ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತು ಇದೆ. ಮುನುಷ್ಯರಲ್ಲಿ ದಯೆ, ಕರುಣೆ, ಸಹಾಯ, ಸಮಯ ಪ್ರಜ್ಞೆ, ಜವಾಬ್ದಾರಿ ಇವೆಲ್ಲವೂ ಮನುಷ್ಯನಲ್ಲಿ ಇರಬೇಕಾದ ಮೂಲ ಗುಣಗಳು. ಈ ಎಲ್ಲ ಗುಣಗಳನ್ನು ಎಳೆಯ ಮಕ್ಕಳಲ್ಲಿ ( Children) ಬೀಜ ಬಿತ್ತಿದರೆ ಮುಂದೆ ಒಳ್ಳೆಯ ಪೈರು ನೀಡಲು ಸಾಧ್ಯವಾಗುತ್ತದೆ. ನಮ್ಮ ಬದುಕಿನಲ್ಲಿ ಒಂದಲ್ಲ ಒಂದು ಸಲ ನಾವು ಮತ್ತೊಬ್ಬರಿಗೆ ಅನಿರೀಕ್ಷಿತವಾಗಿ ಸಹಾಯ (Help) ಮಾಡುವ ಸಮಯ ಬಂದೇ ಬರುತ್ತದೆ. ನಾವು ಪ್ರದರ್ಶಿಸುವ ಸಮಯಪ್ರಜ್ಞೆ, (Timeliness) ಸಮಯೋಚಿತ ನಡೆ ಇವೆಲ್ಲವೂ ಒಂದು ರೀತಿಯಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುತ್ತದೆ. ನಾವೆಲ್ಲರೂ ಸೋಶಿಯಲ್ ಮೀಡಿಯಾದಲ್ಲಿ (Social media) ಸಹಾಯ ಮಾಡುವಂತಹ ಅನೇಕ ದೃಶ್ಯಗಳನ್ನು ನೋಡುತ್ತೇವೆ. ಅವುಗಳನ್ನು ಕಂಡಾಗ ಅಷ್ಟೇ ಖುಷಿಯಾಗುತ್ತದೆ. ಅಂತಹದೇ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಮಕ್ಕಳು ಸಮಯಪ್ರಜ್ಞೆ ಎಲ್ಲರ ಮನಸ್ಸು ಗೆದ್ದಿದ್ದಾರೆ. ನಡೆದುಕೊಂಡು ಹೋಗುವಾಗ ಮಕ್ಕಳು ರಸ್ತೆಯಲ್ಲಿರುವ ಮ್ಯಾನ್ಹೋಲ್ ಅನ್ನು ನೋಡಿದ್ದಾರೆ. ಮತ್ತೊಬ್ಬರಿಗೆ ತೊಂದರೆಯಾಗಬಾರದು ಎಂದು ಅರಿತ ಮಕ್ಕಳು ಅಲ್ಲೇ ಇದ್ದ ಕಲ್ಲುಗಳನ್ನು ತಂದು ಮ್ಯಾನ್ ಹೋಲ್ ಸುತ್ತ ಇಟ್ಟಿದ್ದಾರೆ.
ವಿಡಿಯೋದಲ್ಲಿ ಇರುವುದೇನು ?
ಇಬ್ಬರು ಮಕ್ಕಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುತ್ತಾರೆ. ಈ ವೇಳೆ ಅಲ್ಲೇ ಒಂದು ಮ್ಯಾನ್ ಹೋಲನ್ನು ಮಕ್ಕಳು ನೋಡುತ್ತಾರೆ. ರಸ್ತೆಯಲ್ಲಿ ಮ್ಯಾನ್ ಹೋಲ್ ನೋಡಿದ ಕೂಡಲೇ ಮತ್ತೊಬ್ಬರಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಪುಟಾಣಿಗಳು ಅಲ್ಲೇ ಇದ್ದ ಕಲ್ಲುಗಳನ್ನು ತಂದು ಮ್ಯಾನ್ ಹೋಲ್ ಸುತ್ತ ಇಟ್ಟಿದ್ದಾರೆ. ಅದೇ ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ, ಮ್ಯಾನ್ ಹೋಲ್ ತೆರೆದಿರುವ ಸಂಗತಿ ವಾಹನ ಸವಾರರಿಗೆ ಗೊತ್ತಾಗಲು ಈ ಪುಟಾಣಿ ಮಕ್ಕಳು ಸಹಾಯ ಮಾಡಿದ್ದಾರೆ.
You are never too young to make a difference. pic.twitter.com/jZ95Hj7N5e
— Awanish Sharan (@AwanishSharan) December 5, 2022
ಐಎಎಸ್ ಅಧಿಕಾರಿ ಅವನೀಶ್ ಶರಣ್ ಹಂಚಿಕೊಂಡ ವಿಡಿಯೋ
ಐಎಎಸ್ ಅಧಿಕಾರಿ ಅವನೀಶ್ ಶರಣ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು 17,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಅನೇಕರು ಈ ವಿಡಿಯೋಗೆ .ವಿವಿಧ ರೀತಿಯಲ್ಲಿ ಪ್ರತ್ರಿಕ್ರಿಯಿಸಿದ್ದಾರೆ. `ನೀವು ಬದಲಾವಣೆಯನ್ನು ಮಾಡಲು ಎಂದಿಗೂ ಚಿಕ್ಕವರಲ್ಲ' ಎಂಬ ಕ್ಯಾಪ್ಶನ್ನೊಂದಿಗೆ ಅವನೀಶ್ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Viral Video: ಮೂರು ಆನೆಗಳ ಜೀವ ಉಳಿಸಿದ ಚಾಲಕರು! ವಿಡಿಯೋ ವೈರಲ್
ವೈರಲ್ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆಯ ಕಾಮೆಂಟ್
ಈ ವಿಡಿಯೋಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದು, ಈ ಮಕ್ಕಳನ್ನು ದೇವರು ಹೆಚ್ಚು ಆಶೀರ್ವದಿಸಲಿ ಎಂದಿದ್ದಾರೆ. ಈ ವಿಡಿಯೋ ಎಲ್ಲರಿಗು ಸ್ಪೂರ್ತಿದಾಯಕ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮಕ್ಕಳೇ ನಮ್ಮ ಇಂದಿನ ಶಿಕ್ಷಕರು ಎಂದಿದ್ದಾರೆ ಅನೇಕ ನೆಟ್ಟಿಗರು. ನಾಯಕತ್ವ ಎನ್ನುವುದು ಎಳೆ ವಯಸ್ಸಿನಲ್ಲಿ ರೂಡಿಸಿಕೊಳ್ಳುವಂಥದ್ದು, ಇದು ಪ್ರತಿಯೊಬ್ಬರ ಸಮಾಜ ಕಾರ್ಯ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: Fish: ತಮ್ಮದೇ ಮರಿಗಳನ್ನು ಸೇವಿಸುವ ತಾಯಿಮೀನುಗಳು, ವಿಜ್ಞಾನಿಗಳು ಬಿಚ್ಚಿಟ್ಟ ರಹಸ್ಯ?
ಈ ವಿಡಿಯೋ ಎಲ್ಲರ ಮನಸ್ಸನ್ನು ಗೆದ್ದಿದೆ. ಮಕ್ಕಳ ಈ ಸಮಯಪ್ರಜ್ಞೆಯನ್ನು ಎಲ್ಲರೂ ಹೊಗಳಿದ್ದಾರೆ. ಈ ವಿಡಿಯೋ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿ ಮತ್ತು ಮಾದರಿಯಾಗಿದೆ. ಮೊದಲೇ ಹೇಳಿದ ಹಾಗೆ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬುದಕ್ಕೆ ಈ ವಿಡಿಯೋ ನೇ ಸಾಕ್ಷಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ