Viral News: ತನ್ನನ್ನು ಕಚ್ಚಿದ ಹಾವಿಗೆ ಕಚ್ಚಿ ಸೇಡು ತೀರಿಸಿದ 2 ವರ್ಷದ ಕಂದ, ಸತ್ತ ಉರಗ!

ಟರ್ಕಿಯಲ್ಲಿ ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕಿಯೊಬ್ಬಳಿಗೆ ಹಾವು ಕಚ್ಚಿದೆ. ಕೋಪಗೊಂಡ ಮಗು ಪ್ರತಿಯಾಗಿ ಆ ಹಾವನ್ನೇ ಕಚ್ಚಿದ್ದು, ಅದನ್ನು ಸಾಯಿಸಿ ತನ್ನ ಸೇಡು ತೀರಿಸಿಕೊಂಡಿದೆ.

ಹಾವಿಗೆ ಕಚ್ಚಿದ ಬಾಲಕಿ

ಹಾವಿಗೆ ಕಚ್ಚಿದ ಬಾಲಕಿ

  • Share this:
ಅಂಕಾರಾ(ಆ.17): ಯಾರಾದರೂ ಹಾವನ್ನು (Snake) ಕಂಡರೆ, ಬೆಚ್ಚಿ ಬೀಳುತ್ತಾರೆ. ಭಯದಿಂದ ನಡುಗಲಾರಂಭಿಸುತ್ತಾರೆ. ಏನು ಮಾಡಬೇಕೆಂದು ತಿಳಿಯದೆ ಒದ್ದಾಡುತ್ತಾರೆ. ಆದರೆ ಟರ್ಕಿಯ (Turkey) ಬಿಂಗೋಲ್‌ನ ಕಾಂತಾರ್ ಗ್ರಾಮದ ಪುಟ್ಟ ಬಾಲಕಿ ಇದಕ್ಕೆ ವಿರುದ್ಧವಾಗಿ ವರ್ತಿಸಿದೆ. ಈ ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಹಾವು ಕಚ್ಚಿದೆ. ಇದರಿಂದ ಕೋಪಗೊಂಡ ಮಗು ತಿರುಗಿ ಹಾವನ್ನು ಹಿಡಿದು ಕಚ್ಚಿ ಸಾಯಿಸಿದ್ದಾಳೆ.

ಅರೇ....! ಇದೇನಿದು ಅಂತ ಅಚ್ಚರಿ ಪಡಬೇಡಿ. ನಂಬಲಸಾಧ್ಯವಾದರೂ ಇದು ಟರ್ಕಿಯಲ್ಲಿ ನಡೆದ ಸತ್ಯ ಘಟನೆ. ವರದಿಯ ಪ್ರಕಾರ, ಮಗುವಿನ ಕಿರುಚಾಟವನ್ನು ಕೇಳಿದ ನೆರೆಹೊರೆಯವರು ಓಡಿ ಬಂದು ಏಕೆ ಇಷ್ಟು ಗಲಾಟೆಯಾಗಿದೆ ಎಂದು ನೋಡಿದ್ದಾರೆ. ಆದರೆ ಹೊರ ಬಂದ ಅವರು ಅಲ್ಲಿನ ಸ್ಥಿತಿ ಕಂಡು ಬೆಚ್ಚಿ ಬಿದ್ದಿದ್ದಾರೆ. ಕೇವಲ ಎರಡು ವರ್ಷದ ಮಗು ತನ್ನ ಹಲ್ಲುಗಳ ನಡುವೆ ಹಾವನ್ನು ಹಿಡಿದಿದ್ದಳು. ಅದರ ಕೆಳತುಟಿಯ ಮೇಲೆ ಕಚ್ಚಿದ ಗುರುತು ಕೂಡ ಇತ್ತು.

ಇದನ್ನೂ ಓದಿ:  Rat Snake Poison: ಕೇರೆ ಹಾವಿಗೆ ಬಾಲದಲ್ಲಿ ವಿಷ ಇದೆಯೇ? ನಾಗರ ಹಾವಿಗೂ ಕೇರೆ ಹಾವಿಗೂ ಏನು ಸಂಬಂಧ?

ಮಗು ಹೇಗಿದೆ?

ನೆರೆಹೊರೆಯವರು ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿ, ವೈದ್ಯಾಧಿಕಾರಿಗಳನ್ನು ಕರೆದರು. ಅಷ್ಟರಲ್ಲಾಗಲೇ ಮಗು ಕಚ್ಚಿದ್ದ ಪರತಿಣಾಮ ಹಾವು ಸತ್ತು ಬಿದ್ದಿತ್ತು. ಇದರ ನಂತರ ಬಾಲಕಿಯನ್ನು ಬಿಂಗೊಲ್ಗ್ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ 24 ಗಂಟೆಗಳ ಕಾಲ ನಿಗಾ ಇರಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿಯ ದೇಹದಲ್ಲಿ ವಿಷ ಪತ್ತೆಯಾಗದ ಹಿನ್ನೆಲೆಯಲ್ಲಿ ಬಾಲಕಿಯ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಎಲ್ಲರೂ ಈ ಘಟನೆಯನ್ನು ಪವಾಡಕ್ಕಿಂತ ಕಡಿಮೆಯಿಲ್ಲ ಎಂದು ಪರಿಗಣಿಸುತ್ತಿದ್ದಾರೆ.ಮಗುವಿನ ತಂದೆ ಈ ಬಗ್ಗೆ ಮಾತನಾಡುತ್ತಾ "ಅಲ್ಲಾ ನಿಜವಾಗಿಯೂ ಅವಳನ್ನು ರಕ್ಷಿಸಿದ್ದಾನೆ, ನಮ್ಮ ನೆರೆಹೊರೆಯವರು ನನ್ನ ಮಗುವಿನ ಕೈಯಲ್ಲಿ ಹಾವು ಇದೆ ಎಂದು ಹೇಳಿದರು. ಅವಳು ಅದರೊಂದಿಗೆ ಆಟವಾಡುತ್ತಿದ್ದಳು. ನೋಡ ನೋಡುತ್ತಿದ್ದಂತೆಯೇ ಹಾವು ಆಕೆಗೆ ಕಚ್ಚಿದೆ. ಕೂಡಲೇ ಮಗು ಕೂಡಾ ಕೋಪದಲ್ಲಿ ಹಾವನ್ನು ಕಚ್ಚಿ ಎಳೆದಾಡಿದೆ ಎಂದಿದ್ದಾರೆ.

ಇದನ್ನೂ ಓದಿ:  Frog and Snake: ಹಾವು, ಕಪ್ಪೆಗಳಿಂದ ಆರ್ಥಿಕತೆಗೆ 1.2 ಲಕ್ಷ ಕೋಟಿ ರೂ. ನಷ್ಟವಂತೆ! ಶಾಕ್ ಆಗ್ಬೇಡಿ ವಿಷಯ ತಿಳ್ಕೊಳ್ಳಿ

ಹುಡುಗಿ ಅದೃಷ್ಟಶಾಲಿ

ವಾಸ್ತವವಾಗಿ, ಈ ಹುಡುಗಿ ತುಂಬಾ ಅದೃಷ್ಟಶಾಲಿ. ಇನ್ನು ಕಚ್ಚಿದ ಹಾವು ಯಾವ ಜಾತಿಯದ್ದು, ಎಷ್ಟು ಅಪಾಯಕಾರಿ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಫಲಿತಾಂಶಗಳಿಂದ ಸ್ಪಷ್ಟವಾಗುವಂತೆ ಹಾವು ಬಹುಶಃ ಮಾರಣಾಂತಿಕ ವಿಷದಿಂದ ಕೂಡಿರಲಿಲ್ಲ ಎಂದು ಊಹಿಸಬಹುದು.
Published by:Precilla Olivia Dias
First published: