'ಕಾಲಾ'ನಿಗೆ ಅಂಟಿದ ಪೈರಸಿ ಕಾಟ; ವೈರಲ್​ ಆದ 2 ನಿಮಿಷದ ವಿಡಿಯೋ


Updated:June 7, 2018, 6:04 PM IST
'ಕಾಲಾ'ನಿಗೆ ಅಂಟಿದ ಪೈರಸಿ ಕಾಟ; ವೈರಲ್​ ಆದ 2 ನಿಮಿಷದ ವಿಡಿಯೋ

Updated: June 7, 2018, 6:04 PM IST
ಚೆನ್ನೈ: ವಿಶ್ವದಾದ್ಯಂತ ನಟ ರಜನಿಕಾಂತ್​ ಅಭಿನಯದ ಕಾಲಾ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಚಿತ್ರತಂಡಕ್ಕೆ ಆನ್​ಲೈನ್​ ಪೈರಸಿ ಕಾಟ ತಟ್ಟಿದೆ.

ಕಾವೇರಿ ನೀರು ವಿಚಾರಕ್ಕೆ ಸಂಬಂದಿದಂತೆ ರಜನಿಕಾಂತ್​ ನೀಡಿದ್ದ ಹೇಳಿಕೆಯಿಂದ ಕರ್ನಾಟಕಲ್ಲಿ ಚಿತ್ರ ಪ್ರದರ್ಶನವನ್ನು ನಿಷೇಧಿಸುವಂತೆ ಕೋರಿ ಪ್ರತಿಭಟನೆಗಳು ನಡೆದಿದ್ದವು. ಇದೆಲ್ಲವನ್ನೂ ದಾಟಿ ಕರ್ನಾಟಕದಲ್ಲಿ ಗುರುವಾರ ಸಂಜೆ ವೇಳೆಗೆ ಕಾಲಾ ಪ್ರದರ್ಶನ ಕಂಡಿತ್ತು. ಆದರೆ ಈ ಎಲ್ಲದರ ಮಧ್ಯೆ ಕಾಲಾ ಚಿತ್ರಕ್ಕೆ ಕಂಟಕವಾಗಿದ್ದು ತಮಿಳ್​ ಹ್ಯಾಕರ್ಸ್​ ಮತ್ತು ಸಾಮಾಜಿಕ ಜಾಲತಾಣದ ಉತೇಚ್ಚ ಬಳಕೆ.

ಗುರುವಾರ ಮುಂಜಾನೆ ಪ್ರದರ್ಶನ ಕಂಡ ಕಾಲಾ ಚಿತ್ರ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಚಿತ್ರದ 2 ನಿಮಿಷದ ವಿಡಿಯೋ ಸಾಮಜಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮತ್ತೊಂದೆಡೆ ಸಿಂಗಾಪುರದಲ್ಲಿ ಸಿನಿಮಾ ಪ್ರದರ್ಶನದ ವೇಳೆ ಅಭಿಮಾನಿಯೊಬ್ಬ ಫೇಸ್​ಬುಕ್​ ಲೈವ್​ ಬಂದಿರುವುದೂ ಸಹ ವೈರಲ್​ ಆಗಿದೆ.

ಸಿಂಗಾಪುರದ ಅಭಿಮಾನಿ ಪ್ರವೀಣ್​ ಥೇವಾರ್​ ಎಂಬಾತ ಚಿತ್ರವನ್ನು 40 ನಿಮಿಷಗಳ ಕಾಲ ಫೇಸ್​ಬುಕ್​ನಲ್ಲಿ ಲೈವ್​ ಹರಿಬಿಟ್ಟಿದ್ದಾನೆ. ಈ ವಿಡಿಯೋ ಸುಮಾರು 15 ಸಾವಿಕ್ಕು ಅಧಿಕ ಮಂದಿ ಲೈವ್​ ವೀಕ್ಷಿಸಿದ್ದಾರಂತೆ. ವಿಚಾರ ರಜನಿ ಅಭಿಮಾನಿಗಳಿಗೆ ತಿಳಿಯುತ್ತಿದ್ದಂತೆಯೇ ಆತನಿಗೆ ಧಮ್ಕಿ ಹಾಕಿ ಸಿಂಗಾಪುರ ಪೊಲೀಸರಿಗೆ ಮಾಹಿತಿ ಲೈವ್​ ಸ್ಥಗಿತಗೊಳಿಸಿದ್ದಾರೆ.

ಇನ್ನು ಚಿತ್ರ ಬಿಡುಗಡೆಯನ್ನು ಲೈವ್​ ನೀಡುತ್ತೇವೆ ಎಂದು ಸವಾಲು ಹಾಕಿದ್ದ ತಮಿಳ್​ ಗನ್​ ಹ್ಯಾಕರ್ಸ್​ ತಂಡ ಹೇಳಿದಂತೆಯೇ ಚಿತ್ರ ಪ್ರದರ್ಶನ ಕಂಡ ಕೆಲವೇ ಕ್ಷಣಗಳಲ್ಲಿ ಸಂಪೂರ್ಣ ಸಿನಿಮಾಧ ವೀಡಿಯೋವನ್ನು ತಮ್ಮ ಅಂತರ್ಜಾದಲ್ಲಿ ಅಪ್ಲೋಡ್​ ಮಾಡಿದ್ದಾರೆ.

ಒಟ್ಟಾರೆ ರಜನಿಯವರ 280 ಕೋಟಿಗೂ ಅಧಿಕ ಬಜೆಟ್​ ಚಿತ್ರಕ್ಕೆ ಒಂದೆಡೆ ಉತ್ತಮ ಬೆಂಬಲ ವ್ಯಕ್ತವಾದರೆ ಮತ್ತೊಂದೆಡೆ ಈ ರೀತಿಯ ಸಂಕಷ್ಟಗಳು ಕೂಡಾ ಬರುತ್ತಿವೆ.
First published:June 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ