ಭವ್ಯ ಭಾರತದ ಇತಿಹಾಸವನ್ನು ವಿಶ್ವದೆಲ್ಲೆಡೆ ಸಾರುವಲ್ಲಿ ಇಲ್ಲಿನ ಮಹಾಕಾವ್ಯಗಳಾದ (Epics) ರಾಮಾಯಣ (Ramayana) ಮಹಾಭಾರತವು (Mahabharat) ಮಹತ್ತರವಾದುದು. ದೇಶದ ಧಾರ್ಮಿಕ ಪರಂಪರೆಯ ಶ್ರೀಮಂತಿಕೆಯನ್ನು ಜನತೆಗೆ ತಿಳಿಸುವುದಲ್ಲದೆ ಭವಿಷ್ಯದ ಜನತೆಯನ್ನು ಸುಸಂಸ್ಕೃತರನ್ನಾಗಿ ಮಾಡುವಲ್ಲಿ ಪ್ರಮುಖವಾಗಿದೆ. ಪೂಜ್ಯನೀಯವಾದ ಈ ಎರಡು ಮಹಾಕಾವ್ಯಗಳು ಧರ್ಮ ಬೋಧನೆಯೊಂದಿಗೆ ಜೀವನ ಮೌಲ್ಯಗಳನ್ನು (Life Value) ನೀಡುತ್ತದೆ. ಈ ಮಹಾಕಾವ್ಯವನ್ನು ಓದುವುದು ಜ್ಞಾನದ ಹೆಚ್ಚಳಕ್ಕೂ ಉತ್ತಮ ಮಾರ್ಗವಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್ (Viral) ಆಗುತ್ತಿದೆ. ಎರಡು ಸಣ್ಣ ಮಕ್ಕಳು ಈ ಮಹಾಕಾವ್ಯಗಳ ಕುರಿತಾಗಿ ಅವರ ಸ್ಮರಣೆಯನ್ನು(Memories) ಪ್ರತಿನಿಧಿಸುತ್ತಿದೆ. ಇದು ನೋಡುಗರನ್ನು ಮೂಖವಿಸ್ಮಿತರನ್ನಾಗಿಸಿದೆ.
ಟ್ವಿಟ್ಟರ್ ನಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಶಾಲೆಗೆ ಹೋಗುವ ಎರಡು ಸಣ್ಣ ಮಕ್ಕಳು ರಾಮಾಯಣ ಮತ್ತು ಮಹಾಭಾರತದ ಘಟನೆಗಳ ಬಗ್ಗೆ ಮಾತಾನಾಡಿದ್ದಾರೆ. ಯಾವುದೇ ಪ್ರಶ್ನೆಗೂ ನಿರರ್ಗಳವಾಗಿ ಉತ್ತರಿಸಿದ್ದಾರೆ. ಅವರ ಸ್ಮರಣ ಶಕ್ತಿ ನೋಡುಗರನ್ನು ಬೆರಗುಗೊಳಿಸುತ್ತಿದೆ.
ನಿರರ್ಗಳವಾದ ಉತ್ತರಿಸುತ್ತಿರುವ ಮಕ್ಕಳು
ವೀಡಿಯೋದಲ್ಲಿ ಗಮನಿಸಿರುವಂತೆ, ವ್ಯಕ್ತಿಯೊಬ್ಬ ಮಹಾಬಾರತ ಮತ್ತು ರಾಮಾಯಣಕ್ಕೆ ಸಂಬಧಿಸಿದಂತೆ ಕೇಳಿದ ಪ್ರಶ್ನೆಗೆ ಮಕ್ಕಳು ಯಾವುದೇ ತಪ್ಪಿಲ್ಲದೆ ಪಟ ಪಟನೇ ಪುಟ್ಟ ಮಕ್ಕಳು ಉತ್ತರಿಸುತ್ತಾರೆ. ಇಲ್ಲಿ ಮುಖ್ಯವಾಗಿ ಮಕ್ಕಳ ಸ್ಮರಣ ಶಕ್ತಿಯ ಶ್ಲಾಘಣೀಯವಾದುದಾಗಿದೆ.
ಇದನ್ನೂ ಓದಿ: Viral Video: ಮೆಟ್ರೋದಲ್ಲಿ ಫ್ರೀ ಎಂಟರ್ಟೈನ್ಮೆಂಟ್ ಕೊಟ್ಟ ಹುಡುಗಿ! ಜನ ಖುಷಿ ಪಡಲಿಲ್ಲ
ಮಹಾಭಾರತದ ಪ್ರಶ್ನೆಗಳು
ಒಬ್ಬ ಹುಡುಗನಿಗೆ ಪ್ರಮುಖವಾಗಿ ಮಹಾಭಾರತದ ಪ್ರಶ್ನೆಗಳನ್ನು ಕೇಳಿರುವುದನ್ನು ಈ ವೀಡಿಯೋದಲ್ಲಿ ಗಮನಿಸಬಹುದು. ಪಾಂಡುವಿನ ಮಕ್ಕಳ ಹೆಸರು ಮತ್ತು ಅವರ ಕುರಿತಾಗಿ ಪ್ರಶ್ನೆಗಳನ್ನು ಕೇಳಲು ಆರಂಭಿಸುತ್ತಾನೆ.
ನಂತರದಲ್ಲಿ ಪ್ರಶ್ನೆಗಳು ಮುಂದುವರಿಯುತ್ತದೆ. ಅರ್ಜುನನ ಗುರು ಯಾರೂ? ದ್ರೋಣಾಚಾರ್ಯನ ಮಗನ ಹೆಸರು ಏನು? ಅಶ್ವತಾಮನ ಬಗ್ಗೆ ಮತ್ತು ಭೀಮನ ಮಗ ಘಟೋತ್ಕಚನ ಬಗ್ಗೆ ಮತ್ತು ಕೊನೆಯದಾಗಿ ಅವನಿಗೆ ನಾಲ್ಕು ಯುಗಗಳಾದ ಸತ್ಯ ಯುಗ, ದ್ವಾಪರಯುಗ, ತೇತ್ರಾಯುಗ ಮತ್ತು ಕಲಿಯುಗದ ಪ್ರಶ್ನೆಗಳನ್ನು ಕೇಳಲಾಗಿದೆ.
ये कौन सा स्कूल है भाई यार , इधर ही एडमिशन कराओ बच्चों का 😇😇 pic.twitter.com/yFNpnVqBys
— Byomkesh (@byomkesbakshy) July 24, 2022
2ನೇ ತರಗತಿಗೆ ಹೋಗುವ ಪುಟ್ಟ ಬಾಲಕನಿಗೆ ರಾಮಯಣಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಯನ್ನು ಕೇಳಿದರು. ಯಾವುದೇ ಹಿಂಜರಿಕೆಯಿಲ್ಲದೆ ಮೊದಲ ಹುಡುಗನಿಗಿಂತ ವೇಗವಾಗಿ ರಾಮಾಯಣಕ್ಕೆ ಸಂಬಂಧಪಟ್ಟಂತೆ ಪ್ರಶ್ನೆ ಕೇಳಿದ್ದಾರೆ.
ಪ್ರಮುಖವಾಗಿ ರಾಮನ ಜೀವನಕ್ಕೆ ಸಂಬಂದಪಟ್ಟ ಪ್ರಶ್ನೆಗಳನ್ನು ಇಲ್ಲಿ ಗಮನಿಸಬಹುದಾಗಿದೆ. ಅಲ್ಲದೆ ರಾಮನ ಪೂರ್ವಜರ ಕುರಿತಾದ ಪ್ರಶ್ನೆಗಳನ್ನೂ ಆ ಹುಡುಗನಿಗೆ ಕೇಳಿದರು. ಈ ಎಲ್ಲಾ ಪ್ರಶ್ನೆಗಳಿಗೆ ಹುಡುಗ ಸುಲಲಿತವಾಗಿ ಉತ್ತರಿಸಿದ್ದಾನೆ.
ಟ್ವಿಟ್ಟರ್ ನಲ್ಲಿ ವೈರಲ್ ಆದ ವೀಡಿಯೋ
ಈ ವೀಡಿಯೋವನ್ನು ಬೋಮ್ಯಾಕೇಶ್ (Byomkesh) ಎಂಬ ಬಳಕೆದಾರ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ಧಾನೆ. ವಿಡಿಯೋ ತುಂಬಾನೇ ವೈರಲ್ ಆಗುತ್ತಿದ್ದು ಸಣ್ಣ ಮಕ್ಕಳ ಸ್ಮರಣ ಶಕ್ತಿಯನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.
ಇಷ್ಟು ಸಣ್ಣ ವಯಸ್ಸಿನಲ್ಲಿ ಮಕ್ಕಳು ಎರಡು ಮಹಾಕಾವ್ಯಗಳ ಬಗ್ಗೆ ಅಷ್ಟೊಂದು ಜ್ಞಾನವನ್ನು ಹೊಂದಿರುವುದನ್ನು ಕಂಡ ನೆಟ್ಟಿಗರು ಆ ಮಕ್ಕಳನ್ನು ಪ್ರಶಂಶಿಸಿದ್ಧಾರೆ.
ಇದನ್ನೂ ಓದಿ: Old Couple: ಇದು ಚಾಕಲೇಟ್ ಲವ್ ಅಲ್ಲ! ಈ ಪ್ರೀತಿಗೆ ಎಂದೂ ಕೊನೆಯಿಲ್ಲ, ವೃದ್ಧ ದಂಪತಿ ವಿಡಿಯೋ ವೈರಲ್
ವೀಡಿಯೋದಲ್ಲಿ ಮಕ್ಕಳು ಶಾಲಾ ಸಮವಸ್ತ್ರದಲ್ಲಿ ಇರುವುದನ್ನು ಗಮನಿಸಬಹುದಾಗಿದೆ. ಮತ್ತು ವಾತಾವರಣವು ಶಾಲೆಯ ಆವರಣವಿದ್ದಂತೆ ಇದೆ. ಪ್ರಶ್ನೆಯನ್ನು ಕೇಳುವ ವ್ಯಕ್ತಿಯೂ ಕ್ಯಾಮರಾದ ಮುಂದೆ ಕಾಣಿಸಿಕೊಂಡಿಲ್ಲ ಆದರೆ ಈ ಎರಡು ಮಹಾಕಾವ್ಯಗಳ ಬಗ್ಗೆ ಪುಟ್ಟ ಮಕ್ಕಳಲ್ಲಿರುವ ಜ್ಞಾನದ ಪರಿಯನ್ನು ವೀಡಿಯೋ ಮಾಡಿರುವುದು ಒಳ್ಳೆಯ ವಿಚಾರವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ