್‌ ಚಾಲಕ!
ಸಾಂದರ್ಭಿಕ ಚಿತ್ರ
  • Share this:
ಕೆಲವು ಸಮಯದಿಂದ ಉಬರ್ ಚಾಲಕರು ತಮ್ಮ ಪ್ರಾಮಾಣಿಕತೆ ಮತ್ತು ದಯೆಯಿಂದ ಅಂತರ್ಜಾಲದಲ್ಲಿ ಗೆಲ್ಲುತ್ತಿದ್ದಾರೆ. ಇತ್ತೀಚೆಗೆ, ಲಂಡನ್‌ನ ಉಬರ್ ಡ್ರೈವರ್ ತನ್ನ ಕ್ಯಾಬ್‌ನಲ್ಲಿ ಮಹಿಳೆಯೊಬ್ಬಳು ಫೋನ್ ಬಿಟ್ಟು ಹೋಗಿ 8 ತಿಂಗಳ ನಂತರ ಆಕೆಯ ಫೋನ್ ಅನ್ನು ಹಿಂದಿರುಗಿಸಿದ್ದಾರೆ. ವೃತ್ತಿಯಲ್ಲಿ ಬ್ರಾಡ್‌ಕ್ಯಾಸ್ಟರ್‌ ಆಗಿರುವ ಶೇ ಸಾಡ್ ಎಂಬ ಮಹಿಳೆ ಆಗಸ್ಟ್ 2020ರ ಅಂತ್ಯದಲ್ಲಿ ಲಂಡನ್‌ನಲ್ಲಿ ರಾತ್ರಿ ನೈಟ್‌ ಔಟ್‌ನಿಂದ ಮನೆಗೆ ತೆರಳುತ್ತಿದ್ದಾಗ ತನ್ನ ಐಫೋನ್ 6 ಅನ್ನು ಬಿಟ್ಟು ಹೋಗಿದ್ದಳು. ಬಳಿಕ ಏಪ್ರಿಲ್‌ 30, 2021 ರಂದು ಆ ಫೋನ್‌ ಆಕೆಗೆ ದೊರೆತಿದೆ. ಅಷ್ಟು ತಿಂಗಳ ಬಳಿಕ ಸಿಕ್ಕಿದ್ದಾದ್ರೂ ಹೇಗೆ ಅಂತೀರಾ..? ಮುಂದೆ ಓದಿ.

ಆ ಮಹಿಳೆ ಏಪ್ರಿಲ್‌ 30, 2021 ರಂದು ಮತ್ತೆ ಅದೇ ಉಬರ್‌ ಕಾರಿನಲ್ಲಿ ಹೋಗಿದ್ದಾಳೆ. ಆ ವೇಳೆ ಆ ಕಾರಿನ ಚಾಲಕ ಶೇ ಸಾಡ್ ಅನ್ನು ಗುರುತಿಸಿ ಮತ್ತು ಅವಳ ಫೋನ್ ಅನ್ನು ಹಿಂದಿರುಗಿಸಿದನು. ಈ ಸಂಬಂಧ ಟ್ವಿಟ್ಟರ್‌ನಲ್ಲಿ ತನ್ನ ಈ ಕತೆ ಹಂಚಿಕೊಂಡಿರುವ ಬ್ರಾಡ್‌ಕ್ಯಾಸ್ಟರ್‌ ಮಹಿಳೆ ಈ ‘ಕ್ರೇಜಿ ಪವಾಡ’ ದಿಂದ ಮಾನವೀಯತೆಯ ಮೇಲಿನ ನಂಬಿಕೆಯನ್ನು ಪುನಃಸ್ಥಾಪಿಸಲಾಗಿದೆ ಎಂದು ಬರೆದುಕೊಂಡಿದ್ದಾಳೆ.




ಸಾಡ್‌ನ ಯಾವುದೇ ಪರ್ಯಾಯ ಸಂಪರ್ಕಗಳನ್ನು ಹೊಂದಿರದ ಕಾರಣ ಚಾಲಕ ಆಗಸ್ಟ್ 2020 ರಿಂದ ಅವಳ ಫೋನ್ ಅನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದನು. ಹಾಗೂ, ಆ ಮಹಿಳೆ ಮತ್ತೆ ತನ್ನ ಕಾರು ಹತ್ತಿದರೆ ಅಥವಾ ಸಿಗುವ ಸಾಧ್ಯತೆ ಇದೆಯೆಂದು ಆಕೆಯ ಫೋನ್‌ ಅನ್ನು ತನ್ನ ಬಳಿಯೇ ಸುರಕ್ಷಿತವಾಗಿಡಲು ಅವನು ನಿರ್ಧರಿಸಿದನು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Shocking Video: ಮೊಸಳೆಯ ಸವಾರಿ ಮಾಡಿದ ಭೂಪ; ವೈರಲ್ ವಿಡಿಯೋಗೆ ಇಂಟರ್ನೆಟ್​ನಲ್ಲಿ ಭಾರೀ ಟೀಕೆಈ ಸಂಬಂಧ ಮೈ ಲಂಡನ್‌ಗೆ ಮಾಹಿತಿ ನೀಡಿದ ಶೇ ಸಾಡ್, ತಾನು ಈ ಹಿಂದೆಯೂ ವಸ್ತುಗಳನ್ನು ಕಳೆದುಕೊಂಡಿದ್ದೇನೆ ಮತ್ತು ಜನರು ಅದನ್ನು ಬಳಸಿಕೊಂಡಿದ್ದಾರೆ ಅಥವಾ ಬೇರೇನೋ ಮಾಡಿದ್ದಾರೆ. ಆದರೆ ಅಪರಿಚಿತರು ಈ ರೀತಿಯ ಕೆಲಸವನ್ನು ಮಾಡಿರುವುದು ಇದೇ ಮೊದಲು ಎಂದು ಆ ಉಬರ್‌ ಚಾಲಕನ ಪ್ರಾಮಾಣಿಕತೆಯನ್ನು ಮಹಿಳೆ ಮೆಚ್ಚಿಕೊಂಡಿರುವುದಾಗಿ ಹೇಳಿದರು. ಅಲ್ಲದೆ, ತಾನು ಆ ದಿನ ಹಲವು ಉಬರ್‌ ಕಾರುಗಳಲ್ಲಿ ಪ್ರಯಾಣ ಮಾಡಿದ್ದೆ. ಈ ಹಿನ್ನೆಲೆ ತನ್ನ ಫೋನ್‌ ಅನ್ನು ಯಾವ ಕಾರಿನಲ್ಲಿ ಬಿಟ್ಟಿದ್ದೆ ಎಂಬ ಬಗ್ಗೆ ನನಗೆ ಸುಳಿವು ಇರಲಿಲ್ಲ. ಒಮ್ಮೆ ತನ್ನ ಫೋನ್ ಕಾಣೆಯಾಗಿದೆ ಎಂದು ಸಾಡ್‌ ಅರಿತುಕೊಂಡಾಗ ಆಕೆ ತನ್ನ ಫೋನ್‌ಗೆ ಕರೆ ಮಾಡಲು ಪ್ರಯತ್ನಿಸಿದಳು. ಆದರೆ, ಆ ವೇಳೆ ಅದು ರಿಂಗ್ ಆಗಿಲ್ಲ ಎಂದೂ ಹೇಳಿದ್ದಾರೆ. ಇನ್ನು, ಆ ಉಬರ್‌ ಚಾಲಕನಿಗೆ ಚಾಕೊಲೇಟ್‌ ಅಥವಾ ಥ್ಯಾಂಕ್‌ ಯೂ ಕಾರ್ಡ್‌ ನೀಡಿ ಒಳ್ಳೆಯದನ್ನು ಮಾಡಬೇಕೆಂಬ ಬಯಕೆಯನ್ನು ಆಕೆ ವ್ಯಕ್ತಪಡಿಸಿದಳು.

ಇದನ್ನೂ ಓದಿ: ಬೆಂಕಿ ಹೊತ್ತಿ ಉರಿಯುತ್ತಿದ್ದ ಕಟ್ಟಡದಿಂದ ಜಿಗಿದು ಬಚಾವಾದ ಸಾಹಸಿ ಬೆಕ್ಕಿನ ವಿಡಿಯೋ ವೈರಲ್

ಈ ಮಧ್ಯೆ, ಉಬರ್‌ ಈ ಕತೆಗೆ ಪ್ರತಿಕ್ರಿಯೆ ನೀಡಿದ್ದು, ಪ್ರಯಾಣಿಕರಿಗೆ ತನ್ನ ಫೋನ್ ಮರಳಿ ದೊರೆತಿದೆ ಎಂದು ನೋಡಿ ತಾವು ಸಂತೋಷಪಟ್ಟಿದ್ದೇವೆ ಮತ್ತು ಚಾಲಕನು ಆ ಮಹಿಳೆಯನ್ನು ಮತ್ತೆ ನೋಡುವವರೆಗೆ ಫೋನ್‌ ಅನ್ನು ಇಟ್ಟುಕೊಂಡಿದ್ದಕ್ಕೂ ಹರ್ಷ ವ್ಯಕ್ತಪಡಿಸಿದ್ದಾರೆ.



ಕೆಲವು ತಿಂಗಳ ಹಿಂದೆ, ಕೋಲ್ಕತ್ತಾದ ಉಬರ್ ಚಾಲಕನೊಬ್ಬ ತನ್ನ ಕ್ಯಾಬ್‌ನಲ್ಲಿ ಬಿಟ್ಟುಹೋಗಿದ್ದ ಅಮೂಲ್ಯವಾದ ವಸ್ತುಗಳನ್ನು ಹೊಂದಿರುವ ಬ್ಯಾಗ್‌ ಅನ್ನು ಅದರ ಮಾಲೀಕರಿಗೆ ಹಿಂದಿರುಗಿಸಿದ್ದಕ್ಕಾಗಿ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದರು. ಆ ಬ್ಯಾಗ್‌ನಲ್ಲಿ ಲ್ಯಾಪ್‌ಟಾಪ್, ನಗದು, ಕೀಗಳು ಮತ್ತು ಕೆಲವು ಪುಸ್ತಕಗಳಿದ್ದವು. ಅಭಿಜಿತ್ ಮಜೂಂದರ್‌ ಎಂಬ ಪತ್ರಕರ್ತ ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಈ ಕತೆಯನ್ನು ಹಂಚಿಕೊಂಡಿದ್ದರು.
Published by: Sushma Chakre
First published: May 22, 2021, 9:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories