HOME » NEWS » Trend » TV HOST SAYS HE HASNT WASHED HANDS IN 10 YEARS AND PEOPLE ARE TRULY DISGUSTED

ಕಳೆದ 10 ವರ್ಷದಲ್ಲಿ ಕೈಯನ್ನೇ ತೊಳೆದಿಲ್ಲ: ಸಾಮಾಜಿಕ ತಾಣದಲ್ಲಿ ವೈರಲ್​ ಆಯ್ತು ನಿರೂಪಕನ ಕೊಳಕು ಮಾತು!

ಒಂದಾರ್ಥದಲ್ಲಿ ವಿತಂಡ ವಾದದಂತಿದ್ದ ಹೆಗ್ಸೆತ್​ ಹೇಳಿಕೆಯ ವಿಡಿಯೋವನ್ನು ಪತ್ರಕರ್ತ ಆರನ್ ರೂಪರ್ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ವಾದ ಪ್ರತಿವಾದಗಳ ಪ್ರತಿಕ್ರಿಯೆ ಬರುತ್ತಿದ್ದಂತೆ ವೈರಲ್​ ಆಯಿತು.

zahir | news18
Updated:February 12, 2019, 4:02 PM IST
ಕಳೆದ 10 ವರ್ಷದಲ್ಲಿ ಕೈಯನ್ನೇ ತೊಳೆದಿಲ್ಲ: ಸಾಮಾಜಿಕ ತಾಣದಲ್ಲಿ ವೈರಲ್​ ಆಯ್ತು ನಿರೂಪಕನ ಕೊಳಕು ಮಾತು!
ಫಾಕ್ಸ್​ ಅಂಡ್​ ಫ್ರೆಂಡ್ಸ್
  • News18
  • Last Updated: February 12, 2019, 4:02 PM IST
  • Share this:
ಕೆಲವೊಂದು ಹೇಳಿಕೆಗಳು ಯಾವ ಮಟ್ಟದಲ್ಲಿ ಚರ್ಚೆಯನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಫಾಕ್ಸ್ ನ್ಯೂಸ್​ ನಿರೂಪಕ ಪೀಟ್ ಹೆಗ್ಸೆತ್ ಅವರ ಒಂದು ಸಣ್ಣ ಜೋಕ್​ ಸಾಕ್ಷಿ. ಫಾಕ್ಸ್​ ಚಾನೆಲ್​ನ ಪ್ರಸಿದ್ಧ ಕಾರ್ಯಕ್ರಮ ಫಾಕ್ಸ್​ ಅಂಡ್​ ಫ್ರೆಂಡ್ಸ್​ನಲ್ಲಿ ವಾರಾಂತ್ಯದ ಎಪಿಸೋಡ್​ ಈಗ ವಿಶ್ವದ ಗಮನ ಸೆಳೆದಿದೆ. ಇದಕ್ಕೆ ಮುಖ್ಯ ಕಾರಣ ಚಾನೆಲ್​ನಲ್ಲಿ ಹೆಗ್ಸೆತ್ ನೀಡಿದ ಡರ್ಟಿ ಹೇಳಿಕೆ. ಅಂದರೆ ಕೆಟ್ಟದ್ದೇನೊ ಹೇಳಿದ್ದಾರೆ ಎಂದು ಅಂದ್ಕೊಬೇಡಿ.

ಕಾರ್ಯಕ್ರಮದ ಚಿಟ್​ಚಾಟ್​ ನಡುವೆ ಹೆಗ್ಸೆತ್ ತನ್ನ ಮಿಸ್ಟರಿಯನ್ನು ಬಿಚ್ಚಿಡುವ ಆತುರದಲ್ಲಿ ಒಂದು ಸತ್ಯಾಂಶವನ್ನು ಹೊರ ಹಾಕಿದ್ದರು. ಕಳೆದ ಹತ್ತು ವರ್ಷಗಳಲ್ಲಿ ನಾನು ಕೈ ತೊಳೆದಿಲ್ಲ ಎಂದು ನುಡಿದಿದ್ದರು. ಈ ನಿರ್ಣಯವನ್ನು ಮುಂದುವರಿಸಬೇಕೆಂದಿರುವೆ ಎಂದು ಹೇಳಿದ್ದರು. ಒಂದು ಮಾತು ಅಂತರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗಿಬಿಟ್ಟಿದೆ.

ವರ್ಲ್ಡ್​ ಪಿಜ್ಜಾ ಡೇ ಪ್ರಯುಕ್ತ ಸಹೋದ್ಯೋಗಿ ಎಡ್ ಹೆನ್ರಿ ಹಾಗೂ ಜೆಡೆದಿಯಾ ಬಿಲಾ ಅವರೊಂದಿಗೆ ಕಾರ್ಯಕ್ರಮದಲ್ಲಿಪಿಜ್ಜಾ ತಿನ್ನುವುದರ ಬಗ್ಗೆ ಹೆಗ್ಸೆತ್ ಚರ್ಚಿಸಿದ್ದರು. ಇದು ಪಿಜ್ಜಾ ವಾರಾಂತ್ಯವಾಗಿದ್ದು, ಅಂದರೆ ಪಿಜ್ಜಾ ಹಟ್​ ಎಂಬುದು ದೀರ್ಘಕಾಲದವರೆಗೆ ಇರುತ್ತದೆ. ಈ ವೇಳೆ ನಾನು ಕೈ ತೊಳೆಯುವುದಿಲ್ಲ ಎಂದು ಪ್ರಸ್ತಾಪಿಸಿ ಅತಿಥಿಯನ್ನು ಮತ್ತು ಸಹೋದ್ಯೋಗಿಯನ್ನು ಹಾವಭಾವ ನೋಡಿದರು. ಅಲ್ಲದೆ  ಹಾನಿಕಾರಕ ಸೂಕ್ಷ್ಮಜೀವಿಗಳು ಅಸ್ತಿತ್ವದಲ್ಲಿಲ್ಲ. ಏಕೆಂದರೆ ಅವುಗಳು ಬರಿಗಣ್ಣಿಗೆ ಕಾಣಿಸುವುದಿಲ್ಲ. ಹಾಗಾಗಿ ಅವುಗಳಿಂದ ರೋಗಗಳುಂಟಾಗುವುದಿಲ್ಲ ಎಂದು ನಾನು ನಂಬುತ್ತೇನೆ ಎಂದು ಹೆಗ್ಸೆತ್ ಹೇಳಿದ್ದರು.
ಒಂದಾರ್ಥದಲ್ಲಿ ವಿತಂಡ ವಾದದಂತಿದ್ದ ಹೆಗ್ಸೆತ್​ ಹೇಳಿಕೆಯ ವಿಡಿಯೋವನ್ನು ಪತ್ರಕರ್ತ ಆರನ್ ರೂಪರ್ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ವಾದ ಪ್ರತಿವಾದಗಳ ಪ್ರತಿಕ್ರಿಯೆ ಬರುತ್ತಿದ್ದಂತೆ ವೈರಲ್​ ಆಯಿತು. ಅದರಲ್ಲೂ ಮುಖ್ಯವಾಗಿ ಹೆಗ್ಸೆತ್​ ಹೇಳಿಕೆಗೆ ಹಲವರು ಬೆಂಬಲ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.


'ನಿಮ್ಮ ಹೇಳಿಕೆ ಸರಿಯಾಗಿದೆ. ನಾನು ಕೂಡ ಕೈಯನ್ನು ತೊಳೆಯುವುದನ್ನು ಬಿಟ್ಟಿದ್ದೇನೆ. ನನಗೆ 70 ವರ್ಷವಾಗಿದ್ದರೂ ಈಗ ಶೀತ ಮತ್ತು ಜ್ವರದ ಸಮಸ್ಯೆಯಿಲ್ಲ. ಏಕೆಂದರೆ ನಮ್ಮ ದೇಹವು ಕೆಲ ಸೂಕ್ಷ್ಮಜೀವಿಗಳೊಂದಿಗೆ ಹೇಗೆ ಹೋರಾಡಲು ಇದರಿಂದ ಸಹಾಯಕವಾಗುತ್ತದೆ' ಎಂದು ವ್ಯಕ್ತಿಯೊಬ್ಬರು ಹೆಗ್ಸೆತ್ ವಿಡಿಯೋಗೆ ಪ್ರತಿಕ್ರಿಯಿಸಿದ್ದರು. ಈ ರೀತಿಯಾಗಿ ಅನೇಕರು ತೊಳೆಯದ ಕೈ ಹಿಂದೆ ತಮ್ಮ ಅನಿಸಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ.


ಈ ವಿಡಿಯೋ ನಿರೀಕ್ಷೆ ಮಟ್ಟವನ್ನು ಮೀರುತ್ತಿದ್ದಂತೆ ಹೆಗ್ಸೆತ್ ಕಳೆದ 10 ವರ್ಷಗಳಲ್ಲಿ ಕೈ ತೊಳೆದೇ ಇಲ್ಲವೆಂದು ಸುದ್ದಿಗಳು ಹರಿದಾಡಲಾರಂಭಿಸಿದೆ. ಈ ಬಗ್ಗೆ ಸ್ಫಷ್ಟನೆ ನೀಡಿರುವ ಫಾಕ್ಸ್​ ಚಾನೆಲ್​ ವಕ್ತಾರ ದಿ ಹಿಲ್, ಹೆಗ್ಸೆತ್ ಹೇಳಿಕೆಯನ್ನು ಯಾರೂ ಕೂಡ ಗಂಭೀರವಾಗಿ ಪರಿಗಣಿಸಬೇಡಿ. ಮಾತಿನ ಮಜಾದಲ್ಲೇ ಹಾಸ್ಯವಾಗಿ ಹೆಗ್ಸೆತ್ ಕೈ ತೊಳೆದಿಲ್ಲ ಎಂದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.


ಫಾಕ್ಸ್​ ಅಂಡ್ ಫ್ರೆಂಡ್ಸ್​ ಎಂಬುದು ಒಂದು ಚಿಟ್​ಚಾಟ್​ ಕಾರ್ಯಕ್ರಮವಾಗಿದ್ದು, ಇಲ್ಲಿ ಇಂತಹ ಹಾಸ್ಯಭರಿತ ಹೇಳಿಕೆಗಳು ಸಾಮಾನ್ಯ ಎನ್ನಲಾಗಿದೆ. ಆದರೆ ಈ ಬಾರಿ ಮಾತ್ರ ಹೆಗ್ಸೆತ್​ ಅವರನ್ನು ಕೊಳಕ ಎಂಬ ಮಟ್ಟಿಗೆ ತೆಗೆದುಕೊಂಡು ಹೋಗಿದ್ದು ವಿಪರ್ಯಾಸ.
First published: February 12, 2019, 4:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories