ಗಾಯದ ನೆಪ ನೀಡಿದ ಗೋಲ್​ ಕೀಪರ್, ಬ್ರೇಕ್​ ವೇಳೆ ಬಯಲಾಯ್ತು ರಹಸ್ಯ!


Updated:June 5, 2018, 4:50 PM IST
ಗಾಯದ ನೆಪ ನೀಡಿದ ಗೋಲ್​ ಕೀಪರ್, ಬ್ರೇಕ್​ ವೇಳೆ ಬಯಲಾಯ್ತು ರಹಸ್ಯ!

Updated: June 5, 2018, 4:50 PM IST
ನ್ಯೂಸ್ 18 ಕನ್ನಡ

ರಂಜಾನ್ ತಿಂಗಳು ನಡೆಯುತ್ತಿದೆ. ಜಗತ್ತಿನಾದ್ಯಂತ ಲಕ್ಷಾಂತರ ಮುಸ್ಲಿಮರು ರೋಜಾ ಇಟ್ಟುಕೊಳ್ಳುತ್ತಾರೆ. ಹೀಗೆ ಉಪವಾಸ ಮಾಡುವ ಮುಸ್ಲಿಂ ಬಾಂಧವರು ನೀರು, ಆಹಾರ ಸೇವಿಸದೆ ಇರುತ್ತಾರೆ. ಟ್ಯುನೀಷಿಯಾದ ಫುಟ್ಬಾಲ್​ ತಂಡದಲ್ಲಿರುವ ಒಟ್ಟು 23 ಮಂದಿ ಆಟಗಾರರಲ್ಲಿ 22 ಆಟಗಾರರು ಮುಸ್ಲಿಂ ಧರ್ಮದವರಾಗಿದ್ದು, ಬಹುತೇಕ ಆಟಗಾರರು ಉಪವಾಸವಿರುತ್ತಾರೆ. ಹೀಗಾಗಿ ಈ ತಂಡ ಯಾವಾಗೆಲ್ಲ ಆಡಲು ಮೈದಾನಕ್ಕಿಳಿದ ಸಂದರ್ಭದಲ್ಲಿ, ಉಪವಾಸ ಬಿಡುವ ಸಮಯ ಸಮೀಪಿಸುತ್ತಿದ್ದಂತೆಯೇ ಗೋಲ್​ ಕೀಪರ್ ಗಾಯಗೊಳ್ಳುತ್ತಾರೆ. ಹೀಗಾಗಿ ಬ್ರೇಕ್ ಸಂದರ್ಭದಲ್ಲಿ ಆಟಗಾರರು ಉಪವಾಸ ಬಿಡುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಇದನ್ನು ಗಮನಿಸಿದ ಪ್ರತಿಯೊಬ್ಬರೂ ಅಚ್ಚರಿಗೊಂಡಿದ್ದರೂ, ಟ್ಯುನಿಷಿಯಾ ಆಟಗಾರರು ತಮ್ಮ ಉಪವಾಸ ಬಿಡಲು ಹೊಸ ಮಾರ್ಗವನ್ನು ಕಂಡುಕೊಂಡಿರವುದಂತೂ ಸತ್ಯ.


Loading...

ವಾಹಿನಿಯೊಂದು ಬಿತ್ತರಿಸಿದ ಅನ್ವಯ, ಟ್ಯುನೀಷಿಯಾವು ಪೋರ್ಚುಗಲ್​ ವಿರುದ್ಧ ವರ್ಲ್ಡ್​ ಕಪ್ ಫ್ರೆಂಡ್ಲಿ ಫುಟ್ಬಾಲ್ ಪಂದ್ಯ ನಡೆದಿತ್ತು. ಆದರೆ ಈ ಪಂದ್ಯದಲ್ಲಿ 23 ವರ್ಷದ ಮೋಯಿಜ್ ಗಾಯಗೊಂಡು ಕುಸಿದಿದ್ದರು. ಇದರಿಂದಾಗಿ ರೆಫ್ರಿ ಈ ಪಂದ್ಯವನ್ನು ಬ್ರೇಕ್ ನಿಡಿ ಕೆಲಕಾಲ ಸ್ಥಗಿತಗೊಳಿಸಿದ್ದರು. ತಂಡದ ಎಲ್ಲಾ ಆಟಗಾರರು ಈ ಬ್ರೇಕ್​ನ ಲಾಭ ಪಡೆದಿದ್ದು, ಮೈದಾನದ ಹೊರಗೆ ಹೋಗಿ ಖರ್ಜೂರ ತಿಂದು, ಜ್ಯೂಸ್ ಕುಡಿದು ತಮ್ಮ ಉಪವಾಸ ಬಿಟ್ಟಿದ್ದಾರೆ. ಆದರೆ ಕೆಲ ದಿನಗಳ ಬಳಿಕ ನಡೆದ ಪಂದ್ಯದಲ್ಲೂ ಇಂತಹುದೇ ಘಟನೆ ಕಂಡು ಬಂದಿದೆ.
ಸಾಮಾಜಿಕ ಜಾಲಾತಾಣಗಳಲ್ಲಿ ಈ ವಿಡಿಯೋ ಬಹಳಷ್ಟು ವೈರಲ್ ಆಗುತ್ತಿದೆ. ಟರ್ಕಿ ವಿರುದ್ಧದ ಪಂದ್ಯದಲ್ಲೂ ಇಂತಹುದೇ ದೃಶ್ಯ ಕಂಡು ಬಂದಿತ್ತು. ಟ್ವಿಟರ್​ನಲ್ಲಿ ಈ ಉಪಾಯವನ್ನು ಟ್ವೀಟಿಗರು ಪತ್ತೆ ಹಚ್ಚಿದ್ದು, ಖುದ್ದು ಗೋಲ್​ ಕೀಪರ್​ ಮೋಯಿಜ್ ಹಸನ್​ ಕೂಡಾ ಈ ಹಾಸ್ಯದಲ್ಲಿ ಪಾಲ್ಗೊಂಡು ನನಗೆ ನಿಜವಾಗಿಯೂ ಗಾಯವಾಗಿತ್ತು ಗೆಳೆಯಾ ಎಂದು ಬರೆದುಕೊಂಡು ನಗುವ ಚಿಹ್ನೆಯನ್ನು ಹಾಕಿಕೊಂಡಿದ್ದಾರೆ.
First published:June 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...