ಉದಾರ ಮನಸ್ಸಿನ ವಿದ್ಯಾರ್ಥಿ; ತನಗೆ ಸಿಗುವ ಬೊನಸ್ ಅಂಕಗಳನ್ನು ಕಡಿಮೆ ಬಂದವರಿಗೆ ನೀಡಿ ಎಂದ ಬಾಲಕ

ಹೌದು. ಅಮೆರಿಕ ಕೆಂಟಕಿ ಶಾಲೆಯ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ 94 ಅಂಕ ಪಡೆದಿದ್ದು, ಉತ್ತರ ಪತ್ರಿಕೆಯ ಕೊನೆಯಲ್ಲಿ ಸಾಲೊಂದನ್ನು ಬರೆದಿದ್ದಾನೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ  99 ಮಾಕ್ಸ್​ ಬಂದಿದ್ದರು ಇನ್ನೊಂದು ಮಾಕ್ಸ್​ ಬಂದಿದ್ದರೆ ಚೆನ್ನಾಗಿತ್ತು ಎಂದು ಅಳುತ್ತಾ ಕೂರುತ್ತಾರೆ. ಇನ್ನು ಕೆಲವರು ಆ ಒಂದು ಮಾಕ್ಸ್​ ಹೇಗಾದರು ಕೊಡಿ ಎಂದು ಅಧ್ಯಾಪಕರ ಬೆನ್ನು ಬೀಳುತ್ತಾರೆ. ಆದರೆ ಇಲ್ಲೋಬ್ಬ ವಿದ್ಯಾರ್ಥಿ ಪರೀಕ್ಷೆ ಪೇಪರಿನಲ್ಲಿ ಬಂದಿರುವ ಹೆಚ್ಚಿನ ಅಂಕವನ್ನು ಏನು ಮಾಡಿದ್ದಾನೆ ಗೊತ್ತಾ? ಬೇರೆಯವರಿಕೆ ಕೊಡುವಂತೆ ಉತ್ತರ ಪತ್ರಿಕೆಯಲ್ಲಿ ಬರೆದುಕೊಂಡು ಸುದ್ದಿಯಾಗಿದ್ದಾನೆ.

  ಹೌದು. ಅಮೆರಿಕ ಕೆಂಟಕಿ ಶಾಲೆಯ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ 94 ಅಂಕ ಪಡೆದಿದ್ದು, ಉತ್ತರ ಪತ್ರಿಕೆಯ ಕೊನೆಯಲ್ಲಿ ಸಾಲೊಂದನ್ನು ಬರೆದಿದ್ದಾನೆ. ‘ಸಾಧ್ಯವಾದರೆ ನನಗೆ ನೀವು ಕೊಡುವ ಹೆಚ್ಚಿನ ಅಂಕಗಳನ್ನು ನನ್ನ ಬದಲಿಗೆ, ಕಡಿಮೆ ಅಂಕ ಪಡೆದಿರುವ ಬೇರೆ ವಿದ್ಯಾರ್ಥಿಗಳಿಗೆ ಕೊಡುವಿರಾ?‘ ಎಂದು ಬರೆದಿದ್ದಾನೆ. ಇದನ್ನು ನೋಡಿದ ಟೀಚರ್​ ವಿನ್ಸ್​​ಟನ್​ ಲೀ ಆಶ್ಚರ್ಯಗೊಂಡಿದ್ದಾರೆ. ಮಾತ್ರವಲ್ಲದೆ, ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿ ಬರೆದಿರುವ ಆ ಸಾಲನ್ನು ಫೋಟೋ ತೆಗೆದು ತನ್ನ ಫೇಸ್​ ಬುಕ್​ ಖಾತೆಯಲ್ಲಿ  ಶೇರ್​ ಮಾಡಿದ್ದಾರೆ.  ಫೋಟೋದ ಜೊತೆಗೆ ‘ಈ ವಿಚಾರವನ್ನು ನಾನು ಎಲ್ಲರಿಗೂ ಹೇಳಬೇಕು. ಇಂತಹ ಘಟನೆಯನ್ನು ನಾನು ಹಿಂದೆ ಎಂದೂ ನೋಡಿಲ್ಲ. ನನ್ನ ಎ+ ವಿದ್ಯಾರ್ಥಿಯೊಬ್ಬ ತನ್ನ ಎಕ್ಸ್​​ಟ್ರಾ ಮಾರ್ಕ್ಸ್​ ಅನ್ನು ಬೇರೆ ಯಾರಿಗಾದರು ನೀಡಿ ಎಂದು ಕೇಳಿದ್ದಾನೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಾಗಿ ತನ್ನ ಅಂಕ ನೀಡಲು ಮುಂದಾಗಿದ್ದಾನೆ.  ಆ ವಿದ್ಯಾರ್ಥಿ ಯಾರೇ ಆಗಿರಬಹುದು  ಸ್ನೇಹಿತನೋ, ಒಳ್ಳೆಯವನೋ ಕಡಿಮೆ ಅಂಕ ಪಡೆಯಲು ಕಾರಣವೇನು…ಇದಾವುದನ್ನು ಲೆಕ್ಕಿಸಲಿಲ್ಲ. ಸಹಾಯ ಮಾಡಬೇಕು ಅನ್ನೋ ಉದ್ದೇಶ ಮಾತ್ರ ಅವನಿಗಿದೆ. ಈ ವಿದ್ಯಾರ್ಥಿಯಂತೆ ಇರಬೇಕು ಅಂತ ಟೀಚರ್​  ವಿನ್ಸ್​ಟನ್​ ಲೀ ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

  ಇದನ್ನೂ ಓದಿ: ಓಲಾ, ಊಬರ್​ಗೆ ಪೈಪೋಟಿ ನೀಡಲು ಬರುತ್ತಿದೆ ಮಹೀಂದ್ರಾ ಅಲೈಟ್ ಎಲೆಕ್ಟ್ರಿಕ್​ ಕ್ಯಾಬ್​ ಸೇವೆ!
  First published: