ಒಂದೇ ಬಾರಿಗೆ 2 ಇಲಿಗಳನ್ನು ತಿಂದು ಮುಗಿಸಿದ 2 ತಲೆಯ ಹಾವು..! ವೈರಲ್‌ ವಿಡಿಯೋ ಇಲ್ಲಿದೆ

ಎರಡು ತಲೆಹಾವು ಎರಡು ಇಲಿಗಳನ್ನು ಒಟ್ಟಿಗೆ ಬಾಯಿಂದ ಕಚ್ಚಿ ತಿನ್ನುತ್ತಿರುವ ನೋಡಲು ಭಯಾನಕವೆನಿಸುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

ಇಲಿಗಳನ್ನು ತಿನ್ನುತ್ತಿರುವ ಹಾವು

ಇಲಿಗಳನ್ನು ತಿನ್ನುತ್ತಿರುವ ಹಾವು

  • Share this:
    ಸಾಮಾಜಿಕ ಮಾಧ್ಯಮಗಳಲ್ಲಿ ಹಾವುಗಳ ಬಗ್ಗೆ ಅನೇಕ ವಿಡಿಯೋಗಳು, ಫೋಟೋಗಳು ಬಹು ಬೇಗನೆ ವೈರಲ್ ಆಗುವುದನ್ನು ನಾವು ನೋಡಬಹುದು. ಏಕೆಂದರೆ ತುಂಬಾ ಜನರು ಹಾವುಗಳ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ ಮತ್ತು ಈ ವಿಡಿಯೋಗಳು ನೋಡಲು ತುಂಬಾ ಭಯಾನಕವೂ ಆಗಿರುತ್ತವೆ.ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವಂತಹ ಹಾವುಗಳ ವಿಡಿಯೋ ಮತ್ತು ಫೋಟೋಗಳಿಗೆ ಬೇರೆಯದೇ ಆದಂತಹ ಅಭಿಮಾನಿಗಳ ಬಳಗ ಇದೆ ಎಂದರೆ ಸುಳ್ಳಲ್ಲ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಒಂದು ಹಾವು ಕುರಿ ಮರಿಯನ್ನು ನುಂಗಿ ಅಲ್ಲಿಂದ ಕದಲುವುದಕ್ಕೂ ಸಹ ಪರದಾಡಿದ ಹಾವಿನ ಫೋಟೋವನ್ನು ನೋಡಿದ್ದೇವೆ. ಒಂದು ಹಾವು ಇನ್ನೊಂದು ಹಾವನ್ನು ತಿನ್ನುವುದನ್ನು ಸಹ ನೋಡಿದ್ದೇವೆ. ಆದರೆ ಎರಡು ತಲೆಯುಳ್ಳಂತಹ ಹಾವುಗಳ ವಿಡಿಯೋ ಮತ್ತು ಫೋಟೋ ತುಂಬಾ ಅಪರೂಪವಾದದ್ದು.


    ಆದರೆ ಒಬ್ಬ ಛಾಯಾಗ್ರಾಹಕರು ತಮ್ಮ ಕ್ಯಾಮೆರಾದಲ್ಲಿ ಎರಡು ತಲೆಯುಳ್ಳಂತಹ ಹಾವನ್ನು ಸೆರೆಹಿಡಿದಿದ್ದು, ನಂತರ ಅದು ಎರಡು ಇಲಿಗಳನ್ನು ಒಟ್ಟಿಗೆ ಬಾಯಿಂದ ಕಚ್ಚಿ ತಿನ್ನುತ್ತಿರುವ ನೋಡಲು ಭಯಾನಕವೆನಿಸುವಂತಹ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ. ಯುಎಸ್ ಮೂಲದ ಬರಹಗಾರರಾದ ಬ್ರೈನ್ ಬರ್ಕ್ಜಿಕ್ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು ಎರಡು ತಲೆಯುಳ್ಳ ಹಾವು ಏಕಕಾಲದಲ್ಲಿ ಎರಡು ಇಲಿಗಳನ್ನು ತಿನ್ನುತ್ತಿರುವಂತಹ ದೃಶ್ಯ ವೈರಲ್ ಆಗಿದೆ.






    ಇನ್ಸ್ಟಾಗ್ರಾಮ್ನಲ್ಲಿ 'ಸ್ನೇಕ್ ಬೈಟ್ಸ್ ಟಿವಿ' ನೋಡಿಕೊಳ್ಳುವ ಬ್ರಿಯಾನ್‌ ವಿಡಿಯೋ ಹಂಚಿಕೊಂಡಿದ್ದು ಶೀರ್ಷಿಕೆಯಲ್ಲಿ "ಎರಡು ತಲೆಯುಳ್ಳ ಬೆನ್ ಮತ್ತು ಜೆರ್ರಿ ಇಬ್ಬರನ್ನು ತಿನ್ನುತ್ತಿದ್ದಾರೆ. ಎಲ್ಲಾ ಪ್ರಾಣಿಗಳು ಮತ್ತು ಹಾವುಗಳನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದು, ಶೀಘ್ರವೇ ನಿಮ್ಮನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಬರುತ್ತೇವೆ. ಅಲ್ಲಿಯವರೆಗೆ ಈ ಸಾಹಸಮಯ ವಿಡಿಯೋ ನೋಡಿ" ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹಾವು ತನ್ನ ಬಾಯಲ್ಲಿ ಎರಡು ಇಲಿಗಳನ್ನು ಹಿಡಿದುಕೊಂಡು ಎಳೆದುಕೊಂಡು ಒಂದೆಡೆ ತರುತ್ತಿರುವುದನ್ನು ನೋಡಬಹುದಾಗಿದೆ.


    ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದ ಈ ವಿಡಿಯೋ ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದು "ಅಬ್ಬಾ ಎಂತಹ ವಿಡಿಯೋ ಎರಡು ತಲೆಯನ್ನು ಹೊಂದಿರುವ ಹಾವು ಎರಡು ಹೊಟ್ಟೆಗಳನ್ನು ಹೊಂದಿದೆಯೇ" ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಎರಡು ತಲೆಯುಳ್ಳ ಹಾವುಗಳು ತುಂಬಾ ಅಪರೂಪವಾಗಿದ್ದು ಡಿಸೆಂಬರ್ 2020ರಲ್ಲಿ ಪಶ್ಚಿಮ ಬಂಗಾಳ ರಾಜ್ಯದ ಬೆಲ್ದಾ ಅರಣ್ಯ ವ್ಯಾಪ್ತಿಯಲ್ಲಿರುವಂತಹ ಏಕಾರೂಖಿ ಗ್ರಾಮದ ಜನರು ಸಹ ಇಂತಹದೇ ಎರಡು ತಲೆಯುಳ್ಳ ಹಾವನ್ನು ನೋಡಿದ್ದರು. ಆದರೆ ಅರಣ್ಯ ಇಲಾಖೆಯವರು ಕೆಲವು ಪೌರಾಣಿಕ ನಂಬಿಕೆಗಳಿಂದ ಈ ಹಾವಿನ ಫೋಟೋವನ್ನು ತೆಗೆದುಕೊಂಡಿರಲಿಲ್ಲ.


    ಎರಡು ತಲೆಯ ಹಾವುಗಳನ್ನು ಕಾಣುವುದು ಅಪರೂಪ ಮತ್ತು ಇವು ಸ್ವಾಭಾವಿಕವಾಗಿ ಎರಡು ತಲೆಗಳೊಂದಿಗೆ ಜನಿಸುತ್ತವೆ. ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ಕಾರಣವಿಲ್ಲ. ಮೊನೊಜೈಗೋಟಿಕ್ ಅವಳಿ ಭ್ರೂಣಗಳಿಂದ ಹೇಗೆ ಅವಳಿ ಪ್ರಾಣಿಗಳು ಜನಿಸುತ್ತವೆಯೋ ಅದೇ ತರಹದಲ್ಲಿ ಎರಡು ತಲೆಯನ್ನು ಒಂದೇ ಹಾವು ಹೊಂದುವುದು ಸಹ ಸ್ವಾಭಾವಿಕವಾಗಿದೆ. ಎರಡು ತಲೆಗಳನ್ನು ಹೊಂದಿರುವಂತಹ ಪ್ರಾಣಿಗಳನ್ನು ಸಾಮಾನ್ಯವಾಗಿ ಬೈಸೆಫಲಿಕ್ ಅಥವಾ ಡೈಸೆಫಲಿಕ್ಎಂದು ಕರೆಯಲಾಗುತ್ತದೆ.
    First published: