ನಾಯಿ ಅಂದರೆ ಅದೇನು ಪ್ರೀತಿ; ಮುದ್ದಿನ ಶ್ವಾನಕ್ಕೆ ಚಿನ್ನದ ಪ್ರತಿಮೆ ನಿರ್ಮಿಸಿದ ತುರ್ಕ್​​ಮೇನಿಸ್ತಾನ್​​ ಅಧ್ಯಕ್ಷ!

Gold Dog Statue: ತುರ್ಕ್​ಮೇನಿಸ್ತಾನ್ ರಾಜಧಾನಿ ಅಸ್​​ಘಾಬಾಟ್​ನಲ್ಲಿ ಈ ಚಿನ್ನದ ಪ್ರತಿಮೆಯನ್ನು ನಿರ್ಮಸಲಾಗಿದೆ. ಇಲ್ಲಿ ನಾಯಿಯನ್ನು ರಕ್ಷಕ ಎಂದು ಕರೆಯಲಾಗುತ್ತದೆ.

 ಚಿನ್ನದ ಪ್ರತಿಮೆ

ಚಿನ್ನದ ಪ್ರತಿಮೆ

 • Share this:


  ನಾಯಿ ನಿಯತ್ತಿನ ಪ್ರಾಣಿ. ಹಾಗಾಗಿ ಅನೇಕರು ತಮ್ಮ ಮನೆಗಳಲ್ಲಿ ಶ್ವಾನವನ್ನು ಸಾಕುತ್ತಾರೆ. ಹೆಚ್ಚಾಗಿ ಹೆಣ್ಣು ಮಕ್ಕಳಿಗೆ ಶ್ವಾನವೆಂದರೆ ಅತೀವ ಪ್ರೀತಿ, ಇನ್ನು ವಯೋವೃದ್ಧರಿಗೆ, ಮಕ್ಕಳಿಗೆ ಶ್ವಾನವೆಂದರೆ ಆಯ್ತು, ಅದರೊಂದಿಗೆ ಆಟವಾಡುತ್ತಾ, ಮುದ್ದಾಡುತ್ತಾ ಇರುತ್ತಾರೆ.

  ಅದರಂತೆ ತುರ್ಕ್​ಮೇನಿಸ್ತಾನ್​​ ಅಧ್ಯಕ್ಷ ಗುರ್ಬಂಗಲಿ ಬರ್ಡಿಮುಖಾಮೇಡೊ ಅವರಿಗೂ ಶ್ವಾನವೆಂದರೆ ಭಾರೀ ಪ್ರೀತಿ. ಹಾಗಾಗಿ ತಮ್ಮ ಮುದ್ದಿನ ಶ್ವಾನಕ್ಕೆ ಚಿನ್ನದ ಪ್ರತಿಮೆಯನ್ನೇ ನಿರ್ಮಾಣ ಮಾಡಿದ್ದಾರೆ ಎಂದರೆ ನಂಬುತ್ತೀರಾ!.

  ಹೌದು. ಗುರ್ಬಂಗಲಿ ಬರ್ಡಿಮುಖಾಮೇಡೊ ಅವರು ನಾಯಿಯನ್ನು ಸಾಕುತ್ತಾರೆ. ಹಾಗಾಗಿ ಶ್ವಾನದ ಮೇಲೆ ಅವರಿಗೆ ಕೊಂಚ ಪ್ರೀತಿ ಜಾಸ್ತಿ. ಹೀಗಾಗಿ ತಮ್ಮ ಪ್ರೀತಿಯ ನಾಯಿಗಾಗಿ ಚಿನ್ನದ ಪ್ರತಿಮೆಯನ್ನು ನಿರ್ಮಿಸಿ ಗಿಫ್ಟ್​ ನೀಡಿದ್ದಾರೆ.  ತುರ್ಕ್​ಮೇನಿಸ್ತಾನ್ ರಾಜಧಾನಿ ಅಸ್​​ಘಾಬಾಟ್​ನಲ್ಲಿ ಈ ಚಿನ್ನದ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇಲ್ಲಿ ನಾಯಿಯನ್ನು ರಕ್ಷಕ ಎಂದು ಕರೆಯಲಾಗುತ್ತದೆ. ಅಲಾಬೇ ಎಂಬ ಹೆಸರಿನ ಈ ನಾಯಿಯು ಮಧ್ಯ ಏಷ್ಯನ್​​ ಶೆಫರ್ಡ್​ ತುರ್ಕ್​ಮೇನ್​ ತಳಿಯಾಗಿದೆ.

  ಗುರ್ಬಂಗಲಿ ಬರ್ಡಿಮುಖಾಮೇಡೊ ಅವರು ನಿರ್ಮಿಸಿರುವ ಚಿನ್ನದ ನಾಯಿಯ ಪ್ರತಿಮೆ 19 ಅಡಿ ಉದ್ದವಿದ್ದು, ಅದಕ್ಕೆ ಎಲ್​ಇಡಿ ಸ್ಕ್ರೀನ್​ ಜೋಡಿಸಲಾಗಿದೆ. ಇದರಲ್ಲಿ ನಾಯಿಯ ಕುರಿತಾದ ವಿಡಿಯೋವನ್ನು ಪ್ರಸಾರ ಮಾಡಲಾಗುತ್ತದೆ.

  Published by:Harshith AS
  First published: