• Home
  • »
  • News
  • »
  • trend
  • »
  • ನ್ಯೂಸ್ ಲೈವ್​ನಲ್ಲಿದ್ದಾಗಲೇ ಬೆತ್ತಲಾಗಿ ಓಡಿದ ಟಿವಿ ನಿರೂಪಕನ ಪ್ರೇಯಸಿ ; ವಿಡಿಯೋ ವೈರಲ್

ನ್ಯೂಸ್ ಲೈವ್​ನಲ್ಲಿದ್ದಾಗಲೇ ಬೆತ್ತಲಾಗಿ ಓಡಿದ ಟಿವಿ ನಿರೂಪಕನ ಪ್ರೇಯಸಿ ; ವಿಡಿಯೋ ವೈರಲ್

ಟಿವಿ ಆ್ಯಂಕರ್

ಟಿವಿ ಆ್ಯಂಕರ್

ಟಿವಿ ನಿರೂಪಕನೋರ್ವ ಮನೆಯಲ್ಲಿದ್ದುಕೊಂಡೇ ಅಂದಿನ ಬೆಳವಣಿಗೆ ಬಗ್ಗೆ ಮಾಹಿತಿ ನೀಡುತ್ತಿದ್ದ. ಈ ವೇಳೆ ಆತನ ಪ್ರೇಯಸಿ ಕ್ಯಾಮೆರಾ ಎದುರು ಗೊತ್ತಿಲ್ಲದೆ ಬೆತ್ತಲಾಗಿ ತಿರುಗಾಡಿದ್ದಾಳೆ.

  • Share this:

    ಲಾಕ್​ಡೌನ್​ ಇರುವ ಕಾರಣ ಸಾಕಷ್ಟು ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಐಟಿ ವಿಭಾಗದಲ್ಲಿ ಬಹುತೇಕರು ವಿಡಿಯೋ ಕಾನ್ಫರೆನ್ಸ್​ ಮೂಲಕ ಮೀಟಿಂಗ್ ಅಟೆಂಡ್​ ಮಾಡುತ್ತಿದ್ದಾರೆ. ಇನ್ನು, ಕೆಲ ನ್ಯೂಸ್​ ಚಾನೆಲ್​ಗಳಲ್ಲಿ ವರ್ಕ್​ ಫ್ರಮ್​ ಹೋಂ ಆಯ್ಕೆ ನೀಡಲಾಗಿದ್ದು, ನಿರೂಪಕರು ಮನೆಯಿಂದಲೇ ಸುದ್ದಿ ಓದುತ್ತಿದ್ದಾರೆ. ಕೆಲವೊಮ್ಮೆ ವರ್ಕ್​ ಫ್ರಮ್​ ಹೋಂ ತಂದಿಡುವ ಫಜೀತಿ ಅಂತಿಂತದ್ದಲ್ಲ. ಇದಕ್ಕೆ ಟಿವಿ ನಿರೂಪಕನ ಕತೆ ಇದಕ್ಕೆ ಉತ್ತಮ ಉದಾಹರಣೆ.


    ಟಿವಿ ನಿರೂಪಕನೋರ್ವ ಮನೆಯಲ್ಲಿದ್ದುಕೊಂಡೇ ಅಂದಿನ ಬೆಳವಣಿಗೆ ಬಗ್ಗೆ ಮಾಹಿತಿ ನೀಡುತ್ತಿದ್ದ. ಈ ವೇಳೆ ಆತನ ಪ್ರೇಯಸಿ ಕ್ಯಾಮೆರಾ ಎದುರು ಗೊತ್ತಿಲ್ಲದೆ ಬೆತ್ತಲಾಗಿ ತಿರುಗಾಡಿದ್ದಾಳೆ. ಲೈವ್​ ಆದ್ದರಿಂದ ಎಲ್ಲರೂ ಇದನ್ನು ನೋಡಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.


    ಇಲ್ಲಿ ಮತ್ತೊಂದು ಅಚ್ಚರಿಯ ವಿಚಾರವಿದೆ. ಟಿವಿ ನಿರೂಪಕ ಹಾಗೂ ಆ ಯುವತಿ ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಈ ವಿಚಾರದ ಬಗ್ಗೆ ಆತನ ಕಚೇರಿಯಲ್ಲಿ ಭಾರೀ ಚರ್ಚೆಗಳು ಆಗುತ್ತಿದ್ದವು. ಈ ಕಾರಣಕ್ಕೆ ಪ್ರೀತಿ ಮುರಿದು ಬಿದ್ದಿರುವುದಾಗಿ ಕಚೇರಿಯಲ್ಲಿ ಹೇಳಿಕೊಂಡಿದ್ದ. ಇದನ್ನು ನಿರೂಪಕನ ಸಹೋದ್ಯಿಗಳು ನಂಬಿದ್ದರು. ಆದರೆ, ಈ ವಿಡಿಯೋ ನೋಡಿದಮೇಲೆ ಇಬ್ಬರೂ ಪ್ರೀತಿಯಲ್ಲಿ ಇರುವ ವಿಚಾರ ಬಹಿರಂಗವಾಗಿದೆ.




    ಸದ್ಯ, ಟಿವಿ ಆಂಕರ್​ ಸಾಕಷ್ಟು ಇಕ್ಕಟ್ಟಿಗೆ ಸಿಲುಕಿದ್ದಾನೆ. ಪ್ರೇಯಸಿ ಬೆತ್ತಲಾಗಿ ಓಡಾಡಿದ್ದು ಒಂದು ಕಡೆ ಆದರೆ, ತನ್ನ ಪ್ರೀತಿ ವಿಚಾರ ಬಹಿರಂಗವಾಯಿತಲ್ಲ ಎಂಬುದು ಮತ್ತೊಂದು ಕಡೆ. ಹೀಗಾಗಿ, ಎಲ್ಲರ ಡದುರು ಆತ ತಲೆ ತಗ್ಗಿಸುವಂತಾಗಿದೆ.

    Published by:Rajesh Duggumane
    First published: