ರಾಜ್​ ಸ್ಮಾರಕದ ಮುಂದೆಯೇ ಮದುವೆಯಾದ ಪ್ರಣಯ ಪಕ್ಷಿಗಳು


Updated:April 24, 2018, 7:14 PM IST
ರಾಜ್​ ಸ್ಮಾರಕದ ಮುಂದೆಯೇ ಮದುವೆಯಾದ ಪ್ರಣಯ ಪಕ್ಷಿಗಳು

Updated: April 24, 2018, 7:14 PM IST
ಬೆಂಗಳೂರು: ನಟ ಸಾರ್ವಭೌಮ ಡಾ.ರಾಜ್​ ಕುಮಾರ್​ ಅವರ 90ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಕಟ್ಟಾ ಅಭಿಮಾನಿಯೊಬ್ಬರು ರಾಜ್​ ಸ್ಮಾರಕದ ಮುಂದೆ ಮದುವೆಯಾಗಿದ್ದಾರೆ.

ಇಂದು ರಾಜ್ ಅವರ ಪಟ್ಟ ಅಭಿಮಾನಿಯಾದ ರುದ್ರ ಎಂಬುವರು ಶಿಲ್ಪಾ ಎಂಬವರನ್ನು ವರಿಸಿದ್ದು, ನಟ ಶಿವರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರರ ಹಾಗೂ ಪುನೀತ್​ ರಾಜ್​ಕುಮಾರ್​ ಆಶಿರ್ವಾದ ಕೂಡಾ ಪಡೆದಿದ್ದಾರೆ. ಇಂದು ಮುಂಜಾನೆ ಕುರುಬರಳ್ಳಿ ಬಳಿ ಇರುವ ರಾಜ್ ಪುತ್ಥಳಿ ಬಳಿ ಇವರ ವಿವಾಹ ನಡೆದಿದೆ.ಇದೇ ವೇಳೆ ಮಾತನಾಡಿದ ರುದ್ರ, ನಾನು ಸಣ್ಣ ವಯಸ್ಸಿನಿಂದಲೂ ರಾಜ್​ ಕುಮಾರ್​ ಪ್ಯಾನ್​, ಕಳೆದ ನಾಲ್ಕು ವರ್ಷದಿಂದ ಶಿಲ್ಪಾಳನ್ನು ಪ್ರೀತಿಸುತ್ತಿದ್ದೆ ಹೀಗಾಗಿ ಇಂದು ಈ ಶುಭ ಸಂದರ್ಭದಲ್ಲಿ ನಾವು ಮದುವೆ ಮಾಡಿಕೊಂಡಿದ್ದೆವೆ. ರಾಜ್ ಅಗಲಿ 12 ವರ್ಷವಾದರೂ ಸಹ ಹುಟ್ಟುಹಬ್ಬಕ್ಕೆ ಬರುವ ರಾಜ್ ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ.

 
First published:April 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...