Lesbian Marriage: ಎಲ್ಲಾ ಅಡೆತಡೆಗಳನ್ನು ಮೀರಿ ಮದುವೆಯಾಗಲಿರುವ ಮಹಿಳಾ ವೈದ್ಯರು.. ಇಂಟ್ರೆಸ್ಟಿಂಗ್​ ಕಹಾನಿ ಇಲ್ಲಿದೆ

Same Sex Marriage: ಮಹಾರಾಷ್ಟ್ರದ ನಾಗಪುರದ ನಿವಾಸಿಗಳಾಗಿರುವ ಡಾ.ಪರೊಮಿತಾ ಮುಖರ್ಜಿ ಮತ್ತು ಡಾ. ಸುರಭಿ ಮಿತ್ರ ಇವರು ದಾಂಪತ್ಯಕ್ಕೆ ಎಲ್ಲರ ಸಮ್ಮುಖದಲ್ಲಿ ಅಡಿ ಇಡಲು ಮುಂದಾಗಿದ್ದಾರೆ. ನಾಗ್ಪುರದಲ್ಲಿ ವಿವಾಹವಾಗಲಿರುವ ಇವರು, ಗೋವಾದಲ್ಲಿ ಹನಿಮೂನ್‌ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ

ಮಹಿಳಾ ವೈದ್ಯರು

ಮಹಿಳಾ ವೈದ್ಯರು

 • Share this:
  ವಿಶ್ವದಲ್ಲಿ ಸಾಕಷ್ಟು ರಾಷ್ಟ್ರಗಳಲ್ಲಿ (Country) ಸಲಿಂಗಿಗಳ ಸಂಬಂಧಕ್ಕೆ ಅನುಮತಿ ನೀಡಲಾಗಿದೆ ಅದರಲ್ಲಿ ಭಾರತವೂ ಒಂದು. ಸಲಿಂಗ ವಿವಾಹ (Same Sex Marriage) ಈಗೀಗ ಬೆಳಕಿಗೆ ಬರುತ್ತಿದ್ದರೂ ಅದನ್ನು ಮುಕ್ತ ಮನಸಿನಿಂದ ಎಲ್ಲರೂ ಒಪ್ಪಿಕೊಳ್ಳುವುದಿಲ್ಲ. ಅದರಲ್ಲೂ ಭಾರತದಂಥ (India)ದೇಶದಲ್ಲಿ ಕೆಲವಕ್ಕೆಲ್ಲ ಕಾನೂನಿನಲ್ಲಿ(Law) ಅವಕಾಶ ಕೊಟ್ಟರೂ, ಜನರ ಮನಸಿನಲ್ಲಿ ಸ್ಥಳ ಇರುವುದಿಲ್ಲ. ಅನೇಕರು ಅದನ್ನು ಒಪ್ಪಿಕೊಳ್ಳುವುದಿಲ್ಲ. ಅದರಲ್ಲಿ ಈ ಸಲಿಂಗ ವಿವಾಹವೂ ಒಂದು. ಆದರೂ ಸಹ ಕಾನೂನುಬದ್ಧ ಅನುಮತಿ ಸಿಕ್ಕ ಮೇಲೆ ನಮಗೆ ಯಾವ ಚಿಂತೆಯೂ ಇಲ್ಲ ಯಾರು ಅನುಮತಿಯೂ ಬೇಕಿಲ್ಲ ಎಂದು ಭಾರತದಲ್ಲಿ ಆಗೊಮ್ಮೆ-ಈಗೊಮ್ಮೆ ಸಲಿಂಗಿಗಳ ವಿವಾಹ ನಡೆಯುತ್ತಲೇ ಇದೆ.. ಅದೇ ರೀತಿ ಈಗ ತೆಲಂಗಾಣದಲ್ಲಿ ಇಬ್ಬರು ಪುರುಷರು ಮದುವೆಯಾಗಿ ಅಚ್ಚರಿ ಮೂಡಿಸಿದ್ರು. ಇದರ ನಡುವೆ ಮಹಾರಾಷ್ಟ್ರದಲ್ಲಿ ಇಬ್ಬರು ವೈದ್ಯರು ರಿಂಗ್ ಬದಲಾಯಿಸಿಕೊಳ್ಳುವ ಮೂಲಕ ಮತ್ತೊಂದು ಸಲಿಂಗ ವಿವಾಹಕ್ಕೆ ಭಾರತದಲ್ಲಿ ಸಜ್ಜಾಗಿದ್ದಾರೆ.

  ಮದುವೆಯಾಗಲು ನಿಶ್ಚಯಮಾಡಿದ ಇಬ್ಬರು ವೈದ್ಯರು

  ಕಳೆದ ತಿಂಗಳಲ್ಲಿ ದಕ್ಷಿಣ ಭಾರತದಲ್ಲಿ ನಡೆದ ಮೊದಲ ಸಲಿಂಗಿಗಳ ವಿವಾಹ ಭಾರಿ ಸದ್ದು ಮಾಡಿತ್ತು.. ಇದರ ನಡುವೆ ಮಹಾರಾಷ್ಟ್ರದ ನಾಗಪುರದಲ್ಲಿ ಇಬ್ಬರು ವೈದ್ಯರು ಮದುವೆಯಾಗಲು ತೀರ್ಮಾನ ಮಾಡಿ ದೇಶದಲ್ಲಿ ಮತ್ತೊಂದು ಸಲಿಂಗಿಗಳ ವಿವಾಹಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ.. ನಿಸರ್ಗವೇ ತಮ್ಮ ದೇಹಪ್ರಕೃತಿಯನ್ನು ಈ ರೀತಿ ಮಾಡಿರುವಾಗ ನಮ್ಮದಲ್ಲದ ತಪ್ಪಿಗೆ ಏಕೆ ಮುಜುಗರ ಪಟ್ಟು ಕೊಳ್ಳಬೇಕು ಎಂದು ಇಬ್ಬರು ಮಹಿಳಾ ವೈದ್ಯರು ಮದುವೆಯಾಗುವ ತೀರ್ಮಾನಕ್ಕೆ ಬಂದಿದ್ದಾರೆ.

  ಇದನ್ನೂ ಓದಿ: ತೆಲಂಗಾಣದಲ್ಲಿ ನಡೆಯಿತು ದಕ್ಷಿಣ ಭಾರತದ ಮೊದಲ ಸಲಿಂಗಿಗಳ ಮದ್ವೆ! ಮನೆಯವರ ಒಪ್ಪಿಗೆ ಪಡೆದು ವಿವಾಹವಾದ ಜೋಡಿ

  ಹೌದು..ಮಹಾರಾಷ್ಟ್ರದ ನಾಗಪುರದ ನಿವಾಸಿಗಳಾಗಿರುವ ಡಾ.ಪರೊಮಿತಾ ಮುಖರ್ಜಿ ಮತ್ತು ಡಾ. ಸುರಭಿ ಮಿತ್ರ ಇವರು ದಾಂಪತ್ಯಕ್ಕೆ ಎಲ್ಲರ ಸಮ್ಮುಖದಲ್ಲಿ ಅಡಿ ಇಡಲು ಮುಂದಾಗಿದ್ದಾರೆ. ನಾಗ್ಪುರದಲ್ಲಿ ವಿವಾಹವಾಗಲಿರುವ ಇವರು, ಗೋವಾದಲ್ಲಿ ಹನಿಮೂನ್‌ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

  ಪರಸ್ಪರ ಒಪ್ಪಿಗೆಯಿಂದ ಮದುವೆ

  ಪರೊಮಿತಾ ಮುಖರ್ಜಿ, 'ಇದರಲ್ಲಿ ತಪ್ಪೇನು ಎಂದು ನಮಗೆ ಅನ್ನಿಸುತ್ತಿಲ್ಲ. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ಇದನ್ನು ನಾವು ಜೀವಮಾನದ ಬದ್ಧತೆ ಎಂದು ಕರೆಯುತ್ತೇವೆ' ಎಂದಿದ್ದಾರೆ. ಈ ಮದುವೆಗೆ ಮನೆಯವರ ಒಪ್ಪಿಗೆ ಇದೆಯೇ ಎಂದು ಕೇಳಿದಾಗ, 2013ರಲ್ಲಿ ನನ್ನ ದೇಹದಲ್ಲಿ ಬದಲಾವಣೆಯಾಯಿತು. ಅಂದರೆ ಸಾಮಾನ್ಯವಾಗಿ ವಯಸ್ಸಿಗೆ ಬರುತ್ತಿದ್ದಂತೆಯೇ ವಿರುದ್ಧ ಲಿಂಗಿಗಳ ಮೇಲೆ ಆಕರ್ಷಣೆ ಹೆಚ್ಚಾಗುತ್ತದೆ. ಆದರೆ ನನಗೆ ಹೆಣ್ಣುಮಕ್ಕಳ ಮೇಲೆಯೇ ಆಕರ್ಷಣೆ ಹೆಚ್ಚಾಗುವಂತೆ ಕಂಡಿತು. ಇದನ್ನು ನನ್ನ ತಂದೆಯ ಬಳಿಗೆ ಹೇಳಿದ್ದೆ. ಆದರೆ ಆಗ ತಾಯಿಗೆ ಈ ವಿಷಯ ತಿಳಿದಿರಲಿಲ್ಲ. ಇತ್ತೀಚೆಗೆ ನನ್ನ ತಾಯಿಗೆ ಹೇಳಿದಾಗ ಅವರು ಮೊದಲಿಗೆ ಶಾಕ್​ಗೆ ಒಳಗಾದರೂ, ನಂತರ ಡಾ.ಸುರಭಿಯೊಂದು ಮದುವೆಗೆ ಒಪ್ಪಿದ್ದಾರೆ ಎಂದು ಹೇಳಿದ್ದಾರೆ

  ಇದನ್ನೂ ಓದಿ: ಸಲಿಂಗ ವಿವಾಹ ಮೂಲಭೂತ ಹಕ್ಕಲ್ಲ, ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ; ಕೇಂದ್ರ ಸರ್ಕಾರ

  ತೆಲಂಗಾಣದಲ್ಲಿಯೂ ನಡೆದಿತ್ತು ಮೊದಲ ಸಲಿಂಗಿ ವಿವಾಹ..

  31ವರ್ಷದ ಸುಪ್ರಿಯೊ ಚಕ್ರವರ್ತಿ ಮತ್ತು 34 ವರ್ಷದ ಅಭಯ್ ದಂಗೆ ಹೈದರಾಬಾದ್ ನಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳುವ ಮೂಲಕ ದಕ್ಷಿಣ ಭಾರತದಲ್ಲಿ ಸಲಿಂಗ ವಿವಾಹ ಮಾಡಿಕೊಂಡ ಮೊದಲ ಜೋಡಿಗಳು ಎನಿಸಿಕೊಂಡಿದ್ದಾರೆ.ಪಶ್ಚಿಮ ಬಂಗಾಳ ಮೂಲದ ಸುಪ್ರಿಯೊ ಹೈದರಾಬಾದ್ ನಲ್ಲಿ ಹೊಟೇಲ್ ಉದ್ಯಮದ ವೃತ್ತಿಯಲ್ಲಿದ್ದು ಪಂಜಾಬಿಯಾಗಿರುವ ಅಭಯ್ ಇ ಕಾಮರ್ಸ್ ಸಂಸ್ಥೆಯೊಂದರಲ್ಲಿ ವೃತ್ತಿಯಲ್ಲಿರುವ ಐಟಿ ಉದ್ಯೋಗಿ. ಪ್ಲಾನೆಟ್ ರೋಮಿಯೊ ಎಂಬ ಡೇಟಿಂಗ್ ಆಪ್ ಮೂಲಕ ಎಂಟು ವರ್ಷಗಳ ಹಿಂದೆ ಪರಿಚಿತವಾದ ಇವರಿಬ್ಬರೂ ನಂತರ ಡೇಟಿಂಗ್ ನಲ್ಲಿದ್ದರು. ಈ ವರ್ಷದ ಆರಂಭದಲ್ಲಿ ಮದುವೆಯಾಗಲು ಬಯಸಿದ್ದರು. ಅದರಂತೆ ವಿಕರಾಬಾದ್ ಹೆದ್ದಾರಿಯಲ್ಲಿರುವ ಟ್ರಾನ್ಸ್ ಗ್ರೀನ್ ಫೀಲ್ಡ್ಸ್ ರೆಸಾರ್ಟ್ ನಲ್ಲಿ ಅದ್ದೂರಿ ಸಮಾರಂಭದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ರು
  Published by:ranjumbkgowda1 ranjumbkgowda1
  First published: