ಕಚೇರಿಗಳಲ್ಲಿ ಕೆಲವೊಮ್ಮೆ ಉನ್ನತ ಅಧಿಕಾರಿಗಳು ಈ ಬಾಸಿಸಮ್ ಬಿಟ್ಟು ಉದ್ಯೋಗಿಗಳ (Employees) ಜೊತೆ ನಡೆದುಕೊಳ್ಳುವ, ಬೆರೆಯುವ ರೀತಿ ತಮ್ಮ ಸಿಬ್ಬಂದಿಯ ಖುಷಿಯ ಜೊತೆಗೆ ಕಂಪನಿಗೂ (Company) ಉತ್ತಮ ಎನ್ನಬಹುದು. ಈ ಹಿಂದೆ ಜಗತ್ತಿನ ಶ್ರೀಮಂತ, ಟೆಸ್ಲಾ (Tesla) ಒಡೆಯ ಎಲೋನ್ ಮಸ್ಕ್ (Elon Musk) ತನ್ನ ಕಚೇರಿಯ (Office) ಪ್ಯಾಂಟ್ರಿಯಲ್ಲಿ ಉದ್ಯೋಗಿಗಳಿಗೆ ಸೂಪ್ (Soup) ನೀಡಿದ್ದು ನಿಮಗೆಲ್ಲಾ ಗೊತ್ತಿರಬಹುದು. ಸದ್ಯ ಅದೇ ರೀತಿಯ ಮತ್ತೊಬ್ಬ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ ತನ್ನ ಸಿಬ್ಬಂದಿಗಳಿಗಾಗಿ ಕಾಫಿ ಶಾಪ್ (Coffee Shop) ನಲ್ಲಿ ಕಾಫಿ ಆರ್ಡರ್ ಸ್ವತಃ ತಾವೇ ಪಡೆದುಕೊಂಡು ಕಾಫಿ ನೀಡುತ್ತಿದ್ದಾರೆ.
ಉದ್ಯೋಗಿಗಳ ಕಾಫಿ ಆರ್ಡರ್ ಗಳನ್ನುತೆಗೆದುಕೊಂಡ ಟ್ವಿಟ್ಟರ್ ಸಿಇಒ
ಹೌದು, ಅದು ಬೇರೆ ಯಾರು ಅಲ್ಲಾ ಟ್ವಿಟರ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಪರಾಗ್ ಅಗರವಾಲ್. ಪರಾಗ್ ಅಗರವಾಲ್ ಇಂತಹ ಹಲವಾರು ವಿಚಾರಗಳಿಂದ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ಅಗರವಾಲ್ ದಂಪತಿಗೆ ಮಗು ಜನಿಸಿದಾಗ ಪಿತೃತ್ವದ ರಜೆ ತೆಗೆದುಕೊಳ್ಳುವ ಮೂಲಕ ಸುದ್ದಿಯಲ್ಲಿದ್ದರು. ಸದ್ಯ ಟ್ವಿಟ್ಟರ್ ಸಿಇಒ ಇತ್ತೀಚೆಗೆ ಕಂಪನಿಯ ಲಂಡನ್ನ ಪ್ರಧಾನ ಕಛೇರಿಯಲ್ಲಿ ತಮ್ಮ ಉದ್ಯೋಗಿಗಳ ಕಾಫಿ ಆರ್ಡರ್ ಗಳನ್ನು ಚೀಟಿಯಲ್ಲಿ ಬರೆದುಕೊಳ್ಳುತ್ತಿರುವ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಕಂಪನಿಯ ಕೆಲವು ಕಾರ್ಯಕ್ರಮಗಳ ಸಲುವಾಗಿ ಪರಾಗ್ ಅಗರವಾಲ್ ಕಳೆದ ವಾರ ಯುನೈಟೆಡ್ ಕಿಂಗ್ಡಮ್ಗೆ ಭೇಟಿ ನೀಡಿದ್ದರು. ತಮ್ಮ ಈವೆಂಟ್ಗಳ ಬ್ಯುಸಿ ಶೆಡ್ಯೂಲ್ ನಡುವೆಯೂ ಪರಾಗ್ ಅಗರವಾಲ್ ಲಂಡನ್ ಸಿಬ್ಬಂದಿಗೆ ಕಾಫಿ ನೀಡಲು ಸಮಯ ನೀಡಿದರು.
ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಯಿತು ಫೋಟೋಗಳು
ಪರಾಗ್ ಅಗರವಾಲ್ ಕಚೇರಿಯಲ್ಲಿ ಕಾಫಿ ಆರ್ಡರ್ ತೆಗೆದುಕೊಳ್ಳುತ್ತಿರುವ ಚಿತ್ರಗಳು ಆನ್ಲೈನ್ನಲ್ಲಿ ಕಾಣಿಸಿಕೊಂಡವು. ಟ್ವಿಟರ್ನ ವ್ಯವಸ್ಥಾಪಕ ನಿರ್ದೇಶಕ ದಾರಾ ನಾಸರ್ ಮತ್ತು ಕಾರ್ಪೊರೇಷನ್ನ ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಸಹ ಅಗರವಾಲ್ ಜೊತೆ ಕೈ ಜೋಡಿಸಿದರು. ಸಿಬ್ಬಂದಿಗಳಿಗೆ ಪ್ಯಾಂಟ್ರಿಯಲ್ಲಿ ಮೂವರು ಸೇರಿ ಕಾಫಿ ಮತ್ತು ಕುಕ್ಕಿಗಳನ್ನು ನೀಡಿದರು.
ಇದನ್ನೂ ಓದಿ: Viral Video: ರೈಲ್ವೆ ನಿಲ್ದಾಣದಲ್ಲಿ ಬ್ಯಾಕ್ಫ್ಲಿಪ್ ಮಾಡಿದ ಯುವಕ! ಮುಂದೇನಾಯ್ತು ಗೊತ್ತಾ?
ಪರಾಗ್ ಅಗರವಾಲ್ ಮತ್ತು ನೆಡ್ ಸೆಗಲ್ ಆರ್ಡರ್ ಗಳನ್ನು ತೆಗೆದುಕೊಳ್ಳುತ್ತಿರುವಾಗ ನೌಕರರು ಸಾಲುಗಟ್ಟಿ ನಿಂತಿರುವುದನ್ನು ಇತರ ಫೋಟೋಗಳು ತೋರಿಸಿವೆ. ಜೊತೆಗೆ ಉದ್ಯೋಗಿಗಳು ತಮ್ಮ ಸಿಇಒ ಜೊತೆಗೆ ಅಲ್ಲಿಯೇ ಸೆಲ್ಫಿ ಸಹ ಕ್ಲಿಕ್ಕಿಸಿಕೊಂಡಿದ್ದಾರೆ. ಅಲ್ಲದೇ ಕಂಪನಿಯ ಸಮಾರಂಭದಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿ ಸಹ ನೀಡಿದ್ದಾರೆ ಎನ್ನುತ್ತಿವೆ ಕೆಲವು ಫೋಟೋಗಳು.
ಬಾಸ್ಗಳು ತಮ್ಮ ಕುರ್ಚಿ ಬಿಟ್ಟು ಅಲ್ಲಾಡುವುದಿಲ್ಲ ಎಂಬ ಪರಿಕಲ್ಪನೆಯನ್ನು ಇತ್ತೀಚಿನ ದಿನಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಸುಳ್ಳು ಮಾಡುತ್ತಿದ್ದಾರೆ. ಎಲೋನ್ ಮಸ್ಕ್ ನಂತರ ಈ ವರ್ಷದ ಆರಂಭದಲ್ಲಿ, ಉಬರ್ ಇಂಡಿಯಾ ಅಧ್ಯಕ್ಷ ಪ್ರಭಜೀತ್ ಸಿಂಗ್ ಅವರು ಪಿಕ್-ಅಪ್ ಸ್ಥಳದಿಂದ ಕ್ಯಾಬ್ ಏರಿ ಹೋಗಿದ್ದನ್ನು ಸಹ ನೋಡಬಹುದು.
ಫೋಟೋ ನೋಡಿ ಜನ ಹೇಳಿದ್ದು ಹೀಗೆ
ಹಲವಾರು ಕಂಪನಿಯ ಉದ್ಯೋಗಿಗಳು ಸೇರಿ ಇತರರು ಪರಾಗ್ ಅವರ ಈ ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಿಮ್ಮ ಸಿಇಒ ಹೀಗಿರಲು ಎಂದೂ ಸಾಧ್ಯವಿಲ್ಲ, ಲಂಡನ್ನ ಅತ್ಯುತ್ತಮ ಕಾಫಿ ಸ್ಪಾಟ್, ನಗರದಲ್ಲಿ ಪರಾಗ್ ಅಗರವಾಲ್ ಕಾಫಿ ಹಂಚುತ್ತಿದ್ದಾರೆ ಎಂದು ಹೃದಯದ ಎಮೋಜಿಗಳಿರುವ ಶೀರ್ಷಿಕೆ ನೀಡಿ ಈ ಫೋಟೋಗಳನ್ನು ಬಳಕೆದಾರರು ಹಂಚಿಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ಸ್ಟ್ಯಾಂಡ್ ಅಪ್ ಕಾಮಿಡಿಯ ಫೋಟೋವನ್ನು ಸಹ ಫೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: PHOTOS: ಗೂಗಲ್ನಲ್ಲಿ ಅತಿ ಹೆಚ್ಚು ಹುಡುಕಲಾದ ಏಷ್ಯಾದ ಟಾಪ್ 10 ಸೆಲೆಬ್ರಿಟಿಗಳಿವರು!
ಇನ್ನು ಟ್ವಿಟರ್ನ ಸಂಸ್ಥಾಪಕ ಜ್ಯಾಕ್ ಡಾರ್ಸೆ ಅವರು ನವೆಂಬರ್ 2021ರಲ್ಲಿ ಸಂಸ್ಥೆಯನ್ನು ತೊರೆದ ನಂತರ, ಪರಾಗ್ ಅಗರವಾಲ್ ಕಂಪನಿಯ ನಿಯಂತ್ರಣವನ್ನು ವಹಿಸಿಕೊಂಡರು. ಭಾರತೀಯ ಮೂಲದ ಪರಾಗ್ ಅಗರವಾಲ್ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ನಲ್ಲಿ ಬಿ ಟೆಕ್ ಅಧ್ಯಯನ ಮಾಡಿದರು ಮತ್ತು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪೂರ್ಣಗೊಳಿಸಿದರು. ಇತ್ತೀಚಿನ ಬೆಳವಣಿಗೆಯ ಪ್ರಕಾರ ಎಲೋನ್ ಮಸ್ಕ್ ಟ್ವಿಟ್ಟರ್ ಒಡೆತನ ಹೊಂದಲು $44 ಶತಕೋಟಿಗೆ ಖರೀದಿಸಲು ಪ್ರಸ್ತಾಪಿಸಿದ್ದಾರೆ. ಈ ಸಂಬಂಧದ ಒಪ್ಪಂದವು ಸದ್ಯ ಸ್ಥಗಿತಗೊಂಡಿದೆ ಎಂದು ಸ್ವತಃ ಟೆಸ್ಲಾ ಸಿಇಒ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ