ಎಲಾನ್ ಮಸ್ಕ್ ( Elon Musk) ಟ್ವಿಟರ್ ಮಾಲೀಕರಾದ (Twitter Owner) ನಂತರ ಟ್ವಿಟರ್ನಲ್ಲಿ ಹಲವು ದೊಡ್ಡ ಬದಲಾವಣೆಗಳನ್ನು ಮಾಡಿದ್ದಾರೆ. ಟ್ವಿಟರ್ನಲ್ಲಿ ಹೊಸದೊಂದು ಕ್ರಾಂತಿ (New Revolution) ಮಾಡಲು ಸಾಕಷ್ಟು ಅವಿರತ ಹೋರಾಟ ನಡೆಸುತ್ತಿದ್ದಾರೆ. ಬಿಡುವಿಲ್ಲದ ಕೆಲಸದ ಮಧ್ಯೆ ಮಸ್ಕ್ ಸರಿಯಾಗಿ ನಿದ್ರೆ (Sleep) ಕೂಡ ಮಾಡುತ್ತಿಲ್ಲವಂತೆ. ಟ್ವಿಟರ್ನಲ್ಲಿ ಇತ್ತೀಚೆಗೆ ಅವರು ಹಂಚಿಕೊಂಡ ಫೋಟೋಗಳು (Viral Photos) ಇದಕ್ಕೆ ಸಾಕ್ಷಿ ಎನ್ನುವಂತಿದೆ. ಈ ಹಿಂದೆ ಮಸ್ಕ್ ದಿನಕ್ಕೆ ಆರು ಗಂಟೆಗಳಿಗಿಂತ ಹೆಚ್ಚು ನಿದ್ರಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ಟ್ವಿಟರ್, ಟೆಸ್ಲಾ (Tesla), ಸ್ಪೇಸ್ ಎಕ್ಸ್ (Space X) ಕೆಲಸದ ಮಧ್ಯೆ ಮಸ್ಕ್ ಅವರಿಗೆ ಆ ಆರು ಗಂಟೆಯೂ ನಿದ್ರಿಸಲು ಸಿಗುತ್ತಿಲ್ಲವೇನೋ ಅಂದೆನಿಸುತ್ತದೆ.
ಈ ಎಲ್ಲಾ ವ್ಯವಹಾರಗಳನ್ನು ಸರಿದೂಗಿಸಲು ಮಸ್ಕ್ ನಿದ್ರೆ ಇಲ್ಲದೇ 24 ಗಂಟೆಗಳ ಕಾಲ ಕೆಲಸ ಮಾಡುತ್ತಿರುವಂತೆ ತೋರುತ್ತಿದೆ. ಅದರಲ್ಲೂ ಟ್ವಿಟರ್ ತೆಕ್ಕೆಗೆ ಬಂದ ನಂತರ ಮಸ್ಕ್ ಕೆಲಸದ ರೀತಿ, ಟ್ವಿಟರ್ ಬಳಕೆ ಎಲ್ಲವೂ ಹೆಚ್ಚಾದಂತೆ ಕಾಣುತ್ತಿದೆ.
ಪ್ರತಿಯೊಂದನ್ನು ಟ್ವೀಟ್ ಮಾಡುತ್ತಿರುವ ಮಸ್ಕ್
ಹೌದು, ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಮಸ್ಕ್ ಟ್ವಿಟರ್ ಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ, ಅವರ ಪ್ರತಿಯೊಂದು ಕೆಲಸವನ್ನು ಟ್ವೀಟ್ ಮಾಡುತ್ತಿದ್ದಾರೆ. ಮುಖ್ಯವಾದ ವಿಷಯಗಳನ್ನು ಸಹ ಎಲಾನ್ ಮಸ್ಕ್ ಟ್ವೀಟ್ನಲ್ಲಿಯೇ ತಿಳಿಸುತ್ತಿದ್ದಾರೆ.
ಟ್ವಿಟರ್ 2.0, ಅದರ ಮುಂಬರುವ ವೈಶಿಷ್ಟ್ಯಗಳು ಮತ್ತು ಕೇಂದ್ರ ಕಚೇರಿ ಬಗ್ಗೆ ಹೀಗೆ ಎಲ್ಲವನ್ನೂ ಟ್ವೀಟ್ ಮುಖಾಂತರ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಾರಿ ಮಾಡಿರುವ ಟ್ವೀಟ್ ತುಂಬಾ ವಿಶೇಷ ಮತ್ತು ವೈಯಕ್ತಿಕವಾಗಿದೆ ನೋಡಿ.
ಮಲಗುವ ಬೆಡ್ ಪಕ್ಕದ ಟೇಬಲ್ ಫೋಟೋ ಹಂಚಿಕೊಂಡ ಮಸ್ಕ್
ಮಸ್ಕ್ "ನನ್ನ ಮಲಗುವ ಬೆಡ್ ಪಕ್ಕದ ಟೇಬಲ್" ಎಂದು ಕ್ಯಾಪ್ಷನ್ ನೀಡಿ ಅದರ ಫೋಟೋವನ್ನು ಹಂಚಿಕೊಂಡಿದ್ದಾರೆ. ಟೇಬಲ್ ಮೇಲೆ ಎರಡು ಪಿಸ್ತೂಲ್, ಮತ್ತು ಹಲವಾರು ಕುಡಿದು ಖಾಲಿಯಾದ ಕೋಕ್ ಬಾಟಲಿಗಳನ್ನು ಮತ್ತು ಜಾರ್ಜ್ ವಾಷಿಂಗ್ಟನ್ನ ಡೆಲವೇರ್ ನದಿಯನ್ನು ದಾಟುತ್ತಿರುವ ಇಮ್ಯಾನುಯೆಲ್ ಲ್ಯೂಟ್ಜ್ ಅವರ ವರ್ಣಚಿತ್ರವನ್ನು ಕಾಣಬಹುದು.
ಎರಡು ಪಿಸ್ತೂಲುಗಳಲ್ಲಿ ಒಂದು ತುಂಬಾ ಹಳೆಯದಾದ ಗನ್, ಇದನ್ನು ಫ್ಲಿಂಟ್ಲಾಕ್ ಪಿಸ್ತೂಲ್ ಎನ್ನಲಾಗಿದೆ. ಮತ್ತೊಂದು ಇತ್ತೀಚಿನ ಮಾದರಿ ಗನ್ನಂತೆ ತೋರುತ್ತಿದ್ದರೂ ಅದು ಆಟಿಕೆ ಗನ್ ಎಂದು ಕೆಲವರು ಊಹಿಸಿದ್ದಾರೆ.
ರಾತ್ರಿ ಇಡೀ ಎಚ್ಚರವಿರಲು ಕೋಕ್ ಸೇವನೆ
ಹಿಂದಿನ ಒಂದು ಸಂದರ್ಶನದಲ್ಲಿ ಮಸ್ಕ್ ತಮ್ಮ ತಮ್ಮ ಒತ್ತಡದ ವೇಳಾಪಟ್ಟಿಯನ್ನು ನಿಭಾಯಿಸಲು ಒಂದು ದಿನದಲ್ಲಿ ಎಂಟು ಕ್ಯಾನ್ ಡಯಟ್ ಕೋಕ್ ಮತ್ತು ಕಾಫಿಯನ್ನು
ಫೋಟೋದಲ್ಲಿ ಕೋಕ್ ಬಾಟಲಿಗಳಿವೆ.
ಬಹುಶಃ ಟೇಬಲ್ ಮೇಲಿರುವ ಕೋಕ್ ಬಾಟಲಿಗಳು ರಾತ್ರಿ ಇಡೀ ಎಚ್ಚರವಿರಲು ಮಸ್ಕ್ ಸೇವಿಸುತ್ತಿರಬಹುದು ಎಂದು ಕಾಣುತ್ತಿದೆ.
ನಿದ್ದೆಯನ್ನು ತಡೆಯುತ್ತೆ ಕೋಕ್ನಲ್ಲಿರುವ ಕೆಫಿನ್
ಕೋಕ್ನಲ್ಲಿರುವ ಕೆಫಿನ್ ನಿದ್ರೆಯನ್ನು ಹೋಗಲಾಡಿಸಿ ಎಚ್ಚರವಾಗಿರಿಸುತ್ತದೆ. ಇದೇ ಕಾರಣಕ್ಕೆ ಮಸ್ಕ್ ಅದನ್ನು ಹೆಚ್ಚಾಗಿ ಸೇವಿಸಿದ್ದಾರೆ. ಟ್ವಿಟರ್ ಅನ್ನು ಮರುನಿರ್ಮಾಣ ಮಾಡಲು ದಿನಪೂರ್ತಿ ಕೆಲಸ ಮಾಡುತ್ತಿದ್ದಾರೆ ಮಸ್ಕ್ ಎಂಬುವುದು ಈ ಮೂಲಕ ಸ್ಪಷ್ಟವಾಗಿ ತೋರುತ್ತಿದೆ ನೋಡಿ.
ಇದನ್ನೂ ಓದಿ: Twitter: ಟ್ವಿಟ್ಟರ್ನಲ್ಲಿ ಖಾತೆ ನಿಷ್ಕ್ರೀಯಗೊಳಿಸಬೇಕಾ? ಹಾಗಿದ್ರೆ ನೀವು ಮಾಡಬೇಕಾಗಿರೋದು ಇಷ್ಟೇ
ಕೆಲವು ನಿಯಮಗಳ ಪ್ರಕಾರ ಬಂದೂಕುಗಳ ಫೋಟೋಗಳನ್ನು ಹಂಚಿಕೊಳ್ಳುವುದಕ್ಕೆ ನಿಷೇಧ ಇದೆ. ಹಾಗಾದರೆ ಇದು ಬಳಕೆದಾರರಿಗೆ ಮಾತ್ರಾನಾ? ಮಾಲೀಕರಿಗಿಲ್ಲವೇ ಎಂದು ನಿಮಗೆ ಅನ್ನಿಸಿರಬಹುದು. ಈ ಅರಿವು ಮಸ್ಕ್ಗೆ ಕೂಡ ಇದ್ದೇ ಇರುತ್ತದೆ.
ಒಂದು ವೇಳೆ ಇವು ನಿಜವಾದ ಗನ್ಗಳೇ ಆಗಿದ್ದಲ್ಲಿ ಬಿಲಿಯನೇರ್ ತಮ್ಮ ಸ್ವರಕ್ಷಣೆಗೆ ಇದನ್ನು ಇಟ್ಟುಕೊಂಡಿರಬಹುದು. ನಿಯಮಗಳನ್ನು ಮೀರಿ ಹಂಚಿಕೊಂಡಿದ್ದಾರೆ ಎಂದರೆ ಇವು ಆಟಿಕೆ ಗನ್ಗಳು ಸಹ ಆಗಿರಬಹುದು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.
ಕೆಲಸದ ವಿಷಯದಲ್ಲಿ ಫುಲ್ ಸ್ಟ್ರಿಕ್ಟ್ ಆಗಿದ್ದಾರೆ ಮಸ್ಕ್
ಅಕ್ಟೋಬರ್ ಅಂತ್ಯದಲ್ಲಿ ಟ್ವಿಟರ್ ಅನ್ನು ಖರೀದಿಸಿದಾಗಿನಿಂದ, ಮಸ್ಕ್ ಅವರು ಟ್ವಿಟರ್ 2.0 ಅನ್ನು ನಿರ್ಮಿಸುವಲ್ಲಿ ಗಮನಾರ್ಹವಾದ ಹೆಜ್ಜೆಗಳನ್ನು ತೆಗೆದುಕೊಳ್ಳಲು ಆರಂಭಿಸಿದ್ದಾರೆ.
ಇದನ್ನೂ ಓದಿ: Twitter Sale: ಹಠ ಬಿಡದೇ ಟ್ವಿಟರ್ ಖರೀದಿಸಿದ ಎಲಾನ್ ಮಸ್ಕ್, 3.36 ಲಕ್ಷ ಕೋಟಿ ರೂಪಾಯಿಗೆ ಸೇಲ್!
ಹಾರ್ಡ್ಕೋರ್ ಕೆಲಸದ ಸಂಸ್ಕೃತಿ, ವರ್ಕ್ ಫ್ರಮ್ ಹೋಮ್ ಪದ್ಧತಿ ಕೈ ಬಿಡುವುದು, ವಾರದಲ್ಲಿ 80 ಗಂಟೆಗಳ ಕಾಲ ಕೆಲಸ, ಉಚಿತ ಊಟ ಕಡಿತ, ಹೀಗೆ ಉದ್ಯೋಗಿಗಳ ವಿರೋಧದ ನಡುವೆ ಈ ಎಲ್ಲಾ ಪದ್ದತಿಗಳನ್ನು ಪರಿಚಯಿಸಿದ್ದಾರೆ.
ಟ್ವಿಟರ್ ತೊರೆಯುತ್ತಿರುವ ಉದ್ಯೋಗಿಗಳು
ಕೆಲ ಉದ್ಯೋಗಿಗಳಂತೂ ಟ್ವಿಟರ್ ಕಂಪನಿಯಲ್ಲಿ ಕೆಲಸವೇ ಬೇಡ ಎಂದು ಕುಳಿತಿದ್ದಾರೆ. ಸುಮಾರು 1,200 ಇಂಜಿನಿಯರ್ಗಳು ತಾವು ಮಸ್ಕ್ನ ಟ್ವಿಟರ್ 2.0 ನ ಭಾಗವಾಗಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ