Lamborghini : ದಕ್ಷಿಣ ಭಾರತದ ಮೊದಲ ಲ್ಯಾಂಬೊರ್ಗಿನಿ ಡೀಲರ್‌ಶಿಪ್‌ನ ಮಾಲೀಕನಾದ ಚಾಯ್​ವಾಲಾ; ಯಾರಿತಾ?

16ನೇ ವಯಸ್ಸಿಗೆ ಆಂಗ್ಲ ಮಾಧ್ಯಮದಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು. ಆ ವಯಸ್ಸಿನಲ್ಲಿ ವಕೀಲರ ಕಚೇರಿಯಲ್ಲಿ ಚಹಾ ಮತ್ತು ಕಾಫಿ ಕೊಡುವ ಕೆಲಸಕ್ಕೆ ಸೇರಿದರು. ಆದರೆ ತಮ್ಮ ಓದನ್ನು ನಿಲ್ಲಿಸಲಿಲ್ಲ, ಮುಂದುವರೆಸಿದರು

ಉಪೇಂದ್ರ ಜೊತೆ ಟಿಎಸ್​ ಸತೀಶ್​​

ಉಪೇಂದ್ರ ಜೊತೆ ಟಿಎಸ್​ ಸತೀಶ್​​

  • Share this:
ನಾವು ಹಲವಾರು ಉದ್ಯಮಿಗಳ ಮತ್ತು ಸೆಲೆಬ್ರಿಟಿಗಳ ಯಶೋಗಾಥೆಯನ್ನು ಕೇಳುತ್ತಿರುತ್ತೇವೆ. ಅವರಲ್ಲಿ ಎಷ್ಟೋ ಮಂದಿ ಸಣ್ಣ ಮಟ್ಟದಿಂದ ಆರಂಭಿಸಿ, ಅಪಾರ ಪರಿಶ್ರಮದ ಕಾರಣದಿಂದ ತಮ್ಮ ಕ್ಷೇತ್ರಗಳಲ್ಲಿ ಯಶಸ್ಸಿನ ಮೆಟ್ಟಿಲು ಏರಿರುವ ಉದಾಹಣೆಗಳಿವೆ. ಅದೇ ರೀತಿ ಅತ್ಯಂತ ಶ್ರಮಪಟ್ಟು ಕೆಲಸ ಮಾಡಿ, ತಮ್ಮ ಕನಸನ್ನು ನನಸು ಮಾಡಿಕೊಂಡ ವ್ಯಕ್ತಿಯ ಕಥೆ ಇಲ್ಲಿದೆ. ಅವರು ಬೇರೆ ಯಾರೂ ಅಲ್ಲ, ದಕ್ಷಿಣ ಭಾರತದ ಮೊದಲ ಲ್ಯಾಂಬೊರ್ಗಿನಿ (Lamborghini) ಡೀಲರ್‌ಶಿಪ್‌ನ ಮಾಲೀಕರಾಗಿರುವ ಬೆಂಗಳೂರಿನ 50 ವರ್ಷ ವಯಸ್ಸಿನ ಟಿ.ಎಸ್. ಸತೀಶ್ (T S Satheesh). ಒಬ್ಬ ರಿಯಲ್ ಎಸ್ಟೇಟ್ ಹೂಡಿಕೆದಾರ ಮತ್ತು ಉದ್ಯಮಿಯಾಗಿರುವ ಅವರ ಕಥೆ ಅತ್ಯಂತ ಸ್ಪೂರ್ತಿದಾಯಕ.

ಚಹಾ ಕೊಡುವ ಕೆಲಸ 

ಕರ್ನಾಟಕದವರೇ ಆಗಿರುವ ಸತೀಶ್, ತಮ್ಮ 13ನೇ ವಯಸ್ಸಿಗೆ ಬೆಂಗಳೂರಿಗೆ ಸ್ಥಳಾಂತರಗೊಂಡರು. ಆ ದಿನಗಳಲ್ಲಿ ಅವರು ಮಲ್ಲೇಶ್ವರಂನ ಸಣ್ಣ ಕೋಣೆಯೊಂದರಲ್ಲಿ ತಮ್ಮ ದೊಡ್ಡಕ್ಕ ಮತ್ತು ಆಕೆಯ ಪತಿಯೊಂದಿಗೆ ವಾಸಿಸುತ್ತಿದ್ದರು. 16ನೇ ವಯಸ್ಸಿಗೆ ಆಂಗ್ಲ ಮಾಧ್ಯಮದಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು. ಆ ವಯಸ್ಸಿನಲ್ಲಿ ವಕೀಲರ ಕಚೇರಿಯಲ್ಲಿ ಚಹಾ ಮತ್ತು ಕಾಫಿ ಕೊಡುವ ಕೆಲಸಕ್ಕೆ ಸೇರಿದರು. ಆದರೆ ತಮ್ಮ ಓದನ್ನು ನಿಲ್ಲಿಸಲಿಲ್ಲ, ಮುಂದುವರೆಸಿದರು.

ಟೈಪಿಸ್ಟ್​ ಸೇರಿದಂತೆ ವಿವಿಧ ಹುದ್ದೆ ನಿರ್ವಹಣೆ

ದಯಾನಂದ್ ಸಾಗರ್ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದರು. ಆ ನಡುವೆ ಕೆಲಸಗಳನ್ನು ಬದಲಾಯಿಸುತ್ತಲೇ ಇದ್ದರು. ಮತ್ತು 1987ರಲ್ಲಿ ಟೈಟಾನ್ ವಾಚಸ್‍ನಲ್ಲಿ ಒಬ್ಬ ಟೈಪಿಸ್ಟ್ ಆಗಿ ಸೇರಿಕೊಂಡರು. 3 ವರ್ಷಗಳ ನಂತರ ಹ್ಯೂವ್ಲೆಟ್ ಪ್ಯಾಕರ್ಡ್ (ಹೆಚ್‍ಪಿ)ಯ ಖರೀದಿ ವಿಭಾಗದಲ್ಲಿ ಟೈಪಿಸ್ಟ್ ಆಗಿ ಸೇರಿಕೊಂಡರು. ಆಗ ಅಲ್ಲಿ ಅವರಿಗೆ ತಿಂಗಳಿಗೆ 1,200 ರೂ. ಸಂಬಳ. ಆ ಕಂಪೆನಿಯ ಬೇರೆ ಬೇರೆ ವಿಭಾಗಗಳಲ್ಲಿ ವಿಭಿನ್ನ ಹುದ್ದೆಗಳನ್ನು ನಿರ್ವಹಿಸಿದರು. 1999ರಲ್ಲಿ ಅಂತಿಮವಾಗಿ ಅವರು ಆ ಕಂಪೆನಿ ಬಿಟ್ಟಾಗ ಲಾಜಿಸ್ಟಿಕ್ ಮ್ಯಾನೇಜರ್ ಹುದ್ದೆಯಲ್ಲಿ ಅವರು ಪಡೆಯುತ್ತಿದ್ದ ಸಂಬಳ ತಿಂಗಳಿಗೆ ಸುಮಾರು 1.5 ಲಕ್ಷ ರೂ.

ಇದನ್ನು ಓದಿ: ಏಷ್ಯಾದಲ್ಲೇ ಅತಿ ದೊಡ್ಡ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾದ ನೋಯ್ಡಾ; ಏನಿದರ ವಿಶೇಷತೆ

ರಿಯಲ್​ ಎಸ್ಟೇಟ್​ ವ್ಯವಹಾರ

ಕೆಲಸ ಬಿಟ್ಟ ಬಳಿಕ ಅವರು, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡರು. 50,000 ರೂ. ಹೂಡಿಕೆ ಮಾಡಿ, 4,000 ಚದರ ಅಡಿಯ ನಿವೇಶನ ಖರೀದಿಸಿದರು. ಅವರು ಆರ್ಥಿಕ ಹಿಂಜರಿತ ಮತ್ತು ವಂಚನೆ ಪ್ರಕರಣಗಳಿಂದ ಸಮಸ್ಯೆ ಎದುರಿಸಿದಾಗ, ಎಚ್‍ಪಿಯ ಅವರ ಮಾಜಿ ಸಹುದ್ಯೋಗಿಗಳು ಸಹಾಯಕ್ಕೆ ಬಂದರು.  ಬ್ಯಾಂಕ್ ಸಾಲ ಪಡೆದು ಅವರಿಂದ ಅಪಾರ್ಟ್‍ಮೆಂಟ್‍ಗಳನ್ನು ಖರೀದಿಸಿದರು.

ಆರಂಭದ 5 ವರ್ಷಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕಷ್ಟ ಅನುಭವಿಸಿದ ಅವರು, 2008- 2009ರಲ್ಲಿ ಬೆಂಗಳೂರು ಮತ್ತು ಕೇರಳದಲ್ಲಿ ವಸತಿ ಕಟ್ಟಡಗಳ ಯೋಜನೆ ಆರಂಭಿಸಿದ ನಂತರ ಮೊದಲ ಪ್ರಗತಿ ಕಂಡರು. ಅವರ ಸಂಸ್ಥೆ 2013ರ ಅವಧಿಯಲ್ಲಿ 2013ರಲ್ಲಿ 400 ಕೋಟಿ ರೂ.ಗಳ ಗುರಿ ದಾಟಿತ್ತು.

ಇದನ್ನು ಓದಿ: 2022ರ ಬಗ್ಗೆ ನಾಸ್ಟ್ರಾಡಾಮಸ್ ಹೇಳಿರುವ ಭಯಾನಕ ಭವಿಷ್ಯವೇನು?

ಲ್ಯಾಂಬೊರ್ಗಿನಿ ಅವೆಂಟೊಡೋ ರೋಡ್‍ಸ್ಟರ್ ಖರೀದಿ

ಆಗ ಸತೀಶ್ ತಮಗಾಗಿ ಒಂದು ವಿಶಿಷ್ಟ ವಾಹನ ಹೊಂದಲು ಬಯಸಿದ್ದರು. ಆರಂಭದಲ್ಲಿ ಅವರು ಪೋರ್ಷೆ ಕಾರನ್ನು ಖರೀದಿಸಬೇಕೆಂದು ಇದ್ದರು. ಆದರೆ ಬೆಂಗಳೂರಿನಲ್ಲಿ ಅದಾಗಲೇ ಆ ಕಾರನ್ನು ಹೊಂದಿರುವವರು ಇದ್ದಾರೆ ಎಂಬುವುದು ತಿಳಿದು ಬಂತು. ಸಾಕಷ್ಟು ಸಂಶೋಧನೆ ಮಾಡಿದ ಬಳಿಕ, ಲ್ಯಾಂಬೊರ್ಗಿನಿ ಅವೆಂಟೊಡೋ ರೋಡ್‍ಸ್ಟರ್ ಖರೀದಿಸಿದರು.

ಅಷ್ಟೇ ಅಲ್ಲ, ಅವರು ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಮೊಟ್ಟ ಮೊದಲ ಲ್ಯಾಂಬೊರ್ಗಿನಿ ಡೀಲರ್‌ಶಿಪ್ ತೆರೆದರು. ಲ್ಯಾಂಬೊರ್ಗಿನಿ ಅವೆಂಟೊಡೋ ರೋಡ್‍ಸ್ಟರ್ ಇಂದಿಗೂ ನಮ್ಮ ರಸ್ತೆಗಳಲ್ಲಿ ಅಪರೂಪದ ಕಾರು. ಅವರು ಅದನ್ನು ಖರೀದಿಸಿದಾಗ ಅದರ ಬೆಲೆ ಸುಮಾರು 8 ಕೋಟಿ ರೂ. ಅದಲ್ಲದೆ ಸತೀಶ್ ಬಳಿ, ಬಿಎಂಡಬ್ಲ್ಯೂ, ಆಡಿ, ಫೋಕ್ಸ್‌ವ್ಯಾಗನ್ ಮತ್ತು ಹಂಡೈ ಕಾರುಗಳು ಕೂಡ ಇವೆ.
First published: