• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Uber: ನಿಮ್ಮ ಮೊಬೈಲ್​ನಲ್ಲಿ​ ಬ್ಯಾಟರಿ ಕಡಿಮೆ ಇದ್ರೆ ಊಬರ್​ ಬಿಲ್ ಜಾಸ್ತಿ ಆಗುತ್ತಂತೆ! ಏನಿದು ವಿಷ್ಯ?

Uber: ನಿಮ್ಮ ಮೊಬೈಲ್​ನಲ್ಲಿ​ ಬ್ಯಾಟರಿ ಕಡಿಮೆ ಇದ್ರೆ ಊಬರ್​ ಬಿಲ್ ಜಾಸ್ತಿ ಆಗುತ್ತಂತೆ! ಏನಿದು ವಿಷ್ಯ?

ಊಬರ್​

ಊಬರ್​

‘ಡೆರ್ನಿಯರ್​​ ಹ್ಯೂರೆ’ ಎನ್ನುವ ಬೆಲ್ಜಿಯಂ ವಾರ್ತಾ ಪತ್ರಿಕೆ ಊಬರ್​​ನ ಪ್ರಯಾಣದ ಮೊತ್ತದ ಬಗ್ಗೆ ಸಂಶೋಧನೆಯೊಂದನ್ನು ಕೈಗೊಂಡಿದೆ. ಇದರಲ್ಲಿ ಪ್ರಯಾಣದ ಮೊತ್ತದಲ್ಲಿ ವ್ಯತ್ಯಾಸ ಕಂಡು ಬಂದಿದೆ.

  • Share this:

ಖಾಸಗಿ ವಾಹನಗಳ ರೈಡ್​ಗಳಲ್ಲಿ (Ride) ಬೆಲೆ ವ್ಯತ್ಯಾಸದ ಕಾರಣದಿಂದ ಗ್ರಾಹಕರು ಮತ್ತು ಚಾಲಕರ ನಡುವೆ ವಾಗ್ವಾದ ನಡೆಯುವುದು ಸಾಮಾನ್ಯ. ಕೆಲವೊಮ್ಮೆ ಗ್ರಾಹಕನಿಗೆ ತೋರಿಸಿದ ಬೆಲೆಗೂ, ಚಾಲಕನ   ಆ್ಯಪ್​ನಲ್ಲಿ ಕಾಣುವ ಬೆಲೆಗೂ ವ್ಯತ್ಯಾಸವಾಗಿರುವುದು ಉಂಟು. ಇದಕ್ಕೆ ಹಿಂದಿನ ರೈಡ್ ಕ್ಯಾನ್ಸಲ್ (Cancel)​ ಮಾಡಿರುವುದು ಮುಖ್ಯ ಕಾರಣ ಎಂಬ ಗಲಾಟೆಗಳು ಆಗಿರುವುದು ಉಂಟು. ಹೀಗೆ ಗ್ರಾಹಕರು ಮತ್ತು ಚಾಲಕರ ನಡುವೆ ಪ್ರಯಾಣದ ಹಣದಲ್ಲಿ ವ್ಯತ್ಯಾಸವಾಗುವುದು ಹೊಸದೇನಲ್ಲ. ಆದರೆ ಬೆಲ್ಜಿಯಂ ವಾರ್ತಾ ಪತ್ರಿಕೆ ಒಂದು ಅಧ್ಯಯನ ನಡೆಸಿದ್ದು ಅದರಲ್ಲಿ ಬೇರೆಯದೇ ಕಾರಣಕ್ಕೆ ಪ್ರಯಾಣದ ಮೊತ್ತದಲ್ಲಿ ವ್ಯತ್ಯಾಸವಾಗಿರುವುದು ಕಂಡು ಬಂದಿದೆ. ಅಲ್ಲದೇ ಈ ಕಾರಣಗಳು (Reason) ನಿಜಕ್ಕೂ ಆಘಾತಕಾರಿಯಾಗಿದೆ.


ಏನಿದು ಅಧ್ಯಯನ?


‘ಡೆರ್ನಿಯರ್​​ ಹ್ಯೂರೆ’ ಎನ್ನುವ ಬೆಲ್ಜಿಯಂ ವಾರ್ತಾ ಪತ್ರಿಕೆ ಊಬರ್​​ನ ಪ್ರಯಾಣದ ಮೊತ್ತದ ಬಗ್ಗೆ ಸಂಶೋಧನೆಯೊಂದನ್ನು ಕೈಗೊಂಡಿದೆ. ಇದರಲ್ಲಿ ಪ್ರಯಾಣದ ಮೊತ್ತದಲ್ಲಿ ವ್ಯತ್ಯಾಸ ಕಂಡು ಬಂದಿದೆ.


ಒಬ್ಬ ವ್ಯಕ್ತಿ ಕಡಿಮೆ ಬ್ಯಾಟರಿ ಇರುವ ಮೊಬೈಲ್​​ನಿಂದ ರೈಡ್​ ಬುಕ್​​ ಮಾಡಿದರೆ ಆತನಿಗೆ ಕ್ಯಾಬ್​ ದರ ಹೆಚ್ಚಾಗಿರುತ್ತದೆ ಎನ್ನುವ ಆರೋಪವನ್ನು ಈ ಸಂಶೋಧನೆ ಮೂಲಕ ಮಾಡಲಾಗಿದೆ.


ಹೇಗೆ ನಡೆಯಿತು ಈ ಸಂಶೋಧನೆ?


ಶೇಕಡಾ 84 ರಷ್ಟು ಬ್ಯಾಟರಿ ಹೊಂದಿರುವ ಫೋನ್​​ನಲ್ಲಿ ಒಂದು ಕ್ಯಾಬ್​ ಬುಕ್ ಮಾಡಲಾಯಿತು. ಪುನಃ ಇನ್ನೊಂದು ಮೊಬೈಲ್​ನಲ್ಲಿ ಶೇಕಡಾ 12 ರಷ್ಟು ಬ್ಯಾಟರಿ ಇದ್ದ ಸ್ಮಾರ್ಟ್​​ ಫೋನ್​ನಿಂದ ಕ್ಯಾಬ್​ ಬುಕ್​ ಮಾಡಲಾಯಿತು.


ಇದನ್ನೂ ಓದಿ: ಪ್ರೈವೇಟ್​ ಜೆಟ್‌ನಲ್ಲಿ ಕೇವಲ 13 ಸಾವಿರಕ್ಕೆ ರಾಜನಂತೆ ಪ್ರಯಾಣಿಸಿದ ಯುಕೆ ಪ್ರಯಾಣಿಕ!


ಆದರೆ 12 ರಷ್ಟಿದ್ದ ಮೊಬೈಲ್​ನಿಂದ ಬುಕ್​ ಮಾಡಿದ ಕ್ಯಾಬ್​​ 84 ರಷ್ಟು ಬ್ಯಾಟರಿ ಇದ್ದ ಮೊಬೈಲ್​​ ನಲ್ಲಿ ಬುಕ್​ ಮಾಡಿದ್ದ ಕ್ಯಾಬ್​ಗಿಂತ ಶೇಕಡಾ 6 ರಷ್ಟು ಹೆಚ್ಚಿನ ಮೊತ್ತವನ್ನು ತೋರಿಸುತ್ತಿತ್ತು. ಸಾಮಾನ್ಯವಾಗಿ ಐಓಎಸ್​ ಮತ್ತು ಆಂಡ್ರಾಯ್ಡ್​​ನಿಂದ ಕ್ಯಾಬ್​ ಬುಕ್​ ಮಾಡುವಾಗ ಈ ವ್ಯತ್ಯಾಸ ನೋಡಲಾಗಿದೆ.


ಈ ಅಧ್ಯಯನ ನಡೆದಿದ್ದು ಎಲ್ಲಿ?


ಈ ಅಧ್ಯಯನವನ್ನು ಬ್ರುಸೆಲ್ಸ್​​ನಲ್ಲಿ ನಡೆಸಲಾಯಿತು. ಒಂದೇ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಎರಡು ಬುಕಿಂಗ್​ಗಳನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ 84 ರಷ್ಟು ಬ್ಯಾಟರಿ ಹೊಂದಿದ್ದ ಪ್ರಯಾಣ ದರ 16.60 ಯುರೋ ಎಂದು ತೋರಿಸಿತು. 12 ರಷ್ಟು ಬ್ಯಾಟರಿ ಹೊಂದಿದ್ದ ಪ್ರಯಾಣ ದರ 17.56 ಯುರೋ ಎಂದು ತೋರಿಸಿತು.


ಊಬರ್ ಏನು ಹೇಳುತ್ತದೆ?


ಈ ಎರಡು ಪೋನ್​ಗಳ ರೈಡ್​ ಬುಕಿಂಗ್​ ಬಗ್ಗೆ ಊಬರ್​ ಅಲ್ಲಗಳೆದಿದೆ. ನಾವು ಈ ರೀತಿ ದರ ನಿರ್ಧಾರ ಮಾಡುವುದಿಲ್ಲ ಎಂದು ಹೇಳಿದೆ. ಊಬರ್​​ ದರ ನಿರ್ಧಾರದಲ್ಲಿ ಬೇಡಿಕೆ ಮತ್ತು ಅದಕ್ಕೆ ಪ್ರತಿಕ್ರಿಯಿಸುವ ಚಾಲಕರ ಪೂರೈಕೆಯಿಂದ ನಿರ್ಧರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಪ್ರಯಾಣದ ದರವನ್ನು ಅಂದಾಜಿಸಲು ಫೋನ್​​ನ ಬ್ಯಾಟರಿ ಮಟ್ಟವನ್ನು ಮಾನದಂಡವಾಗಿಸಿಕೊಳ್ಳುವುದಿಲ್ಲ ಎಂದು ಆರೋಪ ನಿರಾಕರಿಸಿದೆ.


ಊಬರ್​ ಮೇಲಿನ ಆರೋಪ ಇದೇ ಮೊದಲೇನಲ್ಲ


ಬಳಕೆದಾರರ ಬ್ಯಾಟರಿ ಅವಧಿಯ ದುರ್ಬಳಕೆ ಬಗ್ಗೆ 2016 ರಲ್ಲಿ ಕಂಪನಿಯ ಆರ್ಥಿಕ ಸಂಶೋಧನೆಯ ಮಾಜಿ ಮುಖ್ಯಸ್ಥ ಕೀತ್​​ ಚೆನ್​​ ಎನ್​ಆರ್​​ಪಿ ಯ ಜೊತೆಗೆ ಹಂಚಿಕೊಂಡಿದ್ದರು.


ಇದನ್ನೂ ಓದಿ: ಬಣ್ಣಾ ನನ್ನ ಒಲವಿನ ಬಣ್ಣ, ಪುರುಷರಿಗೆ ಯಾಕೆ ಈ ಬಣ್ಣ ಅಂದ್ರೆ ಅಷ್ಟು ಇಷ್ಟ?


ಜನರು ಎಷ್ಟೇ ಮೊತ್ತವಾದರೂ ನೀಡುತ್ತಾರೆ, ಪ್ರಶ್ನೆ ಮಾಡುವುದಿಲ್ಲ ಎಂದು ಊಬರ್​​ ಭಾವಿಸಿಕೊಂಡಿದೆ. ಆದರೆ ಇದಕ್ಕೆ ಬ್ಯಾಟರಿ ದುರ್ಬಳಕೆ ಮಾಡಿಕೊಳ್ಳುತ್ತದೆ ಎನ್ನುವುದು ಒಪ್ಪಲಾಗುವುದಿಲ್ಲ ಎಂದರು.
ಡೇಟಾ ಬಳಕೆ ಬಗ್ಗೆ ತಜ್ಞರು ಕಳವಳ


ಈ ರೀತಿ ಬೆಲೆ ನಿರ್ಧಾರ ಮಾಡುವ ಆತುರದಲ್ಲಿ ಗ್ರಾಹಕರ ಡೇಟಾವನ್ನು ಬಳಸುವುದು ನೈತಿಕವಾಗಿ ಸರಿಯಲ್ಲ. ಇದು ಗ್ರಾಹಕನ ಗೌಪ್ಯತೆಗೆ ಧಕ್ಕೆ ತರುತ್ತದೆ. ಜೊತೆಗೆ ಊಬರ್​​ ಪ್ರಯಾಣ ದರ ನೀತಿಯಲ್ಲಿ ಪಾರದರ್ಶಕತೆ ಇರುವುದಿಲ್ಲ. ಇದು ಗ್ರಾಹಕರಲ್ಲೂ ಆತಂಕ ಮೂಡಿಸುತ್ತದೆ ಎಂದಿದ್ದಾರೆ.

top videos
    First published: