Trending| ಕಾಣೆಯಾದ ವ್ಯಕ್ತಿ ಕೊನೆಗೂ ಪತ್ತೆಯಾದದ್ದು ಎಲ್ಲಿ ಗೊತ್ತೇ? ಈ ಸುದ್ದಿ ಓದಿ...

ಡೈಲಿ ಸಬಾಹ್ ವೆಬ್ ಸೈಟ್ ಪ್ರಕಾರ, ಬೆಹಾನ್ ಮುಟ್ಲು ಕಂಠಪೂರ್ತಿ ಕುಡಿದು ಮದ್ಯದ ಅಮಲಿನಲ್ಲಿ ಕಾಡಿನಲ್ಲಿ ತನ್ನ ಸ್ನೇಹಿತರೊಂದಿಗೆ ಸುತ್ತಾಡಲು ಹೋದಾಗ ಅಲ್ಲಿ ತನ್ನ ಸ್ನೇಹಿತರನ್ನು ಬಿಟ್ಟು ಬೇರೆ ಕಡೆಗೆ ಹೋಗಿ ಕಾಣೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
    ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಮನೆಯಿಂದ ಎಲ್ಲಿಗೋ ಹೋಗಲು ಹೋಗಿ ಮನೆಯ ವಿಳಾಸ ತಿಳಿಯದೆ ಕಾಣೆಯಾಗುವುದನ್ನು ನಾವು ಕೇಳಿರುತ್ತೇವೆ. ಇಲ್ಲದಿದ್ದರೆ ಕೆಲವೊಂದು ಸನ್ನಿವೇಶಗಳಲ್ಲಿ ಒಬ್ಬ ವ್ಯಕ್ತಿಯು ಕಾಣೆಯಾದರೆ ಅವನನ್ನು ಹುಡುಕಲು ಅವರ ಮನೆಯವರು ಅವರ ಕುರಿತಾದ ವಿವರಗಳನ್ನು ಅವರ ಒಂದು ಭಾವಚಿತ್ರದೊಂದಿಗೆ ರಸ್ತೆಗಳಲ್ಲಿರುವ ಗೋಡೆಗಳಿಗೆ ಅಂಟಿಸುವುದನ್ನು ನೋಡಿರುತ್ತೇವೆ. ಅಬ್ಬಬ್ಬಾ ಎಂದರೆ ತುಂಬಾ ದಿನಗಳ ಕಾಲ ಕಾಣೆಯಾದವರನ್ನು ಹುಡುಕಿದರೂ ಸಿಗದೇ ಇದ್ದಾಗ ಪೊಲೀಸರ ಬಳಿ ಹೋಗಿ ಕಾಣೆಯಾಗಿದ್ದಾರೆ ಅವರನ್ನು ಹುಡುಕಿಕೊಡಿ ಎಂದು ದೂರು ದಾಖಲಿಸುತ್ತಾರೆ.

    ಆದರೆ ಇಲ್ಲೊಂದು ವಿಚಿತ್ರವಾದ ಘಟನೆಯೊಂದು ನಡೆದಿದೆ, ಕೇಳಿದರೆ ನಿಮಗೆ ಹೀಗೂ ಉಂಟೆ ಎಂದು ಅನ್ನಿಸದೆ ಇರದು. ಈ ಘಟನೆ ಟರ್ಕಿ ರಾಷ್ಟ್ರದಲ್ಲಿ ನಡೆದಿದೆ. ಟರ್ಕಿಯ ಒಬ್ಬ ವ್ಯಕ್ತಿ ತಿಳಿಯದೆ ಮನೆಯಿಂದ ಕಾಣೆಯಾಗಿದ್ದಾನೆ ಎಂದು ಕೆಲ ದಿನಗಳ ಹಿಂದೆ ವರದಿಯಾಗಿತ್ತು. ಆದರೆ ಆ ವ್ಯಕ್ತಿ ತನಗೆ ಅರಿವಿಲ್ಲದಂತೆ ತನ್ನನ್ನು ಹುಡುಕುತ್ತಾ ಇರುವಂತಹ ಶೋಧ ತಂಡದಲ್ಲಿ ಹೋಗಿ ಸೇರಿಕೊಂಡಿದ್ದಾನೆ.

    ವಾಯವ್ಯ ಟರ್ಕಿಯ ಬರ್ಸಾ ಪ್ರಾಂತ್ಯದ ಇನೆಗೋಲ್ ಜಿಲ್ಲೆಯಲ್ಲಿ ವಾಸಿಸುತ್ತಿರುವ ಬೆಹಾನ್ ಮುಟ್ಲು ಎಂಬಾತನು ಮಂಗಳವಾರದಂದು ತಮ್ಮ ಮನೆಯಿಂದ ಹೊರಗೆ ಹೋದಾಗ ಕಾಣೆಯಾಗಿದ್ದಾನೆ ಎಂದು ಹೇಳಲಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.

    ಡೈಲಿ ಸಬಾಹ್ ವೆಬ್ ಸೈಟ್ ಪ್ರಕಾರ, ಬೆಹಾನ್ ಮುಟ್ಲು ಕಂಠಪೂರ್ತಿ ಕುಡಿದು ಮದ್ಯದ ಅಮಲಿನಲ್ಲಿ ಕಾಡಿನಲ್ಲಿ ತನ್ನ ಸ್ನೇಹಿತರೊಂದಿಗೆ ಸುತ್ತಾಡಲು ಹೋದಾಗ ಅಲ್ಲಿ ತನ್ನ ಸ್ನೇಹಿತರನ್ನು ಬಿಟ್ಟು ಬೇರೆ ಕಡೆಗೆ ಹೋಗಿ ಕಾಣೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಲವಾರು ಗಂಟೆಗಳ ಕಾಲ ಅವನೊಂದಿಗೆ ಯಾವುದೇ ರೀತಿಯ ಸಂಪರ್ಕ ಸಾಧಿಸಲು ಆಗದೆ ಇರುವಾಗ ಅವನ ಹೆಂಡತಿ ಮತ್ತು ಸ್ನೇಹಿತರು ಮುಟ್ಲು ಕಾಣೆಯಾಗಿದ್ದಾನೆ ಎಂದು ತಿಳಿಸಿದ್ದರು.

    ಇದನ್ನೂ ಓದಿ: New Rules: ಮಕ್ಕಳು ತಪ್ಪು ಮಾಡಿದ್ರೆ ಅಪ್ಪ-ಅಮ್ಮನಿಗೆ ಶಿಕ್ಷೆ, ಇನ್ಮೇಲೆ ಜೋಪಾನ!

    ಆದರೆ ತಮಾಷೆ ನೋಡಿ, ಈ ಕಾಣೆಯಾದ 50 ವರ್ಷ ವಯಸ್ಸಿನ ಬೆಹಾನ್ ಮುಟ್ಲು ನಂತರ ಆ ಪ್ರದೇಶದಲ್ಲಿರುವ ಒಂದು ತಂಡಕ್ಕೆ ಸೇರಿಕೊಂಡರು, ಆದರೆ ಅವನಿಗೂ ಮೊದಲಿಗೆ ಅವನನ್ನೇ ಈ ತಂಡವು ಹುಡುಕುತ್ತಿದೆ ಎಂದು ಗೊತ್ತಿರಲಿಲ್ಲ. ಆ ತಂಡದ ಜನರು ಮುಟ್ಲು ಅವರನ್ನು ಹುಡುಕಲು ಅಧಿಕಾರಿಗಳಿಗೆ ಸಹಾಯ ಮಾಡುತ್ತಿದ್ದರು. ಆದರೆ ಇದೆಲ್ಲಾ ಕಾಣೆಯಾದ ಮುಟ್ಲು ಗೆ ತಿಳಿದಿರಲಿಲ್ಲ.

    ಆದರೆ, ಒಂದು ದಿನ ಶೋಧ ಮಾಡುವ ತಂಡದಲ್ಲಿರುವ ಸದಸ್ಯರು ಅವನ ಹೆಸರನ್ನು ಕರೆಯಲು ಪ್ರಾರಂಭಿಸಿದಾಗ, ಅದೇ ಶೋಧ ತಂಡದಲ್ಲಿರುವ ಮುಟ್ಲು “ನಾನು ಇಲ್ಲೇ ಇದ್ದೀನಿ” ಎಂದು ಉತ್ತರಿಸಿದಾಗ ತಂಡದ ಸದಸ್ಯರು ಒಂದು ಕ್ಷಣ ದಿಗ್ಭ್ರಮೆಗೊಂಡರು. ಆದರೂ ಕಾಣೆಯಾದವನು ಸಿಕ್ಕಿದ್ದು ಅವರೆಲ್ಲರಿಗೂ ಸಂತೋಷ ತಂದಿತು.

    ಇದನ್ನೂ ಓದಿ: Bill Gates ಮಗಳ ಮದುವೆ ಸಂಭ್ರಮ, ಕೋಟ್ಯಾಧೀಶನ ಮನೆಯ ಮದುವೆಯ ಸಖತ್ ಸೆಲಬ್ರೇಶನ್ ನೋಡಿ

    ನಂತರ ಅಧಿಕಾರಿಗಳು ಅವನ ಹೇಳಿಕೆಯನ್ನು ತೆಗೆದುಕೊಂಡು ಅವನ ಮನೆಗೆ ಸುರಕ್ಷಿತವಾಗಿ ಬಿಟ್ಟು ಬಂದರು ಎಂದು ಟಿವಿ ಮಾಧ್ಯಮ ವರದಿ ಮಾಡಿದೆ. ಮುಟ್ಲು ಅವರ ಮೇಲೆ ಯಾವುದೇ ದಂಡವನ್ನು ವಿಧಿಸಿದ್ದಾರೆಯೇ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯಿಲ್ಲ.
    Published by:MAshok Kumar
    First published: