ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾ (Social Media) ಬಂದ್ಮೇಲೆ ನಾವು ಹಲವಾರು ರೀತಿಯ ವಿಶೇಷ ಸಂಪ್ರದಾಯಗಳ ಬಗ್ಗೆ ನೋಡುತ್ತಿರುತ್ತೇವೆ. ಇನ್ನು ಇದುವರೆಗೆ ನಾವೆಲ್ಲರೂ ಹಲವಾರು ಮದುವೆಗೆ ಹೋಗಿರುತ್ತೇವೆ. ಒಂದೊಂದು ಮದುವೆಗಳು ವಿಭಿನ್ನ ಸಂಪ್ರದಾಯದಲ್ಲಿ ನಡೆಯುತ್ತದೆ. ಮದುವೆ (Marriage) ಅಂದ್ರೆ ಒಂದು ಮನೆಯಲ್ಲಿ ಸಂಭ್ರಮದ ವಾತಾವರಣವನ್ನೇ ತರಿಸುತ್ತೆ. ಬಣ್ಣ ಬಣ್ಣದ ಬಟ್ಟೆಗಳು, ಚೆಂಡೆ, ವಾದ್ಯಗಳ ಶಬ್ಧ, ಸ್ನೇಹಿತರು, ಸಂಬಂಧಿಕರು ಸೇರಿ ಮದುವೆ ದಿನವನ್ನು ಅದ್ಧೂರಿಯಾಗಿ ಕಳೆಯುತ್ತಾರೆ. ಇಂತಹದೇ ಒಂದು ವಿಶೇಷ ಅದ್ಧೂರಿ ಮದುವೆ ನಡೆದಿದೆ. ಅದು ಮಾನವರದ್ದಲ್ಲ. ಶ್ವಾನಗಳ ಮದುವೆ (Dogs Marriage) ಮಾಡುತ್ತಿದ್ದಾರೆ. ಮಾಮೂಲಿ ಮದುವೆಯಂತೆಯೇ ತೋರಣ, ಸಂಭ್ರಮದಿಂದು ಇಲ್ಲೊಂದು ಊರಿನವರು ಸೇರಿ ಶ್ವಾನಗಳ ಮದುವೆ ಮಾಡಿದ್ದಾರೆ.
ಹೌದು, ಇದುವರೆಗೆ ನಾವೆಲ್ಲಾ ಸಾಕಷ್ಟು ಮದುವೆಗೆ ಹೋಗಿರುತ್ತೇವೆ. ಆದರೆ ಈ ಮದುವೆ ಮಾತ್ರ ವಿಶೇಷ ಅಂತಾನೇ ಹೇಳ್ಬಹುದು. ಯಾಕೆಂದರೆ ಇಲ್ಲೊಂದು ಎರಡು ಮನೆಯವರು ಸೇರಿ ತಮ್ಮ ನಾಯಿಗಳಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.\
ಭಾರತೀಯ ಸಂಪ್ರದಾಯದಂತೆ ಮದುವೆ
ಆಶ್ಚರ್ಯಕರವಾದ ವಿಷಯವೆಂದರೆ, ಇಲ್ಲಿ ಸಾಮಾನ್ಯ ಭಾರತೀಯ ವಿವಾಹದಂತೆ ವಿಸ್ತಾರವಾದ ಆಹಾರ ಮತ್ತು ಅಲಂಕಾರ ವ್ಯವಸ್ಥೆಗಳೊಂದಿಗೆ ವಿವಾಹವನ್ನು ನಡೆಸಲಾಗಿದೆ. ವಧುವಿನಂತೆ ಕಂಗೊಳಿಸುತ್ತಿದ್ದ ನಾಯಿ ಕೆಂಪು ದುಪ್ಪಟ್ಟಾದಲ್ಲಿ ಸುತ್ತಿಕೊಂಡಿರುವುದು ಕಂಡುಬಂದಿದೆ. ಇನ್ನು ಮದುವೆಗೆ ವರನಾಯಿಯು ಎಲೆಕ್ಟ್ರಿಕ್ ಆಟಿಕೆ ಕಾರಿನಲ್ಲಿ ಆಗಮಿಸುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ: ಈ ಸ್ಮಾರ್ಟ್ಫೋನ್ ಖರೀದಿಸಿದ್ರೆ 2 ಬಿಯರ್ ಫ್ರೀ ಗುರು! ಇಂಥ ಆಫರ್ ಎಲ್ಲೂ ಇಲ್ಲ!
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಬಳಕೆದಾರರು
ವಧು ನಾಯಿಯನ್ನು ಸಾಂಪ್ರದಾಯಿಕ 'ಡೋಲಿ'ಯಲ್ಲಿ ತನ್ನ ಅತ್ತೆಯವರಿಗೆ ಕಳುಹಿಸುತ್ತಿರುವುದನ್ನು ಸಹ ಈ ವಿಡಿಯೋದಲ್ಲಿ ನೋಡಬಹುದು. ಇನ್ನು ಈ ವಿಡಿಯೋವನ್ನು ನೋಡಿದ ವೀಕ್ಷಕರು ಆಶ್ಚರ್ಯಕರ ಚಿಹ್ನೆಯನ್ನು ಮತ್ತು ಸಂತೋಷದಿಂದ ಹರ್ಷ ವ್ಯಕ್ತಪಡಿಸಿದ್ದಾರೆ. ಬಳಕೆದಾರರಲ್ಲಿ ಒಬ್ಬರು ಟ್ವಿಟರ್‌ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಕುಟುಂಬವು ತಮ್ಮ ನಾಯಿಗಳಿಗಾಗಿ ಭಾರತೀಯ ಸಂಪ್ರದಾಯದಲ್ಲಿ ವಿವಾಹ ಮಾಡಿದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ನೀಡಲು ಜನರನ್ನು ಕೇಳಿದರು.
ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್
ಇನ್ನು ಇದನ್ನು ನೋಡಿದ ಟ್ವಿಟರ್ ಬಳಕೆದಾರರೊಬ್ಬರು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಮಾರ್ಚ್ 8 ರಂದು ಪೋಸ್ಟ್ ಮಾಡಿದ್ದಾರೆ. ಭಾರತೀಯ ಸಂಪ್ರದಾಯದಂತೆ ಅದ್ದೂರಿ ಆಹಾರ ಮತ್ತು ಅಲಂಕಾರಗಳೊಂದಿಗೆ ಶ್ವಾನಗಳ ವಿವಾಹ ನಡೆಸಿರುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು. ಇನ್ನು ಈ ವಿಡಿಯೋದಲ್ಲಿ ನೋಡವುದಾದ್ರೆ ಸಾಂಪ್ರದಾಯಿಕ ಬಟ್ಟೆ ಧರಿಸಿ ಅತಿಥಿಗಳು ನೃತ್ಯ ಮಾಡುತ್ತಿದ್ದಾರೆ. ಹೆಣ್ಣು ಶ್ವಾನದ ಮೇಲೆ ವಧುವಿನಂತೆ ಕೆಂಪು ದುಪಟ್ಟಾವನ್ನು ಸುತ್ತಿರುವುದನ್ನು ಸಹ ಕಾಣಬಹುದು.
They Had An Indian Wedding For Their Dogs.
😭😭😭😭
Deo Aapne Vichaar... pic.twitter.com/BsxMpi1nmE
— ਹਤਿੰਦਰ ਸਿੰਘ (@Hatindersinghr3) March 8, 2023
ಮಧ್ಯರಾತ್ರಿ ನಾಯಿಗಳು ವಿಚಿತ್ರವಾಗಿ ಬೊಗಳುವುದೇಕೆ?
ಇನ್ನೂ ಕೆಲವರು ಈ ರೀತಿಯ ಶಬ್ದಗಳನ್ನು ಇತರ ನಾಯಿಗಳಿಗೆ ಸಂದೇಶಗಳನ್ನು ನೀಡಲು ಮಾತ್ರ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಆದ್ದರಿಂದ ಕೆಲವು ಸಂಶೋಧಕರು ಆತ್ಮಗಳು ಕಾಣಿಸಿಕೊಳ್ಳುತ್ತವೆ ಮತ್ತು ಅವರಿಗಾಗಿ ಅಳುತ್ತವೆ ಎಂಬುದು ನಿಜವಲ್ಲ ಎಂದು ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ