• Home
  • »
  • News
  • »
  • trend
  • »
  • Tesla Car Accident: ಪಾರ್ಕಿಂಗ್​ ಮಾಡ್ತಿದ್ದ ಟೆಸ್ಲಾ ಕಾರು ಇಬ್ಬರ ಪ್ರಾಣ ತೆಗಿತು! ಕೋಟಿ ಕೋಟಿ ಕೊಟ್ರೂ ಇಷ್ಟೇನಾ ಸೇಫ್ಟಿ?

Tesla Car Accident: ಪಾರ್ಕಿಂಗ್​ ಮಾಡ್ತಿದ್ದ ಟೆಸ್ಲಾ ಕಾರು ಇಬ್ಬರ ಪ್ರಾಣ ತೆಗಿತು! ಕೋಟಿ ಕೋಟಿ ಕೊಟ್ರೂ ಇಷ್ಟೇನಾ ಸೇಫ್ಟಿ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚೀನಾದಲ್ಲಿ ದೇಶದ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾದ ಟೆಸ್ಲಾ ಕಾರು ಇಬ್ಬರ ಪ್ರಾಣವನ್ನು ತೆಗೆದಿದೆ.  ಎಲಾನ್​ ಮಸ್ಕ್‌ನ ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾ EV ಕ್ರಾಂತಿಯ ಮುಂಚೂಣಿಯಲ್ಲಿದೆ.

  • Share this:

ಡ್ರೈವಿಂಗ್ (Driving) ಮಾಡುವಾಗ ತುಂಬಾನೇ ಎಚ್ಚರಿಕೆಯಿಂದ ಇರಬೇಕು. ನಾವು ಸರಿಯಾಗಿ ವಾಹನ ಚಲಾಯಿಸುತ್ತಿದ್ರೂ, ಬೇರೆಯವರು  ವೆಹಿಕಲ್ ಗಳು ಬಂದು ಡಿಕ್ಕಿ ಹೊಡೆಯುವ ಸಾಧ್ಯತೆಗಳಿವೆ. ಇದರಲ್ಲಿ ನಮ್ಮ ತಪ್ಪಿರಲ್ಲ. ಆದರೂ ನಮ್ಮ ವಾಹನ ಅಪಘಾತಕ್ಕೆ (Road Accident) ಒಳಗಾಗುತ್ತದೆ. ಇದರಿಂದ ವಾಹನ ಚಾಲನೆ ಮಾಡುವವರು ಎಲ್ಲ ನಿಯಮಗಳನ್ನ ತಿಳಿದುಕೊಂಡಿರಬೇಕು. ಕೆಲವೊಮ್ಮೆ ಎಲ್ಲವೂ ಸರಿಗಿದ್ದರೂ ಏನಾದರೂ ಸಮಸ್ಯೆಯಾಗಿ ಅಪಘಾತ ನಡೆದೇ ಬಿಡುತ್ತೆ. ಅಪಘಾತ ತೀವ್ರತೆ ಒಂದೊಂದು ಕಾರಿನ ಮೇಲೆ ಡಿಪೆಂಡ್​ ಆಗಿರುತ್ತೆ. ಹೆಚ್ಚು ಸೇಫ್ಟಿ (Safety Car) ಇರುವ ಕಾರುಗಳನ್ನು ನೀವು ಹೊಂದಿದ್ದರೆ ನಿಮ್ಮ ಜೀವ ಉಳಿಯಬಹುದು. ಸಾಕಷ್ಟು ಹೆಚ್ಚಿನ ಸೇಫ್ಟಿ ಇರುವ ಕಾರುಗಳಿಗೆ ಸೆಡ್ಡು ಹೊಡೆಯುತ್ತಿರುವುದು ಟೆಸ್ಲಾ ಕಾರು (Tesla Car) ಗಳು.


ಕೈ ಕೊಟ್ಟ ಕಾಸ್ಟ್ಲಿ ಕಾರು ಟೆಸ್ಲಾ, ಇಬ್ಬರ ಸಾವು!


ಟೆಸ್ಲಾ ಕಾರುಗಳಿಗೆ ಹೊರ ದೇಶಗಳಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಈ ಕಾರಿನಲ್ಲಿ ಹೆಚ್ಚಿನ ಸವಲತ್ತುಗಳಿವೆ. ಆಟೋ ಪೈಲೆಟ್​ ಮೋಡ್​ನಿಂದ ಹಿಡಿದು ಎಲ್ಲವೂ ಇದರಲ್ಲಿದೆ. ಆದರೆ, ಚೀನಾದಲ್ಲಿ ದೇಶದ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾದ ಟೆಸ್ಲಾ ಕಾರು ಇಬ್ಬರ ಪ್ರಾಣವನ್ನು ತೆಗೆದಿದೆ.  ಎಲಾನ್​ ಮಸ್ಕ್‌ನ ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾ EV ಕ್ರಾಂತಿಯ ಮುಂಚೂಣಿಯಲ್ಲಿದೆ, ಆದರೆ ಇತ್ತೀಚಿನ ಅಪಘಾತವು ಬಹು ಸಾವುನೋವುಗಳೊಂದಿಗೆ ಕಾರಿನ ಸುರಕ್ಷತೆಯನ್ನು ಮತ್ತೆ ಪ್ರಶ್ನಿಸಿದೆ.


ಚೀನಾದಲ್ಲಿ ಟೆಸ್ಲಾ ಕಾರು ಬ್ರೇಕ್​ ಫೇಲ್!


ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಚಾಝೌದಲ್ಲಿ ಈ ದುರ್ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಟೆಸ್ಲಾ ಕಾರನ್ನು ಓಡಿಸುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಕೊಂಡಿದೆ. ಬ್ರೇಕ್​ ಕೂಡ ಫೇಲ್​ ಆಗಿದೆ. ಆಟೋಮೆಟಿಕ್​ ಎಕ್ಸಲ್​ರೇಟರ್​ ಹೆಚ್ಚಾಗಿದೆ. ಏನೇ ಮಾಡಿದರೂ ಕಾರಿನ ವೇಗ ಕಡಿಮೆ ಆಗಿಲ್ಲ. 2 ಕಿಲೋ ಮೀಟಿರ್​ ವರೆಗೂ ಅತಿ ವೇಗವಾಗಿ ಕಾರು ಓಡಿದೆ. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಟೆಸ್ಲಾ ಕಾರಿನ ವೇಗ ಹೆಚ್ಚಾಗಿ  ರಸ್ತೆಯಲ್ಲಿ ಚಲಿಸುತ್ತಿದ್ದ ಬೇರೆ ವಾಹನಗಳಿಗೆ ಡಿಕ್ಕಿಯಾಗಿದೆ. ಇದರಿಂದ ಇಬ್ಬರ ಪ್ರಾಣ ಪಕ್ಷಿ ಹಾರಿ ಹೋಗಿದೆ.


ಇದನ್ನೂ ಓದಿ: ಬಾಯಿಯಿಂದ ಹೊಟ್ಟೆಯೊಳಗೆ ಹೊಕ್ಕ 4 ಅಡಿ ಹಾವು! ನೋಡಿ ವೈದ್ಯರೇ ಗಾಬರಿ


ಇಬ್ಬರ ಸಾವು, ಮೂವರಿಗೆ ತೀವ್ರ ಗಾಯ!


ಈ ಘಟನೆಯಲ್ಲಿ ಇಬ್ಬರು ಸತ್ತರೇ, ಮೂವರಿಗೆ ತೀವ್ರ ಗಾಯಗಳಾಗಿದೆ. ಕಾರಿನಲ್ಲಿದ್ದ ಕುಟುಂಬವು ಬ್ರೇಕ್​ ಫೇಲ್ ಆಯ್ತು ಎಂದು ಪೊಲೀಸರ ಬಳಿ ತಿಳಿಸಿದ್ದಾರೆ. ಆದರೆ ಟೆಸ್ಲಾ ಕಂಪನಿ ಇದನ್ನು ಒಪ್ಪಿಕೊಳ್ಳದೇ ತಳ್ಳಿಹಾಕಿದೆ. ಟೆಸ್ಲಾ ಕಾರಿನ ಚಾಲಕ ಡ್ರಗ್ಸ್​ ಅಐವಾ ಮದ್ಯದ ಅಮಲಿನಲ್ಲಿದ್ದರಾ ಎಂಬುದನ್ನು ಕೂಡ ಪರೀಕ್ಷೆ ಮಾಡಲಾಗಿದೆ. ಆದರೆ, ಆತ ಯಾವುದು ನಶೆಯಲ್ಲಿ ಇರಲಿಲ್ಲ ಎಂಬುಂದು ತಿಳಿದು ಬಂದಿದೆ. ಸದ್ಯ ಸಂಚಾರ ಪೊಲೀಸರು ಟೆಸ್ಲಾ ಕಾರನ್ನು ಕುಲಂಕುಶವಾಗಿ ಪರೀಕ್ಷಿಸುತ್ತಿದ್ದಾರೆ.


ಇದನ್ನೂ ಓದಿ: ಚೀನಾದ ಫ್ಯಾಕ್ಟರಿಯಲ್ಲಿ ತಯಾರಾಗುತ್ತೆ ಸೊಳ್ಳೆಗಳು! ಇವು ಕಚ್ಚಲ್ಲ, ರೋಗ ವಾಸಿ ಮಾಡುತ್ತವೆಯಂತೆ!


ಅಸಲಿಗೆ ಅಲ್ಲಿ ನಿಜಕ್ಕೂ ನಡೆದಿದ್ದೇನು?


ಟೆಸ್ಲಾ ಅವರ ಮಾಹಿತಿಯ ಪ್ರಕಾರ, ವಾಹನದ ಸ್ಪೀಡ್​ ಚಾಲಕನಿಂದಲೇ ಕಂಟ್ರೋಲ್​ ಆಗಿದೆ. ಜೊತೆಗೆ ಇದ್ದಕಿದ್ದ ಹಾಗೇ ಚಾಲಕ ಎಕ್ಸ್​ಲೆರೇಟರ್​ ಮೇಲೆ ಕಾಲಿಟ್ಟಿದ್ದಾನೆ. ಆಗ ವಾಹನದ ಸ್ಫಿಡ್​ 100ಕ್ಕೆ ಮುಟ್ಟಿದೆ. ಆದ್ರೆ, ಚಾಲಕ ಮಾತ್ರ ಬ್ರೇಕ್​ ಹಾಕಿಲ್ಲ ಎಂದು ಹೇಳಿದ್ದಾರೆ.  ಚಾಲಕನು ಪಾರ್ಕ್ ಗೇರ್ ಬಟನ್ ಅನ್ನು ನಾಲ್ಕು ಬಾರಿ ಒತ್ತಿದ್ದಾನಂತೆ. ಈ ಸಮಯದಲ್ಲಿ, ಬ್ರೇಕ್ ಲೈಟ್‌ಗಳು ತ್ವರಿತವಾಗಿ ಆನ್ ಮತ್ತು ಆಫ್ ಆಗುತ್ತವೆ ಎಂದು ಕಂಪನಿ ತಿಳಿಸಿದೆ.

Published by:ವಾಸುದೇವ್ ಎಂ
First published: