ಒಂದು ಸ್ಥಳ ಹೆಸರುವಾಸಿಯಾಗುವುದು ಒಂದೋ ಅಲ್ಲಿರುವ ಪ್ರೇಕ್ಷಣೀಯ ಸ್ಥಳದಿಂದ (Tourism Place) ಇಲ್ಲವೇ ಅಲ್ಲಿ ದೊರೆಯುವ ಬಾಯಲ್ಲಿ ನೀರೂರಿಸುವ ರಸ್ತೆಬದಿಯ ತಿಂಡಿಗಳಿಂದ ಹಾಗಾಗಿಯೇ ರಸ್ತೆಬದಿಯ ತಿಂಡಿ ಸ್ಥಳದ ನೈಜತೆಯನ್ನು ಬಣ್ಣಿಸುತ್ತದೆ. ಯಾವುದೇ ಹೊಸ ಸ್ಥಳಕ್ಕೆ ನಾವು ಪ್ರಯಾಣಿಸುತ್ತೇವೆ ಎಂದರೆ ನಮ್ಮ ಮನದಲ್ಲಿ ಮೊದಲು ಬರುವ ವಿಷಯ ಅಲ್ಲಿ ದೊರೆಯುವ ತಿಂಡಿ ತಿನಿಸಾಗಿರುತ್ತದೆ. ಅದರಲ್ಲೂ ಅಲ್ಲಿನ ಸ್ಥಳೀಯ ಆಹಾರದ ರುಚಿ (Teasty Food) ಸವಿಯಬೇಕು ಎಂದರೆ ರಸ್ತೆಬದಿಯ ತಿಂಡಿಗಳನ್ನೇ ಆಸ್ವಾದಿಸಬೇಕು. ಸ್ಥಳೀಯ ತಿಂಡಿಗಳು ತಮ್ಮದೇ ಆದ ಪಾಕವಿಧಾನ ರುಚಿ, ವೈವಿಧ್ಯತೆ, ಸಂಪ್ರದಾಯಗಳಿಂದ (Tradition) ಮಿಳಿತಗೊಂಡಿರುತ್ತವೆ. ಇಂತಹ ತಿಂಡಿತಿನಿಸುಗಳು ಆ ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತವೆ ಹಾಗೂ ಅಲ್ಲಿನ ಸಂಪ್ರದಾಯಗಳ ಪರಿಚಯವನ್ನು ಮಾಡಿಕೊಡುತ್ತವೆ.
ವಿಶ್ವದ 100 ನಗರಗಳಲ್ಲಿ ದೆಹಲಿ, ಮುಂಬೈಗೆ ಸ್ಥಾನ
ಇತ್ತೀಚೆಗೆ ಅಂತರಾಷ್ಟ್ರೀಯ ಪ್ರಯಾಣ ಆನ್‌ಲೈನ್ ಮಾರ್ಗದರ್ಶಿ ಟೇಸ್ಟ್ ಅಟ್ಲಾಸ್, ಸ್ಥಳೀಯ ಆಹಾರಗಳಿಂದ ಮನ್ನಣೆ ಗಳಿಸಿರುವ ವಿಶ್ವದ 100 ಉನ್ನತ ನಗರಗಳ ಪಟ್ಟಿಯನ್ನು ಹಂಚಿಕೊಂಡಿದೆ.
ದೆಹಲಿ ಹಾಗೂ ಮುಂಬೈ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ ಎಂಬುದು ಇಲ್ಲಿರುವ ವಿಶೇಷವಾಗಿದೆ. ಎರಡೂ ನಗರಗಳು ಪಟ್ಟಿಯಲ್ಲಿ 16 ಹಾಗೂ 34 ನೇ ಸ್ಥಾನಗಳನ್ನು ಪಡೆದುಕೊಂಡಿವೆ.
ಅದರ ಅಧಿಕೃತ ವೆಬ್‌ಸೈಟ್ ಪ್ರಕಾರ ಗೂಗಲ್ ಹಾಗೂ ಅದರದ್ದೇ ಆದ ಅಂಕಿಅಂಶಗಳನ್ನು ಆಧರಿಸಿರುವ ರೆಸ್ಟೋರೆಂಟ್ ರೇಟಿಂಗ್‌ಗಳನ್ನು ಸೇರಿಸಿ ತಯಾರಿಸಿರುವ ಪಟ್ಟಿಯಾಗಿದೆ.
ಟೇಸ್ಟ್ ಅಟ್ಲಾಸ್ ನಗರಗಳ ಪಟ್ಟಿಯನ್ನು ಹೇಗೆ ತಯಾರಿಸಿದೆ?
ನಿರ್ದಿಷ್ಟ ನಗರದಲ್ಲಿ ಉಣಬಡಿಸಲಾದ ಅತ್ಯುತ್ತಮ ತಿಂಡಿ ತಿನಿಸುಗಳು, ನಗರದಲ್ಲಿ ಸರಾಸರಿ ರೇಟಿಂಗ್ ಪಡೆದುಕೊಂಡ ಆಹಾರ ತಿನಿಸುಗಳು, ನಗರದಲ್ಲಿರುವ ಸಂಪ್ರದಾಯಬದ್ದ ಉತ್ತಮ ರೆಸ್ಟೋರೆಂಟ್‌ಗಳಿಗೆ ಸರಾಸರಿ ಗೂಗಲ್ ರೇಟಿಂಗ್ ಹೀಗೆ ಕೆಲವೊಂದು ಮಾಪನಗಳನ್ನು ಆಧರಿಸಿ ನಗರಗಳ ಪಟ್ಟಿಯನ್ನು ರಚಿಸಲಾಗಿದೆ ಎಂದು ತಿಳಿಸಿದೆ.
ಟಾಪ್ ಸ್ಥಾನದಲ್ಲಿರುವ ಇಟಲಿಯ ಫ್ಲೋರೆನ್ಸ್ ನಗರ
ಇಟಲಿಯ ಫ್ಲೋರೆನ್ಸ್ ನಗರ ಪಟ್ಟಿಯಲ್ಲಿರುವ ಟಾಪ್ ರೇಟೆಡ್ ನಗರ ಎಂಬ ಮನ್ನಣೆಯನ್ನು ಪಡೆದುಕೊಂಡಿದ್ದು ಇಲ್ಲಿ ದೊರೆಯುವ ಖ್ಯಾತ ರಸ್ತೆಬದಿಯ ಆಹಾರಗಳೆಂದರೆ ಫಿಯೊರೆನಿಟಾ, ರಿಬೊಲ್ಲಿಟಾ, ಲಾಂಪ್ರೆಡಿಟ್ಟೊ, ಟ್ರಿಪ್ಪಾ ಅಲ್ಲಾ ಫಿಯೊರೆನಿಟಾ, ಪೆಪ್ರಡೆಲ್ಲೊ ಸಿಂಗಾಲೆ ಇತ್ಯಾದಿ.
ತದನಂತರ ರೋಮ್, ಲಿಮಾ, ನೇಪಲ್ಸ್, ಹಾಂಗ್ ಕಾಂಗ್, ಮೆಕ್ಸಿಕೊ, ನ್ಯೂಯಾರ್ಕ್, ಪ್ಯಾರೀಸ್, ಟೋಕಿಯೋ, ಮಿಲಾನ್ ನಗರಗಳು ಸ್ಥಾನ ಪಡೆದುಕೊಂಡಿವೆ. ಈ ಟಾಪ್ 10 ನಗರಗಳು ತಮ್ಮ ಸ್ಟ್ರೀಟ್ ಫುಡ್‌ಗೆ ಹೆಸರುವಾಸಿಯಾಗಿವೆ.
ನವದೆಹಲಿಯ ತಿಂಡಿ ತಿನಿಸುಗಳನ್ನು ಹೊಗಳಿರುವ ಟೇಸ್ಟ್ ಅಟ್ಲಾಸ್
ಟೇಸ್ಟ್ ಅಟ್ಲಾಸ್ ನವದೆಹಲಿಯ ಸ್ಥಳೀಯ ಆಹಾರವನ್ನು ಬಾಯಲ್ಲಿ ನೀರೂರಿಸುವ ಸಾಂಪ್ರದಾಯಿಕ ಭಾರತೀಯ ಪಾಕವೈವಿಧ್ಯತೆ ಎಂದು ಬಣ್ಣಿಸಿದ್ದು ರಸ್ತೆಬದಿಯ ತಿಂಡಿ ತಯಾರಕರು, ಮಾರಾಟಗಾರರು ಅಂತರಾಷ್ಟ್ರೀಯ ಆಹಾರ ಆಯ್ಕೆಗಳ ವಿಫುಲ ಅವಕಾಶಗಳನ್ನು ಹೊಂದಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ: ಸ್ಕೈಡೈವಿಂಗ್ ಮಾಡುತ್ತಲೇ ಮೇಕಪ್ ಮಾಡಿಕೊಂಡ ಮಹಿಳೆ, ಅಬ್ಬಬ್ಬಾ ಈಕೆಯದ್ದು ಅಂತಿಂಥಾ ಸಾಹಸವಲ್ಲ!
ಈ ತಿಂಡಿ ತಿನಿಸುಗಳಲ್ಲಿ ಬೆರೆಸಲಾಗುವ ಮಸಾಲೆಗಳ ಘಮಲು, ಶ್ರೀಮಂತ ರುಚಿ, ನಿಜಕ್ಕೂ ವೈಭವೋಪೇತ ಎಂದು ಬಣ್ಣಿಸಿದೆ. ದೆಹಲಿಯಲ್ಲಿ ನೀವು ರುಚಿ ನೋಡಲೇಬೇಕಾದ ತಿಂಡಿ ತಿನಿಸುಗಳೆಂದರೆ ಚೋಲೆ ಭಟೂರೆ, ಬಟರ್ ಚಿಕನ್, ಆಲೂ ಟಿಕ್ಕಿ, ನಿಹಾರಿ ಹಾಗೂ ಪಕೋರಾ ಎಂದು ಉಲ್ಲೇಖಿಸಿದೆ.
ಮುಂಬೈಯ ರಸ್ತೆಬದಿಯ ತಿಂಡಿಗಳನ್ನು ವರ್ಣಿಸಿರುವ ಟೇಸ್ಟ್ ಅಟ್ಲಾಸ್
ಇನ್ನು ರಸ್ತೆಬದಿಯ ತಿಂಡಿ ತಿನಿಸುಗಳೆಂದರೆ ನೆನಪಾಗುವುದೇ ಮುಂಬೈಯ ವಡಾಪಾವ್ ಹಾಗೂ ಇನ್ನಿತರ ತಿಂಡಿ ತಿನಿಸುಗಳು. ಸ್ಥಳೀಯ ಮಸಾಲೆಗಳನ್ನು ಬಳಸಿ ಮಾಡುವ ಆಹಾರ ಪದಾರ್ಥಗಳು ನಾಲಗೆ ಚಪ್ಪರಿಸಿ ತಿನ್ನಿಸುವಷ್ಟು ರುಚಿಯಿಂದ ಕೂಡಿರುತ್ತವೆ.
ಇದನ್ನೂ ಓದಿ: Goa Trip ಹೋದಾಗ ಈ ಪ್ಲೇಸ್ಗಳಿಗೆ ಹೋಗಲೇ ಬೇಕು, ಚೀಪ್ ಆ್ಯಂಡ್ ಬೆಸ್ಟ್ ಜಾಗಗಳಿವು!
ಟೇಸ್ಟ್ ಅಟ್ಲಾಸ್ ಮುಂಬೈಯ ವಡಾ ಪಾವ್, ಪಾವ್ ಭಾಜಿ, ಭೇಲ್ ಪುರಿ, ಬಾಂಬೆ ಸ್ಯಾಂಡ್‌ವಿಚ್ ಹಾಗೂ ರಗ್ಡಾ ಪಾಟೀಸ್ ಖಾದ್ಯಗಳ ರುಚಿ ನೋಡಲೇಬೇಕು ಎಂದು ಉಲ್ಲೇಖಿಸಿದೆ.
50 ವೀಗನ್ ಡಿಶ್‌ಗಳ ಪಟ್ಟಿಯಲ್ಲಿರುವ ಏಳು ಭಾರತೀಯ ತಿನಿಸುಗಳು
ಒಟ್ಟಿನಲ್ಲಿ ಜಾಗತಿಕ ನಕ್ಷೆಯು ಭಾರತೀಯ ಆಹಾರದ ಮೋಡಿ ಹಾಗೂ ರುಚಿ ವೈವಿಧ್ಯತೆಯನ್ನು ಗುರುತಿಸಲು ಆರಂಭಿಸಿದ್ದು ಟೇಸ್ಟ್ ಅಟ್ಲಾಸ್, ವಿಶ್ವದ 50 ವೀಗನ್ ಡಿಶ್‌ಗಳ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದ್ದು ಆಸಕ್ತಿಕರವಾಗಿ ಅದರಲ್ಲಿ ಭಾರತದ ಏಳು ಖಾದ್ಯಗಳು ಸ್ಥಾನ ಪಡೆದುಕೊಂಡಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ