Girls Fight Video: ಗೆಳತಿ ಜೊತೆ ಜಾತ್ರೆಗೆ ಬಂದ ಪ್ರಿಯಕರ, ಎದುರಿಗೇ ನಿಂತಿದ್ಲು ಪ್ರೇಯಸಿ! ಮುಂದೆ ಏನಾಯ್ತ ಅಂತ ನೀವೇ ನೋಡಿ

ಈತನ ಗ್ರಹಚಾರ ಕೆಟ್ಟಿತ್ತು ಅನಿಸುತ್ತೆ. ಯಾಕೆಂದ್ರೆ ಒಬ್ಬಳನ್ನು ಕರೆದುಕೊಂಡು ಈ ಭೂಪ ಜಾತ್ರೆಗೆ ಬಂದಿದ್ದಾನೆ. ಆದ್ರೆ ಜಾತ್ರೆ ಸುತ್ತಾಡುವಾಗ ಮತ್ತೊಬ್ಬ ಹುಡುಗಿ ಕೂಡ ಬಂದಿದ್ದಾಳೆ. ಅಲ್ಲಿಗೆ ಅವನ ಗ್ರಹಚಾರ ಬಿಡಿಸಿದ್ದಲ್ಲದೇ, ಈ ಹುಡುಗಿಯರೇ ಜುಟ್ಟು ಹಿಡಿದುಕೊಂಡು ಜಾತ್ರೆಯಲ್ಲೆಲ್ಲ ಜಗಳ ಮಾಡಿಕೊಂಡು, ಬಿದ್ದು ಹೊರಳಾಡಿದ್ದಾರೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜಾರ್ಖಂಡ್: ಬಹುಶಃ ಆ ಯುವಕ (Young Boy) ಮಹಾ ರಸಿಕನೇ ಇರ್ಬೇಕು. ಅಲ್ಲಿ ಹೋದಾಗ ಇನ್ನೊಂದು, ಮತ್ತೊಂದು ಕಡೆ ಹೋದಾಗ ಮತ್ತೊಂದು ಅಂತ ಒಟ್ಟೊಟ್ಟಿಗೆ ಎರಡೆರಡು ಪ್ರೇಯಸಿಯರನ್ನು (Lovers) ಮೆಂಟೇನ್ ಮಾಡ್ತಿದ್ದ. ಅವಳಿಗೆ ಗೊತ್ತಾಗದ ಹಾಗೆ ಇವಳನ್ನು, ಇವಳಿಗೆ ಗೊತ್ತಾಗದ ಹಾಗೆ ಅವಳನ್ನು ಸಿನಿಮಾ (Cinema), ಪಾರ್ಕ್ (Park), ಶಾಪಿಂಗ್ (Shoping) ಅಂತ ಕರ್ಕೊಂಡು ಹೋಗ್ತಿದ್ದ. ಆಗೆಲ್ಲ ಈ ಇಬ್ಬರ ಪ್ರೇಯಸಿಯರ ಮುದ್ದಿನ ಬಾಯ್‌ಫ್ರೆಂಡ್‌ (Boyfriend) ಎಲ್ಲೂ ಗುಟ್ಟು ಬಿಟ್ಟು ಕೊಡ್ತಿರಲಿಲ್ಲ. ಇದೀಗ ಈತನ ಗ್ರಹಚಾರ ಕೆಟ್ಟಿತ್ತು ಅನಿಸುತ್ತೆ. ಯಾಕೆಂದ್ರೆ ಒಬ್ಬಳನ್ನು ಕರೆದುಕೊಂಡು ಈ ಭೂಪ ಜಾತ್ರೆಗೆ ಬಂದಿದ್ದಾನೆ. ಆದ್ರೆ ಜಾತ್ರೆ ಸುತ್ತಾಡುವಾಗ ಮತ್ತೊಬ್ಬ ಹುಡುಗಿ ಕೂಡ ಬಂದಿದ್ದಾಳೆ. ಅಲ್ಲಿಗೆ ಅವನ ಗ್ರಹಚಾರ ಬಿಡಿಸಿದ್ದಲ್ಲದೇ, ಈ ಹುಡುಗಿಯರೇ (Girls) ಜುಟ್ಟು ಹಿಡಿದುಕೊಂಡು ಜಾತ್ರೆಯಲ್ಲೆಲ್ಲ ಜಗಳ (Fight) ಮಾಡಿಕೊಂಡು, ಬಿದ್ದು ಹೊರಳಾಡಿದ್ದಾರೆ.   

ಬಾಯ್ ಫ್ರೆಂಡ್ ವಿಚಾರಕ್ಕೆ ಹುಡುಗಿಯರ ಫೈಟ್

ಬಾಯ್ ಫ್ರೆಂಡ್ ವಿಚಾರವಾಗಿ ಜಾತ್ರೆಗೆ ಬಂದಿದ್ದ ಇಬ್ಬರು ಹುಡುಗಿಯರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಜಾರ್ಖಂಡ್​ನ ಪಲಾಮು ಜಿಲ್ಲೆಯಲ್ಲಿ ನಡೆದಿದೆ. ದಾಲ್ತೋಂಗಂಜ್ ಪಟ್ಟಣದ ಶಿವಾಜಿ ಮೈದಾನದಲ್ಲಿ ಜಾತ್ರೆ ಪ್ರಯುಕ್ತ ಡಿಸ್ನಿಲ್ಯಾಂಡ್ ಮೇಳ ನಡೆಸಲಾಗಿತ್ತು. ಈ ವೇಳೆ ಒಬ್ಬ ಹುಡುಗನಿಗಾಗಿ ಇಬ್ಬರು ಹುಡುಗಿಯರು ಕಿತ್ತಾಡಿಕೊಂಡಿದ್ದಾರೆ.ಮತ್ತೊಬ್ಬ ಹುಡುಗಿಯೊಂದಿಗೆ ಬಂದಿದ್ದ ಪ್ರಿಯಕರ

ಈ ಮೊದಲೇ ಹೇಳಿದಂತೆ ಯುವಕನೋರ್ವ ಇಬ್ಬರು ಹುಡುಗಿಯರ ಜೊತೆ ಪ್ರೀತಿಯ ನಾಟಕ ಆಡುತ್ತಿದ್ದ. ಈ ಪೈಕಿ ಒಬ್ಬ ಹುಡುಗಿಯನ್ನು ಕರೆದುಕೊಂಡು ಈ ಜಾತ್ರೆಗೆ ಬಂದಿದ್ದಾನೆ. ಜಾತ್ರೆಯಲ್ಲಿ ಸುತ್ತಾಡುತ್ತಾ ಮೈ ಮರೆತಿದ್ದಾನೆ. ಇದೇ ವೇಳೆ ಇದೇ ಜಾತ್ರೆಗೆ ಆತನ ಮತ್ತೋರ್ವ ಪ್ರೇಯಸಿಯೂ ಬಂದಿದ್ದಾಳೆ.

ಇದನ್ನೂ ಓದಿ: Helicopter Journey: ತಾಯಿಯನ್ನು ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆತಂದ ಮಗ! ಅದ್ಭುತ ಗಿಫ್ಟ್ ನೋಡಿ ಅಮ್ಮನ ಕಣ್ಣಲ್ಲಿ ನೀರು

ಹುಡುಗಿ ಜೊತೆ ಪ್ರಿಯಕರನನ್ನು ನೋಡಿ ಆಘಾತ

ಒಬ್ಬ ಹುಡುಗಿ ತನ್ನ ಗೆಳೆಯನೊಂದಿಗೆ ಇನ್ನೊಬ್ಬ ಹುಡುಗಿಯನ್ನು ನೋಡಿದ ಬಳಿಕ ಶಾಕ್ ಆಗಿದ್ದಾಳೆ. ಕೊನೆಗೆ ಕೋಪ ನೆತ್ತಿಗೇರಿ ಇಬ್ಬರೂ ಹುಡುಗಿಯರು ಪರಸ್ಪರ ವಾಗ್ವಾದ ನಡೆಸಿದ್ದಾರೆ. ಜಗಳ ವಿಕೋಪಕ್ಕೆ ಹೋಗಿ ಇಬ್ಬರೂ ಕೈಕೈ ಮಿಲಾಯಿಸಿದ್ದಾರೆ.

ಸ್ಥಳದಿಂದ ಕಾಲ್ಕಿತ್ತ ಪ್ರಿಯಕರ

ಗೆಳತಿಯರ ಕೂಗಾಟ, ಕಿತ್ತಾಟ ಜಾಸ್ತಿಯಾಗುತ್ತಿದ್ದಂತೆ ಅಲ್ಲಿ ಜನ ಸೇರಿದ್ದಾರೆ, ಈ ವೇಳೆ ಪ್ರಿಯಕರ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

ಗೆಳತಿಯರ ಗುಂಪಿನಲ್ಲಿ ಹೊಡೆದಾಟ

ವಿಚಿತ್ರ ಅಂದರೆ ಇವರಿಬ್ಬರ ಗೆಳೆತಿಯರೂ ಈ ಜಗಳದಲ್ಲಿ ಸೇರಿಕೊಂಡಿದ್ದಾರೆ. ಜಗಳ ಬಿಡಿಸುವ ಬದಲು ನಾನು ತಾನು ಅಂತ ಮುಂದೆ ಬಂದು ಜಗಳ ಆಡಿದ್ದಾರೆ. ಒಬ್ಬರ ಕೂದಲು ಇನ್ನೊಬ್ಬರು ಹಿಡಿದುಕೊಂಡು ಫೈಟ್ ಮಾಡಿದ್ದಾರೆ.

ಜಗಳ ಬಿಡಿಸಲು ಬಂದ ಪೊಲೀಸರು

ಈ ಜಗಳ ವಿಪರೀತಕ್ಕೆ ಹೋಗುತ್ತಿದ್ದಂತೆ ಅಲ್ಲಿ ನೆರೆದಿದ್ದ ಜನರು ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಆಗ ಸ್ಥಳಕ್ಕೆ ದೌಡಾಯಿಸಿ ಬಂದ ಪೊಲೀಸರು, ಹುಡುಗಿಯರ ಮನವೊಲಿಸಿ ಮನೆಗೆ ಕಳುಹಿಸಿದ್ದಾರೆ. ಪೊಲೀಸ್ ಠಾಣೆ ಪ್ರಭಾರಿ ರೇವಾ ಶಂಕರ್ ರಾಣಾ ಪ್ರಕಾರ, ಪ್ರಿಯಕರನ ವಿಚಾರದಲ್ಲಿ ಹುಡುಗಿಯರ ನಡುವೆ ಜಗಳವಾಗಿತ್ತು. ಮನವೊಲಿಸಿ ಬಾಲಕಿಯರನ್ನು ಮನೆಗೆ ಕಳುಹಿಸಲಾಗಿದೆ.  ಇನ್ನು ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ ಅಂತ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Viral Video: ಒಬ್ಬ ಪ್ರೇಮಿಗಾಗಿ ಇಬ್ಬರು ಕಾಲೇಜ್ ಹುಡುಗಿಯರ ಫೈಟ್! ನಡು ರಸ್ತೆಯಲ್ಲೇ ನಡೀತು ಜಡೆ ಜಗಳ!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಫೈಟ್ ವಿಡಿಯೋ

ಈ ಜಗಳವನ್ನು ಜಾತ್ರೆಗೆ ಬಂದಿದ್ದ ಜನರು ತಮ್ಮ ತಮ್ಮ ಮೊಬೈಲ್‌ಗಳಲ್ಲಿ ರೆಕಾರ್ಡ್ ಮಾಡಿದ್ದಾರೆ. ಸುಮಾರು 15 ನಿಮಿಷಗಳ ಕಾಲ ಹುಡುಗಿಯರು ಪರಸ್ಪರ ಹೊಡೆಯುತ್ತಲೇ ಇದ್ದರು. ಈ ದೃಶ್ಯ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದೀಗ ಹುಡುಗಿಯರ ಫೈಟ್ ವೈರಲ್ ಆಗಿದೆ.
Published by:Annappa Achari
First published: